For Quick Alerts
  ALLOW NOTIFICATIONS  
  For Daily Alerts

  ವಿಶ್ವಾಸ್ ದೇಸಾಯಿ ಹಾರಿದ ನದಿಯಲ್ಲೇ ಸೂಸೈಡ್ ಮಾಡಿಕೊಳ್ಳುತ್ತಾಳಾ ಆರಾಧನಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ, ಮೀರಾಳನ್ನು ಭೇಟಿ ಮಾಡುತ್ತಾನೆ. ತಾನು ಶಾರದಾ ದೇವಿ ಮನೆಗೆ ಹೋಗಿದ್ದು, ಅವರು ಆಫೀಸಿಗೆ ಬರಲು ಪರ್ಮಿಷನ್ ಕೊಟ್ಟ ವಿಚಾರವನ್ನು ಹೇಳಿಕೊಳ್ಳುತ್ತಾನೆ.

  ಈ ವಿಚಾರವನ್ನು ಕೇಳಿದ ಮೀರಾ ಖುಷಿ ಪಡಬೇಕೋ ಇಲ್ಲವೇ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳುತ್ತಾಳೆ. ಯಾಕೆಂದರೆ, ಮೀರಾಗೆ ಈಗ ಆರ್ಯ ಬದುಕಿದ್ದಾನಾ.? ನಿಜಕ್ಕೂ ಆತ ಬದುಕಿದ್ದರೆ ಎಲ್ಲಿದ್ದಾನೆ.? ಹೇಗಿದ್ದಾನೆ.? ಎಂದು ತಿಳಿದುಕೊಳ್ಳುವ ತವಕ ಹೆಚ್ಚಾಗಿದೆ.

  ಹೊಸ ಹುಡುಗನ ಜೊತೆ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿಹೊಸ ಹುಡುಗನ ಜೊತೆ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ

  ಆದರೆ ಝೇಂಡೇ ಈ ಬಗ್ಗೆ ಯಾವ ರಹಸ್ಯವನ್ನು ಕೂಡ ಮೀರಾ ಬಳಿ ಹೇಳುತ್ತಿಲ್ಲ. ನನಗೆ ನೀವು ಹೇಳುತ್ತಿರುವುದೇ ಅರ್ಥವಾಗುತ್ತಿಲ್ಲ ಎಂದು ತನ್ನ ಗೊಂದಲದ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ಇದಕ್ಕೆ ಝೇಂಡೇ ಯಾವ ಮಾತನ್ನೂ ಆಡುವುದಿಲ್ಲ.

   ಸಮಾಧಾನ ಮಾಡಿದ ಅನು

  ಸಮಾಧಾನ ಮಾಡಿದ ಅನು

  ಇತ್ತ ಅನು, ಸಂಜುನನ್ನು ಏನೋ ಸಮಾಧಾನ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಆರಾಧನಾ ಅಲ್ಲಿಗೆ ಬಂದು ಸಂಜು ಕಪಾಳಕ್ಕೆ ಹೊಡೆಯುತ್ತಾಳೆ. ಅಷ್ಟೇ ಅಲ್ಲದೆ, ನಾನು ನಿನಗಾಗಿ ಕೈಯಲ್ಲಿ ಜೀವ ಹಿಡಿದುಕೊಂಡು ಊರೆಲ್ಲಾ ಹುಡುಕಾಡುತ್ತಿದ್ದೇನೆ. ಆದರೆ, ನೀನಿಲ್ಲಿ ಟೈಂಪಾಸ್ ಮಾಡುತ್ತಿದ್ದೀಯಾ ಎಂದು ಬಯ್ಯುತ್ತಾಳೆ. ಈ ಮಾತಿಗೆ ಸಿಟ್ಟು ಮಾಡಿಕೊಳ್ಳುವ ಅನು, ಆರಾಧನೆಗೆ ಬಯ್ಯುತ್ತಾಳೆ. ನಿನ್ನ ಮಾತಿನ ಮೇಲೆ ಹಿಡಿತವಿರಲಿ. ಮಾತು ಎಲ್ಲೆಲ್ಲೋ ಹೋಗುತ್ತಿದೆ ಎಂದು ಹೇಳುತ್ತಾಳೆ. ಆಗ ಮೂವರ ನಡುವೆ ವಾಗ್ವಾದ ನಡೆಯುತ್ತದೆ. ಸಂಜು, ಅನು ಪರವಾಗಿ ಮಾತನಾಡುತ್ತಿರುತ್ತಾನೆ. ಆರಾಧನಾಳಿಗೆ ಕೋಪ ಬರುತ್ತದೆ. ಆಗ ಮತ್ತೆ ಅನು ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆ. ಆಗ ಅನುಗೆ ಕೋಪ ಬಂದು ಆರಾಧನಾ ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಏನು ಮಾತನಾಡುತ್ತಿದ್ದೀರಾ ಎಂಬುದನ್ನು ಮೊದಲು ಗಮನಿಸಿಕೊಳ್ಳಿ ಎಂದು ಹೇಳಿ ಸಮಾಧಾನ ಮಾಡಲು ಯತ್ನಿಸುತ್ತಾಳೆ.

  ಸಾಯಲು ಹೊರಟ ಆರಾಧನಾ

  ಸಾಯಲು ಹೊರಟ ಆರಾಧನಾ

  ಮಾತು ಮುಂದುವರಿಸುವ ಅನು, ನನಗೆ ಟೈಂಪಾಸ್ ಮಾಡುವ ಸಮಯವಿಲ್ಲ. ನೀವು ಸುಖಾಸುಮ್ಮನೇ ನನ್ನನ್ನು ಅಪಾರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದು ಹೇಳುತ್ತಾಳೆ. ಆರಾಧನಾ, ಸಂಜು ನಡವಳಿಕೆಯಿಂದ ಬೇಸತ್ತು ಹೋಗುತ್ತಾಳೆ. ಹಾಗಾಗಿ ಆರಾಧನಾ ನನಗೆ ಏನು ಬೇಡ. ಈ ಬದುಕಿನಲ್ಲಿ ಎಲ್ಲಾ ಸಾಕಾಗಿ ಹೋಗಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಆಗ ಸಂಜು ಮತ್ತು ಅನು ಇಬ್ಬರು ಆರಾಧನಾಳನ್ನು ನದಿಗೆ ಹಾರದಂತೆ ನೋಡಿಕೊಳ್ಳುತ್ತಾರೆ. ಆಗ ಮತ್ತೆ ಸಂಜು ಅನುಗೆ ನೀವು ರೆಸ್ಟ್ ಮಾಡಿ ನಿಮ್ಮ ಮಗುವಿಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಾನೆ. ಸಂಜು ಮಾತನ್ನು ಕೇಳಿದ ಆರಾಧನಾ ಮತ್ತಷ್ಟು ಕುಗ್ಗಿ ಹೋಗುತ್ತಾಳೆ. ಸಾಯುತ್ತಿರುವ ಹೆಂಡತಿಗಿಂತಲೂ ಅವರ ಮಗುನೇ ನಿನಗೆ ಹೆಚ್ಚಾಯ್ತಾ ಎನ್ನುತ್ತಾಳೆ. ಆರಾಧನಾಳನ್ನು ದೂರ ಕರೆದುಕೊಂಡು ಹೋಗಿ ಅನು ಬುದ್ಧಿವಾದ ಹೇಳುತ್ತಾಳೆ. ಸಂಜುಗೆ ಹಳೆಯದೆಲ್ಲ ಏನು ನೆನಪಿಲ್ಲ. ಹೀಗಿರುವ ಸಂದರ್ಭದಲ್ಲಿ ನೀವು ಅವರಿಂದ ಎಕ್ಸ್‌ಪೆಕ್ಟ್ ಮಾಡುವುದು ತಪ್ಪು. ನೀವು 700 ಕೋಟಿ ಸಾಲವನ್ನು ತೀರಿಸಿ ಬಂದವರು. ನೀವು ಎಷ್ಟು ಸ್ಟ್ರಾಂಗ್ ಆಗಿ ಇರಬೇಕು. ನೀವು ಈಗ ಸಂಜು ಅವರಿಗೆ ಟ್ರೀಟ್ಮೆಂಟ್ ಕೊಡಿಸಬೇಕು. ಬೆಂಗಳೂರಿಗೆ ಹೋಗೋಣ ನಿಮ್ಮಿಬ್ಬರನ್ನು ಒಂದು ಮಾಡಿ ಊರಿಗೆ ಕಳಿಸುವ ಜವಾಬ್ದಾರಿ ನನ್ನದು ಎಂದು ಹೇಳುತ್ತಾಳೆ. ಆಗ ಮೂವರು ವಾಪಸ್ ಬೆಂಗಳೂರಿಗೆ ಮರಳಿ ಮರಳುತ್ತಾರೆ.

  ರಜಿನಿ ಮಾತಿಗೆ ಸಿಟ್ಟಾದ ಪುಷ್ಪಾ

  ರಜಿನಿ ಮಾತಿಗೆ ಸಿಟ್ಟಾದ ಪುಷ್ಪಾ

  ಪುಷ್ಪಾ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಕರೆಂಟ್ ಹೋಗುತ್ತದೆ. ಆಗ ಪುಷ್ಪ ಯಾಕೆ ಕರೆಂಟ್ ಹೋಗಿದ್ದು ಎಂದು ಕ್ಯಾಂಡಲ್ ಅಚ್ಚುತ್ತಿರುವ ಸಂದರ್ಭದಲ್ಲಿ ರಜಿನಿ ಫ್ಯೂಸ್ ಅನ್ನು ಕೈಯಲ್ಲಿ ಹಿಡಿದು ಬರುತ್ತಾಳೆ. ಕರೆಂಟ್ ಬಿಲ್ ಕಟ್ಟಿಲ್ಲ ಎಂದು ಫ್ಯೂಸ್ ಅನ್ನು ಕಿತ್ತು ಪಕ್ಕಕ್ಕಿಟ್ಟಿದ್ದರು ತೆಗೆದುಕೊಳ್ಳಿ ಪುಷ್ಪ ಎಂದು ಕೊಡುತ್ತಾಳೆ. ಆದರೆ ಪುಷ್ಪ ಅವಳ ಕಡೆಗೆ ತಿರುಗಿಯೂ ನೋಡುವುದಿಲ್ಲ. ಸುಖಾಸುಮ್ಮನೆ ಸುಳ್ಳು ಹೇಳಿ ಬೈಯುತ್ತಿರುತ್ತಾಳೆ. ಮೊದಲು ನಾಳೆ ಹೋಗಿ ಕರೆಂಟ್ ಬಿಲ್ ಕಟ್ಟಿ ಎಂದು ಸುಬ್ಬುಗೆ ಬೈಯುತ್ತಾಳೆ. ರಜಿನಿ ಮತ್ತೆ ಪುಷ್ಪಳನ್ನು ಮಾತನಾಡಿಸುತ್ತಾಳೆ. ಅನು ಹೇಗಿದ್ದಾಳೆ, ಅವಳ ಸೀಮಂತ ಯಾವಾಗ, ತುಂಬಾ ಜನ ಬರುತ್ತಾರಾ ಎಂದೆಲ್ಲಾ ವಿಚಾರಿಸಿಕೊಳ್ಳುತ್ತಾಳೆ. ಈ ಮಾತಿಗೆ ಪುಷ್ಪ ಯಾಕೆ ಅಲ್ಲಿಗೆ ಬಂದವರಿಗೆ ವಿಷ ಬೆರೆಸಿ ಕೊಡುವುದಕ್ಕಾ ಎಂದು ರೇಗುತ್ತಾಳೆ. ರಜಿನಿ ಬೇಸರ ಮಾಡಿಕೊಂಡು ಹೊರಟು ಬಿಡುತ್ತಾಳೆ.

  ಝೇಂಡೇ ಬಗ್ಗೆ ಶಾರದಾ ದೇವಿ ಹೇಳಿದ್ದೇನು..?

  ಝೇಂಡೇ ಬಗ್ಗೆ ಶಾರದಾ ದೇವಿ ಹೇಳಿದ್ದೇನು..?

  ಹರ್ಷ ಮನೆಗೆ ಬಂದು ಶಾರದಾದೇವಿ ಬಳಿ, ಝೇಂಡೇಗೆ ಆಫೀಸಿಗೆ ಬರಲು ಹೇಳಿದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ಶಾರದಾ ಹೌದು, ಅವನಿಗೆ ಯಾವ ಕೆಲಸವನ್ನು ಕೊಡಬೇಡಿ. ಅವನ ಮೇಲೆ ಒಂದು ಕಣ್ಣಿಟ್ಟಿರಿ ಎಂದು ಹೇಳುತ್ತಾಳೆ. ಅನು ಯಾಕೆ ಇಷ್ಟೊತ್ತಾದರೂ ಫೋನ್ ಮಾಡಿಲ್ಲ ಎಂದು ಶಾರದಾ ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಮನೆ ಬಾಗಿಲಿಗೆ ಅನು, ಆರಾಧನಾ ಮತ್ತು ಸಂಜು ಮೂವರು ಬರುತ್ತಾರೆ. ಸಂಜು ಮತ್ತು ಆರಾಧನಾ ಮನೆಗೆ ಬಂದಿದ್ದಕ್ಕೆ ಮಾನ್ಸಿ ಏನಾದರೂ ಹೇಳುತ್ತಾಳಾ..? ಆರಾಧನಾಗೂ ಮನೆಗೆ ಬರಲು ಇಷ್ಟವಿಲ್ಲದ ಕಾರಣ ವಾಪಸ್ ಸಂಜು ನನ್ನು ಕರೆದುಕೊಂಡು ಹೋಗುತ್ತಾಳಾ ಎಂಬ ಕುತೂಹಲ ಸೃಷ್ಟಿಯಾಗಿದೆ.

  English summary
  Jothe jotheyali Serial 09th December Episode Written Update.Aradhana tries to attempt suicide. But anu saves her and brings her back to home.
  Friday, December 9, 2022, 18:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X