»   » ಚಿತ್ರಗಳು: ಜೀ ಕನ್ನಡ ದಶಕದ ಸಂಭ್ರಮದಲ್ಲಿ ತಾರೆಯರ ರಂಗು

ಚಿತ್ರಗಳು: ಜೀ ಕನ್ನಡ ದಶಕದ ಸಂಭ್ರಮದಲ್ಲಿ ತಾರೆಯರ ರಂಗು

Posted By:
Subscribe to Filmibeat Kannada

ಕಲರ್ ಫುಲ್ ರಿಯಾಲಿಟಿ ಶೋ, ಅತ್ಯುತ್ತಮ ಧಾರಾವಾಹಿ, ವೀಕೆಂಡ್ ನಲ್ಲಿ ಹೊಸ-ಹೊಸ ಸಿನಿಮಾಗಳನ್ನು ಪ್ರಸಾರ ಮಾಡುತ್ತಾ, ಇಡೀ ಕನ್ನಡಿಗರ ಮೆಚ್ಚುಗೆ ಗಳಿಸಿದ ಖ್ಯಾತ ಚಾನೆಲ್ ಜೀ ಕನ್ನಡಕ್ಕೆ ಇದೀಗ 10ರ ಸಂಭ್ರಮ.

'ವೀಕೆಂಡ್ ವಿತ್ ರಮೇಶ್', 'ಸರಿಗಮಪ', 'ಡ್ರಾಮಾ ಜ್ಯೂನಿಯರ್ಸ್', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮುಂತಾದ ರಿಯಾಲಿಟಿ ಶೋಗಳು. 'ನಾಗಿಣಿ', 'ಶ್ರೀಮಾನ್ ಶ್ರೀಮತಿ', 'ಗೃಹಲಕ್ಷ್ಮಿ', 'ಶುಭ ವಿವಾಹ' ಮುಂತಾದ ಉತ್ತಮ ಧಾರಾವಾಹಿಗಳ ಮೂಲಕ ಜನರ ಮೆಚ್ಚುಗೆ ಗಳಿಸಿರುವ ಜೀ ಕನ್ನಡ 10ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮವನ್ನು ಅದ್ಧೂರಿಯಾಗಿ ಇತ್ತೀಚೆಗೆ ಆಚರಿಸಲಾಯಿತು.[ಮಕ್ಕಳ ಪ್ರತಿಭೆ ಮುಂದೆ ಶಿವಣ್ಣ, ರವಿಚಂದ್ರನ್ ತಲೆಬಾಗಲು ಸಾಧ್ಯವೇ.?]

ಈ ಅದ್ದೂರಿ ಸಮಾರಂಭವನ್ನು ಆಗಸ್ಟ್ 6ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕಂಠಿರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದಹಾಗೆ ಈ 10 ವರ್ಷದ ಸಂಭ್ರಮವನ್ನು ಇಡೀ ಕನ್ನಡ ಚಿತ್ರರಂಗವೇ ಸೇರಿ ಸೆಲೆಬ್ರೇಟ್ ಮಾಡಿದ್ದು, ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು ಹಾಗೂ ಗಣ್ಯಾತೀ ಗಣ್ಯರು ಭಾಗಿಯಾಗಿ ಈ ಕಾರ್ಯಕ್ರಮಕ್ಕೆ ಶೋಭೆ ತಂದಿತ್ತರು.

ಅಂದಹಾಗೆ ಈ ಅದ್ದೂರಿ ಕಾರ್ಯಕ್ರಮದ ಪಿಂಕ್ ಕಾರ್ಪೆಟ್ ನಲ್ಲಿ ಸ್ಯಾಂಡಲ್ ವುಡ್ ನ ಯಾವ-ಯಾವ ಸ್ಟಾರ್ ಗಳು ನಡೆದಾಡಿ, ಸಂಭ್ರಮಪಟ್ಟರು ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

