For Quick Alerts
  ALLOW NOTIFICATIONS  
  For Daily Alerts

  'ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು

  |

  'ಅಭಿ ಪಿಕ್ಚರ್ ಬಾಕಿ ಹೈ' - ದಕ್ಷ ಅಧಿಕಾರಿಯ ಈ ಮಾತುಗಳನ್ನ ಕೇಳಿದ್ರೆ 'ಧೈರ್ಯ-ಸ್ಥೈರ್ಯ' ನುಗ್ಗಿ ಬರುತ್ತೆ!

  ಕರ್ನಾಟಕದ ಸಿಂಗಂ 'ರವಿ.ಡಿ. ಚನ್ನಣ್ಣನವರ್' ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿಯಾಗಿದ್ದರು. ದಕ್ಷ ಅಧಿಕಾರಿಯ ಯಶೋಗಾಥೆ 'ವೀಕೆಂಡ್' ಪರದೆ ಮೇಲೆ ರೋಚಕವಾಗಿ ಅನಾವರಣಗೊಂಡಿತು.[ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು]

  ಅಂದ್ಹಾಗೆ, ಈ ಎಪಿಸೋಡ್ ಎಂಥವರಿಗೂ ಸ್ಫೂರ್ತಿಯಾಗಲಿದೆ ಎಂಬುದು ಮೊದಲೇ ನಿರೀಕ್ಷಿಸಲಾಗಿತ್ತು. ಅದೇ ರೀತಿ ಕಾರ್ಯಕ್ರಮ ಕೂಡ ಸ್ಫೂರ್ತಿಯ ಚಿಲುಮೆಯಾಗಿತ್ತು.

  ಖಡಕ್ ಅಧಿಕಾರಿ ರವಿ ಅವರ ಖಡಕ್ ಮಾತುಗಳು ಯುವ ಜನರನ್ನ ಎಚ್ಚರಿಸುವಂತಿತ್ತು. ಅವರ ಒಂದೊಂದು ಮಾತಿನಲ್ಲೂ ಶಕ್ತಿ ತುಂಬಿತ್ತು. ರವಿ.ಡಿ.ಚನ್ನಣ್ಣನವರ್ ರಿಂದ ಹೊರಬಂದ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

  ಬಡತನ ಅಂದ್ರೆ.....

  ಬಡತನ ಅಂದ್ರೆ.....

  ''ಬಡತನ, ಅಜ್ಞಾನ, ಅನಕ್ಷರತೆ ಅನ್ನೋದು ಒಂದು ಶಾಪ ಅಲ್ಲ. ಒಂದು ವೇಳೆ ನಾವು ಅದರಿಂದ ಹೊರ ಬಾರದೆ ಹೋದರೆ ಅದು ನಿಜವಾದ ಶಾಪ''- ರವಿ ಡಿ. ಚನ್ನಣ್ಣನವರ್

  'ನನಗೆ ಸಾವಿರ ಕನಸುಗಳಿವೆ'

  'ನನಗೆ ಸಾವಿರ ಕನಸುಗಳಿವೆ'

  ''ನನಗೆ ಸಾವಿರ ಕನಸುಗಳಿವೆ. ನನ್ನ ಕೆಲಸ, ನನ್ನ ಕಾರ್ಯ, ನನ್ನ ಮಾತು, ನನ್ನ ಕೃತಿ ಹೊಸ ಉತ್ಸಾಹ ತರುತ್ತದೆ ಅಂದ್ರೆ ಕೋಟಿ ಅಲ್ಲ, ಮಿಲಿಯನ್ ಬಿಲಿಯನ್ ಅಡೆ ತಡೆ ಬಂದ್ರೂ, ಐ ವಿಲ್ ಕ್ರಾಸ್ ಇಟ್, ಅಂಡ್ ಐ ವಿಲ್ ಡೂ ದಟ್ ವರ್ಕ್'' - ರವಿ ಡಿ. ಚನ್ನಣ್ಣನವರ್

  ಪೊಲೀಸ್ 'ಪವರ್'

  ಪೊಲೀಸ್ 'ಪವರ್'

  ''ಯಾರಿಗೂ ನೀಡದ ಲಾಟಿ, ಪಿಸ್ತೂಲ್ ಗಳನ್ನ , ಪೊಲೀಸರಿಗೆ ಮಾತ್ರ ಕೊಟ್ಟಿರೋದು. ಅದು ಇರೋದು ಆಯುಧ ಪೂಜೆಗೆ ಅಲ್ಲ. ಅದನ್ನ ಸರಿಯಾಗಿ ಬಳಸಬೇಕು'' - ರವಿ ಡಿ. ಚನ್ನಣ್ಣನವರ್

  'ಐ ಹ್ಯಾವ್ ಮೈ ಓನ್ ಪ್ಲಾನ್'

  'ಐ ಹ್ಯಾವ್ ಮೈ ಓನ್ ಪ್ಲಾನ್'

  ''ನನಗೆ ಏನಾದ್ರೂ ಕಲಿಬೇಕು ಅನಿಸಿದ್ರೆ, ಶತಾಯ ಗತಾಯ ನಾನು ಅದನ್ನ ಕಲಿಯುತ್ತೇನೆ. ಬೇಕಾದಷ್ಟು ಕಷ್ಟ ಆಗಲಿ, ಅದಕ್ಕೆ ಏನೇ ತ್ಯಾಗ ಆಗಲಿ ನಾನು ಮಾಡ್ತೀನಿ. ನಿದ್ದೆ ಕಳೆದುಕೊಳ್ಳಿ, ಊಟ ಕಳೆದುಕೊಳ್ಳಿ ಅಥವಾ ನನ್ನನ್ನ ನಾನೇ ಕಳೆದುಕೊಳ್ಳಲ್ಲಿ. ಐ ಹ್ಯಾವ್ ಮೈ ಓನ್ ಪ್ಲಾನ್, ದಟ್ ಇಸ್ ಮೈ ಲೈಫ್ ಸ್ಟೈಲ್'' - ರವಿ ಡಿ. ಚನ್ನಣ್ಣನವರ್

  ಹಸಿವನ್ನ ಚಾಲೆಂಜ್ ಆಗಿ ತೆಗೆದುಕೊಂಡೆ!

  ಹಸಿವನ್ನ ಚಾಲೆಂಜ್ ಆಗಿ ತೆಗೆದುಕೊಂಡೆ!

  ''ಹಸಿವು ಅನ್ನೋದನ್ನ ನಾನು ಬೇರೆಯವರನ್ನ ನೋಡಿ ಕಲಿಯೋ ಅವಶ್ಯಕತೆ ಇಲ್ಲ. ನಾನು ಸ್ವತಃ ಅದನ್ನ ಅನುಭವಿಸಿದ್ದೀನಿ. ಎರಡು ಮೂರು ದಿನ ಊಟ ಇಲ್ಲದೆ ಕಳೆದ ದಿನಗಳುಂಟು. ಆದ್ರೆ ನಾನು ಅದನ್ನ ಚಾಲೆಂಜ್ ಆಗಿ ಸ್ವೀಕರಿಸಿದ್ದೇನೆ.'' - ರವಿ ಡಿ. ಚನ್ನಣ್ಣನವರ್

  ಪೊಲೀಸ್ ಅಂದ್ರೆ ಭರವಸೆ

  ಪೊಲೀಸ್ ಅಂದ್ರೆ ಭರವಸೆ

  ''ಪೊಲೀಸ್ ಅಂದ್ರೆ ದೌರ್ಜನ್ಯ ಅಲ್ಲ, ಭಯ ಅಲ್ಲ, ನಾವು ಭರವಸೆ....ಪೊಲೀಸರು ಇರುವುದೇ ಸಂವಿಧಾನದ ಉದ್ದೇಶಗಳನ್ನ ಎತ್ತಿ ಹಿಡಿಯುವುದಕ್ಕೆ. ನಾವಿರುವುದೇ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನ ಕಾಪಾಡುವುದಕ್ಕೆ. ವಿ ಆರ್ ಪೇಡ್ ಟು ಪ್ರೊಟೆಕ್ಟ್ ದೇಮ್'' - ರವಿ ಡಿ. ಚನ್ನಣ್ಣನವರ್

  English summary
  IPS Officer Ravi D Channannavar inspirational talks in Weekend with Ramesh show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X