For Quick Alerts
  ALLOW NOTIFICATIONS  
  For Daily Alerts

  ಸಂಜು ಅನುಗೆ ಮೆಸೇಜ್ ಮೂಲಕ ಮಾಡಿದ ಚಾಲೆಂಜ್ ಏನು?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಂಜು ಬಗೆಗಿನ ಅನುಮಾಣಗಳು ಎಲ್ಲರಲ್ಲೂ ಹೆಚ್ಚಾಗುತ್ತಲೇ ಇವೆ. ಸಂಜು ನಿಜಕ್ಕೂ ಯಾರು? ಅವನನ್ನು ಶಾರದಾ ಮನೆಯಲ್ಲಿ ಬಿಡಲು ಕಾರಣವೇನು? ಎಂಬೆಲ್ಲಾ ಹಲವಾರು ಪ್ರಶ್ನೆಗಳು ಮೂಡುತ್ತಿವೆ.

  ಇದಕ್ಕೆ ಕಾರಣ, ಸಂಜು ಆರ್ಯನಂತೆ ನಡೆದುಕೊಳ್ಳುತ್ತಿದ್ದಾನೆ. ಅವನು ಆಡುವ ಮಾತುಗಳು, ನಡೆದುಕೊಳ್ಳುವ ರೀತಿ ವಿಚಿತ್ರವಾಗಿವೆ. ಇನ್ನು ವಿಶ್ವಾಸ್ ದೇಸಾಯಿ ಸತ್ತಿದ್ದಾನೆ ಎಂಬುದು ರೆಕಾರ್ಡ್ಸ್ ನಲ್ಲಿವೆ. ಆದರೆ, ಅವನೇ ಸಂಜು ಎಂದು ಹೇಳುತ್ತಿರುವುದ್ಯಾಕೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

  ಸದ್ಯ ಸಂಜು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾನೆ. ಅವನಿಗೂ ಕೂಡ ತಾನ್ಯಾರು? ಇಲ್ಲಿಗೆ ಯಾಕೆ ಬಂದೆ ಎಂಬ ಪ್ರಶ್ನೆಗಳು ಎದ್ದಿವೆ. ಈಗ ಆತ ತನ್ನ ಬಗ್ಗೆ ತಿಳಿಯುವ ಕಾತುರದಲ್ಲಿದ್ದಾನೆ.

  ಅನುಗೆ ಎಮೋಷನಲ್ ಮೆಸೇಜ್ ಮಾಡಿದ ಸಂಜು

  ಅನುಗೆ ಎಮೋಷನಲ್ ಮೆಸೇಜ್ ಮಾಡಿದ ಸಂಜು

  ಸಂಜು ಈಗ ತನ್ನ ಬಗ್ಗೆ ತಾನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾನೆ. ತಾನ್ಯಾರು.? ತನ್ನನ್ನು ಅವರು ಅಟ್ಯಾಕ್ ಮಾಡಲು ಕಾರಣವೇನು..? ಎಂಬ ತನ್ನ ಬಗೆಗಿನ ಪ್ರಶ್ನೆಗಳನ್ನು ಹುಡುಕಲು ಮುಂದಾಗಿದ್ದಾನೆ. ಹೀಗಾಗಿ ಪ್ರಿಯದರ್ಶಿನಿಗೆ ಫೋನ್ ಮಾಡಿ ವಿಚಾರಿಸಿದ್ದಾನೆ. ಇನ್ನು ಅನು ಮೇಲೆ ವಿಶೇಷವಾದ ಕಾಳಜಿಯನ್ನು ಇಟ್ಟುಕೊಂಡಿರುವ ಸಂಜು, ಅನುಳನ್ನು ತುಂಬಾನೇ ನಂಬುತ್ತಾನೆ. ಹಾಗಾಗಿ ಸಂಜು ಅನುಗೆ ಮೆಸೇಜ್ ಒಂದನ್ನು ಕಳಿಸಿದ್ದಾನೆ. ಅದೇನೆಂದರೆ, ತಮ್ಮ ಹಾಗೂ ಅನು ನಡುವಿನ ಕೆಲ ಭಾವನೆಗಳು ಸುಳ್ಳಾಗಿದ್ದರೆ, ನಾವು ಮುಂದಿನ 24 ಗಂಟೆಗಳ ಕಾಲ ಭೇಟಿಯಾಗೋದಿಲ್ಲ ಎಂದು ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್ ಅನ್ನು ನೋಡಿ ಅನು ಶಾಕ್ ಆಗಿದ್ದಾಳೆ. ಯಾಕೆಂದರೆ, ಅನು ಇದೇ ರೀತಿಯ ಚಾಲೆಂಜ್ ಅನ್ನು ಈ ಹಿಂದೆ ಆರ್ಯನಿಗೆ ಮಾಡಿದ್ದಳು.

  ರಮ್ಯಾ ಹೇಳಿದ್ದರಲ್ಲಿ ತಪ್ಪಿರಲಿಲ್ಲ..

  ರಮ್ಯಾ ಹೇಳಿದ್ದರಲ್ಲಿ ತಪ್ಪಿರಲಿಲ್ಲ..

  ಅನು ಈಗ ಸಂಜುನನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಈ ಬಗ್ಗೆ ಅನು ರಮ್ಯಾ ಬಳಿ ಮಾತನಾಡಿದ್ದಾಳೆ. ಸಂಜು ಆರ್ಯನಂತೆಯೇ ನಡೆದುಕೊಳ್ಳುತ್ತಿದ್ದಾನೆ. ಹಾಗಾಗಿ ಅವನನ್ನು ಅವಾಯ್ಡ್ ಮಾಡುತ್ತಿದ್ದೇನೆ. ಸಂಜು ಸಂದರ್ಶನದಲ್ಲಿ ನಂಬಿಕೆ ಎಂದು ಉತ್ತರ ಕೊಟ್ಟ. ನನ್ನನ್ನು ಆರ್ಯವರ್ಧನ್ ಆದ ಮೇಲೆ ಸಂಜು ಲೇಡಿ ಆರ್ಯವರ್ಧನ್ ಎಂದು ಕರೆದಳು. ನಿನ್ನೆ ಭಾವನೆಗಳು ಸುಳ್ಳಾಗಿದ್ದರೆ, ನಾವು ಮುಂದಿನ 24 ಗಂಟೆಗಳ ಕಾಲ ಭೇಟಿಯಾಗೋದಿಲ್ಲ ಎಂದು ಮೆಸೇಜ್ ಮಾಡಿದ್ದಾನೆ. ಹಾಗಾಗಿ ನಾನು ಇವತ್ತು ಮನೆಯಿಂದ ಎಲ್ಲೂ ಹೋಗೋದೂ ಇಲ್ಲ. ಸಂಜುನನ್ನು ಭೇಟಿಯೂ ಆಗಲ್ಲ ಎನ್ನುತ್ತಾಳೆ. ಆಗ ರಮ್ಯಾ ನೀನು ಸಂಜು ರೀತಿ ಯೋಚಿಸಿದರೆ, ಅವನು ಹೇಳುವುದು ಸರಿ ಎನ್ನಿಸಬಹುದು ಎನ್ನುತ್ತಾಳೆ. ಆದರೆ, ಅನು ಅದಕ್ಕೆ ಆರ್ಯನ ಬಿಟ್ಟು ಬೇರೆಯವರ ಬಗ್ಗೆ ನಾನು ಹಾಗೆ ಯೋಚಿಸಲೂ ಸಾಧ್ಯವಿಲ್ಲ ಎನ್ನುತ್ತಾಳೆ.

  ಆರ್ಯನ ಹೆಸರಲ್ಲಿ ಅನ್ನ ಸಂತರ್ಪಣೆ ಕಾರ್ಯ

  ಆರ್ಯನ ಹೆಸರಲ್ಲಿ ಅನ್ನ ಸಂತರ್ಪಣೆ ಕಾರ್ಯ

  ಸಂಜು ಅನು ಬಗ್ಗೆಯೇ ಯೋಚಿಸುತ್ತಿರುತ್ತಾನೆ. ತಾನು ಮಾಡಿರುವ ಮೆಸೇಜ್ ಅನ್ನು ನೋಡಿದರೂ ಕೂಡ ಅನು ಯಾಕೆ ಇಷ್ಟೊತ್ತಾದರೂ ರಿಪ್ಲೈ ಮಾಡಿಲ್ಲ ಎಂದು ಅಂದುಕೊಳ್ಳುತ್ತಿರುತ್ತಾನೆ. ಇನ್ನು ಆರ್ಯವರ್ಧನ್ ಹೆಸರಲ್ಲಿ ಶಾರದಾ ದೇವಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾಳೆ. ಹೀಗಾಗಿ ಪುಷ್ಪಾಳಿಗೆ ಫೋನ್ ಮಾಡಿ ಅವರನ್ನೂ ಬರಲು ಹೇಳುತ್ತಾಳೆ. ಪುಷ್ಪಾ ಸಂಜು ಆರೋಗ್ಯದ ಬಗ್ಗೆ ವಿಚಾರಿಸುತ್ತಾಳೆ.

   ಇಬ್ಬರೂ ದೇವಸ್ಥಾನದಲ್ಲಿ ಭೇಟಿಯಾಗುತ್ತಾರಾ..?

  ಇಬ್ಬರೂ ದೇವಸ್ಥಾನದಲ್ಲಿ ಭೇಟಿಯಾಗುತ್ತಾರಾ..?

  ಶಾರದಾ ಸಂಜುನನ್ನು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಕರೆಯುತ್ತಾಳೆ. ಆದರೆ, ಸಂಜು ಬರಲ್ಲ ಎನ್ನುತ್ತಾನೆ. ಆದರೆ ಶಾರದಾ ಬಲವಂತ ಮಾಡಿ ಕರೆದುಕೊಂಡು ಹೋಗುತ್ತಾಳೆ. ಇತ್ತ ಪುಷ್ಪಾ ಅನುಳನ್ನು ದೇವಸ್ಥಾನಕ್ಕೆ ಕರೆದರೆ, ಅವಳು ಸಂಜುನನ್ನು ಅವಾಯ್ಡ್ ಮಾಡುವ ಸಲುವಾಗಿ ಬರೋದಿಲ್ಲ ಎನ್ನುತ್ತಾಳೆ. ನಂತರ ಪುಷ್ಪಾ ಮಾಡಿದ ಬಲವಂತಕ್ಕೆ ಬರುತ್ತಾಳೆ. ಇನ್ನು ಸಂಜು ಅನು ಕಣ್ಣಿಗೆ ಕಾಣಿಸಿಕೊಂಡರೆ, ಆಕೆ ಅವಳ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುತ್ತಾಳೆ ಎಂದು ಭಯಗೊಂಡಿದ್ದಾನೆ. ಇನ್ನು ಅನು ಸಂಜುನನ್ನು ನೋಡಲು ಕೂಡ ಇಷ್ಟ ಪಡುತ್ತಿಲ್ಲ. ಆದರೆ ಇಬ್ಬರೂ ಭೇಟಿಯಾಗುವುದಕ್ಕೆ ದೇವರೇ ಸಾಕ್ಷಿಯಾಗುತ್ತಾರಾ..??

  English summary
  sanju behaves like arya, and he challenges anu in a message. So anu started to avoid sanju.
  Saturday, November 5, 2022, 18:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X