Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಅನು ಸಿರಿಮನೆ ಕೈ ತಪ್ಪಿ ಹೋಗುತ್ತಾನಾ ಆರ್ಯವರ್ಧನ್..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಮತ್ತೆ ಮೊದಲಿನಂತೆ ಆಕ್ಟೀವ್ ಆಗಿರುತ್ತಾಳೆ. ಆರ್ಯ ಸರ್ ಮತ್ತೆ ಬಂದಿದ್ದಾರೆ ಎಂಬುದು ಮೀರಾ ಖುಷಿಗೆ ಕಾರಣವಾಗಿದೆ. ಮತ್ತೆ ಚುರುಕಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ.
ಆಫೀಸಿಗೆ ಬಂದ ಮೀರಾ ಮೊದಲಿನಂತೆ ಎಲ್ಲರಿಗೂ ಕೆಲವನ್ನು ಪಟಪಟನೇ ಮಾಡಲು ಹೇಳುತ್ತಾಳೆ. ಅವಳ ಧ್ವನಿಯಲ್ಲಿ ಖುಷಿ ಮತ್ತು ಶಿಸ್ತು ಎದ್ದು ಕಾಣುತ್ತಿರುತ್ತದೆ. ಆದರೆ ಆಫೀಸಿನಲ್ಲಿ ಝೇಂಡೇ ಫೋಟೋವನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾಳೆ.
'ಹಿಟ್ಲರ್
ಕಲ್ಯಾಣ'
ಧಾರಾವಾಹಿಯಿಂದ
ಅಭಿನಯ
ಹೊರಕ್ಕೆ:
ಇನ್ಮುಂದೆ
ಕೌಸಲ್ಯ
ಯಾರು?
ಆ ಫೋಟೋವನ್ನು ಮೊದಲು ತೆಗೆದು ಬಿಸಾಡಲು ಹೇಳುತ್ತಾಳೆ. ಆದರೆ, ಆಫೀಸ್ ಬಾಯ್ ಭಯ ಆಗುತ್ತೆ. ಅದಕ್ಕೆ ಆ ಫೋಟೋವನ್ನು ತೆಗೆಯಲಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಮೀರಾ ಯಾರಿಗೂ ಹೆದರಬೇಕಿಲ್ಲ ಎಂದು ಧೈರ್ಯವಾಗಿ ಹೇಳುತ್ತಾಳೆ.

ಶಾರದಾ ಬುದ್ಧಿ ಹೇಳಿದರೂ ಕೇಳದ ಅನು
ಅನುಗೆ ಶಾರದಾ ಹೇಳಿರುವ ಸತ್ಯ ಅರ್ಥವಾಗಿರುವುದಿಲ್ಲ. ಇದೆಲ್ಲಾ ಸುಳ್ಳು ಎಂದು ನಂಬಿರುತ್ತಾಳೆ. ಹಾಗಾಗಿ ಆರಾಧನಾಳಿಗೆ ಭರವಸೆಯನ್ನು ಕೊಡುತ್ತಾಳೆ. ಆರ್ಯ ಸರ್ ಇನ್ಯಾವತ್ತೂ ಬರುವುದಿಲ್ಲ. ಅವರು ಯಾವತ್ತಿದ್ದರು ನಿಮ್ಮ ವಿಶ್ವಾಸ್ ದೇಸಾಯಿ ಅವರೇ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಶಾರದಾ, ಅನುಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ನೀನು ತಪ್ಪಾಗಿ ತಿಳಿದುಕೊಂಡಿದ್ದೀಯಾ. ಅವನೇ ನಮ್ಮ ಆರ್ಯ ಎಂದು ಎಷ್ಟು ಬಿಸಿ ಹೇಳಿದರೂ ಕೇಳುವುದಿಲ್ಲ. ನನ್ನ ಪಾಲಿಗೆ ಆರ್ಯ ಸರ್ ಸತ್ತು ಕಾಲವೇ ಆಗಿದೆ. ಅವರು ಮತ್ತೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಶಾರದಾ ಇಲ್ಲ ಇವನೇ ಆರ್ಯ ಎಂದು ಹೇಳಿದರೂ ಕೇಳುವುದಿಲ್ಲ.

