For Quick Alerts
  ALLOW NOTIFICATIONS  
  For Daily Alerts

  ಸಂಜುನನ್ನು ಯಾರೆಂದು ತಿಳಿಯಲು ಕಿಡ್ನ್ಯಾಪ್ ಮಾಡಿದ ಝೇಂಡೇ?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಮ್ಯಾ ಕರುಣಾಕರನ ಬಳಿ ಅವರ ತಂದೆಯ ಆಡಿಟಿಂಗ್ ಮಾಡಿದ ಬಗ್ಗೆ ಫೋಟೋ ತೆಗೆದು ಕಳಿಸಿದ್ದಾಳೆ. ಆದರೆ, ಕರುಣಾಕರನಿಗೆ ರಮ್ಯಾ ಮಾಹಿತಿ ಹಿಂದಿನ ರಹಸ್ಯ ತಿಳಿದಿಲ್ಲ. ರಮ್ಯಾ ಕೂಡ ಒಂದೇ ಸಲಕ್ಕೆ ಕೇಳಿದರೆ ತಪ್ಪಾಗುತ್ತೆ ಎಂಬ ಕಾರಣಕ್ಕೆ ಸುಮ್ಮನಿದ್ದಾಳೆ.

  ಅನು ಶಾರದಾ ದೇವಿ ಬಳಿ ಮಾತನಾಡಿದ್ದಾಳೆ. ಆಗ ಶಾರದಾ ದೇವಿ ಆದಷ್ಟು ಬೇಗ ಮನೆಗೆ ಬಾ. ನೀನಿಲ್ಲದೇ, ಮನೆ ಬಿಕೋ ಎನ್ನುತ್ತಿದೆ ಎಂದು ಹೇಳುತ್ತಾಳೆ. ಅನು ನಾನು ಬರೋದಕ್ಕೆ ರೆಡಿ, ಆದರೆ ಅಪ್ಪ-ಅಮ್ಮ ಬಿಡುತ್ತಿಲ್ಲ. ಒಂದೆರಡು ದಿನದಲ್ಲಿ ಬರುತ್ತೀನಿ ಎಂದು ಹೇಳುತ್ತಾಳೆ.

  ಸಂಜು ಅನುಗೆ ಗಂಟು ಬಿದ್ದಿರುವುದನ್ನು ನೋಡಿ ವಠಾರದವರು ಆತನ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ರಜಿನಿಯೂ ಒಮ್ಮೆ ಅನು ಗಂಡ ಸತ್ತ ಕೆಲವೇ ದಿನಕ್ಕೆ ಮತ್ತೊಂದು ಜೋಡಿಯನ್ನು ಹುಡುಕಿಕೊಂಡಿದ್ದಾಳೆ ಎಂದು ಹೇಳಿದ್ದರು.

  ಸಂಜುನನ್ನು ಕಿಡ್ನ್ಯಾಪ್ ಮಾಡಿದ ಝೇಂಡೇ

  ಸಂಜುನನ್ನು ಕಿಡ್ನ್ಯಾಪ್ ಮಾಡಿದ ಝೇಂಡೇ

  ಈ ಅಭಿಪ್ರಾಯಗಳಿಗೆ ತಕ್ಕಂತೆ ಸಂಜು ಕೂಡ ನಡೆದುಕೊಳ್ಳುತ್ತಿದ್ದಾನೆ. ಸದಾ ಅನು ಯೋಚನೆಯಲ್ಲೇ ಇರುತ್ತಾನೆ. ಈಗ ಹರ್ಷ ಟ್ರೀಟ್‌ಮೆಂಟ್‌ಗೆ ಎಂದು ಆಸ್ಪತ್ರೆ ಬಳಿ ಬಿಟ್ಟು ಹೋದರೂ, ಸಂಜು ವೈದ್ಯರನ್ನು ಕಾಣುವ ಮನಸ್ಸು ಮಾಡಿಲ್ಲ. ನನಗೆ ಯಾವ ನೆನಪೂ ಬೇಡ. ಅನು ಒಬ್ಬರು ಜೊತೆಗಿದ್ದರೆ ಸಾಕು ಎಂದು ಆಲೋಚನೆಯಲ್ಲಿರುತ್ತಾನೆ. ಇದೇ ವೇಳೆಗೆ ಸಂಜುನನ್ನು ಝೇಂಡೇ ಕಡೆಯವರು ಕಿಡ್ನ್ಯಾಪ್ ಮಾಡುತ್ತಾರೆ. ಝೇಂಡೇ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಸಂಜುಗೆ ಹೊಡೆಯುತ್ತಾನೆ. ನೀನು ಯಾರು ಹೇಳು ಎಂದು ಬಲವಂತ ಮಾಡುತ್ತಾನೆ.

  ಝೇಂಡೇ ಮಾಡಿದ್ದು ಎಷ್ಟು ಸರಿ?

  ಝೇಂಡೇ ಮಾಡಿದ್ದು ಎಷ್ಟು ಸರಿ?

