Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಆರಾಧನಾಳನ್ನು ಮದುವೆಯಾಗುವಂತೆ ಆರ್ಯನಿಗೆ ಒತ್ತಾಯ ಮಾಡಿದ ಅನು
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿಗೆ ಮನೆಯಲ್ಲಿ ನಡೆಯುತ್ತಿರುವುದೆಲ್ಲಾ ಗೊಂದಲ ಸೃಷ್ಟಿಸುತ್ತದೆ. ಆದರೆ ಹರ್ಷ ಕೂಲ್ ಆಗಿರುವುದನ್ನು ಕಂಡು ಆಶ್ಚರ್ಯವಾಗುತ್ತದೆ. ಮಾನ್ಸಿ, ಹರ್ಷನನ್ನು ನಿನಗೇನು ಅನ್ನಿಸುತ್ತಿಲ್ವಾ..? ಆರಾಮಾಗಿದ್ಯಲ್ಲ ಎಂದು ಪ್ರಶ್ನಿಸುತ್ತಾಳೆ.
ಅದಕ್ಕೆ ಹರ್ಷ ನನಗೆ ಸಂಜುನೇ ದಾದ ಅಂತ ಗೊತ್ತಾದ ಮೇಲೆ ನನಗೆ ಹಿಂಸೆ ಆಗುತ್ತಿದೆ. ಈಗ ಅವರನ್ನ ನಾನು ದಾದಾ ಆಗಿ ಮೊದಲಿನಂತೆ ವೆಲ್ಕಂ ಮಾಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುತ್ತಾನೆ.
Paaru:
ಆದಿ
ಮೇಲೆ
ಕುಪಿತಗೊಂಡ
ಅಖಿಲಾಂಡೇಶ್ವರಿ
ಇನ್ನು ಝೇಂಡೇ ಹೇಗೆ ವಿಲನ್ ಆಗಿದ್ದಾನೋ ಹಾಗೆಯೇ ದಾದ ಕೂಡ ವಿಲನ್ ಎಂಬುದೇ ಸತ್ಯ. ನಾನು ಈಗ ಅಪ್ಪ ಹಾಗೂ ಅಕ್ಕನ ಸಾವು ನನಗೆ ನೆನಪಿದೆ. ಈ ಸೇಡನ್ನು ತೀರಿಸಿಕೊಳ್ಳುತ್ತೀನಿ ಎಂದು ಹೇಳುತ್ತಾನೆ.

ಮಾಯವಾದ ಅನು
ಆರ್ಯ ಮತ್ತು ಅನುಗೆ ಆರತಿ ಮಾಡಿ ಮೀರಾ ಆಫೀಸಿಗೆ ಕರೆಸಿಕೊಳ್ಳುತ್ತಾಳೆ. ಇದು ಅನುಗೆ ಮುಜುಗರವುಂಟು ಮಾಡುತ್ತದೆ. ಇನ್ನು ಕೇಕ್ ಕಟ್ ಮಾಡಲೂ ವ್ಯವಸ್ಥೆ ಮಾಡಿರುತ್ತಾರೆ. ಆರ್ಯ ಖುಷಿಯಾಗಿ, ಎಲ್ಲಾ ಅರೇಂಜ್‌ಮೆಂಟ್ಸ್ ನೋಡಿ ಧನ್ಯವಾದ ಹೇಳುತ್ತಾನೆ. ಅಲ್ಲದೇ, ಕೇಕ್ ಕಟ್ ಮಾಡಲು ಮುಂದಾಗುತ್ತಾನೆ. ಆಗ ಅನು ಅಲ್ಲಿಂದ ಮಾಯವಾಗುತ್ತಾಳೆ. ಕೇಕ್ ತಿನ್ನಿಸಲು ಆರ್ಯ, ಅನುಳನ್ನು ನೋಡುತ್ತಾನೆ ಕಾಣುವುದಿಲ್ಲ. ಬಳಿಕ ಅನುಳನ್ನು ಹುಡುಕಿಕೊಂಡು ಹೋಗುತ್ತಾನೆ.

ಅಳಿಯನ ಬಗ್ಗೆ ವಠಾರದಲ್ಲೆಲ್ಲಾ ಚರ್ಚೆ
ಅಳಿಯ ಬದುಕಿದ್ದಾನೆ ಎಂಬ ಸತ್ಯವನ್ನು ತಿಳಿದ ಪುಷ್ಪಾ ಮತ್ತು ಸುಬ್ಬು ಖುಷಿಯಾಗಿರುತ್ತಾರೆ. ವಠಾರದಲ್ಲಿ ಸಂಕ್ರಾಂತಿ ಹಬ್ಬಕ್ಕೆ ತಯಾರಿ ನಡೆಯುತ್ತಿರುತ್ತದೆ. ಇದೇ ವೇಳೆಗೆ ವಠಾರದಲ್ಲಿ ಎಲ್ಲರೂ ಅನು ಗಂಡ ಆರ್ಯ ಬದುಕಿದ್ದಾನೆ ಎಂದು ಖುಷಿಯಲ್ಲಿ ಮಾತನಾಡುತ್ತಿರುತ್ತಾರೆ. ಆಗ ಪುಷ್ಪಾ ಎಲ್ಲರಿಗೂ ಹಬ್ಬಕ್ಕೆ ಮನೆಗೆ ಬರಲು ಆಹ್ವಾನಿಸುತ್ತಾಳೆ. ಇದೇ ವೇಳೆಗೆ ರಜಿನಿ ಬಂದಿದ್ದಕ್ಕೆ, ಪುಷ್ಪಾ ವ್ಯಂಗ್ಯವಾಗಿ ಮಾತನಾಡುತ್ತಾಳೆ. ಆಗ ಸುಬ್ಬು ಪುಷ್ಪಾಳನ್ನು ತಡೆಯುತ್ತಾನೆ.

ಆರ್ಯನಿಗೆ ಅನು ಕಂಡೀಷನ್
ಕ್ಯಾಬಿನ್‌ಗೆ ಬಂದ ಅನು, ಆರಾಧನಾಗೆ ಮೋಸವಾಗುತ್ತೆ. ಇವರು ಆರ್ಯನಂತೆ ನಡೆದುಕೊಂಡರೂ, ನಾನು ಆರಾಧನಾಗೆ ಕೊಟ್ಟ ಮಾತನ್ನು ತಪ್ಪಿದಂತಾಗುತ್ತೆ ಎಂದು ಒದ್ದಾಡುತ್ತಿರುತ್ತಾಳೆ. ಅದೇ ಸಮಯಕ್ಕೆ ಅಲ್ಲಿಗೆ ಆರ್ಯ ಬರುತ್ತಾನೆ. ಆಗ ಮತ್ತೆ ವಾಗ್ವಾದ ನಡೆಯುತ್ತದೆ. ನೀನು ನನ್ನನ್ನ ಆರ್ಯ ಎಂದು ಒಪ್ಪಿಕೊಳ್ಳಲು ನಾನು ಏನು ಮಾಡಬೇಕು ಹೇಳು ಎಂದು ಆರ್ಯ ಕೇಳುತ್ತಾನೆ. ಅದಕ್ಕೆ ಅನು, ನೀನು ಆರಾಧನಾಳನ್ನು ಮದುವೆಯಾಗಬೇಕು ಎಂದು ಹೇಳುತ್ತಾಳೆ. ಈ ಮಾತಿನಿಂದ ಶಾಕ್ ಆಗುವ ಆರ್ಯ, ಅನುಗೆ ಪ್ರಶ್ನೆ ಮಾಡುತ್ತಾನೆ. ಇದೆಲ್ಲಾ ಸರಿಯಿಲ್ಲ ಎಂದು ಹೇಳುತ್ತಾನೆ. ಆದರೂ ಅನು ಕೇಳುವುದಿಲ್ಲ. ನಾನು ಬದುಕಿರುವುದೇ ಈ ಮಗುಗಾಗಿ ಎಂದು ನೊಂದುಕೊಂಡು ಮಾತನಾಡುತ್ತಾಳೆ.

ಆಫೀಸಿನಲ್ಲಿ ಕೂಗಾಡಿದ ಹರ್ಷ
ಆಫೀಸಿನಲ್ಲಿ ಕೆಲಸಗಾರರೆಲ್ಲಾ ಕೇಕ್ ತಿನ್ನುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಜೋರಾಗಿ ಮ್ಯೂಸಿಕ್ ಹಾಕಿರುತ್ತಾರೆ. ಈ ವೇಳೆಗೆ ಹರ್ಷ ಬಂದು ಬೈಯುತ್ತಾನೆ. ಕೆಲಸ ಮಾಡುವ ಹೊತ್ತಿನಲ್ಲಿ ಇದೆಲ್ಲಾ ಏನು. ಎಲ್ಲರೂ ನಿಮ್ಮ ನಿಮ್ಮ ಕೆಲಸ ನೋಡಿ ಎಂದು ಬೈಯುತ್ತಾನೆ. ಹರ್ಷವರ್ಧನ್ ಈಗ ಆರ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಯಾವ ರೀತಿಯಲ್ಲಿ ಆರ್ಯನ ಮೇಲೆ ದ್ವೇಷ ಸಾಧಿಸುತ್ತಾನೆ ಎಂಬುದೇ ಧಾರಾವಾಹಿಯ ಮುಂದಿನ ಕಥೆಯಾಗಿದೆ. ಇದು ವೀಕ್ಷಕರಲ್ಲೂ ಕುತೂಹಲ ಮೂಡಿಸಿದೆ. ಇನ್ನು ಆರ್ಯ ಅನು ಮಾತಿಗೆ ತಲೆ ಬಾಗಿ ಆರಾಧನಾಳನ್ನು ಮದುವೆಯಾಗುತ್ತಾನಾ ಕಾದು ನೋಡಬೇಕಿದೆ.