»   » ಸಂಭ್ರಮದ ಚಿತ್ರಪುಟ ; ಸುವರ್ಣ ಲೇಡೀಸ್ ಕ್ಲಬ್ ಗೆ 5 ವರ್ಷ.!

ಸಂಭ್ರಮದ ಚಿತ್ರಪುಟ ; ಸುವರ್ಣ ಲೇಡೀಸ್ ಕ್ಲಬ್ ಗೆ 5 ವರ್ಷ.!

Posted By:
Subscribe to Filmibeat Kannada

ಮನರಂಜನೆಯನ್ನು ನೀಡುವುದರಲ್ಲಿ ಮಾತ್ರ ಅಲ್ಲ. ವೀಕ್ಷಕರನ್ನು ತಲುಪುವುದರಲ್ಲೂ ಸುವರ್ಣ ಡಿಫರೆಂಟ್.! ವೀಕ್ಷಕರ ಜೊತೆ ನೇರ ಸಂಪರ್ಕ ಸಾಧಿಸಿ, ಅವರ ಬೇಕು ಬೇಡಗಳಿಗೆ ತಕ್ಕಂತೆ ಕಾರ್ಯಕ್ರಮ ರೂಪಿಸುವ ಸುವರ್ಣದ ಕಳಕಳಿಯ ಫಲವೇ 'ಸುವರ್ಣ ಲೇಡೀಸ್ ಕ್ಲಬ್'.

ರಂಗು ರಂಗಿನ ರಸ ಸಂಜೆ, ಹಬ್ಬ ಹರಿದಿನಗಳ ಅರ್ಥಪೂರ್ಣ ಆಚರಣೆ, ಚರ್ಚಾ ಸ್ಪರ್ಧೆ, ನೃತ್ಯ, ಗೀತೆ ಹೀಗೆ ಸದಾ ಚಟುವಟಿಕೆಯಿಂದಿರುವ ಸುವರ್ಣ ವಾಹಿನಿಯ ಹೆಮ್ಮೆಯ ಸಂಕೇತ 'ಲೇಡೀಸ್ ಕ್ಲಬ್', 5 ವರ್ಷದ ಹಿಂದೆ ಗದಗದಲ್ಲಿ ಪ್ರಾರಂಭವಾಯ್ತು.

123 ಸದಸ್ಯರಿಂದ ಪ್ರಾರಂಭವಾದ ಈ ಸಂಸ್ಥೆ ತನ್ನ ಪುಟ್ಟ ಪುಟ್ಟ ಹೆಜ್ಜೆಯಿಂದ ಇಂದಿಗೆ 20 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು ಕರ್ನಾಟಕದ ತುಂಬೆಲ್ಲಾ ಮನೆಮಾತಾಗಿ ಈಗ ತನ್ನ 5ನೇ ವರ್ಷದ ಸಂಭ್ರಮದಲ್ಲಿದೆ. [ಕನ್ನಡ ಕಿರುತೆರೆಗೆ ಬೆಳದಿಂಗಳಾಗಿ ಬಂದ ನಟಿ ಜಯಪ್ರದ]

in-pics-suvarna-ladies-club-5th-year-anniversary-celebration

'ಸುವರ್ಣ ಲೇಡೀಸ್ ಕ್ಲಬ್'ನ ಜನ್ಮಸ್ಥಳ ಗದಗದಲ್ಲಿಯೇ 5ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು ಮತ್ತೊಂದು ವಿಶೇಷ. ಈ ಸಮಾರಂಭಕ್ಕೆ ಸುವರ್ಣ ವಾಹಿನಿಯ 'ದುರ್ಗಾ' ಹಾಗೂ 'ಗುಂಡ್ತಾನ ಹೆಂಡ್ತಿ' ಧಾರಾವಾಹಿಯ ಪಾತ್ರಧಾರಿಗಳ ಉಪಸ್ಥಿತಿ ಇತ್ತು.

ಇದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ 'ಸುವರ್ಣ ಪುರಸ್ಕಾರ 2016' ಪ್ರಶಸ್ತಿ ನೀಡಿ ಗೌರವಿಸಲಾಯಿತು. 5ನೇ ವರ್ಷದ ಗದಗ ಜಿಲ್ಲೆಯ ಸಾಧನೆಗೆ 'ಸುವರ್ಣ ಸಂಪದ 2016' ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯ್ತು. [ಈ ವಾರ ಭರ್ಜರಿ ಮೊತ್ತ 1 ಲಕ್ಷ ಯಾರ ಕಿಸೆಗೆ ಸೇರುತ್ತದೆ]

ಸುವರ್ಣ ವಾಹಿನಿಯ ಹೆಮ್ಮೆಯ ಸಂಸ್ಥೆ 'ಸುವರ್ಣ ಲೇಡೀಸ್ ಕ್ಲಬ್' ನ 5ನೇ ವರ್ಷ ದಾಖಲೆಯ ದೃಶ್ಯಾವಳಿಗಳು ಇದೇ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12ಕ್ಕೆ 'ಸುವರ್ಣ ಪ್ಲಸ್' ನಲ್ಲಿ ಪ್ರಸಾರವಾಗಲಿದೆ.

-
-
-
-
-
-
-
-
-
-
-
English summary
Kannada Entertainment Channel Suvarna has celebrated 5th year Anniversary of 'Suvarna Ladies Club'. The show will telecast on April 16th and 17th 12.00 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada