Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಝೇಂಡೇ ಅನ್ನು ವರ್ಧನ್ ಕಂಪನಿಯ ಚೀಫ್ ಎಂದು ಒಪ್ಪಿದ ಶಾರದಾ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ, ವರ್ಧನ್ ಗ್ರೂಪ್ಸ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಈ ವಿಚಾರ ತಿಳಿದು ಅನು, ಹರ್ಷ, ಮಾನ್ಸಿ, ಮೀರಾ ಎಲ್ಲರೂ ಶಾಕ್ ಆಗಿದ್ದಾರೆ.
ಅನು, ಝೇಂಡೇಗೆ ಬೈದರೂ, ಝೇಂಡೇ ವಾಪಸ್ ಅನುಗೆ ಬೈದಿದ್ದಾನೆ. ನಾನು ಈ ಕಂಪನಿಯ ಚೀಫ್, ನನ್ನ ಜೊತೆ ಮಾತನಾಡುವಾಗ ಎಚ್ಚರವಿರಲಿ ಎಂದು ಹೇಳುತ್ತಾನೆ. ಇದೇ ವೇಳೆಗೆ ಬಂದ ಶಾರದಾ ಝೇಂಡೇಗೆ ಸಪೋರ್ಟ್ ಮಾಡುತ್ತಾಳೆ.
ದಾರಿ
ತಪ್ಪಿದ
'ಜೊತೆ
ಜೊತೆಯಲಿ':
ಪ್ರೇಕ್ಷಕರ
ತಾಳ್ಮೆ
ಪರೀಕ್ಷಿಸುತ್ತಿರುವ
ಪ್ರಿಯದರ್ಶಿನಿ!
ಶಾರದಾ ಝೇಂಡೇ ಅನ್ನು ವೆಲ್ಕಮ್ ಮಾಡಲು ಬೊಕ್ಕೆ ತಂದಿರುತ್ತಾಳೆ. ಈಗ ಇದನ್ನು ಕೊಟ್ಟರೆ ಸರಿ ಹೋಗುವುದಿಲ್ಲ. ವೆಲ್ಕಮ್ ಪಾರ್ಟಿಯನ್ನು ಕೊಟ್ಟು ನಂತರ ಬೊಕ್ಕೆ ಕೊಡುತ್ತೀನಿ ಎಂದು ಹೇಳುತ್ತಾಳೆ.

ಅನು ಜೊತೆ ಮಾತನಾಡಿದ ಶಾರದಾ
ಮನೆಗೆ ಬರುವ ಶಾರದಾ, ಮೀರಾಗೆ ವೆಲ್ಕಮ್ ಪಾರ್ಟಿಗೆ ವ್ಯವಸ್ಥೆ ಮಾಡುವಂತೆ ಹೇಳುತ್ತಾಳೆ. ಮೀರಾಗೆ ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಹರ್ಷ ಮತ್ತು ಅನು ಶಾರದಾ ಅವರನ್ನು ಪ್ರಶ್ನೆ ಮಾಡುತ್ತಾರೆ. ಶಾರದಾ ಅದಕ್ಕೆ, ನನ್ನ ಮೇಲೆ ನಿಮಗೆ ನಂಬಿಕೆ ಇದ್ದರೆ ಸುಮ್ಮನಿರಿ. ವೆಲ್ಕಮ್ ಪಾರ್ಟಿ ಬಗ್ಗೆ ಯೋಚಿಸಿ. ಝೇಂಡೇ ಏನು ಅಂತ ನನಗೆ ಚೆನ್ನಾಗಿ ಗೊತ್ತಿದೆ. ಅವನನ್ನ ನಾನು ಹ್ಯಾಂಡಲ್ ಮಾಡುತ್ತೀನಿ ಎಂದು ಹೇಳುತ್ತಾಳೆ. ಬಳಿಕ ಅನು ಜೊತೆಗೆ ಮಾತನಾಡಬೇಕು ಎಂದು ಹೇಳಿ ಅವಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾಳೆ.

