For Quick Alerts
  ALLOW NOTIFICATIONS  
  For Daily Alerts

  ಮೀರಾ ಶಾರದಾ ದೇವಿ ಮನೆಗೆ ಬಂದಾಗ ಸಂಜುಗೆ ಹೇಳಿದ್ದೇನು?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಿಯದರ್ಶಿನಿ ಊರಿಗೆ ಹೊರಟು ನಿಂತಿರುತ್ತಾಳೆ. ನಾನು, ಪ್ರಭು ದೇಸಾಯಿ ಮತ್ತು ಆರಾಧನಾ ಊರಿಗೆ ಹೋಗುತ್ತೇವೆ. ಸಂಜು ಟ್ರೀಟ್ ಮೆಂಟ್ ಇಲ್ಲೇ ಮುಂದುವರಿಯಲಿ ಎಂದು ಹೇಳುತ್ತಾಳೆ.

  ಆದರೆ, ಆರಾಧನಾ ಊರಿಗೆ ಹೋಗಲು ಒಪ್ಪುವುದಿಲ್ಲ. ನಾನು ಸಂಜು ಒಬ್ಬನನ್ನೇ ಬಿಟ್ಟು ಊರಿಗೆ ಬರಲ್ಲ. ಅವನಿಗೆ ಹುಷಾರಾಗಿ ನಮ್ಮೆಲ್ಲರ ನೆನಪು ಬಂದ ಮೇಲೆಯೇ, ಅವನನ್ನ ಊರಿಗೆ ಕರೆದುಕೊಂಡು ಬರುತ್ತೀನಿ ಎನ್ನುತ್ತಾಳೆ.

  ಈ ಮಾತನ್ನು ಕೇಳಿ ಪ್ರಿಯದರ್ಶಿನಿ ಶಾಕ್ ಆಗುತ್ತಾಳೆ. ಆಗ ಪ್ರಭು ದೇಸಾಯಿ ನಾನೆಲ್ಲವನ್ನು ಹೇಳುತ್ತೀನಿ. ಮೊದಲು ಇಲ್ಲಿಂದ ಹೊರಡೋಣ ಬಾ ಎಂದು ಕರೆದುಕೊಂಡು ಹೋಗುತ್ತಾನೆ.

  ಆರಾಧನಾ ಸಂಜುಗೆ ಹೇಳಿದ್ದೇನು?

  ಆರಾಧನಾ ಸಂಜುಗೆ ಹೇಳಿದ್ದೇನು?

  ಮೀರಾ ಹರ್ಷ ಮತ್ತು ಅನುಗೆ ರೆಸಿಗ್ನೇಷನ್ ಪತ್ರವನ್ನು ಮೇಲ್ ಮಾಡಿರುತ್ತಾಳೆ. ಈ ಬಗ್ಗೆ ಅನು ಮತ್ತು ಹರ್ಷ ಮಾತನಾಡುತ್ತಿರುತ್ತಾರೆ. ಅಲ್ಲದೇ, ಝೇಂಡೇ ಕೆಲ ಆಸ್ತಿಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದು, ಮೀರಾ ಜೊತೆ ಈ ಬಗ್ಗೆಯೂ ಚರ್ಚೆ ಮಾಡಬೇಕು ಎಂದು ಹೇಳುತ್ತಾಳೆ. ಅದೇ ವೇಳೆಗೆ ಬರುವ ಸಂಜು ಮೀರಾ ಅವರ ಅಗ್ರಿಮೆಂಟ್ ಪ್ರಕಾರ, ಅವರ ವರ್ಧನ್ ಗ್ರೂಪ್ ಅನ್ನು ಅಷ್ಟು ಸುಲಭವಾಗಿ ಬಿಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇತ್ತ ಆರಾಧನಾ ಸಂಜುನನ್ನು ರೂಮಿಗೆ ಕರೆದುಕೊಂಡು ಹೋಗಿ ಹೇಳುತ್ತಾಳೆ. ನಾವು ಫಾರಿನ್ ಗೆ ಹೋಗೋಣ. ಇಲ್ಲಿರುವವರೆಲ್ಲಾ ನಿಮ್ಮ ಬ್ರೈನ್ ವಾಶ್ ಮಾಡಿದ್ದಾರೆ. ನಿಮಗೆ ನೆನಪು ಬರುತ್ತಿದೆ ಎಂದು ಹೇಳುತ್ತಾಳೆ. ಈ ಮಾತುಗಳಿಗೆ ಸಂಜು ರಿಯಾಕ್ಟ್ ಕೂಡ ಮಾಡುವುದಿಲ್ಲ.

