Just In
Don't Miss!
- News
ಸ್ಟಾರ್ಟ್ ಅಪ್ಗಳ ಅನುಷ್ಠಾನದಲ್ಲಿ ಕರ್ನಾಟಕದ ನಂಬರ್ 1
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.26ರ ಚಿನ್ನ, ಬೆಳ್ಳಿ ದರ
- Sports
ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಟ್ಯಧಿಪತಿಯಲ್ಲಿ ಇಂಚರಾ ಆಸೆಗೆ ತಣ್ಣೀರು ಹಾಕಿದ ಮಹಾತ್ಮ ಗಾಂಧಿ ಹತ್ಯೆ ಪ್ರಶ್ನೆ.!
ಎರಡನೇ ವಾರದ ಕೋಟ್ಯಧಿಪತಿ ಆಟ. ಹೊಸ ಸ್ಪರ್ಧಿಗಳು, ಯಾರಿಗೆ ಅವಕಾಶ ಸಿಗುತ್ತೆ ಎಂಬ ಕುತೂಹಲದೊಂದಿಗೆ ಕನ್ನಡದ ಕೋಟ್ಯಧಿಪತಿ ಮೂರನೇ ಸಂಚಿಕೆ ಆರಂಭವಾಯಿತು. ಸಂಪ್ರದಾಯದಂತೆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಅತಿ ವೇಗವಾಗಿ ಉತ್ತರ ಕೊಡುವ ಮೂಲಕ ಚಿಕ್ಕಮಗಳೂರು ಹುಡುಗಿ ಇಂಚರಾ ಹಾಟ್ ಸೀಟ್ ಗೆ ಮೊದಲು ಆಯ್ಕೆಯಾದರು.
ಈಗಷ್ಟೇ ಪದವಿ ಮುಗಿಸಿರುವ ಇಂಚರಾಗೆ ಟ್ರಾವಲ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಒಂದು ಕೋಟಿ ಗೆದ್ದು ತನ್ನ ಕನಸುಗಳನ್ನ ಈಡೇರಿಸಿಕೊಳ್ಳಬೇಕು ಎಂಬ ಆಸೆಯಿಂದ ಕೋಟ್ಯಧಿಪತಿ ಶೋಗೆ ಬಂದಿದ್ದ ಇಂಚರಾಗೆ ಅದೃಷ್ಟ ಕೈಕೊಡ್ತು.
ಕುಂದಾಪುರದ ಮಂಜುಳಾ ಗೆದ್ದಿದ್ದು ಬರಿ 10 ಸಾವಿರ: ಈಕೆ ಸೋಲಿಗೆ ಇದೇ ಪ್ರಶ್ನೆ ಕಾರಣ
ಬಹಳ ಕಾನ್ಫಿಡೆನ್ಸ್ ಆಗಿ ಆಟ ಆಡುತ್ತಿದ್ದ ಇಂಚರಾ ನಿರೀಕ್ಷೆಯ ಹಣ ಗೆಲ್ಲಲಿಲ್ಲ. ಮಹಾತ್ಮ ಗಾಂಧಿ ಹತ್ಯೆ ಕುರಿತು ಕೇಳಲಾದ ಒಂದು ಪ್ರಶ್ನೆಗೆ ಇಂಚರಾ ಉತ್ತರಿಸಲಿಲ್ಲ. ಅಷ್ಟಕ್ಕೂ ಗಾಂಧಿ ಹತ್ಯೆ ಬಗ್ಗೆ ಕೇಳಲಾದ ಆ ಪ್ರಶ್ನೆ ಯಾವುದು? ಮುಂದೆ ಓದಿ....

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಯಾವುದು?
ಕಡಿಮೆಯಿಂದ ಪ್ರಾರಂಭಿಸಿ, ತೂಕದ ಈ ಘಟಕಗಳನ್ನ ಏರಿಕೆ ಕ್ರಮದಲ್ಲಿ ಜೋಡಿಸಿ?
A ಮೆಟ್ರಿಕ್ ಟನ್
B ಕಿಲೋಗ್ರಾಂ
C ಮಿಲಿಗ್ರಾಂ
D ಗ್ರಾಂ
ಸರಿಯಾದ ಉತ್ತರ: C ಮಿಲಿಗ್ರಾಂ, D ಗ್ರಾಂ, B ಕಿಲೋಗ್ರಾಂ, A ಮೆಟ್ರಿಕ್ ಟನ್
ಅತಿ ವೇಗವಾಗಿ ಉತ್ತರ ನೀಡಿದ ಇಂಚರಾ ಹಾಟ್ ಸೀಟ್ ಗೆ ಆಯ್ಕೆಯಾದರು.

ಯಾವ ಲೈಫ್ ಲೈನ್ ಇರಲಿಲ್ಲ
ಒಂಭತ್ತನೇ ಪ್ರಶ್ನೆವರೆಗೂ ಸರಿಯಾದ ಉತ್ತರ ನೀಡಿದ್ದ ಇಂಚನಾ 1.60 ಲಕ್ಷ ಗೆದ್ದುಕೊಂಡಿದ್ದರು. ಅಷ್ಟೋತ್ತಿಗಾಲೇ ಮೂರೂ ಲೈಫ್ ಲೈನ್ ಬಳಕೆಯಾಗಿತ್ತು. ಸದ್ಯಕ್ಕೆ ಇಂಚರಾ ಬಳಿ ಯಾವುದೇ ಲೈಫ್ ಇರಲಿಲ್ಲ. ಹಾಗಾಗಿ, ಮುಂದಿನ ಪ್ರಶ್ನೆ 3.20 ಲಕ್ಷಕ್ಕೆ. ಎರಡನೇ ಸೇಫ್ ಝೋನ್ ತಲುಪುವ ಪ್ರಶ್ನೆ. ಇದಕ್ಕೆ ಸರಿಯಾಗಿ ಉತ್ತರ ಕೊಟ್ಟರೇ 3.20 ಪಕ್ಕಾ. ತಪ್ಪು ಉತ್ತರ ಕೊಟ್ಟರೇ ಹತ್ತು ಸಾವಿರಕ್ಕೆ ಕುಸಿತ ಆಗುತ್ತೆ.
12.5 ಲಕ್ಷ ಗೆದ್ದ ಮೀನುಗಾರ್ತಿ ದೀಪಾ ಎದುರಿಸಿದ ಹದಿಮೂರು ಪ್ರಶ್ನೆಗಳಿವೆ.!

ಇಂಚರಾಗೆ ಕೈಕೊಟ್ಟ ಪ್ರಶ್ನೆ ಇದೇ
1944 ರಲ್ಲಿ ಮಹಾತ್ಮ ಗಾಂಧಿಯವರನ್ನು ಚೂರಿಯಿಂದ ಹಲ್ಲೆ ಮಾಡಲು ನುಗ್ಗಿದ ಯಾರನ್ನು ತಡೆಯಲಾಯಿತು?
A ಮಣಿಶಂಕರ್ ಪುರೋಹಿತ್
B ನಾರಾಯಣ ಆಪ್ಟೆ
C ನಾಥೂರಾಮ್ ಗೋಡ್ಸೆ
D ಗೋಪಾಲ್ ಗೋಡ್ಸೆ
ಕೋಟ್ಯಧಿಪತಿಯ ಮೊದಲ ಸ್ಪರ್ಧಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.!

ಇಂಚರಾ ಏನು ಮಾಡಿದ್ರು?
ನಾಥೂರಾಮ್ ಗೋಡ್ಸೆ ಮತ್ತು ಗೋಪಾಲ್ ಗೋಡ್ಸೆ ಆಯ್ಕೆಗಳ ಬಗ್ಗೆ ಗೊಂದಲಕ್ಕೆ ಒಳಗಾದ ಇಂಚರಾ, ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿದರು. ತಪ್ಪು ಉತ್ತರ ಕೊಟ್ಟರೇ ಕೈಯಲ್ಲಿರುವ ಹಣವೂ ಸಿಗಲ್ಲ ಎಂಬುದನ್ನ ಅರಿತ ಇಂಚರಾ ಆಟವನ್ನ ಕ್ವಿಟ್ ಮಾಡಿದರು. ಅಲ್ಲಿಗೆ ಕೈಯಲ್ಲಿದ್ದ 1.60 ಲಕ್ಷ ಹಣವನ್ನ ತನ್ನಲ್ಲಿ ಉಳಿಸಿಕೊಂಡರು.

ಸರಿಯಾದ ಉತ್ತರವೇನು?
ಆಟ ಕ್ವಿಟ್ ಮಾಡಿದ ಬಳಿಕ ಹಾಗೆ ಸುಮ್ಮನೆ ಉತ್ತರಿಸಿ ಎಂದಾಗ ಇಂಚರಾ ಅವರ ಅನುಮಾನ ನಾಥೊರಾಮ್ ಗೋಡ್ಸೆ ಮೇಲೆ ಇತ್ತು. ಹಾಗಾಗಿ, ಅದೇ ಇರಬಹುದು ಎಂದರು. ದುರಾದೃಷ್ಟವಶಾತ್ ಅದೇ ಸರಿ ಉತ್ತರ ಆಗಿತ್ತು (C ನಾಥೂರಾಮ್ ಗೋಡ್ಸೆ). ಆದರೆ, ಆಟ ಕ್ವಿಟ್ ಮಾಡಿದ್ದ ಇಂಚರಾ, ನಿರಾಸೆಯಿಂದ ಆಟ ಮುಗಿಸಿದರು.