Don't Miss!
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆರ್ಯನ ರಹಸ್ಯವನ್ನು ಬೇಧಿಸುವಲ್ಲಿ ಅನು ಎಡವುತ್ತಿದ್ದಾಳಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ ಆಫೀಸ್ ಕೆಲಸದ ನೆಪವೊಡ್ಡಿ ರಾಜನಂದಿನಿ ವಿಲಾಸಕ್ಕೆ ಬಂದಾಗಿದೆ. ಶಾರದಾ ದೇವಿ ಬಳಿ ಖಾಲಿ ಹಾಳೆಗೆ ಸಹಿಯನ್ನೂ ಹಾಕಿಸಿಕೊಂಡಾಗಿದೆ. ಇನ್ನೇನಿದ್ದರೂ ಆರ್ಯನನ್ನು ತನ್ನ ವಶ ಮಾಡಿಕೊಳ್ಳುವುದೊಂದೇ ಬಾಕಿ.
ಅನು ಮತ್ತು ಹರ್ಷ ಇಬ್ಬರೂ ಶಾರದಾ ಬಳಿ ಝೇಂಡೇಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂಬುದನ್ನು ಹೇಳುತ್ತಾರೆ. ಆದರೆ ಶಾರದಾ ಇಲ್ಲ ಅವನಿಲ್ಲದೇ ಯಾವ ಕೆಲಸವೂ ಸಾಧ್ಯವಿಲ್ಲ. ಅವನ ಪಾಡಿಗೆ ಅವನಿರಲಿ ಎಂದು ಹೇಳುತ್ತಾಳೆ.
ಬಂಗಾರಮ್ಮನ
ಮನೆಗೆ
ಬಂದು
ರಾದ್ದಾಂತ
ಮಾಡಿದ
ನಂಜಮ್ಮ
ಅನು ಈ ಮಾತನ್ನು ಕೇಳಿ ಬೇಸರ ಮಾಡಿಕೊಳ್ಳುತ್ತಾಳೆ. ಆದರೆ ಬೇರೆ ದಾರಿ ಇಲ್ಲದೇ ಸುಮ್ಮನಾಗುತ್ತಾಳೆ. ಇನ್ನು ಹರ್ಷ ಕೂಡ ಅಮ್ಮನಿಗೆ ಏನೂ ಹೇಳಲಾಗುವುದಿಲ್ಲ ಎಂದು ಸುಮ್ಮನಾಗಿ ಬಿಡುತ್ತಾನೆ.

ಝೇಂಡೇ ಸಾಮ್ರಾಜ್ಯ ಶುರುವಾಯ್ತಾ..?
ಇತ್ತ ಝೇಂಡೇ, ಸಂಜುಗೆ ತಿಂಡಿ ತೆಗೆದುಕೊಂಡು ಹೋಗಿ ಮಾತನಾಡಿಸುತ್ತಾನೆ. ಯಾರು ನಂಬದಿದ್ದರೂ ನಾನು ನಂಬುತ್ತೇನೆ. ನೀನೇ ನನ್ನ ಆರ್ಯ ಎಂದು ಮಾತನಾಡಿಸುತ್ತಾನೆ. ಸಂಜುಗೆ ತನ್ನ ಮಾತನ್ನು ಯಾರೂ ನಂಬುತ್ತಿಲ್ಲ. ಆದರೆ ಝೇಂಡೇ ತನ್ನ ಪರವಾಗಿರುವುದನ್ನು ನೋಡಿ ಖುಷಿ ಪಡುತ್ತಾನೆ. ಝೇಂಡೇ ಕೈನಲ್ಲಿ ತಿಂಡಿ ಪಡೆದು ತಿನ್ನುತ್ತಾನೆ. ಆಗ ಝೇಂಡೇ ಸಂಜೆ ನಾವು ಟೀ ಕುಡಿಯುವ ಪೆಟ್ಟಿ ಅಂಗಡಿಗೆ ಬಾ ಎಂದು ಕರೆಯುತ್ತಾನೆ. ಸಂಜು ಸರಿ ಎಂದು ಹೇಳುತ್ತಾನೆ.

ಅನು ರಹಸ್ಯದ ಬೆನ್ನು ಹತ್ತುತ್ತಾಳಾ..?
ಅನು ಮತ್ತು ಹರ್ಷವರ್ಧನ್ ಇಬ್ಬರೂ ಕೂಡ ಪೊಲೀಸ್ ಠಾಣೆಗೆ ಹೋಗುತ್ತಾರೆ. ಸಂಜು ನೆನಪಿನ ಶಕ್ತಿ ಕಳೆದುಕೊಂಡಿರುವುದಕ್ಕೂ, ಆರ್ಯನ ಸಾವಿಗೂ, ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ ಮಾತಿಗೂ ಏನೋ ಸಂಬಂಧವಿದೆ. ಅದೆಲ್ಲವೂ ಪೊಲೀಸರಿಗೆ ಗೊತ್ತಿದೆ ಎಂದು ತಿಳಿಯುವ ಸಲುವಾಗಿ ಬಂದಿರುತ್ತಾಳೆ. ಆದರೆ ಅಲ್ಲಿ ಪೊಲೀಸ್ ಟ್ರಾನ್ಸ್‌ಫರ್ ಆಗಿದ್ದು, ಹೊಸ ಆಫೀಸರ್‌ಗಾಗಿ ಕಾಯುತ್ತಿರುವುದಾಗಿ ಕಾನ್‌ಸ್ಟೇಬಲ್ ಹೇಳುತ್ತಾರೆ. ಇದನ್ನು ಕೇಳಿದ ಅನುಗೆ ಇನ್ನಷ್ಟು ಅನುಮಾನ ಹೆಚ್ಚಾಗುತ್ತದೆ. ಇದೆಲ್ಲವೂ ಕೋ-ಇನ್ಸಿಡೆನ್ಸ್ ಎನಿಸಲು ಶುರುವಾಗುತ್ತೆ. ಈ ರಹಸ್ಯದ ಬೆನ್ನು ಹತ್ತಿ ಅನು ಸತ್ಯವನ್ನು ಬಯಲು ಮಾಡುತ್ತಾಳಾ ಎಂಬ ಕುತೂಹಲ ಶುರುವಾಗಿದೆ.

ಮಾನ್ಸಿ ಹೇಳಿದ್ದು ಸರೀನಾ..?
ಇನ್ನು ಸಂಜು ಬೆಳಗ್ಗೆ ಎದ್ದ ಮೇಲೂ ತಾನು ಆರ್ಯವರ್ಧನ್ ಎಂದು ಹೇಳುತ್ತಿರುತ್ತಾನೆ. ಆರಾಧನಾಳಿಗೆ ಸಂಜು ಜೊತೆ ಮಾತನಾಡುವುದೇ ಕಷ್ಟವಾಗುತ್ತದೆ. ಮನೆಯಲ್ಲಿ ಎಲ್ಲರೂ ಸಂಜುನನು ಗಮನಿಸಲು ಶುರು ಮಾಡುತ್ತಾರೆ. ಇದು ಸಂಜುಗೆ ಮುಜುಗರವಾದರೂ, ನಾನು ಅರಾಮಾಗಿದ್ದೀನಿ, ಯಾರು ಒಪ್ಪಿದರೂ ಬಿಟ್ಟರೂ ನಾನು ಆರ್ಯವರ್ಧನ್ ಎಂದು ಹೇಳುತ್ತಾನೆ. ಈ ವೇಳೆ ಇಷ್ಟೆಲ್ಲಾ ಗೊಂದಲಗಳೇಕೆ ಡಿಎನ್ಎ ಟೆಸ್ಟ್ ಮಾಡಿಸೋಣ ಎಂದು ಮಾನ್ಸಿ ಹೇಳುತ್ತಾಳೆ. ಆದರೆ ಈ ಮಾತಿಗೆ ಶಾರದಾ ಹಾಗೂ ಆರಾಧನಾ ನಿರಾಕರಿಸುತ್ತಾರೆ.

ರಹಸ್ಯವನ್ನು ಭೇದಿಸುತ್ತಾಳಾ ಮಾನ್ಸಿ..?
ಆದರೆ, ಮಾನ್ಸಿಗೆ ತನ್ನ ಮಾತಿನ ಮೇಲೆ ಅಗಾಧವಾದ ನಂಬಿಕೆ ಇರುತ್ತದೆ. ಸಿಂಪಲ್ ಆಗಿ ಪ್ರಾಬ್ಲಮ್ ಸಾಲ್ವ್ ಮಾಡಬಹದು ಎಂದು ಮಾನ್ಸಿ ಪ್ಲ್ಯಾನ್ ಮಾಡುತ್ತಾಳೆ. ಆರ್ಯ ನೀರು ಕುಡಿದ ಲೋಟವನ್ನು ತೆಗೆದುಕೊಂಡು ಪರೀಕ್ಷೆಗೆ ಮುಂದಾಗುತ್ತಾಳೆ. ಹಾಗಾದರೆ, ಆರ್ಯನ ಬಗ್ಗೆ ಇರುವ ರಹಸ್ಯವನ್ನು ಮಾನ್ಸಿ ಭೇದಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.