For Quick Alerts
  ALLOW NOTIFICATIONS  
  For Daily Alerts

  ಅನುಗೆ ಜೋಗ್ತವ್ವ ಹೇಳಿದ ಮಾತು ಅರ್ಥವಾಯ್ತಾ..? ಸಂಜು ಬಳಿ ಅನು ಹೇಳಿದ್ದೇನು..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ ಮತ್ತು ಸಂಜು ಇಬ್ಬರು ಆಸ್ಪತ್ರೆಗೆ ಹೊರಟ ನಂತರ ಮಾನ್ಸಿ, ಶಾರದಾ ದೇವಿ ಬಳಿ ಮಾತನಾಡುತ್ತಾಳೆ. ಆರಾಧನಾ ಮತ್ತು ಸಂಜು ತುಂಬಾ ಚೆನ್ನಾಗಿದ್ದ ಜೋಡಿ. ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ.

  ಆದರೆ ಈಗ ಇಬ್ಬರಿಗೂ ಏನಾಗಿದೆ. ಯಾಕೆ ಇಬ್ಬರೂ ಒಂದಾಗುತ್ತಿಲ್ಲ. ಹೊಂದಾಣಿಕೆ ಮಾಡಿಕೊಳ್ಳಲು ಯಾಕಿಷ್ಟು ಒದ್ದಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾಳೆ. ಅಲ್ಲದೇ, ಆರಾಧನಾ ಮತ್ತು ವಿಶ್ವಾಸ್ ದೇಸಾಯಿ ಅವರ ಫೋಟೋಗಳನ್ನು ಕೂಡ ತೋರಿಸುತ್ತಾಳೆ.

  BBK9: ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ & ದೀಪಿಕಾ ದಾಸ್ ರೊಮ್ಯಾಂಟಿಕ್ ಡ್ರಾಮಾ!BBK9: ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ & ದೀಪಿಕಾ ದಾಸ್ ರೊಮ್ಯಾಂಟಿಕ್ ಡ್ರಾಮಾ!

  ಫೋಟೋಗಳನ್ನು ನೋಡಿದ ಶಾರದಾ, ಇವೆಲ್ಲಾ ನಿನಗೆ ಹೇಗೆ ಸಿಕ್ಕಿತು ಎಂದು ಕೇಳುತ್ತಾಳೆ. ಆಗ ಮಾನ್ಸಿ, ಸಂಜು ಫೋನ್‌ನಿಂದ ಕದ್ದು ತೆಗೆದುಕೊಂಡೆ ಎನ್ನುತ್ತಾಳೆ. ಅದಕ್ಕೆ ಶಾರದಾ ಮಾನ್ಸಿಗೆ ಬೈದರೂ, ಮಾನ್ಸಿ ಹೇಳಿದ ಮಾತುಗಳು ಸತ್ಯ ಅಲ್ವಾ ಎಂದು ಯೋಚಿಸಲು ಪ್ರಾರಂಭಿಸುತ್ತಾಳೆ.

  ಅನುಗೆ ಶುರುವಾಯ್ತು ಅನುಮಾನ

  ಅನುಗೆ ಶುರುವಾಯ್ತು ಅನುಮಾನ

  ಅನು ದೇವಸ್ಥಾನಕ್ಕೆ ಬಂದಿರುತ್ತಾಳೆ. ಆಗ ಅಲ್ಲಿಗೆ ಬರುವ ಜೋಗ್ತವ್ವ ಅನುಗೆ ಶಾಕಿಂಗ್ ವಿಚಾರವನ್ನು ಹೇಳುತ್ತಾಳೆ. ನಿನ್ನ ಸುತ್ತಾಮುತ್ತ ತಿರುಗಾಡುತ್ತಿರುವ ನಿನ್ನ ಗಂಡನನ್ನು ಉಳಿಸಿಕೋ. ಇಲ್ಲದಿದ್ದರೆ, ನಿನ್ನ ಕೈಗೇ ಸಿಗದಷ್ಟು ದೂರ ಹೋಗುತ್ತಾನೆ. ಈಗಾಗಲೇ ತಡ ಮಾಡಿದ್ದೀಯಾ. ಇನ್ನೂ ತಡ ಮಾಡಿದರೆ, ಕೈಲ್ಲಿರುವ ಬೆಣ್ಣೆ ಕರಗಿ ಹೋಗುತ್ತೆ ಎಂದು ಹೇಳುತ್ತಾಳೆ. ಜೋಗ್ತವ್ವ ಮಾತನ್ನು ಕೇಳಿದ ಅನು ಶಾಕ್ ಆಗುತ್ತಾಳೆ. ಅಲ್ಲದೇ, ಈಗಾಗಲೇ ತನ್ನ ಮನದಲ್ಲಿದ್ದ ಕೆಲ ಅನುಮಾನಗಳಿಗೆ ಜೋಗ್ತವ್ವನ ಮಾತು ಪುಷ್ಠಿ ನೀಡಿದಂತಾಗುತ್ತದೆ. ಹಾಗಾಗಿ ಅನು ತಲೆಯಲ್ಲಿ ಈಗ ಹೊಸ ಹುಳ ಹೊಕ್ಕಿರುತ್ತದೆ.

  ಸಂಜು ಸಹಾಯ ಕೇಳಲು ಮುಂದಾದ ಅನು

  ಸಂಜು ಸಹಾಯ ಕೇಳಲು ಮುಂದಾದ ಅನು

  ಆಫೀಸಿಗೆ ಹೋಗದೇ ಅನು ವಠಾರಕ್ಕೆ ಬರುತ್ತಾಳೆ. ಅಲ್ಲಿ ರಮ್ಯಾ ಜೊತೆಗೆ ಮಾತನಾಡುತ್ತಾಳೆ. ತನ್ನ ಗೊಂದಲಗಳನ್ನು ಹೇಳಿಕೊಳ್ಳುತ್ತಾಳೆ. ಆರ್ಯ ಸರ್ ದೇಹವನ್ನು ನೋಡೇ ಇಲ್ಲ.ಹಾಗಾಗಿ ನನಗೆ ಆರ್ಯ ಸರ್ ಸಾವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈಗ ಜೋಗ್ತವ್ವ ಕೂಡ ನಿನ್ನ ಗಂಡ ಬದುಕಿದ್ದಾನೆ ಎಂದು ಹೇಳುತ್ತಿದ್ದಾರೆ. ಇದು ನನ್ನ ಮನಸ್ಸಿನ ಮಾತು ಕೂಡ ಹೌದು. ನಾನು ಈಗ ನನ್ನ ಸುತ್ತಾಮುತ್ತ ಸುತ್ತಾಡುತ್ತಿರುವ ಆರ್ಯ ಸರ್‌ನ ಗುರುತಿಸಬೇಕು ಇಲ್ಲದಿದ್ದರೆ ನಾನು ಅವರನ್ನ ಜೀವನಪೂರ್ತಿ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ರಮ್ಯಾ ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ರಮ್ಯಾ, ಅನುಗೆ ಸಪೋರ್ಟ್ ಮಾಡುತ್ತಾಳೆ. ಆದರೆ ಹೇಗೆ ಏನು ಎಂದು ಕೇಳಿದಾಗ ಅನು ನಾನು ಸಂಜು ಸಹಾಯವನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.

  ಸಮಾಧಾನ ಮಾಡಿದ ಅನು, ಸಂಜು

  ಸಮಾಧಾನ ಮಾಡಿದ ಅನು, ಸಂಜು

  ಈ ನಡುವೆ ಆಸ್ಪತ್ರೆಗೆ ಬಂದ ಆರಾಧನಾ ಮತ್ತು ಸಂಜುಗೆ ವೈದ್ಯರು ಶಾಕ್ ಕೊಡುತ್ತಾರೆ. ಸಂಜುಗೆ ನಾನು ಇನ್ಮುಂದೆ ಟ್ರೀಟ್ಮೆಂಟ್ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಆರಾಧನಾ ಯಾಕೆ ಟ್ರೀಟ್ಮೆಂಟ್ ಕೊಡುವುದಕ್ಕೆ ಆಗುವುದಿಲ್ಲ. ನೀವಲ್ಲದೇ ಇನ್ಯಾರು ಟ್ರೀಟ್ಮೆಂಟ್ ಕೊಡಬೇಕು ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ವೈದ್ಯರು ಸಂಜು ಯಾವತ್ತೂ ಟ್ರೀಟ್ಮೆಂಟ್ ತೆಗೆದುಕೊಳ್ಳುವುದಕ್ಕೆ ಸರಿಯಾಗಿ ಬಂದಿಲ್ಲ. ಟ್ರೀಟ್ಮೆಂಟ್ ಶುರುವಾದ ರೀತಿಯೇ ಸರಿ ಇಲ್ಲ. ಕೆಲ ವಿಚಾರಗಳನ್ನು ಮುಚ್ಚಿಡಬೇಕಾಗುತ್ತದೆ. ನಿಮ್ಮ ಬಳಿ ಎಲ್ಲಾ ಸತ್ಯವನ್ನು ನಾನು ಹೇಳುವುದಕ್ಕೆ ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಾನು ಸಂಜುಗೆ ಇನ್ಮುಂದೆ ಟ್ರೀಟ್ಮೆಂಟ್ ಅನ್ನು ಮುಂದುವರಿಸುವುದಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿಬಿಡುತ್ತಾರೆ. ಆರಾಧನಾ ತಕ್ಷಣ ಅನುಳನ್ನು ಭೇಟಿ ಮಾಡುತ್ತಾರೆ. ಆಗ ಅನು, ಆರಾಧನಾಗೆ ಧೈರ್ಯ ತುಂಬುತ್ತಾಳೆ. ವೈದ್ಯರ ಬಳಿ ನಾನು ಮಾತನಾಡುತ್ತೀನಿ ಎನ್ನುತ್ತಾಳೆ. ಬಳಿಕ ಸಂಜು ಬಳಿ ನಿಮ್ಮಿಂದ ನನಗೆ ಸಹಾಯವಾಗಬೇಕಿದೆ. ದಯವಿಟ್ಟು ಹೆಲ್ಪ್ ಮಾಡಿ ಎಂದು ಕೇಳಿಕೊಳ್ಳುತ್ತಾಳೆ.

  ಆರ್ಯನ ಬಗ್ಗೆ ಝೇಂಡೇ ಹೇಳಿದ್ದೇನು..?

  ಆರ್ಯನ ಬಗ್ಗೆ ಝೇಂಡೇ ಹೇಳಿದ್ದೇನು..?

  ಇನ್ನು ಮೀರಾ ಮತ್ತು ಝೇಂಡೇ ಮಾತನಾಡುತ್ತಿರುತ್ತಾರೆ. ಮೀರಾಗೆ ಆರ್ಯ ಸರ್‌ನನ್ನು ನೋಡುವ ತವಕ. ಹಾಗಾಗಿ ಆರ್ಯ ಸರ್ ಎಲ್ಲಿದ್ದಾರೆ ಎಂದು ಕೇಳುತ್ತಾಳೆ. ಆಗ ಝೇಂಡೇ, ವರ್ಧನ್ ಮನೆಯವರಿಂದಲೇ ಆರ್ಯನಿಗೆ ಜೀವ ಭಯವಿದೆ. ಹಾಗಾಗಿ ಪೊಲೀಸರು ಸೀಕ್ರೆಟ್ ಆಗಿ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ. ಆರ್ಯ ಸರ್ ಎಲ್ಲಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ಗೊತ್ತಾದ ಕೂಡಲೇ ಹೇಳುತ್ತೀನಿ ಎನ್ನುತ್ತಾನೆ. ಆದರೆ, ಮೀರಾಗೆ ಝೇಂಡೇ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಬದಲಿಗೆ ಅನುಮಾನ ಹೆಚ್ಚಾಗುತ್ತದೆ.

  FB Artcles
  English summary
  jothe jotheyali Serial 14th december Episode Written Update. jogthavva words disturbs anu. Now anu is thinking to find arya with the help of sanju.
  Wednesday, December 14, 2022, 23:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X