For Quick Alerts
  ALLOW NOTIFICATIONS  
  For Daily Alerts

  ವೇದಿಕೆ ಮೇಲೆ ಬಂದ ಆರ್ಯ: ಎಲ್ಲಾ ಗೊಂದಲಗಳನ್ನು ಶಾರದಾ ಬಗೆಹರಿಸುತ್ತಾಳಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ ಮತ್ತು ಸಂಜು ಊರಿಗೆ ಬಂದಿದ್ದರೆ ಅಲ್ಲಿಂದ ಪ್ರಿಯದರ್ಶಿನಿ ಮತ್ತು ಪ್ರಭು ದೇಸಾಯಿ ತೀರ್ಥ ಯಾತ್ರೆಗೆ ಹೋಗಿದ್ದಾರೆ. ಪ್ರಿಯದರ್ಶಿನಿಗೆ ತಾನು ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲಾಗದೇ ಒದ್ದಾಡುತ್ತಿದ್ದಾಳೆ.

  ಅದರಲ್ಲೂ ತನ್ನ ಮಗ ವಿಶ್ವಾಸ್ ದೇಸಾಯಿ ಸಾವನ್ನಪ್ಪಿರುವ ವಿಚಾರವನ್ನು ಆರಾಧನಾಗೆ ತಿಳಿಸದೇ ತಪ್ಪು ಮಾಡಿದ್ದಾಳೆ. ಈಗ ಆರಾಧನಾಳಿಗೆ ಮುಖ ತೋರಿಸಲಾಗದೇ ಒದ್ದಾಡುತ್ತಿದ್ದಾಳೆ. ಇನ್ನು ಮಗನನ್ನು ಕಳೆದುಕೊಂಡ ದುಃಖ ದಿನ ದಿನಕ್ಕೂ ಹೆಚ್ಚಾಗುತ್ತಿದೆ.

  ದಾರಿ ತಪ್ಪಿದ 'ಜೊತೆ ಜೊತೆಯಲಿ': ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಿರುವ ಪ್ರಿಯದರ್ಶಿನಿ!ದಾರಿ ತಪ್ಪಿದ 'ಜೊತೆ ಜೊತೆಯಲಿ': ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಿರುವ ಪ್ರಿಯದರ್ಶಿನಿ!

  ಇತ್ತ ಮೀರಾಳಿಗೆ ಸತ್ಯ ಗೊತ್ತಿಲ್ಲದಿದ್ದರೂ ಶಾರದಾ ದೇವಿ ಹೇಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿರುತ್ತಾಳೆ. ವರ್ಧನ್ ಗ್ರೂಪ್‌ನ ಹೊಸ ಚೀಫ್ ಅನ್ನು ಸ್ವಾಗತಿಸಲು ಎಲ್ಲಾ ಅರೇಂಜ್‌ಮೆಂಟ್ಸ್‌ಗಳನ್ನು ಮಾಡಿರುತ್ತಾಳೆ.

  ಅನುಗೆ ಶಾರದಾ ಸಮಾಧಾನ

  ಅನುಗೆ ಶಾರದಾ ಸಮಾಧಾನ

  ಅನುಳನ್ನು ರೂಮಿಗೆ ಕರೆದ ಶಾರದಾ ಸಮಾಧಾನ ಹೇಳಿರುತ್ತಾಳೆ. ನಾನು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಯಾವುದೇ ಅನುಮಾನ ಬೇಡ. ಸುಮ್ಮನೆ ಬೇಡದ ವಿಚಾರಗಳ ಬಗ್ಗೆ ಯೋಚಿಸಬೇಡ. ನಾಳೆ ವರ್ಧನ್ ಗ್ರೂಪ್ಸ್‌ನ ಮುಖ್ಯಸ್ಥನನ್ನು ನೀನೇ ವೆಲ್ಕಂ ಮಾಡಬೇಕು ಎಂದು ಹೇಳುತ್ತಾಳೆ. ಇನ್ನು ವೆಲ್ಕಂ ಪಾರ್ಟಿಗೆ ಆಫೀಸಿನ ಸದಸ್ಯರೆಲ್ಲರೂ ಬಂದಿರುತ್ತಾರೆ. ಎಲ್ಲರೂ ಝೇಂಡೇಗೆ ಅಧಿಕಾರ ಕೊಟ್ಟರೆ, ನಮ್ಮ ಕಥೆಯೆಲ್ಲಾ ಮುಗೀತು ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಇನ್ನು ಸುಬ್ಬು-ಪುಷ್ಪಾ ಕೂಡ ಕಾರ್ಯಕ್ರಮಕ್ಕೆ ಬಂದಿರುತ್ತಾರೆ.

  ಹೊಸ ಮುಖ್ಯಸ್ಥನಿಗೆ ಅನು ಸ್ವಾಗತ

  ಹೊಸ ಮುಖ್ಯಸ್ಥನಿಗೆ ಅನು ಸ್ವಾಗತ

  ಶಾರದಾ ದೇವಿ, ಝೇಂಡೇಗೆ ಫೋನ್ ಮಾಡಿ ಕಾರನ್ನು ಕಳಿಸಿದ್ದೀನಿ ಪಾರ್ಟಿಗೆ ಬಾ ಎಂದು ಗೌರವಯುತವಾಗಿ ಕರೆಯುತ್ತಾಳೆ. ಝೇಂಡೇಗೆ ಶಾರದಾ ದೇವಿ ಮಾತು, ಮೀರಾ ಮಾತುಗಳೆಲ್ಲವೂ ಡಬಲ್ ಖುಷಿಯನ್ನು ತಂದಿರುತ್ತದೆ. ಯಾರೂ ತನ್ನ ಮೇಲೆ ಕೋಪ ಮಾಡಿಕೊಂಡಿಲ್ಲ. ನನ್ನನ್ನು ಈ ಸಂಸ್ಥೆಯ ಒಡೆಯ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹುಮ್ಮಸ್ಸಿನಲ್ಲಿ ಇರುತ್ತಾನೆ. ಇತ್ತ ಅನು ಸ್ವಾಗತ ಭಾಷಣವನ್ನು ಮಾಡುತ್ತಾಳೆ. ಈ ಸಂಸ್ಥೆಗೆ ಹೊಸ ಮುಖ್ಯಸ್ಥನ ಬಗ್ಗೆ ಮೊದಲು ಪೀಟಿಕೆ ಕೊಡುತ್ತಾಳೆ. ಕೊನೆಯಲ್ಲಿ ಆರ್ಯವರ್ಧನ್ ಹೆಸರನ್ನು ಹೇಳುತ್ತಾಳೆ. ಆಗ ಅಲ್ಲಿ ನೆರೆದಿದ್ದವರೆಲ್ಲರೂ ಶಾಕ್ ಆಗುತ್ತಾರೆ.

  ಕಕ್ಕಾಬಿಕ್ಕಿಯಾದ ಕೇಶವ ಝೇಂಡೇ

  ಕಕ್ಕಾಬಿಕ್ಕಿಯಾದ ಕೇಶವ ಝೇಂಡೇ

  ಶಾರದಾ ದೇವಿ, ಆರ್ಯನನ್ನು ಕರೆದುಕೊಂಡು ಬರುತ್ತಾಳೆ. ವಿಶ್ವಾಸ್ ದೇಸಾಯಿಯೇ ಆರ್ಯವರ್ಧನ್ ಆ ಎಂದು ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಪುಷ್ಪಾ, ಸುಬ್ಬು, ಮಾನ್ಸಿ, ಹರ್ಷವರ್ಧನ್, ಮೀರಾ, ಆರಾಧನಾ ಎಲ್ಲರಿಗೂ ಶಾಕ್ ಆಗುತ್ತದೆ. ಶಾರದಾ, ಆರ್ಯನನ್ನು ಕೈ ಹಿಡಿದು ಕರೆದುಕೊಂಡು ಬರುತ್ತಾರೆ. ಆಗ ಝೇಂಡೇ ಕಕ್ಕಾಬಿಕ್ಕಿ ಆಗಿ ಬಿಡುತ್ತಾನೆ. ಸಂಜುನೇ ಆರ್ಯ ಎಂಬ ಸತ್ಯ ಶಾರದಾ ದೇವಿಗೆ ಗೊತ್ತಾಗಿದೆಯಲ್ಲ ಎಂದು ಗಾಬರಿಯಾಗುತ್ತಾನೆ.

  ಆರಾಧನಾ ಏನು ಮಾಡಬಹುದು..?

  ಆರಾಧನಾ ಏನು ಮಾಡಬಹುದು..?

  ಶಾರದಾ ದೇವಿಗೆ ಸಂಜು ಬೇರೆ ಯಾರೂ ಅಲ್ಲ. ಅವನೇ ಆರ್ಯವರ್ಧನ್ ಎಂಬುದು ಶಾರದಾ ದೇವಿಗೆ ಗೊತ್ತಾದ ಮೇಲೆ ಊರಿಗೆ ಹೋಗಿರುವ ಸಂಜುಗೆ ಕಾಲ್ ಮಾಡುತ್ತಾಳೆ. ಅದೂ ಕೂಡ ಅನು ಎದುರಿಗೇ ಕಾಲ್ ಮಾಡಿ ಆರ್ಯ ಆಗಿ ಇಲ್ಲಿಗೆ ವಾಪಸ್ ಬಾ ಎಂದು ಕರೆಯುತ್ತಾಳೆ. ಇದರಿಂದ ಆರಾಧನಾ ಮತ್ತು ಅನು ಇಬ್ಬರೂ ಶಾಕ್ ಆಗಿರುತ್ತಾರೆ. ಆದರೆ ಸಂಜುಗೆ ಖುಷಿಯಾಗಿರುತ್ತದೆ. ಇನ್ನು ಆಫೀಸಿನಲ್ಲಿ ಸಂಜುನನ್ನು ಆರ್ಯ ಎಂದು ಹೇಳಿರುವುದಕ್ಕೆ, ಆರಾಧನಾ ವಿರೋಧಿಸುತ್ತಾಳಾ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

  English summary
  Jothe Jotheyali Serial 05th January Episode Written Update.jhende feels happy that he will be introduced as company chief. But sharada brings arya to office.
  Thursday, January 5, 2023, 19:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X