ಜಗನ್ ಗೆ ಅಧಿಕಾರ ಸಿಗಲಿಲ್ಲ: ಈಗೆಲ್ಲವೂ ಜೆಕೆ ಪಾಲಾಯ್ತಲ್ಲ.!
'ದೊಡ್ಮನೆ'ಯಿಂದ ಯಾವುದೇ ಸದಸ್ಯರು ಎಲಿಮಿನೇಟ್ ಆದರೂ, ಅವರಿಗೆ 'ಸೂಪರ್ ಅಧಿಕಾರ'ವನ್ನ 'ಬಿಗ್ ಬಾಸ್' ನೀಡುವುದು ವಾಡಿಕೆ. ಅದರಂತೆಯೇ, ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ನಟಿ ಆಶಿತಾ ಹೊರಗೆ ಹೋಗುವ ಮುನ್ನ 'ಸೂಪರ್ ಅಧಿಕಾರ'ವನ್ನ ಜಗನ್ ಗೆ ನೀಡಿದ್ದರು.
ಆದ್ರೆ, 'ಸೂಪರ್ ಅಧಿಕಾರ'ವನ್ನ ಬಳಸುವ ಅವಕಾಶ ಜಗನ್ ಗೆ ಸಿಗುವ ಮೊದಲೇ, ಅವರು ಎಲಿಮಿನೇಟ್ ಆದರು. ಹೀಗಾಗಿ, ಅವರಿಗೆ ಲಭಿಸಿದ್ದ 'ಸೂಪರ್ ಅಧಿಕಾರ'ವನ್ನ ಮನೆಯ ಯಾರಾದರೂ ಒಬ್ಬ ಸದಸ್ಯರಿಗೆ ಹಸ್ತಾಂತರಿಸಬೇಕಿತ್ತು.

ತಮಗೆ ಸಿಕ್ಕಿದ್ದ 'ಸೂಪರ್ ಅಧಿಕಾರ'ವನ್ನ ಜಗನ್ ತಮ್ಮ ಆತ್ಮೀಯ ಸ್ನೇಹಿತ ಜಯರಾಂ ಕಾರ್ತಿಕ್ ಅವರಿಗೆ ನೀಡಿದರು.
''ಜೆಕೆಗೆ ಸೂಪರ್ ಅಧಿಕಾರ ಸಿಕ್ಕರೆ ಠುಸ್ ಪಟಾಕಿ'' ಅಂತ ಕೃಷಿ ತಾಪಂಡ ಕಾಮೆಂಟ್ ಮಾಡಿದರೂ, ಜೆಕೆಗೆ ಜಗನ್ ಸೂಪರ್ ಅಧಿಕಾರ ನೀಡಿದರು.
ಹಾಗ್ನೋಡಿದ್ರೆ, ಜೆಕೆ ರನ್ನ ಸೇಫ್ ಮಾಡಿ ತಮ್ಮನ್ನ ತಾವೇ ಜಗನ್ ನಾಮಿನೇಟ್ ಮಾಡಿಕೊಂಡಿದ್ದರು. ಆದ್ರೆ, ಜನಾಭಿಪ್ರಾಯ ಲಭಿಸದ ಕಾರಣ ಜಗನ್ ಔಟ್ ಆದರು.
ಸದಾ ಹಸನ್ಮುಖಿ ಆಗಿರುವ ಜೆಕೆ, 'ಬಿಗ್ ಬಾಸ್' ಮನೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಣ್ಣೀರು ಹಾಕಿರುವುದೇ ಜಗನ್ ಔಟ್ ಆದ್ಮೇಲೆ. ಇಂತಿಪ್ಪ ಜೆಕೆ ಕೈಯಲ್ಲಿ ಸದ್ಯ ಸೂಪರ್ ಅಧಿಕಾರ ಇದೆ. ಇದನ್ನ ಅವರು ಹೇಗೆ ಉಪಯೋಗಿಸಿಕೊಳ್ಳುತ್ತಾರೋ, ನೋಡೋಣ.


Click it and Unblock the Notifications











