»   » ರಿಯಾಲಿಟಿ ಶೋನ 'ಇಂಡಿಯನ್'ಗೆ ಮಸ್ತ್ ಆಫರ್

ರಿಯಾಲಿಟಿ ಶೋನ 'ಇಂಡಿಯನ್'ಗೆ ಮಸ್ತ್ ಆಫರ್

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ 'ಇಂಡಿಯನ್' ರಿಯಾಲಿಟಿ ಶೋ ಮುಗಿದಿದ್ದೇ ತಡ ರಿಯಾಲಿಟಿ ಶೋನಲ್ಲಿ ಮಿಂಚಿದ ಸ್ಟಾರ್ ಗಳಿಗೆ ಸಿನಿಮಾದಲ್ಲಿ ಅವಕಾಶಗಳು ಸಿಗುತ್ತಿವೆ. ಇತ್ತೀಚೆಗೆ ತಾನೆ ರಿಯಾಲಿಟಿ ಶೋ ಗೆದ್ದ ತರಕಾರಿ ಮಾರೋ ಹಳ್ಳಿ ಹೈದ ಸುನಾಮಿ ಕಿಟ್ಟಿಯನ್ನ ಹೀರೋ ಮಾಡೋಕೆ ಮೂರು ನಾಲ್ಕು ಪ್ರೊಡ್ಯೂಸರ್ಗಳು ಕಿಟ್ಟಿಯ ಹಿಂದೆ ಬಿದ್ದಿರೋ ಸುದ್ದಿಯನ್ನ ನಾವೇ ನಿಮ್ಗೆ ಕೊಟ್ಟಿದ್ವಿ.

ಈಗ ಚಿತ್ರದ ಮತ್ತೊಬ್ಬ ಸ್ಪರ್ಧಿ ಕೊಡಗಿನ ಭುವನ್ ಪೊನ್ನಣ್ಣ ನಾಯಕನಾಗಿ 'ಲವ್ ದರ್ಬಾರ್' ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಘ್ನೇಶ್ವರ ವಿಶ್ವ ಅನ್ನೋ ಹೊಸ ನಿರ್ದೇಶಕನ ಚೊಚ್ಚಲ ಚಿತ್ರ. ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿರೋದು ಹರ್ಷಿಕಾ ಪೂಣಚ್ಚ. ['ಇಂಡಿಯನ್' ಸುನಾಮಿ ಕಿಟ್ಟಿ ಸಿನಿಮಾಗೆ ಡಿಮಾಂಡ್]

Love Darbar movie still

ಇತ್ತೀಚೆಗೆ ಚಿತ್ರತಂಡ ನಗರದ ಸ್ಕಂದಗಿರಿ ಬೆಟ್ಟ ಹತ್ತಿದೆ. ಚಿತ್ರದ ವಿಭಿನ್ನ ಫೋಟೋಶೂಟ್ ಕೂಡ ಇತ್ತೀಚೆಗೆ ನಡೆದಿದೆ. ಇನ್ನು 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ' ಅನ್ನೋ ಸಿನಿಮಾದಲ್ಲಿ 'ಇಂಡಿಯನ್' ರಿಯಾಲಿಟಿ ಶೋನ ರನ್ನರ್ ಅಪ್ ರೋಹನ್ ಅವರು 'ಗೊಂಬೆಗಳ ಲವ್' ಸಿನಿಮಾದ ನಾಯಕ ಅರುಣ್ ಜೊತೆ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.

ಒಟ್ಟಾರೆ 'ಇಂಡಿಯನ್' ರಿಯಾಲಿಟಿ ಶೋ ಸ್ಟಾರ್ ಗಳಿಗೆ ಇದು ಶುಭಕಾಲ. ಈ ರಿಯಾಲಿಟಿ ಶೋನಲ್ಲಿ ಪಬ್ಲಿಸಿಟಿ ಗಿಟ್ಟಿಸಿಕೊಂಡು ಚೆನ್ನಾಗಿ ಪರ್ಫಾಮ್ ಮಾಡಿ ಭರ್ಜರಿ ಅವಕಾಶ ಗಿಟ್ಟಿಸ್ತಿದ್ದಾರೆ. ಸುನಾಮಿ ಕಿಟ್ಟಿ ತನ್ನ ಮುಗ್ಧತೆ ಮತ್ತು ಶಕ್ತಿ ಸಾಮರ್ಥ್ಯದಿಂದ ರಿಯಾಲಿಟಿ ಶೋ ಫೈನಲ್ ತಲುಪಿ ಹತ್ತು ಲಕ್ಷ ಬಹುಮಾನ ಗೆದ್ದಿದ್ದ. ಕಿಟ್ಟಿ ಪಡೆದುಕೊಂಡ ಪಬ್ಲಿಸಿಟಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳೋಕೆ ನಿರ್ಮಾಪಕರು ಮುಗಿಬಿದ್ದಿದ್ದಾರೆ.

English summary
Etv Kannada reality show 'Indian' One of the contestant Bhuvan Ponanna getting opportunities in Sandalwood. Now he is acting in Love Darbar with Hashika Poonacha. The actor shares the screen with 'Gombegala Love' fame Arun. The movie is directed by Vigneshwara Vishwa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada