Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಆರಾಧನಾಗೆ ಸತ್ಯ ಅರ್ಥ ಮಾಡಿಸಿದ ಪ್ರಿಯದರ್ಶಿನಿ: ಮುಂದೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನನ್ನನ್ನ ಇಡೀ ಜಗತ್ತೇ ಆರ್ಯ ಎಂದು ಒಪ್ಪಿಕೊಂಡಿದೆ. ಇನ್ನು ನೀವ್ಯಾಕೆ ಒಪ್ಪುತ್ತಿಲ್ಲ ಎಂದು ಆರ್ಯ, ಅನುಳನ್ನು ಪ್ರಶ್ನೆ ಮಾಡುತ್ತಾನೆ. ನಿಮ್ಮನ್ನು ಜಗತ್ತು ಆರ್ಯ ಎಂದು ಒಪ್ಪಲು ಕಾರಣ ಅಮ್ಮ ಎಂದು ಅನು ಹೇಳುತ್ತಾಳೆ.
ಶಾರದಮ್ಮ ನಿಮ್ಮನ್ನ ಆರ್ಯವರ್ಧನ್ ಅಂತ ಪರಿಚಯ ಮಾಡಿಕೊಡದೇ ಇದ್ದಿದ್ದರೆ ನೀವೇನ್ ಮಾಡುತ್ತಿದ್ದಿರಿ. ನಿಮ್ಮನ್ನ ನೀವು ಯಾರೆಂದು ಗುರುತಿಸಿಕೊಳ್ಳುತ್ತಿದ್ದಿರಿ ಹೇಳಿ ಎಂದು ಅನು ಕೇಳುತ್ತಾಳೆ.
Sathya
serial:
ಬಾಲನ
ನಿಜ
ರೂಪ
ಗಿರಿಜಮ್ಮನಿಗೆ
ತಿಳಿಯಿತೇ?
ಅಷ್ಟೇ ಅಲ್ಲದೇ, ಸತ್ತಿರುವ ಮತ್ಯಾರ ಹೆಸರನ್ನೇ ಹೇಳಿದ್ದರೂ ಕೂಡ ಎಲ್ಲರೂ ಒಪ್ಪುತ್ತಿದ್ದರು. ಅದು ಅಮ್ಮನ ಮಾತಿಗೆ ಇರುವ ಮರ್ಯಾದೆ ಎಂದು ಹೇಳುತ್ತಾಳೆ. ಅದಕ್ಕೆ ಆರ್ಯ ಆದರೆ, ನೀವೇ ನಂಬುತ್ತಿಲ್ಲ ಅಲ್ವಾ. ಅವರು ಹೇಳಿದ್ದೆಲ್ಲಾ ಸುಳ್ಳು ಅನ್ನೋ ಹಾಗೆ ನಡೆದುಕೊಳ್ಳುತ್ತಿದ್ದೀರಲ್ಲ ಎಂದು ಕೇಳುತ್ತಾನೆ.

ಮಾತಿನಿಂದಲೇ ಚುಚ್ಚಿದ ಹರ್ಷ
ಅಷ್ಟರಲ್ಲಿ ಅಲ್ಲಿಗೆ ಹರ್ಷವರ್ಧನ್ ಬರುತ್ತಾನೆ. ಅಮ್ಮ ಹೇಳಿದ್ದು ಸುಳ್ಳು. ಝೇಂಡೇ ಇಂದ ಈ ಆಫೀಸ್ ಅನ್ನು ಉಳಿಸಿಕೊಳ್ಳುವುದಕ್ಕಾಗಿ ಅಮ್ಮ ಸುಳ್ಳು ಹೇಳಿದ್ದಾರೆ. ನೀವು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾನೆ. ನಿಮ್ಮ ಪಾಡಿಗೆ ನೀವು ಹೋಗಿ ಎಂದು ಹರ್ಷ ಹೇಳುತ್ತಾನೆ. ಆಗ ಆರ್ಯ ಅನುಳನ್ನು ನೀವು ಇದನ್ನು ನಂಬುತ್ತೀರಾ ಎಂದಿದ್ದಕ್ಕೆ ಅನು ನಾನು ಹೇಳುವುದನ್ನೆಲ್ಲಾ ಹೇಳಿದ್ದಾಗಿದೆ ಎಂದು ಹೇಳಿ ಹೊರಡುತ್ತಾಳೆ. ಆಗ ಹರ್ಷ ಮೋಸದಿಂದ ಪಡೆದದ್ದು ಯಾವುದೂ ಸಿಗುವುದಿಲ್ಲ. ಇದಕ್ಕೋಸ್ಕರ ನೀವು ಮಾಡಿದ ಕೊಲೆಗಳು, ಅನ್ಯಾಯ ಎಂದು ಮಾತನಾಡುವಾಗ ಆರ್ಯನಿಗೆ ಏನು ಅರ್ಥವಾಗುವುದಿಲ್ಲ. ಅದಕ್ಕೆ ಹರ್ಷ, ನಿಮಗೆ ಯಾವುದೂ ನೆನಪಿಲ್ಲ ಅಲ್ವಾ, ಒಳ್ಳೆಯದು ಬಿಡಿ ಎಂದು ವ್ಯಂಗ್ಯವಾಗಿ ಮಾತನಾಡಿ ಹೋಗುತ್ತಾನೆ.

