Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ದಾರಿ ತಪ್ಪುತ್ತಿದ್ದಾಳೆ ಅನು: ಆರ್ಯನನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾಳಾ?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಆರ್ಯನನ್ನು ಆರಾಧನಾಳಿಗೆ ಬಿಟ್ಟು ಕೊಡಲು ಮುಂದಾಗಿದ್ದಾಳೆ. ಆರ್ಯನನ್ನು ಒಪ್ಪುವ ಬದಲು ವಿಶ್ವಾಸ್ ಎಂದು ಮೊಂಡು ವಾದ ಮಾಡುತ್ತಿದ್ದಾಳೆ.
ಆರ್ಯನಿಗೆ ಆರಾಧನಾಳನ್ನು ಮದುವೆಯಾಗು ಎಂದು ಬಲವಂತ ಮಾಡುತ್ತಿದ್ದಾಳೆ. ಆರ್ಯನಿಗೆ ಇದು ಇಷ್ಟವಿಲ್ಲ. ನನಗೆ ಹಳೆಯದೇನೂ ನೆನಪಿಲ್ಲದೇ ಇರಬಹುದು. ಆದರೆ, ನನಗೆ ಏನೂ ನೆನಪಾಗುತ್ತಿಲ್ಲ ಅಷ್ಟೇ. ನಾನು ಆರ್ಯನೇ ಎಂದು ಹೇಳುತ್ತಲೇ ಇದ್ದಾನೆ.
ಸರಿಗಮಪ
ಲಿಟಲ್
ಚಾಂಪ್ಸ್:
ಜನಪದ
ಹಾಡಿನಲ್ಲಿ
ಮಿಂದೆದ್ದ
ಪ್ರೇಕ್ಷಕರು
ಈ ವಿಚಾರ ಮೀರಾಳಿಗೂ ತಿಳಿದು ಅವಳು ಕೂಡ ಅನುಗೆ ಏನಾಗಿದೆ ಎಂದು ಪ್ರಶ್ನೆ ಮಾಡುತ್ತಾಳೆ. ಅನು ಮಾತಿನಿಂದ ಬೇಸರ ಮಾಡಿಕೊಂಡು ಬುದ್ಧಿ ಹೇಳಲು ಮುಂದಾಗುತ್ತಾಳೆ.

ಅನುಗೆ ಬುದ್ಧಿ ಹೇಳಿದ ಮೀರಾ
ಮೀರಾ ಅನು ನಡವಳಿಕೆಯಿಂದ ಬೇಸರಗೊಂಡಿರುತ್ತಾಳೆ. ಹೀಗಾಗಿ ಆರ್ಯನ ಬಗ್ಗೆ ಮಾತನಾಡುತ್ತಾಳೆ. ಅನು ಖಡಾಖಂಡಿತವಾಗಿ ಅವರು ಆರಾಧನಾ ಪತಿ ವಿಶ್ವಾಸ್ ದೇಸಾಯಿ. ನನ್ನ ಆರ್ಯ ಸರ್ ಅಲ್ಲ. ಶಾರದಾ ಅಮ್ಮ ಕಂಪನಿಯನ್ನು ಉಳಿಸಿಕೊಳ್ಳಲು ಸುಳ್ಳು ಹೇಳಿದರು ಎಂದು ಹೇಳುತ್ತಾಳೆ. ಅದಕ್ಕೆ ಮೀರಾ, ಹಾಗಾದರೆ, ಆರಾಧನಾ ಅವರ ಅತ್ತೆ-ಮಾವ ಕೂಡ ಸುಳ್ಳು ಹೇಳಿದ್ರಾ ಎಂದು ಪ್ರಶ್ನೆ ಮಾಡಿ, ತಾಯಿ ಯಾವತ್ತು ಹಾಗೆ ಸುಳ್ಳು ಹೇಳಲ್ಲ ಎನ್ನುತ್ತಾಳೆ. ಆಗ ಅನುಗೆ ಆರಾಧನಾ ಬಗ್ಗೆ ಯೋಚನೆ ಶುರುವಾಗುತ್ತೆ. ಕೂಡಲೇ ಅವಳಿಗೆ ಫೋನ್ ಮಾಡುತ್ತಾಳೆ. ಫೋನ್ ಸ್ವಿಚ್ ಆಫ್ ಆಗಿರುತ್ತೆ. .

