For Quick Alerts
  ALLOW NOTIFICATIONS  
  For Daily Alerts

  ಅನುಗೆ ಆರ್ಯನ ಸಾವಿನ ಮೇಲೆ ಶುರುವಾಯ್ತು ಅನುಮಾನ!

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಆರಾಧನಾಳಿಗೆ ತಾಳ್ಮೆಯಿಂದ ಇರಲು ಹೇಳುತ್ತಾಳೆ. ಸಂಜುಗೆ ಟ್ರೀಟ್ ಮೆಂಟ್ ಆದರೆ ಎಲ್ಲಾ ನೆನಪು ಬರುತ್ತದೆ, ಅಲ್ಲಿಯವರೆಗೂ ಇಲ್ಲೇ ಇರಿ ಎಂದು ಹೇಳುತ್ತಾಳೆ.

  ಆರಾಧನಾಳಿಗೆ ಮತ್ತೆ ಅವರ ಮನೆಯಲ್ಲಿ ಇರುವುದು ಇಷ್ಟವಿರುವುದಿಲ್ಲ. ಆದರೆ ಅನು ಮಾತಿಗೆ ಕಟ್ಟು ಬಿದ್ದು ಇರಲು ಒಪ್ಪುತ್ತಾಳೆ. ಸಂಜು ಆರಾಧನಾಳ ಯಾವ ಮಾತಿಗೂ ರೆಸ್ಪಾನ್ಸ್ ಮಾಡುವುದಿಲ್ಲ.

  ಅನುಗೆ ಈಗ ಆರ್ಯನ ಸಾವಿನ ಮೇಲೆ ಅನುಮಾನ ಶುರುವಾಗಿದೆ. ವೈದ್ಯರ ಹೇಳಿಕೆಗಳು ಅವಳನ್ನು ಗೊಂದಲಕ್ಕೆ ದೂಡಿದೆ. ಆದರೆ, ಅದರ ರಹಸ್ಯವನ್ನು ಬೇಧಿಸಿ ಆರ್ಯ ಬದುಕಿರುವ ಸತ್ಯವನ್ನು ಬಯಲು ಮಾಡುವುದಂತೂ ಪಕ್ಕಾ ಆಗಿದೆ.

  ಅನು ರೂಲ್ಸ್ ಫಾಲೋ ಮಾಡುತ್ತಿರುವ ಆರಾಧನಾ

  ಅನು ರೂಲ್ಸ್ ಫಾಲೋ ಮಾಡುತ್ತಿರುವ ಆರಾಧನಾ

  ಅನು ಆರಾಧನಾ ಮತ್ತು ಸಂಜುಗೆ ಬುದ್ಧಿ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಬರುತ್ತಾಳೆ. ಅನು ಬಂದ ರೀತಿಯನ್ನು ನೋಡಿ ಶಾಕ್ ಆದ ಶಾರದಾ ದೇವಿ, ಅನುಗೆ ಏನಾಯ್ತು ಎಂದು ಕೇಳುತ್ತಾಳೆ. ಆಗ ಅನು ಸ್ವಲ್ಪ ಸುಸ್ತಾಗಿದೆ. ನಾನೀಗ ಮಲ್ಕೊತೀನಿ ಬೆಳಗ್ಗೆ ಮಾತನಾಡುತ್ತೀನಿ. ಹೋದ ಕೆಲಸ ಆಗಿಲ್ಲ. ಆದರೆ ಏನೋ ಒಂದು ಶುರುವಾಗಿದೆ ಎಂದು ಹೇಳುತ್ತಾಳೆ. ಇನ್ನು ಆರಾಧನಾಳನ್ನು ಕೇಳಿದ್ದಕ್ಕೆ ಸಂಜು ಟ್ರೀಟ್ ಮೆಂಟ್ ಮುಗಿಯುವವರೆಗೂ ನಾವು ಎಲ್ಲೂ ಹೋಗಬಾರದು ಎಂದು ಅನು ರೂಲ್ಸ್ ಮಾಡಿದ್ದಾಳೆ. ರೂಲ್ಸ್ ಬ್ರೇಕ್ ಮಾಡದಂತೆ ನನ್ನ ಕಟ್ಟಿ ಹಾಕಿದ್ದಾಳೆ ಹಾಗಾಗಿ ನಾವು ಇಲ್ಲೇ ಇರಬೇಕಷ್ಟೇ ಎಂದು ಹೇಳುತ್ತಾಳೆ.