  ಮಾನ್ಸಿ ಹುಟ್ಟುಹಬ್ಬಕ್ಕೆ ಬಂದ ಮೀರಾ

  ಮಾನ್ಸಿ ಹುಟ್ಟುಹಬ್ಬಕ್ಕೆ ಬಂದ ಮೀರಾ

  ಮೀರಾ ರಿಸೈನ್ ಮಾಡುವ ನಿರ್ಧಾರವನ್ನೇನೋ ಮಾಡಿ ಆಗಿದೆ. ಆದರೆ ಈಗ ಮೀರಾಗೆ ಶುರುವಾಗಿದೆ. ಝೇಂಡೇ ಮಾತನ್ನು ಕೇಳಿ ತಾನು ತಪ್ಪು ಮಾಡುತ್ತಿಲ್ಲವಾ ಎಂದೆಲ್ಲಾ ಯೋಚಿಸುತ್ತಿದ್ದಾಳೆ. ಇದೇ ವೇಳೆಗೆ ಮೀರಾ ಮೊಬೈಲ್ ನಲ್ಲಿ ಇಂದು ಮಾನ್ಸಿ ಬರ್ತ ಡೇ ಎಂದು ಅಲಾರಮ್ ರಿಂಗ್ ಆಗುತ್ತದೆ. ಇದನ್ನು ನೋಡಿ ರಿಸೈನ್ ಮಾಡಿರುವ ಈ ವೇಳೆಗೆ ಹೇಗೆ ಅವರ ಮನೆಗೆ ಹೋಗಿ ವಿಶ್ ಮಾಡಲಿ ಎಂದು ಯೋಚಿಸುತ್ತಾಳೆ. ಆದರೆ, ಬೇರೆ ದಾರಿ ಇಲ್ಲದೇ ಹೂಗುಚ್ಛ ಹಿಡಿದು ಮೀರಾ ಮನೆಗೆ ಬರುತ್ತಾಳೆ.

  ಸಿಹಿ ತಿಂಡಿಯನ್ನು ಗುರುತಿಸಿದ ಸಂಜು

  ಸಿಹಿ ತಿಂಡಿಯನ್ನು ಗುರುತಿಸಿದ ಸಂಜು

  ಇನ್ನು ಅನು ಮಾನ್ಸಿ ಹುಟ್ಟುಹಬ್ಬವೆಂದು ಮನೆಯಲ್ಲಿ ಕ್ಯಾರೆಟ್ ಹಲ್ವಾ ಮಾಡಿರುತ್ತಾಳೆ. ಮನೆಯಲ್ಲಿನ ಗಮಗಮ ಸ್ಮೆಲ್ ಬರುತ್ತಿದ್ದ ಕಾರಣ ಸಂಜು ಕ್ಯಾರೆಟ್ ಹಲ್ವಾ ಎಂದು ಗುರುತಿಸುತ್ತಾನೆ. ಅದಕ್ಕೆ ಶಾರದಾ ಖುಷಿ ಪಡುತ್ತಾರೆ. ಇನ್ನು ಅನು ಮಾಡಿದ್ದು ಎಂದು ಹೇಳಿದ್ದಕ್ಕೆ ಇನ್ನು ಹೆಚ್ಚು ಎಕ್ಸೈಟ್ ಆಗುತ್ತಾನೆ. ಇದರಿಂದ ಶಾರದಾ ಶಾಕ್ ಆದರೂ ಖುಷಿ ಪಡುತ್ತಾಳೆ.

  ಕ್ಯಾರೆಟ್ ಹಲ್ವಾ ಬೇಡ ಎಂದ ಮಾನ್ಸಿ

  ಕ್ಯಾರೆಟ್ ಹಲ್ವಾ ಬೇಡ ಎಂದ ಮಾನ್ಸಿ

  ಇನ್ನು ಮೀರಾ ಮನೆಯವರೊಂದಿಗೆ ಮಾತನಾಡಿ ಮಾನ್ಸಿ ರೂಮಿಗೆ ಹೋಗಲು ಮೇಲೆ ಹೋಗುತ್ತಾಳೆ. ಈ ವೇಳೆಗೆ ಸಂಜು ಬಂದು ಮೀರಾಳನ್ನು ಮಾತನಾಡಿಸುತ್ತಾನೆ. ಮೀರಾಗೂ ಈ ಮನೆಯವರಿಗೂ ಇರುವ ಕನೆಕ್ಷನ್ ಬಗ್ಗೆ ಕೆಲ ಮಾತುಗಳಿಂದ ಅರ್ಥ ಮಾಡಿಕೊಳ್ಳುತ್ತಾನೆ. ಇನ್ನು ಮಾನ್ಸಿ ಬಂದು ಮೀರಾಳನ್ನು ಮಾತನಾಡಿಸುತ್ತಾಳೆ. ಕ್ಯಾರೆಟ್ ಹಲ್ವಾ ತಿಂದ ಮಾನ್ಸಿ ಅನು ಬೇಕಂತಲೇ ತುಪ್ಪಾ ಮತ್ತು ಸಕ್ಕರೆ ಜಾಸ್ತಿ ಹಾಕಿದ್ದಾಳೆ. ನನಗೆ ಇದು ಬೇಡ ಎಂದು ಹೇಳುತ್ತಾಳೆ.

  English summary
  Meera comes to sharada house to wish mansi birthday and at the same time she talked to sanju. Read on
  Saturday, December 3, 2022, 16:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X