»   » ಹುಚ್ಚ ವೆಂಕಟ್ 'ಕಿಕ್' ಔಟ್ ಆಗಲು ರಮ್ಯಾ ಮೇಡಂ ಕಾರಣ?

ಹುಚ್ಚ ವೆಂಕಟ್ 'ಕಿಕ್' ಔಟ್ ಆಗಲು ರಮ್ಯಾ ಮೇಡಂ ಕಾರಣ?

Posted By:
Subscribe to Filmibeat Kannada

ನಿನ್ನೆ ಸಂಜೆ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಒಂದೇ ನ್ಯೂಸ್. 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ ಔಟ್ ಆಗಿದ್ದಾರೆ. ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿದ ಪರಿಣಾಮ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಿಂದ ಹೊರ ಬಿದ್ದಿದ್ದಾರೆ ಅಂತ.

ಇದರ ಜೊತೆ ಕೆಲ ಖಾಸಗಿ ವಾಹಿನಿಗಳಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ನ್ಯೂಸ್ ಬ್ರೇಕ್ ಆಯ್ತು. ಅದೇನಪ್ಪಾ ಅಂದ್ರೆ, ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ, ಮಾಜಿ ಸಂಸದೆ ನಟಿ ರಮ್ಯಾ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡ್ತಿದ್ದಾರೆ..! ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

ramya-huccha-venkat

ನಟಿ ರಮ್ಯಾ ವೈಲ್ಡ್ ಕಾರ್ಡ್ ಎಂಟ್ರಿಕೊಡುತ್ತಿರುವ ಕಾರಣ ಹುಚ್ಚ ವೆಂಕಟ್ ರಿಗೆ ಗೇಟ್ ಪಾಸ್ ನೀಡಲಾಗಿದೆ ಅನ್ನುವ ಸ್ಫೋಟಕ ಸುದ್ದಿ ಬಿತ್ತರವಾಯ್ತು. ಹಾಗಾದ್ರೆ, 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡುವ ಮುನ್ನ ರಮ್ಯಾ ಮೇಡಂ ಹುಚ್ಚ ವೆಂಕಟ್ ರನ್ನ ಹೊರಹಾಕ್ಬೇಕು ಅಂತ ಕಂಡೀಷನ್ ಹಾಕಿದ್ರಾ? [ಲಕ್ಕಿ ಸ್ಟಾರ್ ರಮ್ಯಾ ಲವ್ ಸ್ಟೋರಿ ಬಿಚ್ಚಿಟ್ಟ ಹುಚ್ಚ ವೆಂಕಟ್.!]

ನಟಿ ರಮ್ಯಾ ನಿಜವಾಗ್ಲೂ 'ಬಿಗ್ ಬಾಸ್' ಮನೆ ಸೇರ್ತಿದ್ದಾರಾ? ಅಂತ ಎಲ್ಲರೂ ಕಣ್ಣು ಬಾಯಿ ಬಿಡುವ ಹೊತ್ತಿಗೆ ಕಲರ್ಸ್ ಕನ್ನಡ ವಾಹಿನಿ ಬಿಜಿನೆಸ್ ಹೆಡ್ ಮತ್ತು 'ಬಿಗ್ ಬಾಸ್-3' ಕಾರ್ಯಕ್ರಮ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

''ನಟಿ ರಮ್ಯಾ ನನಗೆ ಆಪ್ತರು. ಅವರು 'ಬಿಗ್ ಬಾಸ್' ಮನೆಗೆ ಬರುತ್ತಿಲ್ಲ. ಅವರಿಗೂ ಹುಚ್ಚ ವೆಂಕಟ್ ಎವಿಕ್ಷನ್ ಗೂ ಸಂಬಂಧ ಇಲ್ಲ. ನಿಯಮದ ಪ್ರಕಾರ ಮನೆಯಲ್ಲಿ ದೈಹಿಕ ಹಲ್ಲೆ ಮಾಡುವಂತಿಲ್ಲ. ರೂಲ್ಸ್ ಬ್ರೇಕ್ ಮಾಡಿರುವ ಕಾರಣ ವೆಂಕಟ್ ಔಟ್ ಆಗಿದ್ದಾರೆ'' ಅಂತ ಪರಮೇಶ್ವರ ಗುಂಡ್ಕಲ್ ಸ್ಪಷ್ಟಪಡಿಸಿದರು.

ಅಷ್ಟಕ್ಕೂ ಹುಚ್ಚ ವೆಂಕಟ್ ಗೂ ನಟಿ ರಮ್ಯಾಗೂ ಎಲ್ಲಿಗೆಲ್ಲಿಯ ಕನೆಕ್ಷನ್ ಅಂತ ತಲೆ ಕೆರೆದುಕೊಳ್ಳುವ ಮುನ್ನ ನೀವೇ ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹುಚ್ಚ ವೆಂಕಟ್ ಮದುವೆ ಪ್ರಸಂಗ ನೆನಪಿಸಿಕೊಳ್ಳಿ. ನೆನಪಾಗ್ಲಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....['ರಮ್ಯಾ ನನ್ನ ಪತ್ನಿ' ಎಂದ ಹುಚ್ಚ ವೆಂಕಟ ಬಂಧನ]

English summary
Is Sandalwood Queen, EX MP, Congress Politician Ramya entering Bigg Boss Kannada 3 House? Was she the reason behind YouTube Star Huccha Venkat's eviction? Colors Kannada Business Head and Bigg Boss Kannada 3 Director Parameshwar Gundkal has reacted to this. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada