For Quick Alerts
  ALLOW NOTIFICATIONS  
  For Daily Alerts

  Jothe Jotheyali: ಎಲ್ಲಾ ಸತ್ಯ ಗೊತ್ತಿದ್ದು ತಪ್ಪು ಮಾಡುತ್ತಿರುವ ಅನು ಸಿರಿಮನೆ

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಮತ್ತು ಆರ್ಯ ರೌಡಿಗಳ ಕೈಯಲ್ಲಿ ಸಿಕ್ಕಿ ಬೀಳುತ್ತಾರೆ. ಅನುಳನ್ನು ಫಾಲೋ ಮಾಡಿಕೊಂಡು ಬಂದ ಪುಂಡರು, ಕಾರಿಗೆ ಅಡ್ಡ ಹಾಕಿ ಗಲಾಟೆ ಮಾಡುತ್ತಾರೆ.

  ಸರಿಯಾದ ಸಮಯಕ್ಕೆ ಆರ್ಯ ಸೈಕಲ್‌ನಲ್ಲಿ ಬಂದು ಫೈಟ್ ಮಾಡುತ್ತಾನೆ. ಅನುಳನ್ನು ಕಾರಿನಿಂದ ಹೊರಗೆ ಬರದಂತೆ ಹೇಳಿ ರಕ್ಷಿಸುತ್ತಾನೆ. ಪುಂಡರು ಕೂಡ ಆರ್ಯನಿಗೆ ಹೊಡೆಯುತ್ತಾರೆ.

  ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನ್ ನಟನೆಯಲ್ಲಿ ಬ್ಯುಸಿರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನ್ ನಟನೆಯಲ್ಲಿ ಬ್ಯುಸಿ

  ಪುಂಡರು, ರಾಡ್ ಮರದ ದಿಮ್ಮೆಗಳನ್ನು ಬಳಸಿ ಆರ್ಯನ ತಲೆಗೆ ಹೊಡೆಯುತ್ತಾರೆ. ಇದರಿಂದ ಆರ್ಯನ ಪ್ರಜ್ಞೆ ತಪ್ಪುತ್ತದೆ. ಅನು ಆರ್ಯನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಟೆಲ್‌ಗೆ ಬರುತ್ತಾಳೆ.

  ಪ್ರಜ್ಞೆ ತಪ್ಪಿದ ಆರ್ಯ

  ಪ್ರಜ್ಞೆ ತಪ್ಪಿದ ಆರ್ಯ

  ಹೋಟೆಲ್‌ನಲ್ಲಿ ನಾವಿಬ್ಬರು ಗಂಡ-ಹೆಂಡತಿ. ಅವರು ಮಲಗಿದ್ದಾರೆ. ರೂಮಿಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ ಎನ್ನುತ್ತಾಳೆ. ಆರ್ಯನನ್ನು ರೂಮಿನಲ್ಲಿ ಮಲಗಿಸಿದ ಮೇಲೆ ಅನು ಫೋನ್ ಚಾರ್ಜ್ ಗೆ ಹಾಕುತ್ತಾಳೆ. ಅವಳಿಗೆ ಆರಾಧನಾ ತುಂಬಾ ಸಲ ಕಾಲ್ ಮಾಡಿರುತ್ತಾಳೆ. ಆರ್ಯನಿಗೆ ಎಚ್ಚರವಾಗುವುದಿಲ್ಲ. ಅನು, ಆರಾಧನಾಳಿಗೆ ವಾಯ್ಸ್ ಮೆಸೇಜ್ ಕಳಿಸುತ್ತಾಳೆ.

  ಆರ್ಯನ ಎದುರು ಕಣ್ಣಿರಿಟ್ಟ ಅನು

  ಆರ್ಯನ ಎದುರು ಕಣ್ಣಿರಿಟ್ಟ ಅನು

  ಅನುಗೆ ಇವನೇ ಆರ್ಯ ಎಂಬ ಸತ್ಯ ಗೊತ್ತಿರುತ್ತದೆ. ಆದರೂ ಕೂಡ ಆರಾಧನಾಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ನಾಟಕ ಮಾಡುತ್ತಿರುತ್ತಾಳೆ. ಆರ್ಯನನ್ನು ಆರಾಧನಾಳಿಗೆ ಒಪ್ಪಿಸುವ ಸಲುವಾಗಿಯೇ ಅನು ಹೀಗೆಲ್ಲಾ ಮಾಡಿರುತ್ತಾಳೆ. ಈ ಬಗ್ಗೆ ಅನು ಆರ್ಯನ ಎದುರು ಕುಳಿತು ಹೇಳುತ್ತಿರುತ್ತಾಳೆ. ನಿಮ್ಮ ಪ್ರೀತಿ ಏಳೇಳು ಜನ್ಮಕ್ಕೂ ಆಗುತ್ತದೆ. ನಿಮ್ಮ ಪ್ರೀತಿಸೋದಕ್ಕಾಗಿಯೇ ನಾನು ಎರಡೆರಡು ಜನ್ಮ ತಾಳೀ ಬಂದೆ. ಐ ಲವ್ ಯೂ ಆರ್ಯ ಸರ್ ಎಂದು ಹೇಳುತ್ತಾ ಕಣ್ಣೀರು ಹಾಕುತ್ತಾಳೆ.

  ವಿಶುಗಾಗಿ ಬರುತ್ತಿರುವ ಆರಾಧನಾ

  ವಿಶುಗಾಗಿ ಬರುತ್ತಿರುವ ಆರಾಧನಾ

  ಇತ್ತ ಝೇಂಡೇ ಮನೆಯಿಂದ ಹೊರಗೆ ಹೋಗುವುದಕ್ಕೂ ಆಗದಂತೆ ಪೊಲೀಸ್ ಕಾವಲು ಇರುತ್ತಾರೆ. ಆದರೂ ಝೇಂಡೇ ಬೇಕಂತಲೇ ಎಸ್ಕೇಪ್ ಆಗಲು ಹೊರಡುತ್ತಾನೆ. ಆದರೆ, ಅಷ್ಟೊತ್ತಿಗೆ ಪೊಲೀಸ್ ಬರುತ್ತಾರೆ. ಝೇಂಡೇಗೆ ಬೇರೆ ದಾರಿ ಇಲ್ಲದೇ, ಸುಮ್ಮನೆ ಒಳಗೆ ಹೋಗುತ್ತಾನೆ. ಇನ್ನು ಆರಾಧನಾ ಗಾಡಿ ಓಡಿಸುತ್ತಿರುತ್ತಾಳೆ. ವಾಹನದಲ್ಲಿ ಪೆಟ್ರೋಲ್ ಕಡಿಮೆಯಾಗಿರರುತ್ತದೆ. ದಾರಿಯಲ್ಲಿ ಎಲ್ಲೂ ಪೆಟ್ರೋಲ್ ಬಂಕ್ ಕೂಡ ಇರುವುದಿಲ್ಲ. ಇನ್ನು ಅನುಗೆ ಫೋನ್ ಮಾಡಲು ಪ್ರಯತ್ನಿಸುತ್ತಾಳೆ ಆದರೆ, ಅವಳ ಫೋನ್ ನಲ್ಲಿ ನೆಟ್ ವರ್ಕ್ ಇರುವುದಿಲ್ಲ. ವಿಸೂಗಾಗಿ ಏನು ಭೇಕಿದ್ದರು ಮಾಡುತ್ತೇನೆ. ಇಲ್ಲಿಂದ ನಾನು ವಿಶು ಹೋದರೆ ಸಾಕು ಎಂದು ಆರಾಧನಾ ಒಬ್ಬಳೇ ಮಾತನಾಡಿಕೊಳ್ಳುತ್ತಿರುತ್ತಾಳೆ.

  ಆರ್ಯನಿಗೆ ನೆನಪು ಮರುಕಳಿಸುತ್ತಾ..?

  ಆರ್ಯನಿಗೆ ನೆನಪು ಮರುಕಳಿಸುತ್ತಾ..?

  ಇನ್ನು ಅನು ಮತ್ತೆ ಆರಾಧನಾಳಿಗೆ ಫೋನ್ ಮಾಡಲು ಯತ್ನಿಸಿದರೂ, ಮತ್ತೆ ನಾಟ್ ರೀಚೆಬಲ್ ಎಂದು ಬರುತ್ತದೆ. ಅನು ತಾನು ಇಲ್ಲಿರುವುದು ಸರಿಯಲ್ಲ. ಆರ್ಯ ಸರ್‌ಗೆ ಎಚ್ಚರ ಆಗುವ ಮುನ್ನ ಹೊರಡಬೇಕು ಎಂದು ನಿರ್ಧಾರ ಮಾಡುತ್ತಾಳೆ. ಅದಕ್ಕಾಗಿ ಆರಾಧನಾಳಿಗೆ ಲೊಕೇಶನ್ ಕಳಿಸುತ್ತಾಳೆ. ನಾನು ಇಲ್ಲೇ ಇದ್ದರೆ ಆರ್ಯ ಸರ್ ಆರಾಧನಾ ಜೊತೆಗೆ ಹೋಗುವುದಿಲ್ಲ. ನಿಮಗೆ ಎಚ್ಚರವಾಗುವ ಮೊದಲೇ ನಾನು ಇಲ್ಲಿಂದ ಹೊರಟು ಬಿಡುತ್ತೇನೆ. ನಾಳೆಯಿಂದ ಆರಾಧನಾ ಜೊತೆಗೆ ಹೊಸ ಜೀವನ ಪ್ರಾರಂಭಿಸಿ ಎಂದು ಹೇಳುತ್ತಾಳೆ. ಆರಾಧನಾಗೆ ಆರ್ಯನನ್ನು ಬಿಟ್ಟುಕೊಡುತ್ತಾಳಾ..?

  English summary
  Jothe Jotheyali Serial 19th January Episode Written Update. Anu knows about the fact. But still she is ready to leave arya for the sake of aradhana.
  Thursday, January 19, 2023, 18:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X