ಏಳು-ಬೀಳುಗಳ ಬಗ್ಗೆ ಒಂದಿಷ್ಟು

ಈ ಸಂಭ್ರಮದ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ 10 ವರ್ಷಗಳಲ್ಲಿ ಕಂಡ ಏಳು-ಬೀಳುಗಳ ಜೊತೆಗೆ ವಾಹಿನಿಯ ಯಶಸ್ಸನ್ನು ಹಂಚಿಕೊಳ್ಳಲಾಯಿತು. ಮಾತ್ರವಲ್ಲದೇ ಅದ್ಧೂರಿ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಅನೇಕ ತಾರೆಯರು ಡ್ಯಾನ್ಸ್ ಝಲಕ್ ತೋರುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.[ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

ಸಂತೋಷ್ ಹೆಗ್ಡೆ

ಜೀ ಕನ್ನಡ 10 ವರ್ಷದ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಭಾಗವಹಿಸಿದ್ದರು.['ಜೀ ಕನ್ನಡ' ವಾಹಿನಿಯ 'ಮಹರ್ಷಿವಾಣಿ'ಗೆ 2 ವರ್ಷಗಳ ಸಂಭ್ರಮ]

ರಾಕಿಂಗ್ ಸ್ಟಾರ್-ಸ್ಯಾಂಡಲ್ ವುಡ್ ಪ್ರಿನ್ಸಸ್

ಕನ್ನಡ ಚಿತ್ರರಂಗದ ಲಕ್ಕಿ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಈ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾರಂಭಕ್ಕೆ ಶೋಭೆ ತಂದರು.[ಕಿರುತೆರೆಗೆ ಎಂಟ್ರಿ ಕೊಟ್ಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್]

ಅನಂತ್ ನಾಗ್ ದಂಪತಿ

ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಗಳು ಈ ಕಲರ್ ಫುಲ್ ಸಮಾರಂಭಕ್ಕೆ ಸಾಕ್ಷಿಯಾದರು.

ಕಿಚ್ಚ ಸುದೀಪ್

'ಹೆಬ್ಬುಲಿ' ಶೂಟಿಂಗ್ ಹಾಗೂ 'ಕೋಟಿಗೊಬ್ಬ 2' ಚಿತ್ರದ ಪ್ರೊಮೋಷನ್ ನಡುವೆಯೂ ಕಿಚ್ಚ ಸುದೀಪ್ ಅವರು ಬಿಡುವು ಮಾಡಿಕೊಂಡು ವರ್ಣರಂಜಿತ ಸಮಾರಂಭದಲ್ಲಿ ಭಾಗಿಯಾಗಿ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ನಟಿ ವೈಶಾಲಿ ದೀಪಕ್

'ಶಿವಲಿಂಗ' ಚಿತ್ರದಲ್ಲಿ ಸಂಗೀತ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿ ವೈಶಾಲಿ ದೀಪಕ್ ಅವರು ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಿಹಿಕಹಿ ಚಂದ್ರು

ನಟ ಸಿಹಿಕಹಿ ಚಂದ್ರು ಅವರು ಕಾರ್ಯಕ್ರಮದಲ್ಲಿ ಒಂದು ಭಾಗವಾಗಿದ್ದರು.

ನಟಿ ಶರ್ಮಿಳಾ ಮಾಂಡ್ರೆ

ನಟಿ ಶರ್ಮಿಳಾ ಮಾಂಡ್ರೆ ಅವರು 10 ವರ್ಷ ಪೂರೈಸಿದ ಕಲರ್ ಫುಲ್ ಸಮಾರಂಭಕ್ಕೆ ಸಖತ್ ಹಾಟ್ ಆಗಿ ಆಗಮಿಸಿದ್ದರು.

ಅನು ಪ್ರಭಾಕರ್ ದಂಪತಿ

ಹೊಸದಾಗಿ ಮದುವೆಯಾದ ಜೋಡಿ ನಟಿ ಅನು ಪ್ರಭಾಕರ್ ಮತ್ತು ನಟ ರಘು ಮುಖರ್ಜಿ ಅವರು ಸಮಾರಂಭದಲ್ಲಿ ಕಂಡು ಬಂದಿದ್ದು ಹೀಗೆ.

ಅಂಬರೀಶ್ ದಂಪತಿ

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ ಪ್ರೀತಿಯಿಂದ ಸಮಾರಂಭಕ್ಕೆ ಆಗಮಿಸಿ, ಸಂಭ್ರಮದಲ್ಲಿ ಜೊತೆಯಾದರು.