  ಸಂಜು ರಾತ್ರಿ ಪೂರ ನಿದ್ದೆ ಮಾಡಲೇ ಇಲ್ಲ

  ಸಂಜು ರಾತ್ರಿ ಪೂರ ನಿದ್ದೆ ಮಾಡಲೇ ಇಲ್ಲ

  ಅನು ಆರ್ಯನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಹೀಗಾಗಿ ತನ್ನ ರೂಮಿನ ಬಾಲ್ಕನಿಗೆ ಬಂದು ಮಾತನಾಡುತ್ತಿರುತ್ತಾಳೆ. ಸತ್ಯದ ಬಗ್ಗೆ ವಿಂಡ್ ಬೆಲ್ ಜೊತೆಗೆ ಮಾತನಾಡುತ್ತಿರುತ್ತಾಳೆ. ಅನುಗೆ ಆರ್ಯನ ಡೆತ್ ಸರ್ಟಿಫಿಕೆಟ್ ಸಿಗದ ಕಾರಣ ಅವಳು ಯೋಚನೆ ಈಗ ಬೇರೆ ಕಡೆ ಹರಿದಿದೆ. ವೈದ್ಯರೆಲ್ಲಾ ಸೇರಿ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬುದನ್ನು ನಂಬಿದ್ದಾಳೆ. ಹೀಗಾಗಿ ವೀಂಡ್ ಬೆಲ್ ಜೊತೆಗೆ ಮಾತನಾಡುತ್ತಿರುತ್ತಾಳೆ. ಇದೇ ವೇಳಗೆ ಸಂಜುಗೆ ಎಚ್ಚರವಾಗಿ ಅನು ರೂಮಿನ ಬಾಗಿಲನ್ನು ತಟ್ಟುತ್ತಾನೆ. ಆದರೆ ಆರಾಧನಾ ಬಂದು ಕರೆದುಕೊಂಡು ಹೋಗುತ್ತಾಳೆ. ಬೆಳಗ್ಗೆ ಎದ್ದ ಮೇಲೆ ಅನುಳನ್ನು ವಿಚಾರಿಸುತ್ತಾನೆ. ಆದರೆ ಅನು ಸಂಜು ಜೊತೆಗೆ ಖಡಕ್ ಆಗಿ ಮಾತನಾಡುತ್ತಾಳೆ. ಆಫೀಸಿಗೆ ಹೋಗದೇ ಆಸ್ಪತ್ರೆಗೆ ಹೋಗಲು ತಿಳಿಸುತ್ತಾಳೆ.

  ಸಂಜು ಮಾತಿನಿಂದ ಶಾರದಾಳಿಗೆ ಸತ್ಯ ಗೊತ್ತಾಗುತ್ತಾ..?

  ಸಂಜು ಮಾತಿನಿಂದ ಶಾರದಾಳಿಗೆ ಸತ್ಯ ಗೊತ್ತಾಗುತ್ತಾ..?

  ಇನ್ನು ಸಂಜು ಶಾರದಾ ದೇವಿ ಬಳಿ ತನಗಾಗುತ್ತಿರುವ ಗೊಂದಲಗಳನ್ನು ಹೇಳಿಕೊಳ್ಳುತ್ತಾನೆ. ಆರಾಧನಾ ಯಾವತ್ತೂ ನನ್ನ ಹೆಂಡತಿ ಅಂತ ಅನಿಸಿಲ್ಲ. ಅಲ್ಲದೇ, ಅದೊಂದು ಸೇತುವೆ ಬಳಿ ನನಗೇನೋ ಒಂದು ರೀತಿ ಕೆಟ್ಟ ಕನಸು ಬಿದ್ದಂತೆ ಆಯ್ತು ಎನ್ನುತ್ತಾನೆ. ಅದಕ್ಕೆ ಶಾರದಾ ಅದು ನೀನು ಆತ್ಮಹತ್ಯೆಗೆ ಯತ್ನಿಸಿದ ಜಾಗ ಎನ್ನುತ್ತಾಳೆ. ಆದರೆ ಸಂಜು ಇಲ್ಲ ನನಗೆ ಅಲ್ಲಿ ಅಪಘಾತವಾದಂತೆ ಅನಿಸುತು ಎಂದು ಹೇಳುತ್ತಾನೆ. ಶಾರದಾ ವೈದ್ಯರ ಬಳಿ ಹೋಗುವಂತೆ ಸಲಹೆ ಕೊಡುತ್ತಾಳೆ.

  ಆರ್ಯನಿಗಾಗಿ ಚಡಪಡಿಸುತ್ತಿರುವ ಝೇಂಡೇ

  ಆರ್ಯನಿಗಾಗಿ ಚಡಪಡಿಸುತ್ತಿರುವ ಝೇಂಡೇ

  ಇತ್ತ ಆಫಿಸಿಗೆ ಝೇಂಡೇ ಬರುತ್ತಾನೆ. ಝೇಂಡೇ ಬಂದಿದ್ದನ್ನು ನೋಡಿದ ಮೀರಾ ಸ್ವಾಗತಿಸುತ್ತಾಳೆ. ನಂತರ ಝೇಂಡೇ ಆರ್ಯ ಇನ್ನೂ ಆಫಿಸಿಗೆ ಬರಲಿಲ್ಲವಲ್ಲ ಎಂದು ಚಡಪಡಿಸುತ್ತಿರುತ್ತಾನೆ. ತಾಳ್ಮೆಯಿಂದ ಕಾಯಲಾಗದ ಝೇಂಡೇ ಮೀರಾ ಚೇಂಬರ್ ಗೆ ಹೋಗಿ ಆರ್ಯ ಎಷ್ಟೊತ್ತಿಗೆ ಬರುತ್ತಾನೆ ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿದ ಮೀರಾ ಶಾಕ್ ಆಗುತ್ತಾಳೆ. ಝೇಂಡೇ ಮೀರಾಗೆ ಸಂಜುನೇ ಆರ್ಯ ಎಂಬ ಸತ್ಯವನ್ನು ಹೇಳಿಬಿಡುತ್ತಾನಾ?

  English summary
  Anu doubts on arya death. She may reveal the truth. Jhende enters office and talks to meera.
  Monday, December 12, 2022, 20:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X