»   » 'ಮಲೆನಾಡ ಹುಲಿ' ರವಿ ಬಗ್ಗೆ ವೀರಪ್ಪನ್ ಅಟ್ಟಹಾಸ ಅಡಗಿಸಿದ ವಿಜಯ್ ಕುಮಾರ್ ಏನಂತಾರೆ.?

'ಮಲೆನಾಡ ಹುಲಿ' ರವಿ ಬಗ್ಗೆ ವೀರಪ್ಪನ್ ಅಟ್ಟಹಾಸ ಅಡಗಿಸಿದ ವಿಜಯ್ ಕುಮಾರ್ ಏನಂತಾರೆ.?

Posted By:
Subscribe to Filmibeat Kannada

ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಿಗೆ ತಲೆನೋವಾಗಿ ಪರಿಣಮಿಸಿದ ಕಾಡುಗಳ್ಳ, ದಂತಚೋರ ವೀರಪ್ಪನ್ ಅಟ್ಟಹಾಸ ಅಡಗಿಸಿದ 'ಸ್ಪೆಷಲ್ ಟಾಸ್ಕ್ ಫೋರ್ಸ್' ಹಿಂದಿನ ಮಾಸ್ಟರ್ ಬ್ರೇನ್ ಹಿರಿಯ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಎಂಬುದೀಗ ಎಲ್ಲರಿಗೂ ಗೊತ್ತು.

ಆದ್ರೆ, ಇದೇ ವಿಜಯ್ ಕುಮಾರ್... ನಮ್ಮ 'ಮಲೆನಾಡ ಹುಲಿ' ಅಲಿಯಾಸ್ 'ಕರ್ನಾಟಕದ ಸಿಂಗಂ' ರವಿ.ಡಿ.ಚನ್ನಣ್ಣನವರ್ ರವರಿಗೆ ಐಪಿಎಸ್ ಟ್ರೇನಿಂಗ್ ಕೊಟ್ಟಿದ್ದರು ಅನ್ನೋದು ನಿಮಗೆ ಗೊತ್ತೇ.? [ಕೂಲಿ ಕೆಲಸ ಮಾಡುತ್ತಿದ್ದ ರವಿ ಐ.ಪಿ.ಎಸ್ ಅಧಿಕಾರಿ ಆದ ರೋಚಕ ಕಥೆ]

ಹೌದು, ಐಪಿಎಸ್ ಆಫೀಸರ್ ವಿಜಯ್ ಕುಮಾರ್ ತರಬೇತಿ ನೀಡಿದ ಎರಡು ಐ.ಪಿ.ಎಸ್ ಬ್ಯಾಚ್ ಪೈಕಿ ಒಂದರಲ್ಲಿ ರವಿ.ಡಿ.ಚನ್ನಣ್ಣನವರ್ ಕೂಡ ಇದ್ದರು. ಇಂದು ಕರ್ನಾಟಕ ರಾಜ್ಯದಲ್ಲಿ ನಿಷ್ಟಾವಂತ ಅಧಿಕಾರಿ ಎಂದು ಜನರ ಪ್ರೀತಿ ಗಳಿಸಿರುವ ರವಿ ಬಗ್ಗೆ ಕೆ.ವಿಜಯ್ ಕುಮಾರ್ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮಕ್ಕಾಗಿ ಮಾತನಾಡಿರುವುದು ಹೀಗೆ.....

ರವಿ ಬಗ್ಗೆ ವಿಜಯ್ ಕುಮಾರ್ ಮನದಾಳ

''ನಾನು 2 ಐ.ಪಿ.ಎಸ್ ತಂಡಗಳಿಗೆ ತರಬೇತಿ ನೀಡಿದ್ದೆ. ಅದರಲ್ಲಿ ಬಹಳ ಮಂದಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪೈಕಿ ರವಿ ಕೂಡ ಒಬ್ಬರು'' - ಕೆ.ವಿಜಯ್ ಕುಮಾರ್, ಐಪಿಎಸ್ ['ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು]

ರವಿ ಸ್ನೇಹಜೀವಿ

''ರವಿ ಜನರೊಂದಿಗೆ ಬೆರೆಯುತ್ತಾರೆ. ಅವರು ತುಂಬಾ ಸಮಾಜಮುಖಿ, ಸ್ನೇಹಜೀವಿ ಮತ್ತು ಬುದ್ದಿಜೀವಿ. ಆದರೆ ಇವೆಲ್ಲದಕ್ಕಿಂತ ನನಗೆ ಹೆಚ್ಚು ಇಷ್ಟ ಆಗಿದ್ದು, ಅವರು ತಾನು ನಡೆದು ಬಂದ ಹಾದಿಯನ್ನು ಮರೆಯದೇ ಇರುವುದು'' - ಕೆ.ವಿಜಯ್ ಕುಮಾರ್, ಐಪಿಎಸ್ [ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಮಾಡಿರುವ ಸಾಧನೆ ಏನು.?]

ರವಿ ಶ್ರಮಜೀವಿ

''ಅವರು ಹೋಟೆಲ್ ನಲ್ಲಿ ಕೆಲಸ ಮಾಡಿದ್ದಾರೆ. ಜೀವನದಲ್ಲಿ ಕಷ್ಟ ಅನುಭವಿಸಿದ್ದಾರೆ. ಮೇಲೆ ಬರಲು ತುಂಬಾ ಶ್ರಮ ಪಟ್ಟಿದ್ದಾರೆ'' - ಕೆ.ವಿಜಯ್ ಕುಮಾರ್, ಐಪಿಎಸ್ [ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು]

ರವಿಗೆ ಸಿಕ್ಕಿರುವ ದೊಡ್ಡ ಬಹುಮಾನ

''ನನಗೆ ಬಹಳ ಸಂತೋಷ ಏನೆಂದರೆ... ತಮ್ಮ ವೃತ್ತಿ ಬದುಕಿನಲ್ಲಿ ತಮ್ಮ ಹೆಸರನ್ನು ರವಿ ಕಾಪಾಡಿಕೊಂಡು ಬಂದಿದ್ದಾರೆ. ಅವರ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಜನಸಾಮಾನ್ಯರು ಅವರನ್ನು ಗೌರವಿಸುತ್ತಾರೆ. ಇದು ಅವರಿಗೆ ಸಿಕ್ಕಿರುವ ದೊಡ್ಡ ಬಹುಮಾನ. ಇದನ್ನ ಅವರು ಉಳಿಸಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ನನ್ನದು'' - ಕೆ.ವಿಜಯ್ ಕುಮಾರ್, ಐಪಿಎಸ್

ಯಾರ ದಾಕ್ಷಿಣ್ಯಕ್ಕೂ ಒಳಗಾಗುವುದಿಲ್ಲ

''ಯಾರದ್ದೋ ದಾಕ್ಷಿಣ್ಯಕ್ಕೆ ಒಳಗಾಗದೇ, ಯಾರದ್ದೋ ಒತ್ತಡಕ್ಕೆ ಮಣಿಯದೆ, ರವಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಗೇ ಮುಂದುವರಿಯಬೇಕು'' - ಬಿ.ಎ.ಪದ್ಮನಾಭನ್, ಐಪಿಎಸ್

ನಾವೇ ಅದೃಷ್ಟವಂತರು

''ವಿಜಯ್ ಕುಮಾರ್ ನನಗೆ ರೋಲ್ ಮಾಡಲ್. ನಾವು ಅವರನ್ನ ನೋಡಿಕೊಂಡು ಬೆಳೆದಿದ್ದೇವೆ. ಅವರಿಂದ ನಾವು ಟ್ರೇನಿಂಗ್ ಪಡೆದಿರುವುದಕ್ಕೆ ನಾವು ಅದೃಷ್ಟವಂತರು'' - ರವಿ.ಡಿ.ಚನ್ನಣ್ಣನವರ್

English summary
IPS Officer Vijay Kumar spoke about Ravi.D.Channannavar in Zee Kannada Channel's popular show 'Weekend With Ramesh-3'

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X