For Quick Alerts
  ALLOW NOTIFICATIONS  
  For Daily Alerts

  ಉದಯ ಟವಿಯಲ್ಲಿ 'ಇನ್ಸ್‌ಪೆಕ್ಟರ್ ವಿಕ್ರಂ' ಪ್ರಸಾರ

  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರಘು ಮುಖರ್ಜಿ, ಭಾವನಾ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

  ಏಪ್ರಿಲ್ 18 ರಂದು ಭಾನುವಾರ 6.30ಕ್ಕೆ ಉದಯ ಟಿವಿಯಲ್ಲಿ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾ ಟೆಲಿಕಾಸ್ಟ್ ಆಗುತ್ತಿದೆ.

  ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿಗೆ ಕೊರೊನಾ ಪಾಸಿಟಿವ್ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿಗೆ ಕೊರೊನಾ ಪಾಸಿಟಿವ್

  ಕೊರನಾ ವೈರಸ್ ಹಾವಳಿ ಮಧ್ಯೆ ಬಿಡುಗಡೆಯಾಗಿ ಯಶಸ್ಸು ಕಂಡ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾಗೆ ನರಸಿಂಹ ಆಕ್ಷನ್ ಕಟ್ ಹೇಳಿದ್ದರು. ವಿಜ್ಞಾನಾ ಎ.ಆರ್ ನಿರ್ಮಿಸಿದ್ದರು. ಅವಿನಾಶ್, ಶೋಭರಾಜ್ ಮತ್ತು ಧರ್ಮ ಅವರು ತಾರಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

  ಕಥೆಯು ವಿಶೇಷವಾಗಿ ಒಬ್ಬ ಉತ್ತಮ ಪೋಲೀಸ್ ಅಧಿಕಾರಿಯ ಸುತ್ತ ಸುತ್ತುತ್ತದೆ. ವಿಕ್ರಂ ಒಬ್ಬ ದಕ್ಷ ಪೋಲೀಸ್‌ ಅಧಿಕಾರಿ. ಈತ ಪೋಲೀಸ್‌ 2ನೇ ಕೋಹಿನೂರ್ ವಜ್ರ ಎಂದು ಹೆಸರವಾಸಿಯಾಗಿರುತ್ತಾನೆ. ಅಲ್ಲದೇ ಯಾವುದೇ ಸಮಸ್ಯೆ ಇದ್ದರೂ ಸರಳವಾಗಿ ಬಗೆಹರಿಸುತ್ತಾನೆ. ಮಾದಕವಸ್ತು ದಂಧೆಯ ಮೂಖ್ಯಸ್ಥನನ್ನು ಹೇಗೆ ತನ್ನ ಸಾಮರ್ಥ್ಯದಿಂದ ಬಂಧಿಸುತ್ತಾನೆ ಎಂಬುದೇ ಈ ಚಲನಚಿತ್ರದ ಸಾರಾಂಶ.

  ವಿಶೇಷ ಅಂದ್ರೆ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರ ನಿರ್ವಹಿಸಿದ್ದು, ಇಡೀ ಚಿತ್ರಕ್ಕೆ ಇದೊಂದು ಶಕ್ತಿ ತುಂಬಿದೆ.

  ಪ್ರಜ್ವಲ್ ದೇವರಾಜ್ ಮತ್ತು ದರ್ಶನ್ ಕಾಂಬಿನೇಷನ್‌ನ ಈ ಚಿತ್ರ ಬೆಳ್ಳಿತೆರೆಯಲ್ಲಿ ಸಕ್ಸಸ್ ಕಂಡಾಗಿದೆ. ಈಗ ಕಿರುತೆರೆಗೆ ಲಗ್ಗೆಯಿಟ್ಟಿದ್ದು, ಈ ಭಾನುವಾರ ವೀಕ್ಷಕರು ಕಣ್ತುಂಬಿಕೊಳ್ಳಬಹುದು.

  English summary
  Prajwal Devaraj, Raghu Mukherjee, Bhavana Menon starrer Inspector Vikram movie will telecast Sunday(April 18) at 6.30PM on Udaya Tv.
  Saturday, April 17, 2021, 8:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X