For Quick Alerts
  ALLOW NOTIFICATIONS  
  For Daily Alerts

  ಆಫೀಸಿನಲ್ಲಿ ಮಾನ್ಸಿ ಅಟೆಂಡರ್ ಕೆನ್ನೆಗೆ ಹೊಡೆಯಲು ಆರ್ಯ ಕಾರಣಾನಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು ವರ್ಧನ್ ಕಂಪನಿಯಲ್ಲಿ ಕಳೆದ 22 ವರ್ಷಗಳಲ್ಲಿ ಆದ ಮೋಸವನ್ನು ಗುರುತಿಸಿದ್ದಾನೆ. ಈ ವಿಚಾರವನ್ನು ಮೀರಾ ಗಮನಕ್ಕೆ ತಂದಿದ್ದು, ಮೀರಾ ಈಗಾಗಲೇ ಈ ಸಂಬಂಧ ಹರ್ಷ ಮತ್ತು ಮಾನ್ಸಿ ಜೊತೆಗೆ ಚರ್ಚೆ ಮಾಡಿದ್ದಾಳೆ.

  ಅಲ್ಲದೇ, ಆಫೀಸಿನಲ್ಲಿ ಶಾನುಭೋಗರ ಜೊತೆಗೆ ಸಂಜು ಗುರುತಿಸಿರುವ ಫ್ರಾಡ್ ಬಗ್ಗೆ ಚರ್ಚೆ ಮಾಡಿದ್ದಾಳೆ. ಈ ಬಗ್ಗೆ ನಾವು ಗಮನ ಹರಿಸಬೇಕು. ನನಗೆ ನಿಮ್ಮ ಸಹಕಾರ ಬೇಕು ಎಂದು ಮೀರಾ ಕೇಳಿದ್ದಾಳೆ. ಇದಕ್ಕೆ ಶಾನುಭೋಗರು ಒಪ್ಪಿಗೆಯನ್ನು ಕೂಡ ನೀಡಿದ್ದಾರೆ.

  500 ಸಂಚಿಕೆ ದಾಟುತ್ತಿವೆ ಉದಯ ಟಿವಿಯ ನಾಲ್ಕು ಧಾರಾವಾಹಿ!500 ಸಂಚಿಕೆ ದಾಟುತ್ತಿವೆ ಉದಯ ಟಿವಿಯ ನಾಲ್ಕು ಧಾರಾವಾಹಿ!

  ಇತ್ತ ಅನು ಈಗ ಮನೆಯಲ್ಲಿ ಚೇತರಿಸಿಕೊಂಡಿದ್ದಾಳೆ. ಅನುಗೆ ಸದಾ ಜೊತೆಯಾಗಿ ಸಂಪತ್ ಇರುತ್ತಾನೆ. ಅನು ಟೆರೆಸ್ ಮೇಲೆ ಹೋಗುವಾಗ ಸಂಪತ್ ಕೂಡ ಜೊತೆಗೆ ಬಂದಿದ್ದು, ಅನು ಬೇಡ ಎಂದರೂ ನಿನ್ನ ಸೇಫ್ಟಿಗೆ ನಾನಿರುತ್ತೀನಿ ಎಂದು ಹೆಚ್ಚು ಕಾಳಜಿ ತೋರಿಸಿದ್ದಾನೆ. ಆಗ ಅನು ಸಂಪತ್ ಕೆನ್ನೆ ಗಿಲ್ಲಿ, ಹೋಗೋ ಎಂದು ತೋಳಿಗೆ ಹೊಡೆದಿದ್ದಾಳೆ. ಇದರಿಂದ ಈಗ ಸಂಪತ್ ಅನು ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವುದು ಪಕ್ಕಾ ಆಗಿದೆ.

  ಲೇಡಿ ಆರ್ಯವರ್ಧನ್ ಎಂದ ಸಂಜು

  ಲೇಡಿ ಆರ್ಯವರ್ಧನ್ ಎಂದ ಸಂಜು

  ಮೀರಾ ಸಂಜುನನ್ನು ಅನು ಕೈಯಿಂದ ಕೆಲ ಪೇಪರ್‌ಗಳಿಗೆ ಸಹಿ ಹಾಕಿಸಬೇಕಿದೆ. ಇದಕ್ಕೆ ನೀವೇ ಸರಿಯಾದ ವ್ಯಕ್ತಿ ಎಂದು ಕಳಿಸಿದ್ದಾಳೆ. ಅನುಳನ್ನು ನೋಡಲು ಖುಷಿ ಪಡುವ ಸಂಜು, ಸಂತಸದಲ್ಲಿ ವಠಾರಕ್ಕೆ ಬಂದಿದ್ದಾನೆ. ಅನುಳನ್ನು ಟೆರೆಸ್ ಮೇಲೆ ನೋಡಿ ಖುಷಿಯಾಗಿದ್ದು, ಅನು ಸಂಜುನನ್ನು ನೋಡಿ ಯಾಕೆ ಬಂದಿದ್ದು ಎಂದು ಕೇಳಿದ್ದಕ್ಕೆ ಬಂದ ವಿಚಾರವನ್ನು ಹೇಳಿದ್ದಾನೆ. ಇದೇ ವೇಳೆಗೆ ಸಂಜು ಲೇಡಿ ಆರ್ಯವರ್ಧನ್ ಎಂದು ಅನುಳನ್ನು ಕರೆದಿದ್ದಕ್ಕೆ ಅನು ಕೊಂಚ ಶಾಕ್ ಆಗಿದ್ದಾಳೆ. ಇನ್ನು ಅನು ಮಾತ್ರೆಗಳನ್ನು ಪುಷ್ಪಾಳಿಗೆ ತೋರಿಸಿಕೊಟ್ಟಿದ್ದಾನೆ. ಅನು ಗರ್ಭಿಣಿ ಎಂಬುದನ್ನು ಸಂಜು ಹೇಳಿದ್ದು, ಅನು ಏನೂ ಹೇಳಲಾಗದೆ ಸುಮ್ಮನಾಗಿದ್ದಾಳೆ.

  ಬಂದ ದಾರಿಗೆ ಸುಂಕವಿಲ್ಲ

  ಬಂದ ದಾರಿಗೆ ಸುಂಕವಿಲ್ಲ

  ಇತ್ತ ಪ್ರಿಯದರ್ಶಿನಿಗೆ ಝೇಂಡೇ ಬಳಿ ಆರ್ಯವರ್ಧನ್ ಬದುಕಿರುವ ಸತ್ಯವನ್ನು ಹೇಳುವ ಮನಸ್ಸಾಗಿದೆ. ಝೇಂಡೇ ಕೂಡ ಆ ಸತ್ಯವನ್ನು ತಿಳಿಯಲೆಂದೇ ಬಂದಿದ್ದರೂ, ಅದನ್ನು ತೋರಿಸಿಕೊಂಡಿಲ್ಲ. ಆದರೆ ಪ್ರಭು ದೇಸಾಯಿ ಪ್ರಿಯದರ್ಶಿನಿಯನ್ನು ತಡೆದಿದ್ದಾನೆ. ಆರ್ಯನ ಆಪ್ತರಿಂದಲೇ ಅಪಾಯವಿದೆ ಎಂದು ವೈದ್ಯರು ಮತ್ತು ಪೊಲೀಸರು ಹೇಳಿದ್ದಾರೆ. ಹಾಗಾಗಿ ಸತ್ಯ ಹೇಳಬೇಡ ಎಂದು ತಡೆದಿದ್ದಾನೆ. ಝೇಂಡೇ ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ವಾಪಸ್ ಹೊರಟಿದ್ದಾನೆ.

  ಸಂಜುಗೆ ಮತ್ತೆ ಬರದಂತೆ ಬೈದ ಅನು

  ಸಂಜುಗೆ ಮತ್ತೆ ಬರದಂತೆ ಬೈದ ಅನು

  ಇನ್ನು ಪೇಪರ್‌ಗಳಿಗೆ ಸಹಿ ಹಾಕಿದ ಮೇಲೆ ಅನುಗೆ ಕಂಪನಿಯಲ್ಲಿ ನಡೆದಿರುವ ಫ್ರಾಡ್ ಬಗ್ಗೆ ಹೇಳಿದ್ದಾನೆ. ಇದರಿಂದ ಅನು ಶಾಕ್ ಆಗಿದ್ದಲ್ಲದೇ, ಆರ್ಯ ಸರ್ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದೇಕೆ..? ನಿಮ್ಮ ಕೆಲಸ ಎಷ್ಟೋ ಅಷ್ಟು ನೋಡಿಕೊಳ್ಳಿ. ಇನ್ಮೇಲಿಂದ ನೀವು ಬರುವುದು ಬೇಡ ಎಂದು ಬೈದು ಕಳಿಸಿದ್ದಾಳೆ. ಸಂಜು ಸ್ವಲ್ಪ ಬೇಸರ ಮಾಡಿಕೊಂಡಿದ್ದು, ಪುಷ್ಪಾ ಕೊಟ್ಟ ಶುಂಠಿ ಟೀಯನ್ನು ಕುಡಿಯದೇ ಹೋಗಿದ್ದಾನೆ. ಪುಷ್ಪಾ, ಅನುಳನ್ನು ಯಾಕೆ ಸಂಜುಗೆ ಹಾಗೆ ಹೇಳಿದೆ ಎಂದು ಕೇಳಿದ್ದಕ್ಕೆ, ಅನು ಫ್ರಾಡ್ ನಡೆದಿರುವುದು ನಿಜ ಅಮ್ಮ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಪುಷ್ಪಾ ಶಾಕ್ ಆಗುತ್ತಾಳೆ.

  ಸಂಜು ಸಮಸ್ಯೆ ಬಗೆಹರಿಸುತ್ತಾನಾ..?

  ಸಂಜು ಸಮಸ್ಯೆ ಬಗೆಹರಿಸುತ್ತಾನಾ..?

  ಇತ್ತ ಆಫೀಸಿನಲ್ಲಿ ಹರ್ಷ ಹಾಗೂ ಮಾನ್ಸಿ ಕೆಲಸ ಮಾಡುವಾಗ ಅಟೆಂಡರ್ ಟೀ ತೆಗೆದುಕೊಂಡು ಬರುತ್ತಾನೆ. ಮಾನ್ಸಿ ಟೀ ಕಪ್ ತೆಗೆದುಕೊಳ್ಳಲು ಹೋದಾಗ ಇದು ನಿಮಗಲ್ಲ ಆರ್ಯ ಸರ್‌ಗೆ ಎಂದು ಹೇಳುತ್ತಾನೆ. ಅದರಿಂದ ಕೋಪಗೊಂಡ ಮಾನ್ಸಿ ಅಟೆಂಡರ್ ಕೆನ್ನೆಗೆ ಬಾರಿಸುತ್ತಾಳೆ. ಹರ್ಷ ಎಷ್ಟು ಹೇಳಿದರೂ ಕೇಳುವುದಿಲ್ಲ. ಇದರಿಂದ ವರ್ಧನ್ ಕಂಪನಿಯ ನೌಕರರು ಸ್ಟ್ರೈಕ್ ಮಾಡುತ್ತಿದ್ದಾರೆ. ಮಾನ್ಸಿ ಅಟೆಂಡರ್ ಅನ್ನು ಕ್ಷಮೆ ಕೇಳಲೇ ಬೇಕು ಎಂದು ಪ್ರತಿಭಟಿಸುತ್ತಿದ್ದಾರೆ. ಇದೇ ವೇಳೆಗೆ ಸಂಜು ಆಫೀಸಿಗೆ ಬಂದಿದ್ದು, ಸಮಸ್ಯೆಯನ್ನು ಆರ್ಯನಂತೆಯೇ ಬಗೆಹರಿಸುತ್ತಾನಾ ಎಂಬ ಕುತೂಹಲ ಮೂಡಿದೆ.


  English summary
  jothe jotheyali Serial 19th october Episode Written Update. mansi slaps on attender. This makes office employees to get anger. And everyone started to strike on mansi.
  Wednesday, October 19, 2022, 18:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X