Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಆರಾಧನಾ ಜೊತೆಗೆ ಹೋಗಲು ಮುಂದಾದ ಆರ್ಯ: ಮುಂದೇನಾಗಬಹುದು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಆರ್ಯ ತನ್ನನ್ನು ಫಾಲೋ ಮಾಡುತ್ತಿರುವುದನ್ನು ನೋಡಿ ಗಾಡಿ ನಿಲ್ಲಿಸುತ್ತಾಳೆ. ಆರ್ಯನ ಬಳಿ ಬಂದು ಯಾಕೆ ನನ್ನ ಫಾಲೋ ಮಾಡುತ್ತಿದ್ದೀರಾ ಎಂದು ಕೇಳುತ್ತಾಳೆ.
ಅದಕ್ಕೆ ಆರ್ಯ ನೀವಂತೂ ನನಗೆ ಏನೂ ಹೇಳುವುದಿಲ್ಲ. ಅದಕ್ಕೆ ನಿಮ್ಮ ಹಿಂದೆ ಬರುತ್ತೇನೆ ಎಂದು ಹೇಳುತ್ತಾನೆ. ಸರಿ ಈಗ ಆರಾಧನಾ ಅವರನ್ನು ಭೇಟಿ ಮಾಡಬೇಕು. ನೀವು ಅವರ ಜೊತೆಗೆ ಹೋಗಿ ಎಂದು ಮತ್ತೆ ಅನು ಹೇಳುತ್ತಾಳೆ.
Ramachari
Serial:
ಚೇಳು
ತಂದು
ಬಿಟ್ಟ
ಕೋದಂಡ
ಮುಂದೇನು
ಚಾರು
ಗತಿ
ಇತ್ತ ಆರ್ಯನನ್ನು ಯಾರೋ ಫಾಲೋ ಮಾಡಿಕೊಂಡು ಬಂದಿರುತ್ತಾರೆ. ಆಟೋದಲ್ಲಿ ಬಂದ ಆತ, ಆರ್ಯ ಸಡನ್ ಆಗಿ ಗಾಡಿ ನಿಲ್ಲಿಸಿದ್ದಕ್ಕೆ ಜಗಳ ಮಾಡಿಕೊಂಡು ಹೋಗುತ್ತಾನೆ. ಈತನನ್ನು ಝೇಂಡೇ ಕಳಿಸಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ.

ದೇವರನ್ನು ಬೇಡಿದ ಆರ್ಯ
ಅನು ಮತ್ತು ಆರ್ಯ ಇಬ್ಬರೂ ಒಂದೇ ಕಾರಿನಲ್ಲಿ ಆರಾಧನಾಳನ್ನು ಭೇಟಿಯಾಗಲು ಹೊರಟಿರುತ್ತಾರೆ. ಆರ್ಯ ಗಾಡಿ ಓಡಿಸುತ್ತೀನಿ ಎಂದು ಹೇಳಿದರೂ ಕೇಳುವುದಿಲ್ಲ. ಆರ್ಯ ನಿಮಗೇನು ನಾನು ನಿಮ್ಮಿಂದ ದೂರಾದರೆ ಸಾಕಲ್ವಾ. ಸರಿ ಬಿಡಿ ನಾನು ಆರಾಧನಾ ಅವರ ಜೊತೆಗೆ ಹೋಗುತ್ತೇನೆ. ನಾನು ಹೋದಮೇಲೆ ಆದರೂ ಖುಷಿಯಾಗಿರಿ ಎಂದು ಹೇಳುತ್ತಾನೆ. ಆರ್ಯ ಮನದಲ್ಲೇ ದೇವರನ್ನು ಕೇಳಿಕೊಳ್ಳುತ್ತಾನೆ. ಹೇಗಾದರೂ ಮಾಡಿ ಅನು ನನ್ನನ್ನು ಒಪ್ಪುವಂತೆ ಮಾಡು. ನಾನು ಆರಾಧನಾ ಅವರ ಜೊತೆಗೆ ಹೋಗದಂತೆ ತಡಿಯಪ್ಪ ಎಂದು ಮನಸ್ಸಿನಲ್ಲೇ ಕೇಳಿಕೊಳ್ಳುತ್ತಾನೆ.

ನೆಪ ಹುಡುಕುತ್ತಿರುವ ಆರ್ಯ
ಅನು ಫೋನ್ ಬ್ಯಾಟರಿ ಲೋ ಎಂದು ಬರುತ್ತದೆ. ಇದೇ ವೇಳೆಗೆ ಸುಬ್ಬು, ಅನುಗೆ ಫೋನ್ ಮಾಡುತ್ತಾನೆ. ಆಗ ಆರ್ಯ ಫೋನ್ ರಿಸೀವ್ ಮಾಡುತ್ತಾನೆ. ಸುಬ್ಬು ಮಾತನಾಡಿ, ಹಬ್ಬಕ್ಕೆ ಮನೆಗೆ ಬರುವಂತೆ ಹೇಳುತ್ತಾನೆ. ಇಬ್ಬರೂ ಒಟ್ಟಿಗೆ ಹೊರಗೆ ಹೋಗುತ್ತಿದ್ದಾರೆ ಎಂದು ಸುಬ್ಬು ತಿಳಿದುಕೊಳ್ಳುತ್ತಾನೆ. ಸರಿಯಾಗಿ ಕೇಳದ ಕಾರಣ ಫೋನ್ ಇಡುತ್ತಾನೆ. ಬಳಿಕ ಆರ್ಯ ಸುಬ್ಬು ಅವರು ಹಬ್ಬಕ್ಕೆ ಕರೆದಿದ್ದಾರೆ ಎಂದು ನೆಪ ಹೇಳುತ್ತಾನೆ. ಅದಕ್ಕೆ ಅನು ನೀವು ತಲೆ ಕೆಡಿಸಿಕೊಳ್ಳಬೇಡಿ ನಾನು ನೋಡಿಕೊಳ್ಳುತ್ತೇನೆ ನೀವು ಆರಾಧನಾ ಅವರ ಜೊತೆಗೆ ಹೋಗಿ ಎನ್ನುತ್ತಾಳೆ.

ಆರ್ಯ ಮೇಲೆ ಹರ್ಷನಿಗೆ ಬೇಸರ
ಇತ್ತ ಪುಷ್ಪಾ, ಶಾರದಾ ದೇವಿಗೆ ಫೋನ್ ಮಾಡುತ್ತಾಳೆ. ಹಬ್ಬಕ್ಕೆ ಬನ್ನಿ ಎಂದು ಕರೆಯುತ್ತಾಳೆ. ಇನ್ನು ಮನೆಯವರೆಲ್ಲರನ್ನೂ ಬರಲು ಹೇಳುತ್ತಾಳೆ. ಆಗ ಶಾರದಾ ಅನು ಮನಸ್ಥಿತಿ ಬಗ್ಗೆ ಹೇಳಿದ್ದಕ್ಕೆ ಪುಷ್ಪಾ ಶಾಕ್ ಆಗುತ್ತಾಳೆ. ಹರ್ಷ ಮತ್ತು ಮಾನ್ಸಿಯನ್ನು ಹಬ್ಬಕ್ಕೆ ವಠಾರಕ್ಕೆ ಹೋಗೋಣ ಎಂದು ಶಾರದಾ ಹೇಳುತ್ತಾಳೆ. ಅನು ಬಗ್ಗೆ ಕೇಳಿದ್ದಕ್ಕೆ, ಅತ್ತಿಗೇನೇ ಆರ್ಯ ಎಂದು ಆತನನ್ನು ಒಪ್ಪಿಲ್ಲ. ಇನ್ನು ನಾವೇನು. ಆರ್ಯ ಮನೆಗೆ ಬರದೇ ಇದ್ದರೇ ಒಳ್ಳೆಯದು. ಅವರು ಆರಾಧನಾರನ್ನು ಭೇಟಿಯಾಗಲು ಹೋಗಿರಬೇಕು ಎಂದು ಹೇಳುತ್ತಾನೆ. ಇದರಿಂದ ಶಾರದಾ, ಅನು ತಪ್ಪು ಮಾಡುತ್ತಿದ್ದಾಳೆ ಎಂದು ಯೋಚಿಸುತ್ತಿರುತ್ತಾಳೆ.

ಆರ್ಯನಿಗೆ ತೊಂದರೆ ಎದುರಾಗುತ್ತಾ..?
ಅನುಗೆ ಗಾಡಿ ಓಡಿಸುತ್ತಿರುವಾಗಲೇ ಸುಸ್ತಾಗುತ್ತದೆ. ಆರ್ಯ ಗಾಡಿ ನಿಲ್ಲಿಸಲು ಹೇಳಿ, ಏಕೆ ಏನಾಯ್ತು ಎಂದು ಕೇಳುತ್ತಾನೆ. ಆಗ ಅನು ಏನೂ ಆಗಿಲ್ಲ ಹಸಿವಾಗಿದೆ ಎಂದು ಹೇಳುತ್ತಾಳೆ. ಆರ್ಯ ಹೋಟೆಲ್‌ಗೆ ಹೋಗೋಣ ಎಂದಾಗ ಚಿಕ್ಕ ಅಂಗಡಿ ಬಳಿ ಊಟ ಮಾಡೋಣ ಎನ್ನುತ್ತಾಳೆ. ಆರ್ಯನಿಗೆ ಅಲ್ಲಿದ್ದವರನ್ನು ನೋಡಿ ಇಲ್ಲಿ ಬೇಡ ಎಂದರೂ ಕೇಳುವುದಿಲ್ಲ. ಆದರೆ ಅಲ್ಲಿ ಆಟೋದಲ್ಲಿ ಬಂದು ಜಗಳವಾಡಿದ ವ್ಯಕ್ತಿಯೂ ಇದ್ದಾನೆ. ಬಹುಶಃ ಅವರೆಲ್ಲಾ ರೌಡಿಗಳಾಗಿದ್ದು, ಆರ್ಯನ ಜೊತೆಗೆ ಕಿರಿಕ್ ಮಾಡಲು ಮುಂದಾಗಿದ್ದಾರೆ. ಮುಂದಿನ ಎಪಿಸೋಡ್‌ನಲ್ಲಿ ಗಲಾಟೆ ನಡೆಯಬಹುದು ಎಂದು ಊಹಿಸಲಾಗಿದೆ. ಹಾಗೇನಾದರೂ ಆದರೆ, ಆರ್ಯನಿಗೆ ಪೆಟ್ಟಾಗಿ ಹಳೆಯದೆಲ್ಲಾ ನೆನಪಾಗಬಹುದು.