For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಜಗಳವಾಡಿದರೂ ಸಾಕಪ್ಪ ಅನ್ನೋ ಸ್ಥಿತಿಯಲ್ಲಿ ನಾವಿದ್ದೇವೆ!

  By Suneel
  |

  ಹೆಡ್ ಲೈನ್ ನೋಡಿ ನಿಮಗೆಲ್ಲಾ ಶಾಕ್ ಆಗಿರಬೇಕು ಅಲ್ವಾ.... ಹಾಗೆ ಒಂದು ಸಣ್ಣ ಹುಳ ತಲೆಯೊಳಗೆ ಬಿಟ್ಟಂತೆಯೂ ಆಗಿರಬಹುದು. ಆದ್ರೆ ಕನ್ನಡ ಭಾಷೆ ಬೆಳವಣಿಗೆ ಬಗ್ಗೆ ಹೇಳುವುದಾದರೇ ಇದೇ ವಾಸ್ತವ. ಕನ್ನಡ ಭಾಷೆಯ ಪರಿಸ್ಥಿತಿ ನೆನೆದು ಹೀಗೆಂದು ಹೇಳಿದ್ದು ಕನ್ನಡ ಸಾಹಿತ್ಯ ಪ್ರಿಯರ ಮತ್ತು ಸಿನಿ ಪ್ರಿಯರ ನೆಚ್ಚಿನ ಸಾಹಿತಿ ಜಯಂತ್ ಕಾಯ್ಕಿಣಿ ರವರು.

  ಈ ವೀಕೆಂಡ್ ನಲ್ಲಿ (23 ನೇ ತಾರಿಖು) ಪ್ರಸಾರ ಆಗಲಿರುವ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್ ನಲ್ಲಿ ಜಯಂತ್ ಕಾಯ್ಕಿಣಿ ರವರು ಕನ್ನಡ ಭಾಷೆ ಬಗ್ಗೆ, ಕನ್ನಡ ನಂಬಿ ಬೆಂಗಳೂರಿಗೆ ಬರುವವರ ಬಗೆಗಿನ ಕರುಣಾಜನಕ ಪರಿಸ್ಥಿತಿಯನ್ನು ವಿವರಿಸಿದ್ದು, ನಮ್ಮ ಜವಾಬ್ದಾರಿಯನ್ನು ನೆನಪಿಸಿದ್ದಾರೆ. ಕನ್ನಡದ ಬಗ್ಗೆ ಕಾಯ್ಕಿಣಿ ಬಿಚ್ಚಿಟ್ಟ ಸತ್ಯ ಇಲ್ಲಿದೆ ಓದಿ...

  ಈಗಿನ ಕನ್ನಡದ ಸ್ಥಾನ ಮಾನ..

  ಈಗಿನ ಕನ್ನಡದ ಸ್ಥಾನ ಮಾನ..

  "ಕನ್ನಡದ ಸ್ಥಾನ ತುಂಬಾ ಕಷ್ಟದಲ್ಲಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ್ರೆ ಏನ್ ಸಿಗುತ್ತಪ್ಪಾ ಅನ್ನೋ ಪ್ರಶ್ನೆಯನ್ನಾ ಎಲ್ಲರೂ ಬಹಳ ಅಭಿಮಾನದಿಂದ ಕೇಳುತ್ತಿದ್ದಾರೆ. ಅಂತಹ ಬೇಜಾರಿನ ಕಾಲವಿದು" - ಜಯಂತ್ ಕಾಯ್ಕಿಣಿ, ಸಾಹಿತಿ

  ಹಡಗು ಮುಳುಗುತ್ತಿದ್ದರು ಕಿಟಗಿ ಪಕ್ಕ ಸೀಟ್ ಸಿಕ್ತು ಅನ್ನೋರು ನಾವು..

  ಹಡಗು ಮುಳುಗುತ್ತಿದ್ದರು ಕಿಟಗಿ ಪಕ್ಕ ಸೀಟ್ ಸಿಕ್ತು ಅನ್ನೋರು ನಾವು..

