For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ನಟನೆಯ 'ತೋತಾಪುರಿ' ಚಿತ್ರದ ಟಿವಿ ಪ್ರೀಮಿಯರ್‌ ದಿನಾಂಕ ಪ್ರಕಟ

  |

  ಈ ವರ್ಷ ಬೃಹತ್ ನಿರೀಕ್ಷೆ ಹುಟ್ಟು ಹಾಕಿದ್ದ ಚಿತ್ರಗಳ ಪೈಕಿ ನವರಸ ನಾಯಕ‌ ಜಗ್ಗೇಶ್ ನಟನೆಯ ತೋತಾಪುರಿ ಚಾಪ್ಟರ್ 1 ಕೂಡ ಒಂದು. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದ್ದ ಈ ಚಿತ್ರ ಬಿಡುಗಡೆಯಾದ ನಂತರ ಆ ನಿರೀಕ್ಷೆಯ ಮಟ್ಟ ತಲುಪುವಲ್ಲಿ ವಿಫಲವಾಯಿತು.

  ಹೌದು, ಅಡಲ್ಟ್ ಕಾಮಿಡಿ ಅತಿರೇಕವೆನಿಸಿದರೆ ಅಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡದ ಕನ್ನಡ ಸಿನಿ ರಸಿಕರು ತೋತಾಪುರಿ ಚಿತ್ರಕ್ಕೂ ಸಹ ಸೊಪ್ಪು ಹಾಕಲಿಲ್ಲ ಎಂದರೆ ತಪ್ಪಾಗಲಾರದು. ಅದರಲ್ಲಿಯೂ ಕಾಂತಾರ ಚಿತ್ರ ಬಿಡುಗಡೆಗೊಂಡಿದ್ದ ದಿನವೇ ಚಿತ್ರಮಂದಿಕ್ಕೆ ಲಗ್ಗೆ ಇಟ್ಟದ ತೋತಾಪುರಿ ಕಾಂತಾರ ಅಲೆಯಲ್ಲಿ ತೇಲಿಹೋದ ಚಿತ್ರಗಳಲ್ಲಿ ಒಂದು ಕೂಡ ಹೌದು.

  ಹೀಗೆ ಚಿತ್ರಮಂದಿರದಲ್ಲಿ ಯಶಸ್ಸು ಸಾಧಿಸದ ತೋತಾಪುರಿ ಚಾಪ್ಟರ್ 1 ಚಿತ್ರ ಕಳೆದ ಕೆಲ ದಿನಗಳ ಹಿಂದಷ್ಟೇ ಜೀ 5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಇದೀಗ ಜೀ ಕನ್ನಡ ವಾಹಿನಿ ಚಿತ್ರದ ವಿಶ್ವ ಟೆಲಿವಿಷನ್ ಪ್ರೀಮಿಯರ್ ಅನ್ನೂ ಸಹ ಘೋಷಣೆ ಮಾಡಿದೆ. ಮುಂದಿನ ಭಾನುವಾರ ಅಂದರೆ ಜನವರಿ ಒಂದರ ಮಧ್ಯಾಹ್ನ 3 ಗಂಟೆಗೆ ಹೊಸ ವರ್ಷದ ಪ್ರಯುಕ್ತ ತೋತಾಪುರಿ ಚಿತ್ರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  ತಾರಾಗಣ

  ತಾರಾಗಣ

  ಇನ್ನು ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನವಿದ್ದು, ಜಗ್ಗೇಶ್ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಸಿಕೊಂಡಿದ್ದಾರೆ ಹಾಗೂ ಡಾಲಿ ಧನಂಜಯ್ ಸಹ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ಬಿಡುಗಡೆಯಾದ ಕೆಲ ದಿನಗಳ ಬಳಿಕ ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದ ತೋತಾಪುರಿ ಚಿತ್ರತಂಡದ ಪರ ಮಾತನಾಡಿದ್ದ ನಟ ಜಗ್ಗೇಶ್ ತಮ್ಮ ಈ ಚಿತ್ರ ಸೋತಿಲ್ಲ, ದಸರಾ ಆನೆ ರೀತಿ ಗಾಂಭೀರ್ಯದಿಂದ ನಡೆಯುತ್ತಾ ಸಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಜಗ್ಗೇಶ್ ಅವರು ಅತಿ ಕೋಪದಿಂದ ಈ ಹೇಳಿಕೆ ನೀಡಿದ್ದು ಆ ಸಮಯಕ್ಕೆ ತುಸು ಚರ್ಚೆಗೆ ಕಾರಣವಾಗಿತ್ತು.

