ನಾನೇ ಆರ್ಯವರ್ಧನ್ ಎಂದ ಸಂಜುಗೆ ಹರ್ಷ ಮಾಡಿದ್ದು ಸರಿನಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಸಂಜು ಬಳಿ ಸಹಾಯ ಕೇಳುತ್ತಾಳೆ. ನನ್ನ ಪತಿಯ ಸಾವಿಗೂ ನಿಮಗೂ ಏನೋ ಸಂಬಂಧವಿದೆ ಎಂದು ಅನಿಸುತ್ತಿದೆ. ನೀವು ಟ್ರೀಟ್ ಮೆಂಟ್ ತೆಗೆದುಕೊಂಡರೆ ಸತ್ಯ ಗೊತ್ತಾಗುತ್ತೆ ಎಂದು ಹೇಳುತ್ತಾಳೆ.

ಸಂಜು, ಅನು ಮಾತನ್ನು ನಂಬುತ್ತಾನೆ. ಸರಿ ನಾನು ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತೇನೆ. ನಿಮಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಾನೆ. ಆದರೆ, ಇವರಿಬ್ಬರ ಮಾತಿನಿಂದ ಆರಾಧನಾ ಕನ್ಫ್ಯೂಸ್ ಆಗುತ್ತಾಳೆ.

ಅನು ಡಾಕ್ಟರ್ ಬಳಿ ಮಾತನಾಡಲು ಆಸ್ಪತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ವೈದ್ಯರು ಇರುವುದಿಲ್ಲ. ವೈದ್ಯರ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ. ಅನು ಎಷ್ಟೇ ಹೊತ್ತು ಕಾದರೂ ವೈದ್ಯರು ಬರುವುದಿಲ್ಲ.

ಸಂಜುಗೆ ಸತ್ಯ ಗೊತ್ತಾಯ್ತಾ..?

ಸಂಜುಗೆ ಸತ್ಯ ಗೊತ್ತಾಯ್ತಾ..?

ಇತ್ತ ಸಂಜು ವೈದ್ಯರನ್ನು ಕಿಡ್ನ್ಯಾಪ್ ಮಾಡಿರುತ್ತಾನೆ. ಕಿಡ್ನ್ಯಾಪ್ ಮಾಡಿದ್ದಲ್ಲದೇ ಚಾಕು ತೋರಿಸಿ ಹೆದರಿಸುತ್ತಾನೆ. ನನಗೆ ಯಾಕೆ ಟ್ರೀಟ್ ಮೆಂಟ್ ಕೊಡುವುದಿಲ್ಲ. ನಾನು ಯಾರು ಎಂದು ಹೇಳಿ. ನನ್ನ ಹೆಸರು ಸಂಜು ಅಲ್ಲವೇ ಅಲ್ಲ. ನೀವೆಲ್ಲಾ ನನಗೆ ಸುಳ್ಳು ಹೇಳುತ್ತಿದ್ದೀರಾ ಎಂದು ಹೆದರಿಸುತ್ತಾನೆ. ಅಷ್ಟೇ ಅಲ್ಲದೇ, ನನಗೆ ಸಾಯಿಸಲು ಸಾಧ್ಯವಿಲ್ಲ. ಆದರೆ, ಈ ಕೆಲಸವನ್ನು ಈ ಮುಂಚೆ ನಾನು ಮಾಡಿದ್ದೀನಿ ಅನಿಸುತ್ತಿದೆ. ಸತ್ಯ ಹೇಳಿ ಬಚಾವ್ ಆಗಿ ಎನ್ನುತ್ತಾನೆ. ವೈದ್ಯರು ಸಂಜು ನಡವಳಿಕೆಯಿಂದ ಹೆದರಿಕೊಂಡು ಸತ್ಯ ಹೇಳುತ್ತಾರೆ. ಪೊಲೀಸರು ಸತ್ಯವನ್ನು ಮುಚ್ಚಿಡಲು ಹೇಳಿದ್ದಾರೆ. ನೀನೇ ಆರ್ಯವರ್ಧನ್ ಎಂದು ಹೇಳುತ್ತಾನೆ. ಆಗ ಸಂಜು ಖುಷಿಯಿಂದ ಮನೆಗೆ ಹೊರಡುತ್ತಾನೆ.

ವೈದ್ಯರಿಗೆ ಬೆದರಿಕೆ ಹಾಕಿದ ಝೇಂಡೇ!!

ವೈದ್ಯರಿಗೆ ಬೆದರಿಕೆ ಹಾಕಿದ ಝೇಂಡೇ!!