ಗಾಯಕ ರಾಜೇಶ್ ಕೃಷ್ಣನ್

'ಸರಿಗಮಪ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಗಾಯಕ ರಾಜೇಶ್ ಕೃಷ್ಣನ್ ಅವರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಸೃಜನ್ ಲೋಕೇಶ್

'ಮಜಾ ಟಾಕೀಸ್' ಖ್ಯಾತಿಯ ನಟ ಕಮ್ ನಿರೂಪಕ ಸೃಜನ್ ಲೋಕೇಶ್ ಅವರು ತಮ್ಮ ತಾಯಿ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಜೊತೆ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಟಿ ಶುಭ್ರಾ ಅಯ್ಯಪ್ಪ

'ವಜ್ರಕಾಯ' ಚಿತ್ರದಲ್ಲಿ ಶಿವಣ್ಣ ಅವರ ಜೊತೆ 'ನೋ ಪ್ರಾಬ್ಲಂ' ಅಂತ ಡ್ಯುಯೆಟ್ ಹಾಡಿದ್ದ ನಟಿ ಶುಭ್ರಾ ಅಯ್ಯಪ್ಪ ಅವರು ಕೂಡ ಸೊಗಸಾಗಿ ಕಂಡು ಬಂದರು.

ನಟಿ ಪ್ರಿಯಾಂಕ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರ ಮನದನ್ನೆ ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಸಮಾರಂಭದ ಕೇಂದ್ರ ಬಿಂದುವಾಗಿದ್ದರು.

ಅಂಕಿತಾ ಕುಂಡು

'ಸರಿಗಮಪ' ಲಿಟ್ಲ್ ಚಾಂಪ್ ಪ್ರಶಸ್ತಿ ವಿಜೇತೆ ಅಂಕಿತಾ ಕುಂಡು ತಮ್ಮ ತಾಯಿಯ ಜೊತೆ ಹಾಜರಿದ್ದರು. ಇವರು ಹಾಡಿದ 'ರಿಕ್ಕಿ' ಚಿತ್ರದ 'ಮಲಗೇ ಮಲಗೇ' ಹಾಡು ಸಾಕಷ್ಟು ಮೆಚ್ಚುಗೆ ಪಡೆದಿತ್ತು.

ನಾದಬ್ರಹ್ಮ ಹಂಸಲೇಖ

ಸಂಗೀತ ಲೋಕದ ದಿಗ್ಗಜ ನಾದಬ್ರಹ್ಮ ಹಂಸಲೇಖ ಅವರು ಕಾರ್ಯಕ್ರಮದಲ್ಲಿ ಅಂದದ ಮುಗುಳ್ನಗೆಯೊಂದಿಗೆ ಹಾಜರಿದ್ದರು.

ನಟ ಪ್ರಕಾಶ್ ರಾಜ್

ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ನಟ ಪ್ರಕಾಶ್ ರಾಜ್ ಅವರು ಈ ಸಂಭ್ರಮದ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಟಿ ಪ್ರಿಯಾಮಣಿ

ಚೆಂದದ ಬೆಡಗಿ ಪ್ರಿಯಾಮಣಿ ಜೀ ಸಂಭ್ರಮಕ್ಕೆ ಆಗಮಿಸಿ, ಸಮಾರಂಭಕ್ಕೆ ಮತ್ತಷ್ಟು ಕಳೆ ತಂದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಕನ್ನಡದ ಮೇಷ್ಟ್ರು ಅಂತಾನೇ ಖ್ಯಾತಿ ಹೊಂದಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅಕುಲ್ ಬಾಲಾಜಿ

ಖ್ಯಾತ ನಿರೂಪಕ-ನಟ ಅಕುಲ್ ಬಾಲಾಜಿ ಅವರ ಸ್ಟೈಲಿಷ್ ಲುಕ್ ಹೇಗಿದೆ ನೋಡಿ...

English summary
Kannada Actor Sudeep, Actress Radhika Pandit, Actor Yash, Actress Priyamani and so many sandalwood stars joining Zee Kannada 10 year celebrations On August 6th, at Kanteerava stadium Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada