'ಬಿಗ್ ಬಾಸ್' ಮನೆಯಲ್ಲಿ '8MM ಬುಲೆಟ್' ಹಾರಿಸಿದ ನವರಸ ನಾಯಕ ಜಗ್ಗೇಶ್
Recommended Video

ನವರಸ ನಾಯಕ ಜಗ್ಗೇಶ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಎಂಟ್ರಿಕೊಟ್ಟಿದ್ದರು. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರಾಂತ್ಯಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಅತಿಥಿಗಳಾಗಿ ಮನೆಯೊಳಕ್ಕೆ ಹೋಗಿದ್ದರು. ಎರಡನೇ ವಾರಾಂತ್ಯಕ್ಕೆ ಜಗ್ಗೇಶ್ 'ಬಿಗ್ ಬಾಸ್' ಮನೆಯೊಳಗೆ ರೌಂಡ್ ಹಾಕಿ ಬಂದಿದ್ದಾರೆ.
ಮುಂದಿನ ವಾರ ಅಂದ್ರೆ ನವೆಂಬರ್ 16 ರಂದು ನವರಸ ನಾಯಕ ಜಗ್ಗೇಶ್ ಅಭಿನಯದ '8MM ಬುಲೆಟ್' ಚಿತ್ರ ತೆರೆಗೆ ಬರಲಿದೆ. '8MM ಬುಲೆಟ್' ಚಿತ್ರದ ಪ್ರಚಾರ ಸಲುವಾಗಿ 'ಬಿಗ್ ಬಾಸ್' ವೇದಿಕೆ ಮೇಲೆ ಜಗ್ಗೇಶ್ ಪ್ರತ್ಯಕ್ಷವಾದರು.

ಟ್ರೈಲರ್ ಮೂಲಕವೇ ಗಾಂಧಿನಗರದಲ್ಲಿ ಸದ್ದು ಮಾಡಿರುವ ಸಿನಿಮಾ '8MM ಬುಲೆಟ್'. ಇಲ್ಲಿಯವರೆಗೂ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ಜಗ್ಗೇಶ್ '8MM ಬುಲೆಟ್'ನಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲೇ ಇದೊಂದು ವಿಭಿನ್ನ ಚಿತ್ರ ಎಂದು ನಟ ಜಗ್ಗೇಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಜಗ್ಗೇಶ್ ಅವರ ಈ ಪ್ರಯೋಗಕ್ಕೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
'8MM ಬುಲೆಟ್' ಚಿತ್ರದ ಮೇಲೆ ಜಗ್ಗೇಶ್ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಜಗ್ಗೇಶ್ ಗೆ ಯಶಸ್ಸು ತಂದು ಕೊಡುವುದು ಪ್ರೇಕ್ಷಕ ಮಹಾಪ್ರಭಗಳಾದ ನಿಮ್ಮ ಕೈಯಲ್ಲಿದೆ.


Click it and Unblock the Notifications











