For Quick Alerts
  ALLOW NOTIFICATIONS  
  For Daily Alerts

  'ಇಸ್ಮಾರ್ಟ್ ಜೋಡಿ'ಗಳ ಡಿಫ್ರೆಂಟ್ ಲವ್ ಸ್ಟೋರಿ ನಿಮಗೆ ಗೊತ್ತಾ?

  By ಪ್ರಿಯಾ ದೊರೆ
  |

  'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ಪ್ರೇಕ್ಷಕರು ಕಾರ್ಯಕ್ರಮವನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಹಿರಿಯರಿಂದ ಹಿಡಿದು ಎಲ್ಲರೂ ಮನೆಯಲ್ಲಿ ಕೂತು 'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ನೋಡಬಹುದು.

  ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಗೆ ಎಲ್ಲರೂ ಫಿದಾ ಆಗಿದ್ದಾರೆ. ನಮಸ್ಕಾರ... ನಮಸ್ಕಾರ... ನಮಸ್ಕಾರ... ಎನ್ನುತ್ತಲೇ ಶೋ ಆರಂಭಿಸಿದ ಗಣೇಶ್ ಒಂದೊಂದು ಮಾತುಗಳಿಗೂ ಮನೆಯಲ್ಲಿ ಕುಳಿತ ಪ್ರೇಕ್ಷಕರು ವಿಸಿಲ್ ಹೊಡೆದಿದ್ದಾರೆ. ಈ ಹಿಂದೆ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಗಣೇಶ್ ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

  ಅದ್ಧೂರಿಯಾಗಿ ಪ್ರಾರಂಭಗೊಂಡ ಇಸ್ಮಾರ್ಟ್ ಜೋಡಿ: ಹೇಗಿತ್ತು ಮೊದಲ ಎಪಿಸೋಡ್!ಅದ್ಧೂರಿಯಾಗಿ ಪ್ರಾರಂಭಗೊಂಡ ಇಸ್ಮಾರ್ಟ್ ಜೋಡಿ: ಹೇಗಿತ್ತು ಮೊದಲ ಎಪಿಸೋಡ್!

  'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ರೊಮ್ಯಾಂಟಿಕ್ ಸೆಲೆಬ್ರಿಟಿ ಕಪಲ್ ಶೋ ಆಗಿದೆ. ರೊಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೋಡಿ ಮಾಡೋಕೆ ಇಸ್ಮಾರ್ಟ್ ಜೋಡಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಈ ರಿಯಾಲಿಟಿ ಶೋಗೆ ರಾಕ್ ಲೈನ್ ಸ್ಟುಡಿಯೋದಲ್ಲಿ ಅದ್ಧೂರಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ.

  'ಇಸ್ಮಾರ್ಟ್ ಜೋಡಿ' ಸ್ಪರ್ಧಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ: ಹಿರಿಯ, ಕಿರಿಯ ಜೋಡಿಗಳ ದರ್ಬಾರ್!'ಇಸ್ಮಾರ್ಟ್ ಜೋಡಿ' ಸ್ಪರ್ಧಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ: ಹಿರಿಯ, ಕಿರಿಯ ಜೋಡಿಗಳ ದರ್ಬಾರ್!

  ದಿಶಾ-ಶಶಾಂಕ್ ಪ್ರೇಮ್ ಕಹಾನಿ!

  ನಟಿ ದಿಶಾ ಮದನ್ ಕಿರುತೆರೆಯಿಂದ ಬಹಳ ಕಾಲದಿಂದ ದೂರ ಉಳಿದಿದ್ದರು. ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ದಿಶಾ ಮದನ್ ಈಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ದಿಶಾ ಹಾಗೂ ಶಶಾಂಕ್ ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ಪ್ರೀತಿಸಿ ಮದುವೆಯಾದ ಜೋಡಿ. ಪ್ರೀತಿಸುವಾಗ ಶಶಾಂಕ್, ದಿಶಾ ಅವರಿಗೆ ನಿತ್ಯ ಒಂದೊಂದು ರೋಸ್ ಕೊಡುತ್ತಿದ್ದರಂತೆ. ಆ ಎಲ್ಲಾ ಗುಲಾಬಿ ಹೂಗಳನ್ನೂ ಹಾಗೆ ಇಟ್ಟುಕೊಂಡಿದ್ದಾರಂತೆ. ಈ ಜೋಡಿಗೆ ಈಗ ಇಬ್ಬರು ಮುದ್ದಿನ ಮಕ್ಕಳಿದ್ದು, ದಿಶಾ ಅವರು 'ಫ್ರೆಂಚ್ ಬಿರಿಯಾನಿ' ಮತ್ತು 'ಹಂಬಲ್ ಪೊಲಿಟಿಷಿಯನ್ ನೋಗರಾಜ್' ಚಿತ್ರಗಳಲ್ಲಿ ನಟಿಸಿದ್ದಾರೆ.

  ಸ್ವಪ್ನ ದೀಕ್ಷಿತ್- ಅಶ್ವಿನ್ ದೀಕ್ಷಿತ್ ಲವ್ ಸ್ಟೋರಿ!

  ಕಿರುತೆರೆ ನಟಿ ಸ್ವಪ್ನ ದೀಕ್ಷಿತ್ ಹಾಗೂ ಅವರ ಪತಿ ಅಶ್ವಿನ್ ದೀಕ್ಷಿತ್ ಡ್ಯಾನ್ಸ್ ಮೂಲಕ 'ಇಸ್ಮಾರ್ಟ್ ಜೋಡಿ' ವೇದಿಕೆಗೆ ಎಂಟ್ರಿ ಕೊಟ್ಟರು. ಇಬ್ಬರೂ ಕಾಲೇಜ್ ಓದುವಾಗಲೇ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಪ್ರಪೋಸ್ ಸ್ಟೋರಿಯನ್ನು ಮೆಗಾ ಸೀರಿಯಲ್ ನಂತೆ ಹೇಳಿ ಸಂತಸವನ್ನು ದುಪ್ಪಟ್ಟು ಮಾಡಿಕೊಂಡರು. ಸ್ವಪ್ನ ಅವರಿಗೆ ಅಶ್ವಿನ್ ಕಾಲುಂಗರ ತೊಡಿಸಿ ಮತ್ತೆ ಪ್ರಪೋಸ್ ಮಾಡಿದರು. ಈ ಕ್ಷಣ ತುಂಬಾ ಎಮೋಷನಲ್ ಆಗಿತ್ತು.

  ತಾರೆಯರ ಪ್ರೀತಿಯೇ ಚೆಂದ!

  ಜೈಜಗದೀಶ್ ಹಾಗೂ ವಿಜಯ್ ಲಕ್ಷ್ಮಿ ಸಿಂಗ್ ಕೂಡ ಪ್ರೀತಿಸಿ ಮದುವೆಯಾದ ಜೋಡಿಯೇ. ಇವರಿಬ್ಬರು ಭೂಮಿತಾಯಾಣೆ ನೀ ಇಷ್ಟ ಕಣೇ ಎಂಬ ಹಾಡಿಗೆ ಕುಣಿದರು. ಹಲವು ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು. ಇವರಿಗೆ ಮೂವರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಇನ್ನು ಸುಮನ್ ನಗರ್ಕರ್ ಹಾಗೂ ಗುರುದೇವ್ ನಾಗರಾಜ್ ಕೂಡ ಪ್ರೀತಿಸಿ ಮದುವೆಯಾದವರು. ಸುಮನ್ ಅವರ ಅಣ್ಣನ ಸ್ನೇಹಿತನೇ ಗುರುದೇವ್. ಇಬ್ಬರು ಇಷ್ಟಪಟ್ಟು ಮದುವೆಯಾಗಿ ಈ ಫಾರಿನ್‌ನಲ್ಲಿ ನೆಲೆಸಿದ್ದರು.

  ಇಂಪನಾ, ಅಜಿತ್ ಜಯರಾಜ್ ಗುದ್ದಾಟ!

  ಸಿಂಗರ್ ಇಂಪನಾ ಜಯರಾಜ್ ಹಾಗೂ ಅಜಿತ್ ಜಯರಾಜ್ ಇಬ್ಬರು ಮನೆಯಲ್ಲಿ ಸದಾ ಕಿತ್ತಾಡುತ್ತಿರುತ್ತಾರಂತೆ. ಒಟ್ಟಿಗೆ ಇದ್ದು, ಪ್ರೀತಿ ಹೆಚ್ಚೇ ಇದ್ದರೂ, ಸಣ್ಣ ಸಣ್ಣ ವಿಚಾರಕ್ಕೂ ಜಗಳವಾಡುತ್ತಾರಂತೆ. ಇನ್ನು ಯೂಟ್ಯೂಬರ್ ರಘು ಗೌಡ ಮತ್ತು ವಿದ್ಯಾಶ್ರೀ ಕೂಡ 'ಇಸ್ಮಾರ್ಟ್ ಜೋಡಿ'ಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ನೋಡಿ ಇಬ್ಬರು ಮದುವೆಯಾಗಿದ್ದೂ, ಒಬ್ಬರನ್ನೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅಂತೂ ಇಂತೂ 'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮ ಶುರುವಾಗಿದ್ದು, ಇನ್ಮೇಲೆ ವೀಕೆಂಡ್‌ನಲ್ಲಿ ಭರಪೂರ ಮನರಂಜನೆ ಸಿಗೋದ್ರಲ್ಲಿ ಡೌಟೇ ಇಲ್ಲ.

  English summary
  Ismart Jodi Reality Show Written Update On July 18th Episode, Know More.
  Monday, July 18, 2022, 17:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X