»   » ಸಿಡಿದೆದ್ದ ಬ್ರಾಹ್ಮಣರು: ಜೀ ಕನ್ನಡ ವಾಹಿನಿಗೆ 'ಧಿಕ್ಕಾರ' ಕೂಗಿದ ಓದುಗರು.!

ಸಿಡಿದೆದ್ದ ಬ್ರಾಹ್ಮಣರು: ಜೀ ಕನ್ನಡ ವಾಹಿನಿಗೆ 'ಧಿಕ್ಕಾರ' ಕೂಗಿದ ಓದುಗರು.!

Posted By:
Subscribe to Filmibeat Kannada

ಕನ್ನಡ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿದ್ದ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜ್ಯೂನಿಯರ್ಸ್' ಇದೀಗ ವಿವಾದದ ಕೇಂದ್ರಬಿಂದು ಆಗಿದೆ.

'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮದಲ್ಲಿ ಮಕ್ಕಳು ಮಾಡಿದ ಡ್ರಾಮಾ ಒಂದರಲ್ಲಿ ಪುರೋಹಿತರನ್ನು ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯ ಸಿಡಿದೆದ್ದಿದೆ.

'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

ಫೇಸ್ ಬುಕ್ ನಲ್ಲಿ ಜೀ ಕನ್ನಡ ವಾಹಿನಿ ಹಾಗೂ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ವಿರುದ್ಧ ಬ್ರಾಹ್ಮಣರು ದಂಗೆ ಎದ್ದಿದ್ದಾರೆ. ಈ ವಿವಾದದ ಕುರಿತು ನಿಮ್ಮ ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ವರದಿ ಪ್ರಕಟ ಮಾಡಿತ್ತು. ಅಲ್ಲದೇ, ವಿವಾದದ ಕುರಿತು ಓದುಗರ ಅಭಿಪ್ರಾಯವನ್ನೂ ಸಂಗ್ರಹಿಸಿತ್ತು.

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಸ್ಕಿಟ್ ನಲ್ಲಿ ಆದ ಎಡವಟ್ಟಿನ ಬಗ್ಗೆ ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಓದುಗರ ಅಭಿಪ್ರಾಯ ಇಂತಿವೆ....

ಧಿಕ್ಕಾರ... ಧಿಕ್ಕಾರ

''ಇದು ನಿಜವಾಗ್ಲೂ ಒಂದು ದುರಂತ. ಬುದ್ದಿಜೀವಿ ಟಿ.ಎನ್.ಸೀತಾರಾಂ ಅವರಂತಹ ಮೇಧಾವಿಗಳಿದ್ದು ಈ ತರಹ ಕೀಳು ಅಭಿರುಚಿಯ ನಾಟಕವನ್ನು ಅದು ಹೇಗೆ ಸಹಿಸಿದ್ರು.? ದೇವರ ಸಮಾನರಾದ ಮಕ್ಕಳಿಂದ ಕಾಮ ಪ್ರಚೋದನೆಯಂತಹ ಅಭಿನಯವನ್ನು ತೋರಿಸಬಹುದೇ.? ಕನ್ನಡಿಗರು ಏನು ತೋರಿಸಿದ್ರೂ ನೋಡುತ್ತಾರೆ ಎನ್ನುವ ಧೋರಣೆಯೋ.? ಅರ್ಥವಾಗಲಿಲ್ಲ. ಧಿಕ್ಕಾರ ಟಿ.ಎನ್.ಸೀತಾರಾಂಗೆ... ಧಿಕ್ಕಾರ ವಿಜಯ್ ರಾಘವೇಂದ್ರಗೆ... ಧಿಕ್ಕಾರ ಲಕ್ಷ್ಮಿಗೆ... ಧಿಕ್ಕಾರ ಜೀ ಟಿವಿ ಯವರಿಗೆ...'' ಎಂದು ನಿರಂಜನ್ ಎಂಬುವರು ಧಿಕ್ಕಾರ ಕೂಗಿದ್ದಾರೆ.

ಮುಸ್ಲಿಂ ರವರನ್ನೂ ಆಡಿಕೊಂಡರೆ.?

''ಕಾಮಿಡಿಯನ್ನ ಕಾಮಿಡಿ ಆಗಿ ನೋಡಿ ನಕ್ಕು ಸುಮ್ಮನಾಗುತ್ತೇವೆ. ಆದರೆ ಮುಂದಿನ ವಾರ ಮುಸ್ಲಿಂ ರವರನ್ನೂ ಆಡಿಕೊಂಡು ಡ್ರಾಮಾ ಮಾಡಿ ನೋಡೋಣ.?'' ಎಂದು ಜೀ ಕನ್ನಡ ವಾಹಿನಿಗೆ ವೆಂಕಟೇಶ್ ರವರು ಚಾಲೆಂಜ್ ಮಾಡಿದ್ದಾರೆ.

ಇದು ಸರಿಯಲ್ಲ.!

''ಬ್ರಾಹ್ಮಣರನ್ನ ಹೀಯಾಳಿಸುವುದು ಸರಿಯಲ್ಲ. ಹಿಂದು ಧರ್ಮಕ್ಕೆ ಬ್ರಾಹ್ಮಣರು ನೀಡಿರುವ ಕೊಡುಗೆಯನ್ನ ಮೊದಲು ನೆನಪಿಸಿಕೊಳ್ಳಿ'' ಎಂದು ಮಹೇಶ ಎಂಬುವರು ಕಾಮೆಂಟ್ ಮಾಡಿದ್ದಾರೆ.

ಭ್ರಮೆ ಅಷ್ಟೇ.!

''ಏನೇ ಮಾಡಿದರೂ, ಎಷ್ಟೇ ಅವಮಾನಿಸಿದರೂ ಬ್ರಾಹ್ಮಣ ಸಮುದಾಯದವರು ಸುಮ್ಮನಿರುತ್ತಾರೆ ಅಂದುಕೊಂಡರೆ ಅದು ಅವರ ಭ್ರಮೆ'' ಎಂದು ಪ್ರಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.

ಕ್ಷಮೆ ಕೇಳಲೇಬೇಕು.!

''ಯಾವುದೇ ಜಾತಿ ಜನಾಂಗದವರನ್ನು ಅವಹೇಳನಕಾರಿಯಾಗಿ ಬಿಂಬಿಸುವುದು ಸರಿಯಲ್ಲ. ಈ ಎಡವಟ್ಟಿಗಾಗಿ ಜೀ ಕನ್ನಡ ವಾಹಿನಿಯವರು ಕೂಡಲೆ ಬ್ರಾಹ್ಮಣ ಸಮುದಾಯವನ್ನ ಬೇಷರತ್ ಕ್ಷಮೆ ಯಾಚಿಸಲೇಬೇಕು'' ಎಂದು ರಘು ಎಂಬುವರು ಒತ್ತಾಯಿಸಿದ್ದಾರೆ.

ಎಲ್ಲರಿಗೂ ಅಸಮಾಧಾನ

''ನಾನು ಬ್ರಾಹ್ಮಣ ಅಲ್ಲ. ಆದರೂ ಈ ರೀತಿ ಕಾಮಿಡಿ ಮಾಡುವುದು ಸರಿಯಲ್ಲ'' ಎಂದು ಬಸವರಾಜ ಎಂಬುವರು ಕಾಮೆಂಟ್ ಮಾಡಿದ್ದಾರೆ.

ಡೌನ್.. ಡೌನ್

ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿರುವ ಜೀ ಕನ್ನಡ ವಾಹಿನಿಗೆ ವೀಕ್ಷಕರು ಡೌನ್ ಡೌನ್ ಎನ್ನುತ್ತಿದ್ದಾರೆ.

English summary
Oneindia/Filmibeat Kannada Readers have expressed their opinion on insult for Brahmin Community in Zee Kannada Channel's popular show 'Drama Juniors'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada