For Quick Alerts
  ALLOW NOTIFICATIONS  
  For Daily Alerts

  ಮನೆಗೆ ಬಂದ ಆರಾಧನಾ: ಇನ್ನಾದರೂ ಕಥೆ ಬದಲಾಗುತ್ತಾ?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ವಿಶ್ವಾಸ್ ದೇಸಾಯಿ ರೂಪದಲ್ಲಿ ಆರ್ಯ ಬದುಕಿದ್ದಾನೆ. ಆದರೆ ಅವನಿಗೆ ನೆನಪಿನ ಶಕ್ತಿ ಇಲ್ಲದ ಕಾರಣ ಆರ್ಯನಿಗೆ ತಾನು ಯಾರು ಎಂಬುದೇ ಗೊತ್ತಿಲ್ಲ. ಸಂಜು ಹೆಸರಲ್ಲಿ ಬದುಕುತ್ತಿದ್ದಾನೆ.

  ಆದರೆ, ಅವನ ಸುತ್ತ ಇರುವವರಿಗೆ ಸಂಜು ಮೇಲೆ ಅನುಮಾನ ಬಂದಿದೆ. ಆತ ಆರ್ಯನಂತೆಯೇ ನಡೆದುಕೊಳ್ಳುತ್ತಿದ್ದಾನೆ. ಆದರೆ ಅನು ಮಾತ್ರ ವಿಶ್ವಾಸ್ ಹಾಗೂ ಆಕೆಯ ಹೆಂಡತಿ ಆರಾಧನಾಳನ್ನು ಒಂದು ಮಾಡಲು ಮುಂದಾಗಿದ್ದಾಳೆ.

  ಸಂಜುಗೆ ಆರಾಧನಾ ನೆನಪೇ ಆಗುತ್ತಿಲ್ಲ. ಅವನಿಗೆ ಅನು ತುಂಬಾ ಹತ್ತಿರ ಎನಿಸುತ್ತಾಳೆ. ಅನು ಜೊತೆಗೆ ಬದುಕಬೇಕು ಎಂದು ಆಸೆ ಪಡುತ್ತಿದ್ದಾನೆ. ಆದರೆ, ಸಂಜು ಮನದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಯಾರಿಗೂ ಅರ್ಥವಾಗುತ್ತಿಲ್ಲ.

  ಸಂಜುನನ್ನು ಕಂಡು ಆಶ್ಚರ್ಯಗೊಂಡ ಶಾರದಾ

  ಸಂಜುನನ್ನು ಕಂಡು ಆಶ್ಚರ್ಯಗೊಂಡ ಶಾರದಾ

  ಅನು ಬರ್ತಡೇ ಹಿನ್ನೆಲೆ ಆಕೆಯ ಹುಟ್ಟು ಹಬ್ಬವನ್ನು ಆಚರಿಸಲು ಸಂಜು ಮುಂದಾಗಿದ್ದಾನೆ. ಹಾಗಾಗಿ ಮನೆಯನ್ನೆಲ್ಲಾ ಅಲಂಕಾರಗೊಳಿಸಿದ್ದಾನೆ. ಅನುಗಾಗಿ ಕೇಕ್ ಅನ್ನು ಕೂಡ ಬುಕ್ ಮಾಡಿದ್ದಾನೆ. ಅನು ಮನೆಗೆ ಬಂದ ಕೂಡಲೇ ಕೇಕ್ ಕಟ್ ಮಾಡಿಸಿ ಸಂಭ್ರಮಿಸಬೇಕು ಎಂದು ಅಂದುಕೊಂಡಿದ್ದಾನೆ. ಇದನ್ನೆಲ್ಲಾ ನೋಡಿ ಶಾರದಾ ಶಾಕ್ ಆಗಿದ್ದಾಳೆ. ಏನು ಇದೆಲ್ಲಾ ಎಂದು ಕೇಳಿದ್ದಕ್ಕೆ ಅನು ತುಂಬಾ ದಿನ ಆದ ಮೇಲೆ ಮನೆಗೆ ಬರುತ್ತಿದ್ದಾರೆ. ಹಾಗಾಗಿ ಸೆಲೆಬ್ರೇಟ್ ಮಾಡೋಣ ಎಂದು ಹೇಳುತ್ತಾನೆ. ಆದರೂ, ಅನು ಬರ್ತಡೇಗೆ ಸಂಜು ಸಂಭ್ರಮಿಸುತ್ತಿರುವುದನ್ನು ಕಂಡು ಶಾರದಾ ದೇವಿಗೆ ಆಶ್ಚರ್ಯವಾಗುತ್ತದೆ.

  ಮಗಳಿಗೆ ಎರಡನೇ ಮದುವೆ ಮಾಡುತ್ತಾನಾ ಸುಬ್ಬು?

  ಮಗಳಿಗೆ ಎರಡನೇ ಮದುವೆ ಮಾಡುತ್ತಾನಾ ಸುಬ್ಬು?