  ಝೇಂಡೇ ಹೊಡೆದ ಹೊಡೆತಗಳನ್ನು ತಾಳಲಾರದ ಸಂಜು ನನಗೆ ನಾನ್ಯಾರು ಎಂದು ಗೊತ್ತಿಲ್ಲ. ಎಲ್ಲರೂ ನನ್ನ ಸಂಜು ಎಂದು ಗುರುತಿಸುತ್ತಾರೆ ಎನ್ನುತ್ತಾನೆ. ಆಗ ನಿನ್ನ ಫೋಟೋಗೆ ನಿಮ್ಮ ಮನೆಯಲ್ಲಿ ಹಾರ ಹಾಕಿದ್ದಾರೆ. ಆಸ್ಪತ್ರೆಯಲ್ಲಿ ವಿಶ್ವಾಸ್ ದೇಸಾಯಿ ಸತ್ತಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ನೀನ್ಯಾಕೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದೀಯಾ ಎಂದು ಬೈಯುತ್ತಾನೆ. ಆದರೆ ಸಂಜು ತನಗೇನು ಗೊತ್ತಿಲ್ಲ. ನಾನು ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾನೆ. ಝೇಂಡೇ ಆತನನ್ನು ಅನು ಕಾರಿನ ಎದುರು ಬೀಳಿಸಿ ಹೋಗುತ್ತಾನೆ.

  ಝೇಂಡೇ ಅನ್ನು ಮೀಟ್ ಮಾಡಲು ಮುಂದಾದ ಮೀರಾ

  ಝೇಂಡೇ ಅನ್ನು ಮೀಟ್ ಮಾಡಲು ಮುಂದಾದ ಮೀರಾ

  ಇತ್ತ ಹರ್ಷ ಸಂಜು ಬಗ್ಗೆ ದಿನ ದಿನಕ್ಕೂ ಹೆಚ್ಚು ಕಾಳಜಿ ವಹಿಸುತ್ತಿದ್ದಾನೆ. ಥೆರಪಿಗೆ ಹೋದ ಸಂಜು ಇನ್ನೂ ಆಫೀಸಿಗೆ ಬಂದಿಲ್ಲ ಎಂದು ತಲೆ ಕಡೆಸಿಕೊಂಡಿದ್ದಾನೆ. ಸಂಜು ಫೋನ್ ಬೇರೆ ರಿಸೀವ್ ಮಾಡುತ್ತಿಲ್ಲ. ಹೀಗಾಗಿ ಹರ್ಷ ಮೀರಾಳಿಗೆ ಹರ್ಷನ ಬಗ್ಗೆ ಮಾಹಿತಿ ಪಡೆಯುವಂತೆ ಹೇಳುತ್ತಾನೆ. ಆದರೆ, ಮೀರಾ ಅರ್ಜೆಂಟ್ ಕೆಲಸವಿದೆ. ಅದನ್ನು ಮುಗಿಸಿ, ಸಂಜು ಅವರ ಬಗ್ಗೆ ವಿಚಾರಿಸುತ್ತೇನೆ ಎನ್ನುತ್ತಾಳೆ. ಈ ಮಾತಿನಿಂದ ಹರ್ಷ ಕೋಪಗೊಳ್ಳುತ್ತಾನೆ. ನಾನು ಹೇಳಿದ್ದನ್ನು ಕೇಳಬೇಕು ಎಂದು ಹೇಳುತ್ತಾನೆ. ಈ ಮಾತಿನಿಂದ ಬೇಸರಗೊಂಡ ಮೀರಾ ಆಫೀಸ್ ಕೆಲಸ ಬಿಟ್ಟು ಹರ್ಷ ಸರ್ ಮನೆ ಕೆಲಸ ಮಾಡಿಕೊಳ್ಳುತ್ತಾರೆ. ಝೇಂಡೇ ಹೇಳಿದ್ದೇ ಸರಿ. ಎಲ್ಲರೂ ನಮ್ಮನ್ನು ಬಳಸಿಕೊಳ್ಳುತ್ತಾರೆ ಎಂದು ನೊಂದುಕೊಂಡು ಝೇಂಡೇಗೆ ಮೀಟ್ ಮಾಡೋಣ ಎಂದು ಮೆಸೇಜ್ ಮಾಡುತ್ತಾಳೆ.

  ಎಲ್ಲಾ ಒಗಟಿಗೂ ಅನು ಉತ್ತರ ಹುಡುಕುತ್ತಾಳಾ?

  ಎಲ್ಲಾ ಒಗಟಿಗೂ ಅನು ಉತ್ತರ ಹುಡುಕುತ್ತಾಳಾ?

  ಇನ್ನು ಅನು ಸಂಜು ಸ್ಥಿತಿಯನ್ನು ಕಂಡು ಗಾಬರಿಯಾಗುತ್ತಾಳೆ. ಆತನನ್ನು ಮನೆಗೆ ಕರೆದುಕೊಂಡು ಹೋಗಿ ಔಷಧಿ ಹಚ್ಚುತ್ತಾಳೆ. ಯಾರು ಹೀಗೆಲ್ಲಾ ಮಾಡಿದ್ದು, ಯಾರು ಹೊಡೆದರು ಎಂದು ಕೇಳುತ್ತಾಳೆ. ಅದಕ್ಕೆ ಸಂಜು ಬಳಿ ಉತ್ತರವಿಲ್ಲ. ಇನ್ನು ಸಂಜು ಅನುಳನ್ನು ನಾನು ಯಾರು ಎಂದು ನೀವಾದರೂ ಹೇಳಿ ಎಂದು ಕೇಳುತ್ತಾನೆ. ಧಾರಾವಾಹಿಯಲ್ಲಿನ ಸದ್ಯದ ಗೊಂದಲಗಳನ್ನು ಅನು ಪರಿಹರಿಸುತ್ತಾಳಾ? ಸಂಜು ಹಿಂದಿನ ರಹಸ್ಯವನ್ನು ಬೇಧಿಸುತ್ತಾಳಾ?

  English summary
  sanju is kidnapped by jhende And he hits sanju and throws in road infront of anu.
  Wednesday, November 2, 2022, 16:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X