For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ನಟಿ ರಾಧಿಕಾ ಜೊತೆಗೆ ನಟ ಶ್ರವಂತ್ ಮದುವೆ ಸಂಭ್ರಮ.!

  |

  'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಚೇತನ್ ವಿವಾಹ ಬಂಧನಕ್ಕೆ ಒಳಗಾಗಿದ್ದು, ನಿಮಗೆಲ್ಲ ಗೊತ್ತೇ ಇದೆ. ಇನ್ನೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರ್ ನಿಶ್ಚಿತಾರ್ಥ ಕೂಡ ಮೊನ್ನೆ ಮೊನ್ನೆಯಷ್ಟೇ ಅದ್ಧೂರಿಯಾಗಿ ನಡೆಯಿತು. ಇದೀಗ ಕಿರುತೆರೆ ಲೋಕದಲ್ಲೂ ಮದುವೆ ಸಂಭ್ರಮ ಜೋರಾಗಿದೆ.

  ಹಲವು ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಶ್ರವಂತ್ ಇದೀಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕಿರುತೆರೆ ನಟಿ ರಾಧಿಕಾ ಜೊತೆಗೆ ಶ್ರವಂತ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಶ್ರವಂತ್-ರಾಧಿಕಾ ಮದುವೆಯ ಫೋಟೋ ಆಲ್ಬಂ ಇಲ್ಲಿದೆ, ನೋಡಿ...

  ಶ್ರವಂತ್-ರಾಧಿಕಾ ಮದುವೆ

  ಶ್ರವಂತ್-ರಾಧಿಕಾ ಮದುವೆ

  ನಟ ಶ್ರವಂತ್ ಮತ್ತು ರಾಧಿಕಾ ಮದುವೆ ನಿನ್ನೆ ಗ್ರ್ಯಾಂಡ್ ಆಗಿ ನಡೆದಿದೆ. ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಹೊಸ ಬದುಕಿಗೆ ನಾಂದಿ ಹಾಡಿದ್ದಾರೆ. ಶ್ರವಂತ್ ಮತ್ತು ರಾಧಿಕಾ ವಿವಾಹಕ್ಕೆ ಕಿರುತೆರೆ ಲೋಕದ ನಟ-ನಟಿಯರು ಸಾಕ್ಷಿ ಆಗಿದ್ದರು.

  ಎರಡನೇ ಮದುವೆ ಆಗಲು ತಯಾರಿ ನಡೆಸಿದ್ದಾರಾ ತೆಲುಗಿನ ಯಶಸ್ವಿ ನಿರ್ಮಾಪಕ.?ಎರಡನೇ ಮದುವೆ ಆಗಲು ತಯಾರಿ ನಡೆಸಿದ್ದಾರಾ ತೆಲುಗಿನ ಯಶಸ್ವಿ ನಿರ್ಮಾಪಕ.?

  ನೆಗೆಟಿವ್ ಶೇಡ್ ಪಾತ್ರ

  ನೆಗೆಟಿವ್ ಶೇಡ್ ಪಾತ್ರ

  ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುವ ಜನಪ್ರಿಯ ಧಾರಾವಾಹಿಯೊಂದರಲ್ಲಿ ರಾಧಿಕಾ ಅಭಿನಯಿಸುತ್ತಿದ್ದಾರೆ. ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಅದೇ ಪಾತ್ರದಿಂದ ಫೇಮಸ್ ಆಗಿದ್ದಾರೆ.

  ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್

  'ಹೀರೋ' ಶ್ರವಂತ್

  'ಹೀರೋ' ಶ್ರವಂತ್

  ಕಿರುತೆರೆ ಲೋಕದಲ್ಲೂ ಫೇಮಸ್ ಆಗಿದ್ದ ಶ್ರವಂತ್, ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2008 ರಲ್ಲಿ ಬಿಡುಗಡೆ ಆದ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡ ಶ್ರವಂತ್, 'ನಾವಿಕ', 'ನೆನಪಿದೆಯ', 'ಪರಾರಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ತಮಿಳು ಚಿತ್ರದಲ್ಲೂ ಅಭಿನಯ

  ತಮಿಳು ಚಿತ್ರದಲ್ಲೂ ಅಭಿನಯ

  ಅಸಲಿಗೆ ನಟ ಶ್ರವಂತ್ ತಂದೆ ಮತ್ತು ತಾತ ಕನ್ನಡ ಚಿತ್ರರಂಗದ ನಿರ್ಮಾಪಕರು. ಹೀಗಾಗಿ ಚಿತ್ರರಂಗದ ಬಗ್ಗೆ ಆಸಕ್ತಿ ಹೊಂದಿದ್ದ ಶ್ರವಂತ್, ಬಣ್ಣದ ಬದುಕಿಗೆ ಕಾಲಿಟ್ಟರು. ಅಂದ್ಹಾಗೆ, ತಮಿಳಿನ ಚಿತ್ರವೊಂದರಲ್ಲೂ ನಟ ಶ್ರವಂತ್ ಅಭಿನಯಿಸಿದ್ದಾರೆ.

  English summary
  TV Actress Radhika got married to Actor Shravanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X