ವೆಲ್ಕಮ್ ಪಾರ್ಟಿಗೆ ಮೀರಾ ಸಿದ್ಧತೆ
ಇತ್ತ ಮೀರಾ, ಹರ್ಷ ಮತ್ತು ಮಾನ್ಸಿ ಚರ್ಚೆ ಮಾಡುತ್ತಾರೆ. ಏನಾಗುತ್ತಿದೆ, ಮುಂದೇನು ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ಮಾನ್ಸಿ, ಮೀರಾಳಿಗೆ ಬೈಯುತ್ತಾಳೆ. ಝೇಂಡೇ ಮಾತನ್ನು ಹೇಗೆ ನಂಬಿದೆ ಎಂದು ಕೇಳುತ್ತಾಳೆ. ಆಗ ಹರ್ಷ, ಆರ್ಯ ಬ್ರೋ ಬದುಕಿರಲೂ ಬಹುದು ಎಂದು ಮಾತನಾಡಿಕೊಳ್ಳುತ್ತಾನೆ. ಬಹುಶಃ ಆರ್ಯ ಅವರ ಮುಖ ಬದಲಾಗಿರಬೇಕು ಎಂದಾಗ ಮಾನ್ಸಿ ಮತ್ತೆ ಡಿಎನ್‌ಎ ಟೆಸ್ಟ್ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ. ಇನ್ನು ಮೀರಾ ಆಫೀಸಿನಲ್ಲಿ ವೆಲ್ಕಮ್ ಪಾರ್ಟಿಗೆ ಸಿದ್ಧತೆಯನ್ನು ಮಾಡುತ್ತಿರುತ್ತಾಳೆ.

ಪ್ರಿಯಾ, ಪ್ರಭು ಎಲ್ಲಿಗೆ ಹೋಗಿದ್ದಾರೆ..?
ಇತ್ತ ಊರಿಗೆ ಬರುವ ಆರಾಧನಾ ಮತ್ತು ಸಂಜು ಹೋಗುತ್ತಾರೆ. ಆದರೆ ಮನೆ ಬೀಗ ಹಾಕಿರುತ್ತದೆ. ಇದನ್ನು ನೋಡಿ ಆರಾಧನಾ ಶಾಕ್ ಆಗುತ್ತಾಳೆ. ಅಷ್ಟರಲ್ಲಿ ಅಲ್ಲೇ ಇದ್ದವರು ಬಂದು ಪ್ರಿಯದರ್ಶಿನಿ ಮತ್ತು ಪ್ರಭು ದೇಸಾಯಿ ಇಬ್ಬರೂ ತೀರ್ಥಯಾತ್ರೆಗೆ ತೆರಳಿದ್ದಾರೆ ಎಂದು ಹೇಳುತ್ತಾನೆ. ಆರಾಧನಾ ಎಷ್ಟೇ ಫೋನ್ ಟ್ರೈ ಮಾಡಿದರೂ ರಿಸೀವ್ ಮಾಡುವುದಿಲ್ಲ. ಇದರಿಂದ ಬೇಸರ ಮಾಡಿಕೊಳ್ಳುತ್ತಾಳೆ. ಎಲ್ಲರೂ ಸೇರಿ ಯಾವುದೋ ಸತ್ಯವನ್ನು ನನ್ನಿಂದ ಮುಚ್ಚಿಡುತ್ತಿದ್ದಾರೆ. ನಾನಂತೂ ಸತ್ಯ ತಿಳಿಯದೇ ಇಲ್ಲಿಂದ ಹೊರಡಲ್ಲ ಎಂದು ಹೇಳುತ್ತಾಳೆ.

ವೀಡಿಯೋ ಕಳಿಸಿದ ಮೀರಾ
ಇನ್ನು ಝೇಂಡೇ ಆಫೀಸಿನ ಪರಿಸ್ಥಿತಿ ತಿಳಿಯಲು ಕಾಲ್ ಮಾಡುತ್ತಾನೆ. ಆದರೆ ಮೀರಾ ರಿಸೀವ್ ಮಾಡುವುದಿಲ್ಲ. ವೆಲ್ಕಮ್ ಪಾರ್ಟಿ ಅರೇಂಜ್‌ಮೆಂಟ್ಸ್ ವೀಡಿಯೋ ಮಾಡಿ ಕಳಿಸುತ್ತಾಳೆ. ನಿಮ್ಮನ್ನು ವೆಲ್ಕಮ್ ಮಾಡಲು ಕಾಯುತ್ತಿರುತ್ತೇನೆ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಝೇಂಡೇ ಖುಷಿ ಪಡುತ್ತಾನೆ. ಆದರೆ ಶಾರದಾ ಏನೋ ದೊಡ್ಡ ಪ್ಲ್ಯಾನ್ ಮಾಡಿದ್ದು, ಮುಂದೆ ಏನಾಗುತ್ತದೋ ಎಂದು ಕಾದು ನೋಡಬೇಕಿದೆ.