  ನಮ್ಮಲ್ಲಿ ಒಗ್ಗಟ್ಟಿಲ್ಲ

  ನಮ್ಮಲ್ಲಿ ಒಗ್ಗಟ್ಟಿಲ್ಲ

  ಇದೇ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್ ನಮ್ಮವರಲ್ಲಿ ಒಗ್ಗಟ್ಟಿಲ್ಲ, ಅವರ ಗೆಲುವೇ ಅವರಿಗೆ ಮುಖ್ಯ, ಅದೇ ಬೇರೆ ಇಂಡಸ್ಟ್ರಿಗಳಲ್ಲಿ ಕಲಾವಿದರು ಒಗ್ಗಟ್ಟಿನಿಂದ ಇದ್ದಾರೆ, ಒಬ್ಬರಿಗೆ ಸಮಸ್ಯೆ ಉಂಟಾದರೆ ಮತ್ತೊಬ್ಬರು ಬೆಂಬಲಕ್ಕೆ ಬರುತ್ತಾರೆ, ಅವರನ್ನು ನೋಡಿ ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಕಲಿಯಬೇಕಿದೆ ಎಂದು ಹೇಳಿದ್ದರು. ನಮ್ಮ ಕಲಾವಿದರಲ್ಲಿ ಒಗ್ಗಟ್ಟಿಲ್ಲ ಎಂಬ ಜಗ್ಗೇಶ್ ಹೇಳಿಕೆ ಭಾರೀ ಚರ್ಚೆಗೆ ಒಳಗಾಗಿತ್ತು.

  ಐಎಂಡಿಬಿಯಲ್ಲಿ ಕಳಪೆ ರೇಟಿಂಗ್!

  ಐಎಂಡಿಬಿಯಲ್ಲಿ ಕಳಪೆ ರೇಟಿಂಗ್!

  ಇನ್ನು ಹೆಸರಾಂತ ಸಿನಿಮಾ ವೆಬ್ ತಾಣವಾದ ಐಎಂಡಿಬಿಯಲ್ಲಿ ತೋತಾಪುರಿ ಚಾಪ್ಟರ್ 1 ಚಿತ್ರಕ್ಕೆ ಹತ್ತಕ್ಕೆ 4.6 ರೇಟಿಂಗ್ ಮಾತ್ರ ಲಭಿಸಿದೆ. ಈ ಮೂಲಕ ಐಎಂಡಿಬಿ ವೆಬ್ ತಾಣದಲ್ಲಿ ಅತಿಕಳಪೆ ರೇಟಿಂಗ್ ಅನ್ನು ಚಿತ್ರ ಪಡೆದುಕೊಂಡಿದ್ದು, ಜನರಿಗೆ ಅಡಲ್ಟ್ ಕಾಮಿಡಿ ಎಂಟರ್‌ಟೈನರ್ಸ್ ಮೇಲೆ ಒಲವಿಲ್ಲ ಎಂಬುದನ್ನು ತೋರುತ್ತದೆ. ಅಷ್ಟೇ ಅಲ್ಲದೇ ಬುಕ್ ಮೈ ಶೋನಲ್ಲಿ ಹತ್ತಕ್ಕೆ 7.3 ರೇಟಿಂಗ್ ಪಡೆದುಕೊಂಡಿದ್ದ ತೋತಾಪುರಿ ಕೇವಲ 643 ವೋಟ್‌ಗಳನ್ನು ಮಾತ್ರ ಪಡೆದಿತ್ತು.

  English summary
  Jaggesh's Thothapuri movie world television premiere on Zee Kannada on 1st Jan 2023. Read on
  Monday, December 26, 2022, 15:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X