  "ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ತು ಅಂತ ಸಂಭ್ರಮ ಪಡುತ್ತೇವೆ. ಅದು ಹೇಗಿದೆ ಅಂದ್ರೆ ಮುಳುಗುತ್ತಿರುವ ಟೈಟಾನಿಕ್ ನಲ್ಲಿ ವಿಂಡೋ ಸೈಡ್ ಸೀಟ್ ಸಿಕ್ತು ಅಂತ ಖುಷಿಪಟ್ಟಂಗೆ" - ಜಯಂತ್ ಕಾಯ್ಕಿಣಿ, ಸಾಹಿತಿ

  ಕಾರಿನ ಹಾರನ್ ನಲ್ಲಿಯೂ ಆರ್ತನಾದ ಫೀಲ್ ಮಾಡುವ ಕಾಯ್ಕಿಣಿ

  ಕಾರಿನ ಹಾರನ್ ನಲ್ಲಿಯೂ ಆರ್ತನಾದ ಫೀಲ್ ಮಾಡುವ ಕಾಯ್ಕಿಣಿ

  "ಕನ್ನಡ ಕಲಿತೋನು, ನಂಬಿಕೊಂಡವನು ಬೆಂಗಳೂರಿಗೆ ಬಂದವನು ಏನ್ ಮಾಡಬೇಕು. ಆಪಾರ್ಟ್ ಮೆಂಟ್ ನಲ್ಲಿ ಇಸ್ತ್ರಿ ಮಾಡಬೇಕಾ ಅಥವಾ ಸೊಪ್ಪು ಮಾರಬೇಕಾ.. ಓಲಾ ಟ್ಯಾಕ್ಸಿ ಓಡಿಸಬೇಕಾ.. ಅನ್ನೋದೆ ದೊಡ್ಡ ಪ್ರಶ್ನೆ. ಬೆಂಗಳೂರಿನ ಟ್ರಾಫಿಕ್ ನಲ್ಲಿ ಎಲ್ಲರದ್ದು ಒಂದು ಕಂಪ್ಲೈಟ್ ಇರುತ್ತೆ. ಈ ಡ್ರೈವರ್ ತುಂಬಾ ಹಾಂಕ್ ಮಾಡ್ತಾರೆ ಅಂತ. ನನಗೆ ಅದು ಡ್ರೈವರ್ ಗಳ ಹಾಂಕಿಂಗ್ ಅಂತ ಅನಿಸೊಲ್ಲ. ಅದು ಕನ್ನಡ ಆರ್ತನಾದದ ರೀತಿ ಕೇಳುತ್ತೆ" - ಜಯಂತ್ ಕಾಯ್ಕಿಣಿ, ಸಾಹಿತಿ

  ಚಾಲಕರು ಸಿನಿಮಾ ಹಾಡುಗಳನ್ನು ಕೇಳುವುದೇಕೆ?

  ಚಾಲಕರು ಸಿನಿಮಾ ಹಾಡುಗಳನ್ನು ಕೇಳುವುದೇಕೆ?

  "ಕನ್ನಡವನ್ನು ನಂಬದಿದ್ದವರನ್ನೆಲ್ಲಾ ನಾವು ಕಾರಿನಲ್ಲಿ ಕೆಲಸಕ್ಕೆ, ಶಾಪಿಂಗ್ ಮಾಲ್ ಗಳಿಗೆ ಡ್ರಾಪ್ ಮಾಡುತ್ತೇವೆ. ಅವರೆಲ್ಲಾ ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡುತ್ತಾರೆ. ಕನ್ನಡಿಗರೇ ಇಂಗ್ಲಿಷ್ ನಲ್ಲಿ ಮಾತಾಡುತಿರುತ್ತಾರೆ. ಪಾಪ 'ಸಿರಿಗನ್ನಡಂ ಗೆಲ್ಗೆ' ಅಂತ ಬರೆದುಕೊಂಡವನಿಗೆ ಸಿಟ್ಟು ಬರುತ್ತೆ. ಒಂದು ಕೋಪ ಇರುತ್ತೆ. ಹೀಗಾಗಿ ಅವರು ಸಿನಿಮಾ ಹಾಡುಗಳ ಮೋರೆ ಹೋಗುತ್ತಾರೆ" -ಜಯಂತ್ ಕಾಯ್ಕಿಣಿ, ಸಾಹಿತಿ

  ಕನ್ನಡದಲ್ಲಿ ಜಗಳ ಆಡಿದ್ರೆ ಖುಷಿ ಪಡುವ ಕಾಯ್ಕಿಣಿ

  ಕನ್ನಡದಲ್ಲಿ ಜಗಳ ಆಡಿದ್ರೆ ಖುಷಿ ಪಡುವ ಕಾಯ್ಕಿಣಿ

  ಕನ್ನಡವನ್ನು ಕಾಪಡಿಕೊಳ್ಳುವ ಬಗ್ಗೆ ವಿವರಿಸುತ್ತಾ ಜಯಂತ್ ಕಾಯ್ಕಿಣಿ ರವರು "ರಿಯಾಲಿಟಿ ಶೋಗಳಲ್ಲಿ ಹುಡುಗಿಯರು ಹಾಡುತ್ತಾರೆ. ಸ್ಕೂಲ್, ಕಾಲೇಜ್ ಗಳಲ್ಲಿ ಮಕ್ಕಳು ಹಾಡುತ್ತಾರೆ. ಹೀಗಾಗಿ ಕನ್ನಡವನ್ನು ಅಟ್ ಲಿಸ್ಟ್ ಸಿನಿಮಾ ಹಾಡುಗಳಲ್ಲಾದರು ಶುದ್ಧವಾಗಿ ಇಟ್ಟರೆ ನಾವು ಅಷ್ಟರ ಮಟ್ಟಿಗೆ ಉಸಿರಾಡಿದ ಹಾಗೆ. ನನಗೆ ಯಾರಾದ್ರು ಕನ್ನಡದಲ್ಲಿ ಜಗಳವಾಡಿದ್ರು ಖುಷಿ ಆಗುತ್ತೆ. ಅಟ್ ಲಿಸ್ಟ್ ಕನ್ನಡದಲ್ಲಾದ್ರು ಜಗಳವಾಡ್ತಿದ್ದಾರೆ ಅಂತ" ಎಂದಿದ್ದಾರೆ.

  ಇಷ್ಟೇ ಅಲ್ಲಾ.. ಇನ್ನೂ ಇದೆ...

  ಇಷ್ಟೇ ಅಲ್ಲಾ.. ಇನ್ನೂ ಇದೆ...

  ಜಯಂತ್ ಕಾಯ್ಕಿಣಿ ರವರು ಕನ್ನಡದ ಈಗಿನ ಕಠೋರ ಪರಿಸ್ಥಿತಿಯ ಬಗ್ಗೆ ಮೇಲೆ ತಿಳಿಸಿದ ಇಷ್ಟೇ ಅಲ್ಲದೇ... ಇನ್ನೂ ಹೆಚ್ಚಿನ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವೆಲ್ಲವನ್ನೂ ತಿಳಿದುಕೊಳ್ಳುವ ಹಂಬಲ ನಿಮಗಿದ್ದರೇ ಮಿಸ್ ಮಾಡದೇ ಈ ವಾರದ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್ ನೋಡಿ.['ವೀಕೆಂಡ್ ವಿತ್ ರಮೇಶ್'ನಲ್ಲಿ ಈ ವಾರ ಇಬ್ಬರು ದಿಗ್ಗಜರು]

  English summary
  Indian Poet, Short Stories Author and a Lyricist Jayant Kaikini talks about present situation of kannada in 'Weekend With Ramesh'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X