ಸಮಾಧಾನ ಮಾಡಲು ಪ್ರಯತ್ನಿಸಿದ ಅನು
ಇತ್ತ ಆರಾಧನಾ ಮನೆಯಲ್ಲಿ ನಡೆದ ಘಟನೆಗಳಿಂದ ಬೇಸರ ಮಾಡಿಕೊಂಡಿರುತ್ತಾಳೆ. ಹಾಗಾಗಿ ನಾನು ಮನೆಯಿಂದ ಹೊರಡುತ್ತೇನೆ. ವಿಶುಗೆ ನನ್ನ ನೆನಪಾದಾಗಲೇ ನನ್ನ ಬಳಿ ಬರಲಿ. ಅಲ್ಲಿಯವರೆಗೂ ಕಾಯುತ್ತೇನೆ ಎಂದು ಹೇಳುತ್ತಾಳೆ. ನಾನು ಇಷ್ಟು ದಿನ ಇದ್ದ ಭರವಸೆ ಎಲ್ಲಾ ಹೊರಟು ಹೋಗಿದೆ. ಕೋಪ ಮಾಡಿಕೊಂಡು ಹೇಳಿದ್ದಾಯ್ತು, ಪ್ರೀತಿಯಿಂದ ಹೇಳಿದ್ದಾಯ್ತು. ಆದರೆ ವಿಶುಗೆ ನನಗಿಂತ ನಿಮ್ಮ ಜೊತೆಗೆ ಜೀವನ ಮಾಡುವ ಆಸೆ ಇದೆ ಎಂದು ಹೇಳುತ್ತಾಳೆ. ಅನು ಆರಾಧನಾಳಿಗೆ ಸಮಾಧಾನ ಮಾಡುತ್ತಾಳೆ. ಇಷ್ಟೇ ದಿನ ಇದೀರಾ ಇನ್ನು ಸ್ವಲ್ಪ ದಿನ ಇರಿ ಎನ್ನುತ್ತಾಳೆ. ಆದರೆ ಆರಾಧನಾ ಕೇಳುವುದಿಲ್ಲ.

ಬೇಸರ ಮಾಡಿಕೊಂಡ ಆರಾಧನಾ
ಸಂಜು ಕೂಡ ಆರಾಧನಾ ಜೊತೆಗೆ ಹೋಗುವುದಿಲ್ಲ. ಆರಾಧನಾ ಏನೇ ಮಾತನಾಡಿದರೂ ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಾನೆ. ಇದರಿಂದ ಆರಾಧನಾ ಬೇಸರ ಮಾಡಿಕೊಳಳುತ್ತಾಳೆ. ಅನು ನೀವು ಹೋಗುವುದಕ್ಕೂ ಮೊದಲು ನಾನು ಇಲ್ಲಿಂದ ಹೊರಡುತ್ತೇನೆ. ಇವರು ಆರ್ಯ ಆಗುವುದಕ್ಕೆ ಸಾಧ್ಯಾನೇ ಇಲ್ಲ ಎಂದು ಹೇಳುತ್ತಾಳೆ.

ಅನು ಆರ್ಯನನ್ನು ಕಳೆದುಕೊಳ್ಳುತ್ತಾಳಾ..?
ಅನು ಮಾತುಗಳನ್ನು ಕೇಳಿದರೆ, ಜೋಗ್ತವ್ವ ಹೇಳಿದಂತೆ ಆರ್ಯನನ್ನು ಕಳೆದುಕೊಳ್ಳಬಹುದು. ಕಣ್ಣ ಮುಂದೆಯೇ ಆರ್ಯ ಇದ್ದರೂ ಗುರುತಿಸದ ಅನು, ಆರಾಧನಾಳಿಗೆ ಬಿಟ್ಟು ಕೊಡುತ್ತಿದ್ದಾಳೆ. ಬೇರೆ ರೂಪದಲ್ಲಿರುವ ಆರ್ಯನನ್ನು ನಾನು ಒಪ್ಪಿಕೊಳ್ಳುವ ಬದಲು ಆರಾಧನಾ ಅವರ ತಮ್ಮ ಪತಿಯ ರೂಪದಲ್ಲಿರುವ ಇವರ ಜೊತೆ ಹೊಸ ಜೀವನ ಆರಂಭಿಸಲಿ ಎಂಬುದು ಅನು ಆಲೋಚನೆ. ಇದು ಹೀಗೆ ಮುಂದುವರಿದರೆ, ಆರ್ಯನನ್ನು ಅನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾಳೆ.