twitter
    For Quick Alerts
    ALLOW NOTIFICATIONS  
    For Daily Alerts

    ವಿದೇಶಿ ರಿಯಾಲಿಟಿ ಶೋನಲ್ಲಿ 1.86 ಕೋಟಿ ಗೆದ್ದ ಭಾರತೀಯ

    |

    ಭಾರತೀಯರು ವಿದೇಶಿ ಸಿನಿಮಾಗಳಲ್ಲಿ, ಶೋಗಳಲ್ಲಿ ಕಾಣಿಸಿಕೊಳ್ಳುವುದು ಹೊಸತೇನೂ ಅಲ್ಲ. ಭಾರತದ ಪ್ರತಿಭೆಗಳಿಗೆ ವಿದೇಶಗಳಿಂದ ಅವಕಾಶಗಳು ಅರಸಿ ಹಿಂದೆಯೂ ಬರುತ್ತಿದ್ದವು, ಈಗಲೂ ಬರುತ್ತಿವೆ.

    ಇದೀಗ ಆಸ್ಟ್ರೇಲಿಯಾದ ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ವ್ಯಕ್ತಿ ಗೆದ್ದಿದ್ದು, ಬರೋಬ್ಬರಿ 1.86 ಕೋಟಿ ಬಹುಮಾನದ ಹಣವನ್ನು ತನ್ನದಾಗಿಸಿಕೊಂಡಿದ್ದಾರೆ.

    ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ರಿಯಾಲಿಟಿ ಸ್ಪರ್ಧೆಯು ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಜನಪ್ರಿಯವಾದ ಅಡುಗೆ ರಿಯಾಲಿಟಿ ಸ್ಪರ್ಧಿ ಈ ಶೋನ 13ನೇ ಸೀಸನ್‌ನಲ್ಲಿ ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಭಾಗವಹಿಸಿದ್ದರು. ಇವರು ಈಗ ಶೋನ ವಿನ್ನರ್ ಆಗಿದ್ದಾರೆ.

    Indian Origin Justin Narayan Won Master chef Australia Season 13

    ಹಲವು ಜನ ಸ್ಪರ್ಧಿಗಳು ಭಾಗವಹಿಸಿದ್ದ ಈ ಶೋನಲ್ಲಿ ಅಂತಿಮವಾಗಿ ಮೂರು ಮಂದಿ ಉಳಿದಿದ್ದರು, ಮೂವರಲ್ಲಿ ಜಸ್ಟಿನ್ ನಾರಾಯಣ್ ವಿಜಯಿಯಾಗಿದ್ದಾರೆ. ವಿಶೇಷವೆಂದರೆ ಮೂರು ಮಂದಿ ಫೈನಲಿಸ್ಟ್‌ಗಳಲ್ಲಿ ಭಾರತೀಯ ಕಿಶೋರ್ ಚೌಧರಿ ಸಹ ಇದ್ದರು.

    ಜಸ್ಟಿನ್ ಹಾಗೂ ಕಿಶೋರ್ ಚೌಧರಿ ಹಲವು ಭಾರತೀಯ ಸಾಂಪ್ರದಾಯಿಕ ಅಡುಗೆಗಳನ್ನು ಜಡ್ಜ್‌ಗಳಿಗೆ ಉಣಬಡಿಸಿದ್ದರು. ಕಿಶೋರ್ ಚೌಧರಿ ಸಹ ಈ ಶೋನ ಪ್ರಮುಖ ಸ್ಪರ್ಧಿಯಾಗಿದ್ದರು, ಆದರೆ ಅಂತಿಮ ವಿಜಯ ಜಸ್ಟಿನ್ ನಾರಾಯಣ್ ಪಾಲಾಗಿದೆ.

    ಜಸ್ಟಿನ್ ನಾರಾಯಣ್, ತಮ್ಮ ಈ ಗೆಲುವನ್ನು ಇತರೆ ಸ್ಪರ್ಧಿಗಳು, ಜಡ್ಜ್‌ಗಳು ಹಾಗೂ ತನಗೆ ಬೆಂಬಲ ಕೊಟ್ಟ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ನಾರಾಯಣ್‌ಗೆ 2.50 ಲಕ್ಷ ಡಾಲರ್ (1.80 ಕೋಟಿ) ಬಹುಮಾನ ಮತ್ತು ಪಾರಿತೋಷಕವನ್ನು ನೀಡಲಾಗಿದೆ.

    ಗೆಲುವಿನ ಚಿತ್ರಗಳನ್ನು ಜಸ್ಟಿನ್ ನಾರಾಯಣ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಮಾಸ್ಟರ್ ಶೆಫ್‌ ಸಹ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಜಸ್ಟಿನ್ ನಾರಾಯಣ್ ವಿಡಿಯೋವನ್ನು ಹಂಚಿಕೊಂಡಿದೆ.

    ಮಾಸ್ಟರ್ ಶೆಫ್ ಕಾರ್ಯಕ್ರಮ ವಿಶ್ವದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿದೆ. ಇದೀಗ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೂ ಮಾಸ್ಟರ್ ಶೆಫ್ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದ್ದು, ತಮಿಳಿನ ಶೋ ಅನ್ನು ವಿಜಯ್ ಸೇತುಪತಿ, ಮಲಯಾಳಂ ಶೋ ಅನ್ನು ಪೃಥ್ವಿರಾಜ್ ಸುಕುಮಾರನ್, ತೆಲುಗಿನ ಶೋ ಅನ್ನು ನಾನಿ, ಕನ್ನಡದ ಶೋ ಅನ್ನು ನಟ ಸುದೀಪ್ ನಿರೂಪಿಸಲಿದ್ದಾರೆ.

    English summary
    Indian origin Justin Narayan won Master chef Australia Season 13. He gets 1.86 crore rs as prize money and a trophy.
    Wednesday, July 14, 2021, 20:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X