  ಇನ್ನು ಅನು ತನ್ನ ಮನೆಗೆ ಹೊರಟಿರುತ್ತಾಳೆ. ಹೀಗಾಗಿ ಪುಷ್ಪಾ ಅವಳಿಗೆ ಒಳ್ಳೆಯದಾಗಲಿ ಎಂದು ಹರಸಿ ಕಳಿಸುತ್ತಾಳೆ. ಅನು ಮನೆಯಿಂದ ಹೊರಟ ಮೇಲೆ ಪುಷ್ಪಾ ಹಾಗೂ ಸುಬ್ಬು ಇಬ್ಬರೂ ಬೇಸರ ಮಾಡಿಕೊಳ್ಳುತ್ತಾರೆ. ಅನು ಮನೆಯಲ್ಲಿ ಇಲ್ಲ ಎಂದರೆ ತುಂಬಾ ಕಷ್ಟವಾಗುತ್ತೆ. ಹಣ, ಆಸ್ತಿ ಏನಿದ್ದರೂ ಅನು ಇದ್ದ ಹಾಗೆ ಇರುವುದಿಲ್ಲ ಎಂದು ಹೇಳುತ್ತಾನೆ. ಮಾತು ಮುಂದುವರಿಸಿ, ಅನುಗೆ ಬೇರೊಂದು ಮದುವೆಯನ್ನು ಮಾಡುವ ಬಗ್ಗೆ ಮಾತನಾಡುತ್ತಾನೆ. ಆಗ ಪುಷ್ಪಾ ಸುಬ್ಬುಗೆ ಬೈಯುತ್ತಾಳೆ.

  ಆರಾಧನಾ ಬಂದದ್ದಕ್ಕೆ ಸಂಜು ಬೇಸರ

  ಆರಾಧನಾ ಬಂದದ್ದಕ್ಕೆ ಸಂಜು ಬೇಸರ

  ಮನೆಯನ್ನು ಸಿಂಗರಿಸಿ ಅನುಗಾಗಿ ಸಂಜು ಕಾಯುತ್ತಿರುತ್ತಾನೆ. ಇದೇ ವೇಳೆಗೆ ಅನು ಬರುತ್ತಾಳೆ. ಅನು ಬಂದಿದ್ದಕ್ಕೆ ಸಂಜು ತುಂಬಾ ಖುಷಿ ಪಡುತ್ತಾನೆ. ಆದರೆ, ಅನು ಜೊತೆಗೆ ಆರಾಧನಾ ಕೂಡ ಬಂದಿರುತ್ತಾಳೆ. ಅನು ಆರಾಧನಾಳನ್ನು ಎಲ್ಲರಿಗೂ ಪರಿಚಯ ಮಾಡಿಸಿಕೊಡುತ್ತಾಳೆ. ಆಗ ಸಂಜು ಶಾಕ್ ಆಗುತ್ತಾನೆ. ಆರಾಧನಾ ಸಂಜುನನ್ನು ತಬ್ಬಿಕೊಂಡು ಮಾತನಾಡಿಸುತ್ತಾಳೆ. ಸಂಜುಗೆ ಹೇಗೆ ರಿಯಾಕ್ಟ್ ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ತುಂಬಾ ಬೇಸರದಲ್ಲಿ ಸಂಜು ನಿಂತಿರುತ್ತಾನೆ. ಆರಾಧನಾ ಒಬ್ಬಳೇ ಎಲ್ಲವನ್ನು ಮಾತನಾಡುತ್ತಿರುತ್ತಾಳೆ. ಸಂಜು ಯಾವುದಕ್ಕೂ ರಿಯಾಕ್ಟ್ ಮಾಡುವುದೇ ಇಲ್ಲ.

  ಇನ್ನಾದರೂ ಸಂಜು ಯಾರೆಂದು ಸತ್ಯ ಬಯಲಾಗುತ್ತಾ?

  ಇನ್ನಾದರೂ ಸಂಜು ಯಾರೆಂದು ಸತ್ಯ ಬಯಲಾಗುತ್ತಾ?

  ಆರಾಧನಾ ತಮ್ಮ ಬ್ಯುಸಿನೆಸ್ ಸಮಸ್ಯೆಗಳೆಲ್ಲಾ ಪರಿಹಾರವಾಗಿದ್ದು, ಈಗ ಒಂದು ರೂಪಾಯಿ ಸಾಲವೂ ಇಲ್ಲ ಎಂಬುದನ್ನೆಲ್ಲಾ ಹೇಳುತ್ತಿರುತ್ತಾಳೆ. ಮಾನ್ಸಿ ಆಗ ಕುತೂಹಲದಿಂದ ಕೆಲ ಪ್ರಶ್ನೆಗಳನ್ನು ಕೇಳುತ್ತಾಳೆ. ಅಷ್ಟರಲ್ಲಿ ಹರ್ಷ ಮಧ್ಯೆ ಮಾತನಾಡುತ್ತಾನೆ. ಇನ್ನು ಆರಾಧನಾ ವಿಶ್ವಾಸ್ ನೆನಪಿನ ಶಕ್ತಿ ಇಲ್ಲದಿರುವುದು, ಇಲ್ಲಿ ನಡೆದ ಘಟನೆಗಳೆಲ್ಲವನ್ನೂ ಅನು ಹೇಳಿದಳು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಸಂಜುಗೆ ಶಾಕ್ ಮೇಲೆ ಶಾಕ್ ಆಗುತ್ತದೆ. ಅಲ್ಲಿಗೆ ಸಂಜು ನಿಜವಾದ ಅಸ್ತಿತ್ವ ಬಯಲಾಗುತ್ತದಾ?

  English summary
  Anu brings aradhana to home Sanju gets shocked after seeing aradhana with anu. Read on
  Tuesday, November 8, 2022, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X