ಅನು ಮಾತಿನಿಂದ ಮೀರಾ ಬೇಸರ
ಆರ್ಯನಿಗೆ ಅನು ನಡೆದುಕೊಳ್ಳುವ ರೀತಿಗೆ ಬೇಸರ ಮಾಡಿಕೊಳ್ಳುತ್ತಾನೆ. ಹರ್ಷ ಮಾತನಾಡಿದ್ದನ್ನು ನೆನಪಿಸಿಕೊಂಡು, ತಾನೇನು ತಪ್ಪು ಮಾಡಿದ್ದೀನಿ ಎಂದು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಒಬ್ಬನೇ ದೂರ ಹೋಗುವ ಬಗ್ಗೆ ಆಲೋಚಿಸುತ್ತಿರುತ್ತಾನೆ. ಈ ವೇಳೆಗೆ ಮೀರಾ ಬರುತ್ತಾಳೆ. ಮನದಲ್ಲೇ ಆರ್ಯ ಬಂದಿರುವುದು ತನಗೆ ಖುಷಿಯಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಾಳೆ. ನಂತ ಆರ್ಯನ ಜೊತೆಗೆ ಮಾತನಾಡುತ್ತಾಳೆ. ಆಗ ಅನು ನಡವಳಿಕೆ ಬಗ್ಗೆ ಮಾತನಾಡುತ್ತಾನೆ. ಇದನ್ನು ಕೇಳಿ ಮೀರಾಗೆ ಬೇಸರವಾಗುತ್ತದೆ. ಮೀರಾ ಅನುಳನ್ನು ಪ್ರಶ್ನಿಸುತ್ತಾಳೆ. ಆದರೆ, ಅನು ನಡವಳಿಕೆಯಿಂದ ಬೇಸರ ಮಾಡಿಕೊಂಡು ಹೋಗುತ್ತಾಳೆ.

ಆತಂಕದಲ್ಲಿರುವ ಪ್ರಿಯದರ್ಶಿನಿ
ಇತ್ತ ಆರಾಧನಾ ಅತ್ತೆಯ ಮನೆಗೆ ಒಬ್ಬಳೆ ಬರುತ್ತಾಳೆ. ರೂಮಿನಲ್ಲಿ ಒಬ್ಬಳೇ ಮಲಗಿರುತ್ತಾಳೆ. ಪ್ರಿಯದರ್ಶಿನಿ, ಆರಾಧನಾ ಜೊತೆ ಮಾತನಾಡುವ ಬಗ್ಗೆ ಯೋಚಿಸುತ್ತಿರುತ್ತಾಳೆ. ಈ ಬಗ್ಗೆ ಪ್ರಭು ದೇಸಾಯಿ ಜೊತೆಗೆ ಮಾತನಾಡುತ್ತಾಳೆ. ಪ್ರಭು ದೇಸಾಯಿ ಪ್ರಿಯದರ್ಶಿನಿಗೆ ಸಮಾಧಾನ ಮಾಡುತ್ತಾನೆ. ನಂತರ ಪ್ರಿಯದರ್ಶಿನಿ ಮಗನ ಫೋಟೋಗೆ ಹೂವಿನ ಹಾರವನ್ನು ಹಾಕುತ್ತಾಳೆ. ಇತ್ತ ಆರಾಧನಾ ಇದನ್ನು ನೋಡಿ ಬಿಡುತ್ತಾಳೆ.

ಸತ್ಯ ತಿಳಿದ ಆರಾಧನಾ
ಆರಾಧನಾ ಅತ್ತೆ ಮಾವನನ್ನು ಪ್ರಶ್ನಿಸುತ್ತಾಳೆ. ವಿಶು ಬದುಕಿದ್ದಾನೆ. ನೀವ್ಯಾಕೆ ಹಾರ ಹಾಕುತ್ತಿದ್ದೀರಾ. ವಿಶುಗೆ ಹಳೆಯದೆಲ್ಲಾ ನೆನಪಿಲ್ಲ ಅಷ್ಟೇ ಎಂದು ಹೇಳುತ್ತಾಳೆ. ಪ್ರಿಯದರ್ಶಿನಿ, ಅವನು ಆರ್ಯನ ಗಂಡ, ನಮ್ಮ ವಿಶ್ವಾಸ್ ಅಲ್ಲ ಎಂದು ಹೇಳುತ್ತಾಳೆ. ಆಗ ಆರಾಧನಾ ಇದೆಲ್ಲಾ ಕಟ್ಟು ಕಥೆ ಎಂದು ಹೇಳುತ್ತಾಳೆ. ಪ್ರಿಯದರ್ಶಿನಿ ಅದೆಲ್ಲಾ ಸತ್ಯ ಎಂದು ನಡೆದ ಘಟನೆಯನ್ನು ವಿವರಿಸುತ್ತಾಳೆ. ಆಗ ಆರಾಧನಾಳಿಗೆ ಶಾಕ್ ಆಗುತ್ತದೆ. ಅನು ಹಠ ಸಾಧಿಸಿ, ಆರಾಧನಾಗೂ ಆರ್ಯನಿಗೂ ಮದುವೆ ಮಾಡಿಸುತ್ತಾಳಾ..? ಇಲ್ಲ ಇಲ್ಲಿಗೆ ಆರಾಧನಾ ಕಥೆ ಮುಗಿಯುತ್ತಾ..?