Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali Serial : ಮತ್ತೆ ಶಾರದಾ ದೇವಿ ಮನೆಗೆ ಬಂದು ಝೇಂಡೇ ಮಾಡಿದ ಕೆಲಸವೇನು ಗೊತ್ತಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆಫೀಸಿಗೆ ಹೊರಟ ರಮ್ಯಾ, ಸಂಪತ್‌ಗೆ ತನ್ನ ತಾಯಿ ಕಡೆ ನಿಗಾ ಇಡುವಂತೆ ಹೇಳುತ್ತಾಳೆ. ಸಂಪತ್‌ಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾನೆ. ಅನುಗೆ ಪಾಯಸದಲ್ಲಿ ವಿಷ ಬೆರೆಸಿದ್ದಕ್ಕೆ ರಜಿನಿ ಮೇಲೆ ರಮ್ಯಾ ಮತ್ತು ಸಂಪತ್ ಕೋಪ ಮಾಡಿಕೊಂಡಿರುತ್ತಾರೆ.
ರಮ್ಯಾ ಆಫೀಸಿಗೆ ಹೋಗುವಾಗ ದಾರಿಯಲ್ಲಿ ಕರುಣಾಕರ ಸಿಗುತ್ತಾನೆ. ರಮ್ಯಗೆ ಮಾತನಾಡಲು ಇಷ್ಟವಿರುವುದಿಲ್ಲ. ಆದರೆ, ಕರುಣಾಕರ ರಮ್ಯಾಳನ್ನು ಸಮಾಧಾನ ಪಡಿಸಿ ಮಾತನಾಡಬೇಕು ಎಂದು ಬಯಸುತ್ತಾನೆ. ಆದರೆ ರಮ್ಯಾ ಮಾತನಾಡದೇ ಹೋಗುತ್ತಾಳೆ.
ಮನೆ
ಮುಂದೆ
ಡ್ಯಾನ್ಸ್!
ರಾಜೇಶ್ವರಿ
ಮೇಲೆ
ಸೇಡು
ತೀರಿಸಿಕೊಂಡ
ಪುಟ್ಟಕ್ಕನ
ಮಕ್ಕಳು
ಆರಾಧನಾ ಊರಿಗೆ ಹೊರಟ ಮೇಲೆ ಶಾರದಾ, ಸಂಜು ಬಗ್ಗೆ ಯೋಚಿಸಲು ಶುರು ಮಾಡುತ್ತಾಳೆ. ಪ್ರಿಯದರ್ಶಿನಿಗೆ ಕರೆ ಮಾಡಿದರೂ ಅವಳು ಸ್ವೀಕರಿಸುವುದೇ ಇಲ್ಲ. ಇದರಿಂದ ಶಾರದಾ, ಸಂಜು ಊರು ತಲುಪಿದನೋ ಇಲ್ಲವೋ ಎಂದು ಯೋಚಿಸುತ್ತಿರುತ್ತಾಳೆ.

ಸಂಜು ಬಗ್ಗೆ ಶಾರದಾ ಮನಸಲ್ಲಿ ಹೊಸ ಪ್ರಶ್ನೆ
ಮಾನ್ಸಿ, ಶಾರದಾ ಬಳಿ ಸಂಜು ಬಗ್ಗೆ ತನಗಿರುವ ಕೆಲ ಅನುಮಾನಗಳನ್ನು ಹೇಳಿಕೊಳ್ಳುತ್ತಾಳೆ. ವಿಶ್ವಾಸ್ ದೇಸಾಯಿಯನ್ನು ಅವರ ತಾಯಿ ಸಂಜು ಎಂದು ಯಾಕೆ ಕರೆಯುತ್ತಾರೆ. ಅವರ ಸೊಸೆ ಜೊತೆಗೆ ಯಾಕೆ ಮಾತನಾಡಲಿಲ್ಲ. ಅವರ ನಡುವೆ ಅಂತಹ ಜಗಳವೇನು ನಡೆದಿರಬಹುದು ಎಂದೆಲ್ಲಾ ಪ್ರಶ್ನಿಸುತ್ತಾಳೆ. ಇದರಿಂದ ಶಾರದಾ ಕೂಡ ಯೋಚಿಸಲು ಶುರು ಮಾಡುತ್ತಾಳೆ. ಹೊಸಮನಿ ಕೂಡ ಸಂಜು, ರಾಜನಂದಿನಿ ರೂಮಿಗೆ ಹೋಗಿದ್ದ ಬಗ್ಗೆ ಹೇಳುತ್ತಾನೆ. ಈಗ ಶಾರದಾ ಮನಸಲ್ಲಿ ಸಂಜು ಯಾರು ಎಂಬ ಹೊಸ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಸಂಜುಗೆ ಬೈದ ಅನು
ಸಂಜು, ಅನುಗೆ ಫೋನ್ ಮಾಡುತ್ತಾನೆ. ನಾನು ನಿಮ್ಮ ಜೊತೆಗೆ ಸೀರಿಯಸ್ ಆದ ವಿಚಾರ ಒಂದನ್ನು ಮಾತನಾಡಬೇಕು. ನಾನು ಹೈವೇ ಅಲ್ಲಿದ್ದೇನೆ..? ಆದಷ್ಟು ಬೇಗ ಸಿಗಿ, ನಿಮಗಾಗಿ ಕಾಯುತ್ತಿರುತ್ತೇನೆ ಎಂದು ಹೇಳುತ್ತಾನೆ. ಅನುಗೆ ಕೋಪ ಬರುತ್ತದೆ. ಅನು, ಸಂಜುಗೆ ಬೈಯುತ್ತಾಳೆ. ನಿಮ್ಮ ಬಗ್ಗೆ ವಿಚಾರಿಸಿಕೊಳ್ಳುವುದಕ್ಕೆ ನಿಮ್ಮ ಮನೆಯವರಿದ್ದಾರೆ. ಯಾಕೆ ಪದೇ ಪದೇ ನನ್ನ ಹಿಂದೆ ಬೀಳುತ್ತೀರ. ಸದಾ ನಿಮ್ಮ ಮಾತು ಕೇಳಿಕೊಂಡು ಇರುವುದಕ್ಕೆ ನನಗೆ ಬೇರೆ ಕೆಲಸವಿಲ್ಲ ಎಂದು ಅಂದುಕೊಂಡಿದ್ದೀರಾ. ನಿಮ್ಮ ಕೆಲಸವೆಷ್ಟೋ ಅಷ್ಟು ನೋಡಿ. ಸುಮ್ಮನೆ ನನ್ನ ಜೊತೆ ಸೀರಿಯಸ್ ವಿಚಾರ ಮಾತನಾಡಬೇಕು ಎಂದು ನನ್ನ ಹಿಂದೆ ಬೀಳಬೇಡಿ ಎಂದು ಬೈದು ಫೋನ್ ಕಟ್ ಮಾಡುತ್ತಾಳೆ.

ಆಫೀಸಿಗೆ ಎಂಟ್ರಿ ಪಡೆದ ಝೇಂಡೇ
ಝೇಂಡೇ, ರಾಜನಂದಿನಿ ವಿಲಾಸಕ್ಕೆ ಬರುತ್ತಾನೆ. ಮನೆಗೆ ಬಂದು ಶಾರದಾ ದೇವಿಯನ್ನು ಭೇಟಿಯಾಗುತ್ತಾನೆ. ಶಾರದಾ, ಝೇಂಡೇ ಜೊತೆ ಮಾತನಾಡಲು ನಿರಾಕರಿಸುತ್ತಾಳೆ. ಆದರೆ ಝೇಂಡೇ ಎಮೋಷನಲ್ ಆಗಿ ಆರ್ಯ ಇಲ್ಲದೇ, ನಾನು ಒದ್ದಾಡುತ್ತಿದ್ದೇನೆ. ನಾನು ಆಫೀಸಿನಲ್ಲಿದ್ದರೆ ಕೆಲ ಕೆಲಸಗಳು ಮುಗಿಯುತ್ತವೆ ಎಂದು ಏನೇನೋ ಹೇಳುತ್ತಾನೆ. ಶಾರದಾ, ಝೇಂಡೇ ಮಾತುಗಳನ್ನು ನಂಬಿ ಆಫೀಸಿಗೆ ಹೋಗಲು ಹೇಳುತ್ತಾಳೆ. ಆದರೆ, ಅದಕ್ಕೂ ಮುಂಚೆ ವಿಶ್ವಾಸ್ ದೇಸಾಯಿ ಯಾರು ಎಂಬುದನ್ನು ತಿಳಿದುಕೊಂಡು ಹೇಳು ಎನ್ನುತ್ತಾಳೆ. ಇದಕ್ಕೆ ಝೇಂಡೇ ಒಪ್ಪಿಕೊಳ್ಳುತ್ತಾನೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..?
ಸಂಜು, ವಿಶ್ವಾಸ್ ದೇಸಾಯಿ ಆತ್ಮಹತ್ಯೆಗೆ ಪ್ರಯತ್ನಿಸಿದ ಜಾಗದಲ್ಲಿ ನಿಂತಿರುತ್ತಾನೆ. ಇದನ್ನು ನೋಡಿದ ಅನು ಕಾರನ್ನು ನಿಲ್ಲಿಸಿ, ಸಂಜುಗೆ ಬೈಯುತ್ತಿರುತ್ತಾಳೆ. ಇಲ್ಯಾಕೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಿರುತ್ತಾಳೆ. ಇದೇ ವೇಳೆಗೆ ಅದೇ ಮಾರ್ಗದಲ್ಲಿ ಬರುವ ಆರಾಧನಾ ಸಂಜುನನ್ನ ನೋಡಿ ಬರುತ್ತಾಳೆ. ಸಂಜು ಕಪಾಳಕ್ಕೆ ಹೊಡೆಯುತ್ತಾಳೆ. ನೀನು ಎಲ್ಲಿದ್ದೀಯೋ ಎಂದು ಜೀವ ಹಿಡಿದು ಊರೆಲ್ಲಾ ಹುಡುಕಾಡುತ್ತಿದ್ದರೆ, ನೀನು ಇವರ ಜೊತೆ ಟೈಮ್ ಪಾಸ್ ಮಾಡುತ್ತಿದ್ದೀಯಾ ಎಂದು ಬೈಯುತ್ತಾಳೆ.