ಮತ್ತೆ ಅಣ್ಣವ್ರ ಹಾಡಿನ ಆರಾಧನೆ ಮಾಡಿದ ‍ಜ್ಞಾನೇಶ್ವರ್

By Naveen

ಈ ಬಾರಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಹೆಚ್ಚು ಗಮನ ಸೆಳೆದ ಹುಡುಗ ‍ಜ್ಞಾನೇಶ್ವರ. ಹಳ್ಳಿ ಹುಡುಗನಾದ ಜ್ಞಾನೇಶ್ವರ್ ತನ್ನ ಸಂಗೀತ ಜ್ಞಾನದ ಮೂಲಕ ಈಗಾಗಲೇ ಕಾರ್ಯಕ್ರಮದ ಹೈಲೆಟ್ ಆಗಿದ್ದಾನೆ.

ಸದ್ಯ ಜ್ಞಾನೇಶ್ವರ್ ಮತ್ತೆ ಡಾ.ರಾಜ್ ಕುಮಾರ್ ಅವರ ಹಾಡನ್ನು ಹಾಡಿದ್ದಾನೆ. ಇಂದಿನ ಸಂಚಿಕೆಯಲ್ಲಿ ರಾಜ್ ಅವರ 'ಕಸ್ತೂರಿ ನಿವಾಸ' ಸಿನಿಮಾದ 'ಆಡಿಸಿ ನೋಡು... ಬೀಳಿಸಿ ನೋಡು...' ಹಾಡಿಗೆ ಜ್ಞಾನೇಶ್ವರ್ ಧ್ವನಿಯಾಗಿದ್ದಾರೆ. ಮತ್ತೆ ಜ್ಞಾನೇಶ್ವರ್ ಹಾಡು ಕೇಳಿ ಕಾರ್ಯಕ್ರಮದ ಮೂರು ತೀರ್ಪುಗಾರರು ಕೂಡ ತಲೆ ಬಾಗಿದ್ದಾರೆ. ಅಲ್ಲದೆ ಗಾಯಕ ವಿಜಯ ಪ್ರಕಾಶ್ ವೇದಿಕೆ ಮೇಲೆ ಬಂದು ಜ್ಞಾನೇಶ್ವರ್ ಜೊತೆಗೆ ಈ ಹಾಡನ್ನು ಹಾಡಿದ್ದಾರೆ.

Jnaneshwar sung Rajkumar song

ಈ ಹಿಂದೆ ರಾಜ್ ಕುಮಾರ್ ಅವರ 'ಹಾಲಲ್ಲಾದರೂ ಹಾಕು..ನೀರಲ್ಲಾದರೂ ಹಾಕು..' ಮತ್ತು 'ಬೆಳ್ಳಿ ಮೂಡಿತು.. ಕೋಳಿ ಕೂಗಿತು..' ಹಾಡನ್ನು ಹಾಡಿದ ಜ್ಞಾನೇಶ್ವರ್ ಗೋಲ್ಡನ್ ಬಜರ್ ಪಡೆದಿದ್ದರು. ಅದರ ಬಳಿಕ ಈಗ ಮತ್ತೆ ತನ್ನ ಹಾಡಿನ ಮೂಲಕ ಜ್ಞಾನೇಶ್ವರ್ ಕಾರ್ಯಕ್ರಮದಲ್ಲಿ ಗಾನಗಂಧರ್ವ ರಾಜ್ ಕುಮಾರ್ ಅವರನ್ನು ನೆನಪು ಮಾಡುತ್ತಿದ್ದಾರೆ. ಅಂದಹಾಗೆ, ಜ್ಞಾನೇಶ್ವರ್ ಅವರ ಈ ಹಾಡಿನ ಸಂಚಿಕೆ ಇಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Jnaneshwar sung Rajkumar song in Zee Kannada channel's popular show 'Sarigamapa Season 14'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X