ಮನೆ ಬಿಟ್ಟು ಹೊರಟ ಆರಾಧನಾ
ಇತ್ತ ಆರಾಧನಾಳಿಗೆ ಅವಳ ಅತ್ತೆ-ಮಾವನ ಮಾತು ಕೇಳಿ ಸಾಕಾಗಿರುತ್ತೆ. ನಾನು ನಿಮ್ಮ ಮಾತನ್ನು ನಂಬುವುದಿಲ್ಲ. ಎಷ್ಟು ಆರಾಧನಾ ಹೇಳಿದರೂ ಕೇಳುವುದಿಲ್ಲ. ನಿಮ್ಮೆಲ್ಲರ ಮಾತಿನಿಂದ ನಾನು ನನ್ನ ವಿಶು ಒದ್ದಾಡುತ್ತಿದ್ದೇವೆ ಎಂದು ಹೇಳುತ್ತಾಳೆ. ಅದಕ್ಕೆ ಪ್ರಿಯದರ್ಶಿನಿ ಎಲ್ಲಾ ಆಗಿದ್ದು ನನ್ನಿಂದಲೇ, ನಾನು ಮಾಡುದ ತಪ್ಪು ಎನ್ನುತ್ತಾಳೆ. ಏನಾದರೂ ಮಾಡಿಕೊಳ್ಳಿ, ನಾನಿನ್ನು ಇಲ್ಲಿ ಒಂದು ಕ್ಷಣವೂ ಇರುವುದಿಲ್ಲ ಎಂದು ಹೇಳುತ್ತಾಳೆ. ಕಾರ್ ಸ್ಟಾರ್ಟ್ ಮಾಡಿಕೊಂಡು ಹೊರಟು ಬಿಡುತ್ತಾಳೆ.

ಆರ್ಯನನ್ನು ಭೇಟಿಯಾದ ಝೇಂಡೇ
ಇತ್ತ ಅನು ಆರಾಧನಾಳನ್ನು ಭೇಟಿಯಾಗಲು ಹೊರಟಿರುತ್ತಾಳೆ. ಈ ವೇಳೆ ಆರ್ಯ ಬಂದು ಅನುಳನ್ನು ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಅನು ಆರ್ಯನ ಮಾತನ್ನು ಕೇಳಲು ತಯಾರಿರುವುದಿಲ್ಲ. ಅನು ಹೊರಟ ಮೇಲೆ ಝೇಂಡೇ ಬರುತ್ತಾನೆ. ಆರ್ಯನಿಗೆ ಬ್ರೈನ್ ವಾಶ್ ಮಾಡಲು ಯತ್ನಿಸುತ್ತಾನೆ. ಆದರೆ ಆರ್ಯ ಝೇಂಡೇ ಜೊತೆಗೆ ಮಾತನಾಡಲು ಬಯಸಲ್ಲ. ಇತ್ತ ಮೀರಾ ಝೇಂಡೇಗೆ ವಾರ್ನ್ ಮಾಡುತ್ತಾಳೆ. ನೀವು ಹೀಗೆಲ್ಲಾ ಬರುವ ಹಾಗುಲ್ಲ. ಪೊಲೀಸರು ಬರುತ್ತಾರೆ ಎಂದು ಹೇಳುತ್ತಾಳೆ.

ಆರಾಧನಾಳಿಗೆ ಅನು ಸಹಾಯ ಮಾಡುತ್ತಾಳಾ..?
ಅನು ಆರಾಧನಾಳನ್ನು ಭೇಟಿ ಮಾಡಲು ಹೋಗುತ್ತಿರುತ್ತಾಳೆ. ಇದೇ ವೇಳೆಗೆ ಆರ್ಯ ಅನುಳನ್ನು ಫಾಲೋ ಮಾಡುತ್ತಾನೆ. ಅನು ಆರಾಧನಾಳಿಗೆ ಫೋನ್ ಮಾಡುತ್ತಾಳೆ. ವಿಶುನನ್ನು ನನ್ನ ಜೊತೆಗೆ ಕಳಿಸಿಕೊಡಿ. ನಾನು ವಿಶುನನ್ನು ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಅನು ಖಂಡಿತವಾಗಿಯು ಕಳಿಸಿಕೊಡುತ್ತೇನೆ ಎಂದು ಹೇಳುತ್ತಾಳೆ. ಆರ್ಯನನ್ನು ಅನು ಆರಾಧನಾ ಜೊತೆಗೆ ಕಳಿಸಿಕೊಟ್ಟು ಬಿಡುತ್ತಾಳಾ ಎಂದು ವೀಕ್ಷಕರು ಬೇಸರದಲ್ಲಿದ್ದಾರೆ.