For Quick Alerts
  ALLOW NOTIFICATIONS  
  For Daily Alerts

  ರತ್ನಾಕರನ ಬಗ್ಗೆ ರಹಸ್ಯ ಹೇಳಿದ ರಮ್ಯಾ ಮಾತು ಕೇಳಿ ಅನು ಮಾಡಿದ್ದೇನು..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾಳೆ. ಮಲಗಿದ್ದಲ್ಲೆ ಮಲಗಲು ಬೇಸರವಾಗಿ ವಠಾರದಲ್ಲೇ ವಾಕ್ ಮಾಡುತ್ತಿದ್ದಾಳೆ. ಅನುಗೆ ಜೊತೆಯಾಗಿ ಸಂಪತ್ ಇದ್ದು, ಸದಾ ನಿನ್ನ ಜೊತೆಗೆ ಇರುತ್ತೇನೆ ಎಂದು ಸಂಪತ್ ಕೂಡ ಅನು ಜೊತೆಗೆ ವಾಕ್ ಮಾಡುತ್ತಿರುತ್ತಾನೆ.

  ಶಾರದಾ ದೇವಿ, ಸಂಜು ಮನೆಯಲ್ಲಿ ಸುಮ್ಮನೆ ಕುಳಿತಿರುವುದಕ್ಕಿಂತಲೂ ಆಫೀಸಿನಲ್ಲಿ ಕೆಲಸ ಮಾಡಲಿ ಎಂದು ಬಯಸಿದ್ದಾಳೆ. ಆದರೆ ಆಫೀಸಿಗೆ ಯಾರೆಂದರೆ ಅವರು ಬರುವುದು ಸರಿಯಲ್ಲ ಎಂದು ಅನು ಹೇಳಿದ್ದಕ್ಕೆ ಸಂಜುಗೆ ಇಂಟರ್‌ವ್ಯೂ ತೆಗೆದುಕೊಳ್ಳಲು ಮಾನ್ಸಿ-ಹರ್ಷ ಮುಂದಾಗಿದ್ದಾರೆ.

  ಬೆಟ್ಟದ ಹೂ: ಎಲ್ಲಾ ಸಮಸ್ಯೆಗಳನ್ನು ದಾಟಿ ಮತ್ತೆ ಮದುವೆಯಾದ ಹೂವಿ-ರಾಹುಲ್!ಬೆಟ್ಟದ ಹೂ: ಎಲ್ಲಾ ಸಮಸ್ಯೆಗಳನ್ನು ದಾಟಿ ಮತ್ತೆ ಮದುವೆಯಾದ ಹೂವಿ-ರಾಹುಲ್!

  ರಿಸ್ಟರ್ ಬುಕ್‌ನಲ್ಲಿ ತಾನು ಆರ್ಯವರ್ಧನ್ ಎಂದು ಸಂಜು ಸಹಿ ಮಾಡಿದ್ದಾನೆ. ಆತನಿಗೆ ಹಿಂದಿನದು ಹೆಚ್ಚು ನೆನಪಿಲ್ಲವಾದರೂ, ತನ್ನ ಫೋನ್ ನಂಬರ್ ಹಾಗೂ ಹೆಸರು ಮತ್ತು ಸಹಿ ಮಾತ್ರ ಆರ್ಯವರ್ಧನ್ ಎಂದೇ ಮಾಡುತ್ತಿದ್ದಾನೆ. ಇದರಿಂದ ಹಲವರು ಸಂಜು ಬಗ್ಗೆ ಅನುಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ.

   ರಿಜಿಸ್ಟರ್ ಬುಕ್‌ನಲ್ಲಿ ಹೆಸರು ಬದಲಿಸಿದ ಸಂಜು

  ರಿಜಿಸ್ಟರ್ ಬುಕ್‌ನಲ್ಲಿ ಹೆಸರು ಬದಲಿಸಿದ ಸಂಜು

  ಆಫೀಸಿಗೆ ಇಂಟರ್‌ವ್ಯೂ ಅಟೆಂಡ್ ಮಾಡುವ ಸಲುವಾಗಿ ಸಂಜು ಬಂದಿದ್ದಾನೆ. ಈ ವೇಳೆ ಮೀರಾ, ಸಂಜುನನ್ನು ನೌಕರರಿಗೆ ವಿಶ್ವಾಸ್ ದೇಸಾಯಿ ಎಂದು ಪರಿಚಯ ಮಾಡಿಸಿಕೊಟ್ಟಿದ್ದಾಳೆ. ತನ್ನ ಹೆಸರು ವಿಶ್ವಾಸ್ ದೇಸಾಯಿ ಎಂದು ತಿಳಿದ ಸಂಜು ಇದ್ದಕ್ಕಿದ್ದ ಹಾಗೆ ರಿಜಿಸ್ಟರ್ ಬುಕ್ ಬಳಿ ಹೋಗಿ ನೋಡುತ್ತಾನೆ. ಅಲ್ಲಿ ಆರ್ಯವರ್ಧನ್ ಎಂದು ಸಹಿ ಹಾಕಿರುತ್ತಾನೆ. ಇದನ್ನು ಬದಲಿಸುತ್ತಾನೆ. ಈ ವೇಳೆ ಮೀರಾ ಏನಾಯ್ತು ಎಂದು ಕೇಳಿದ್ದಕ್ಕೆ, ನನ್ನ ಡಿಟೇಲ್ಸ್ ತಪ್ಪಾಗಿ ಬರೆದಿದ್ದೆ ಸರಿ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ.

   ರಮ್ಯಾ ಹೇಳಿದ ಕಹಿ ಸತ್ಯ

  ರಮ್ಯಾ ಹೇಳಿದ ಕಹಿ ಸತ್ಯ

  ರಮ್ಯಾ ಆಫೀಸಿನಿಂದ ಬಂದ ಕೂಡಲೇ ಅನು ಜೊತೆ ಮಾತನಾಡಬೇಕು ಏಂದು ಹೇಳಿ ಟೆರೆಸ್ ಗೆ ಕರೆದುಕೊಂಡು ಹೋಗುತ್ತಾಳೆ. ರಮ್ಯಾ, ಅನು ಬಳಿ ವರ್ಧನ್ ಕುಟುಂಬಕ್ಕೆ ಸಂಬಂಧಪಟ್ಟ ಸಂಪಿಗೆಪುರದ ಪ್ರಾಪರ್ಟಿ ಈಗ ರತ್ನಾಕರ ಅವರ ಹೆಸರಿಗೆ ಬದಲಾಗಿದ್ದು, ಯಾರು ಮಾರಿದ್ದಾರೆ. ಯಾಕೆ ಮಾರಾಟ ಮಾಡಿದ್ದಾರೆ ಎಂಬ ಯಾವ ದಾಖಲೆಯೂ ಸರಿಯಿಲ್ಲ. ಇನ್ನು ರಮ್ಯಾ ಅವರ ಬಾಸ್ ಹಣದ ದಾಖಲೆಯನ್ನು ಫೇಕ್ ಮಾಡುವಂತೆ ಸೂಚಿಸಿದ್ದನ್ನೂ ಹೇಳಿದ್ದಾಳೆ. ಇದರಿಂದ ಶಾಕ್ ಆದ ಅನು, ಮೀರಾಗೆ ಕರೆ ಮಾಡುತ್ತಾಳೆ.

   ನಂಬಿಕೆ ಎಂದು ಉತ್ತರಿಸಿದ ಸಂಜು

  ನಂಬಿಕೆ ಎಂದು ಉತ್ತರಿಸಿದ ಸಂಜು

  ಮೀರಾ, ಹರ್ಷವರ್ಧನ್, ಮಾನ್ಸಿ ಮೂವರು ಸೇರಿ ಸಂಜು ಇಂಟರ್‌ವ್ಯೂ ಮಾಡುತ್ತಿರುತ್ತಾರೆ. ಇದೇ ವೇಳೆಗೆ ಅನು ಕರೆ ಮಾಡಿ, ಆಫೀಸಿನ ಎಲ್ಲಾ ವಿಚಾರದ ಬಗ್ಗೆಯೂ ತನಗೆ ಅಪ್ ಡೇಟ್ ಮಾಡುವಂತೆ ಹೇಳುತ್ತಾಳೆ. ಇನ್ನು ಕಾನ್ಫರೆನ್ಸ್ ಮೂಲಕವೇ ಇಂಟರ್ ವ್ಯೂವ್‌ನಲ್ಲಿ ತಾನೂ ಕೂಡ ಭಾಗಿಯಾಗುತ್ತಾಳೆ. ಹರ್ಷ ಬಿಸಿನೆಸ್ ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಏನು ಎಂದು ಕೇಳಿರುತ್ತಾನೆ. ಅದಕ್ಕೆ ಸಂಜು ನಗುತ್ತಾ ನಂಬಿಕೆ ಎಂದು ಹೇಳುತ್ತಾನೆ. ಇದನ್ನು ಕೇಳುವ ಅನು ಮತ್ತೆ ಆರ್ಯವರ್ಧನ್‌ನನ್ನು ನೆನಪು ಮಾಡಿಕೊಳ್ಳುತ್ತಾಳೆ. ನಂತರ ಕಾಲ್ ಕಟ್ ಮಾಡಿ ರಮ್ಯಾಗೆ ನಮಗೆ ಯಾರಿಗೂ ತಿಳಿಯದಂತೆ ಸಂಪಿಗೆ ಪುರದ ಪ್ರಾಪರ್ಟಿ ತೆಗೆದುಕೊಂಡಿದ್ದಾರೆ ಎಂದರೆ, ಇದರಲ್ಲೇನೋ ಇದೆ ಎಂದು ಮಾತನಾಡುತ್ತಿರುತ್ತಾಳೆ. ಇತ್ತ ಸಂಜು, ವರ್ಧನ್ ಕಂಪನಿಯ 22 ವರ್ಷದ ಅಕೌಂಟ್‌ನಲ್ಲಿ ಮೋಸವಾಗಿರುವುದರ ಬಗ್ಗೆ ಮೀರಾಗೆ ಹೇಳುತ್ತಿರುತ್ತಾನೆ.

   ಮತ್ತೆ ಬಂದ ಝೇಂಡೇಗೆ ಸತ್ಯ ಗೊತ್ತಾಯ್ತಾ..?

  ಮತ್ತೆ ಬಂದ ಝೇಂಡೇಗೆ ಸತ್ಯ ಗೊತ್ತಾಯ್ತಾ..?

  ಇತ್ತ ಊರಿಗೆ ಬಂದು ಪ್ರಭು ದೇಸಾಯಿ ಹಾಗೂ ಪ್ರಿಯದರ್ಶನಿ ಮಗನನ್ನು ನೆನೆದು ಕಣ್ಣೀರಿಡುತ್ತಿರುತ್ತಾರೆ. ಪ್ರಭು ದೇಸಾಯಿ ವಿಶ್ವಾಸ್ ಫೊಟೋಗೆ ಹೂವನ್ನು ಮುಡಿಸುತ್ತಾರೆ. ಆಗ ಪ್ರಿಯದರ್ಶನಿ ನಾನು ಪಾಪಿ ಅತ್ತೆ. ಆರಾಧನಳಿಂದ ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದೀನಿ. ಅವಳಿಗೆ ನಿನ್ನ ಗಂಡ ಸತ್ತಿದ್ದಾನೆ ಎಂದು ಹೇಗೆ ಹೇಳಲಿ ಎಂದು ಅಳುತ್ತಿರುತ್ತಾಳೆ. ಇದೇ ವೇಳೆಗೆ ಝೇಂಡೇ ಅವರ ಮನೆಗೆ ಬರುತ್ತಾನೆ. ಝೇಂಡೇ, ಸಂಜು ಹಿಂದಿನ ರಹಸ್ಯವನ್ನು ತಿಳಿದುಕೊಳ್ಳುತ್ತಾನಾ ಕಾದು ನೋಡಬೇಕಿದೆ.

  ಅರ್ಧಾಂಗಿ: ಸೌಭಾಗ್ಯ ಆಟ ನಡೆಯಲಿಲ್ಲ, ಪವರ್ ಆಫ್ ಅಟಾರ್ನಿ ಪೇಪರ್ ಹರಿದು ಹಾಕಿದ ದಿಗಂತ್!ಅರ್ಧಾಂಗಿ: ಸೌಭಾಗ್ಯ ಆಟ ನಡೆಯಲಿಲ್ಲ, ಪವರ್ ಆಫ್ ಅಟಾರ್ನಿ ಪೇಪರ್ ಹರಿದು ಹಾಕಿದ ದಿಗಂತ್!

  English summary
  jothe jotheyali Serial 17th october Episode Written Update. sanju faces interview and joins office. Anu comes to know about rathnakar and sampigepura property by ramya
  Monday, October 17, 2022, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X