ಅಲ್ಲಿಂದ ವೈದ್ಯರು ತಪ್ಪಿಸಿಕೊಂಡು ಹೋಗುವಾಗ ಝೇಂಡೇ ಕಿಡ್ನ್ಯಾಪ್ ಮಾಡಿ ಬಿಡುತ್ತಾನೆ. ಗನ್ ತೋರಿಸಿ ಹೆದರಿಸುತ್ತಾನೆ. ಸಂಜು ಬಗ್ಗೆ ನನಗೆ ಎಲ್ಲಾ ಸತ್ಯವೂ ಗೊತ್ತಿದೆ. ಆದರೆ ಸಂಜುನೇ ಆರ್ಯ ಎಂಬ ಸತ್ಯವನ್ನು ನೀನು ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು ಎನ್ನುತ್ತಾನೆ. ಆದರೆ ವೈದ್ಯರು ಈಗಾಗಲೇ ಸಂಜುಗೆ ಆತನೇ ಆರ್ಯವರ್ಧನ್ ಎಂದು ಹೇಳಿರುವುದನ್ನು ಹೇಳಿ ಬಿಡುತ್ತಾನೆ. ಇದರಿಂದ ಈಗ ಝೇಂಡೇ ಹೇಗಾದರೂ ಮಾಡಿ ಸಂಜುನನ್ನು ತನ್ನ ಪರ ಸೆಳೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುತ್ತಾನೆ.

ನಾನೇ ಆರ್ಯವರ್ಧನ್ ಎಂದ ಸಂಜು

ನಾನೇ ಆರ್ಯವರ್ಧನ್ ಎಂದ ಸಂಜು

ಮನೆಗೆ ಬರುವ ಸಂಜುನನ್ನು ಆರಾಧನಾ ಮಾತನಾಡಿಸುತ್ತಾಳೆ. ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸುತ್ತಾಳೆ. ಆದರೆ ಸಂಜು ನೋಡಿ ನಿಮ್ಮ ಗಂಡ ನಾನಲ್ಲ. ನಾನು ಆರ್ಯವರ್ಧನ್. ನನಗೆ ಡಾಕ್ಟರ್ ಹೇಳಿದ್ದಾರೆ. ನಾನು ವಿಶ್ವಾಸ್, ಸಂಜು ಇಬ್ಬರೂ ಅಲ್ಲ ಎಂದು ಕೂಗಿ ಕೂಗಿ ಹೇಳುತ್ತಾನೆ. ಮನೆಯಲ್ಲಿ ಎಲ್ಲರೂ ಗೊಂದಲಕ್ಕೊಳಗಾಗಿ ಸಂಜುಗೆ ಬುದ್ಧಿ ಹೇಳುತ್ತಿರುತ್ತಾರೆ. ಇದೇ ವೇಳೆಗೆ ಬರುವ ಅನು, ಸಂಜುಗೆ ಬೈಯುತ್ತಾಳೆ. ಇನ್ನೊಂದು ಸಲ ಹೀಗೆ ಹೇಳಬೇಡಿ ಎಂದು ಹೇಳುತ್ತಾಳೆ.

ಸಂಜು ಮಾತು ಕೇಳಿ ಎಲ್ಲರೂ ಶಾಕ್

ಸಂಜು ಮಾತು ಕೇಳಿ ಎಲ್ಲರೂ ಶಾಕ್

ಎಷ್ಟು ಹೇಳಿದರೂ ಸಂಜು ಮಾತ್ರ ಕೇಳುವುದಿಲ್ಲ. ಅನುಗೆ ಕೋಪ ಬಂದು ಕೂಗಾಡುತ್ತಾಳೆ. ಆದರೂ ಸಂಜು ನಾನೇ ಆರ್ಯವರ್ಧನ್. ಬೇಕಿದ್ದರೆ ಹೋಗಿ ವೈದ್ಯರನ್ನು ವಿಚಾರಿಸಿ ಎಂದು ಹೇಳುತ್ತಾನೆ. ಆಗ ಹರ್ಷ ಸಂಜುಗೆ ನಿದ್ರೆ ಬರುವ ಇಂಜೆಕ್ಷನ್ ಅನ್ನು ಕೊಡುತ್ತಾನೆ. ಆರಾಧನಾಳಿಗೆ ಸಮಾಧಾನ ಮಾಡುತ್ತಾರೆ. ಆದರೆ ಸಂಜುನೇ ಆರ್ಯ ಎಂಬ ಸತ್ಯ ಗೊತ್ತಾಗುವ ಮುನ್ನವೇ ಝೇಂಡೇ ಕಿಡ್ನ್ಯಾಪ್ ಮಾಡುತ್ತಾನಾ ಎಂಬ ಕುತೂಹಲ ಸೃಷ್ಟಿಯಾಗಿದೆ.

More from Filmibeat

English summary
Jothe jotheyali Serial 16th December Episode Written Update. jhende warns doctor about Aryavardhan. Not to tell the truth for anyone else.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X