Don't Miss!
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಧನ್ ಕಂಪನಿಯಲ್ಲಿ ಅಲ್ಲೋಲ ಕಲ್ಲೋಲ: ಮುಂದೇನಾಗುತ್ತೆ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಬ್ಬು ಮತ್ತು ಪುಷ್ಪಾ ಇಬ್ಬರಿಗೂ ಈಗ ಮಗಳು ಅನುಳದ್ದೇ ಯೋಚನೆಯಾಗಿದೆ. ಆದರೂ ರಾಜನಂದಿನಿ ವಿಲಾಸದಲ್ಲಿ ಇರಲಾಗದೇ, ವಾಪಸ್ ವಠಾರಕ್ಕೆ ಹೋಗುತ್ತಿದ್ದಾರೆ.
ಸುಬ್ಬು ಮತ್ತು ಪುಷ್ಪಾ ಮಗಳ ಆರೋಗ್ಯ ಹೇಗಿರುತ್ತೋ.. ಮನೆಯಲ್ಲಿ ಅಷ್ಟೆಲ್ಲಾ ಗೊಂದಲಗಳಿವೆ. ಅವಳು ಮತ್ತು ಅವಳ ಮಗುವಿನ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ಮಾತನಾಡಿಕೊಳ್ಳುತ್ತಾರೆ.
Sathya
Serial:
ಕೀರ್ತನಾಳಿಗೆ
ಕಪಾಳ
ಮೋಕ್ಷ
ಮಾಡಿದ
ಸತ್ಯ
ಅನುಗೆ ಫೋನ್ ಮಾಡಿ ಹುಷಾರಾಗಿರು ಎಂದು ಹೇಳುತ್ತಾರೆ. ಆಗ ಅನು ಪುಷ್ಪಾಳಿಗೆ ಸಮಾಧಾನ ಮಾಡುತ್ತಾಳೆ. ನನಗೆ ನೀನು ಧೈರ್ಯ ಹೇಳಬೇಕು. ಆದರೆ ನಾನೇ ನಿನಗೆ ಹೇಳುವಂತೆ ಮಾಡುತ್ತಿದ್ದೀಯಾ ಎಂದು ಸಮಾಧಾನ ಮಾಡಿ ಫೋನ್ ಇಡುತ್ತಾಳೆ.

ಝೇಂಡೇ ಜೊತೆ ಮಾತನಾಡಿದ ಸಂಜು
ಝೇಂಡೇ ಮತ್ತು ಸಂಜು ಇಬ್ಬರೂ ಟೀ ಅಂಗಡಿ ಬಳಿ ಭೇಟಿಯಾಗಿರುತ್ತಾರೆ. ಝೇಂಡೇ, ಸಂಜುಗೆ ಏನೇನೋ ತಲೆಗೆ ತುಂಬಲು ಪ್ರಯತ್ನಿಸುತ್ತಿರುತ್ತಾನೆ. ಆದರೆ ಸಂಜು, ಝೇಂಡೇ ಮಾತನ್ನು ನಂಬಿದರೂ ನಂಬದಂತೆ ತನ್ನದೇ ರೀತಿಯಲ್ಲಿ ಆಲೋಚಿಸುತ್ತಿರುತ್ತಾನೆ. ಝೇಂಡೇ ಬಳಿ ಏನೇ ಪ್ರಶ್ನೆ ಮಾಡಿದರೂ ಅದಕ್ಕೊಂದು ಸಮಜಾಯಿಸಿಯನ್ನೂ ಕೊಡುತ್ತಾನೆ. ಇತ್ತ ಶಾರದಾ ದೇವಿ, ಆರಾಧನಾಳಿಗೆ ಸಮಾಧಾನ ಮಾಡುತ್ತಿರುತ್ತಾಳೆ. ಆರಾಧನಾ ಕೂಡ ತನ್ನ ಪರಿಸ್ಥಿತಿಯ ಬಗ್ಗೆ ಬೇಸರ ಮಾಡಿಕೊಳ್ಳುತ್ತಾಳೆ. ಅನು ನನಗೆ ಒಳ್ಳೆಯದಾಗಲಿ ಎಂದು ಬಯಸಿದರೂ, ಸಂಜು ಹೀಗೆ ನಡೆದುಕೊಳ್ಳುತ್ತಿರುವುದು ನಿಮಗೂ ತೊಂದರೆಯಾಗುವಂತೆ ಮಾಡಿದೆ ಎಂದು ಹೇಳುತ್ತಾಳೆ.

ಕರುಣಾಕರ ಮಾಡಿದ್ದೇನು..?
ಝೇಂಡೇ ಹಾಗೂ ಸಂಜು ಮಾತನಾಡುತ್ತಿದ್ದುದನ್ನು ನೋಡಿದ ಕರುಣಾಕರ ಶಾಕ್ ಆಗುತ್ತಾನೆ. ಇವರಿಬ್ಬರ ಫೋಟೋವನ್ನು ತೆಗೆದುಕೊಳ್ಳುತ್ತಾನೆ. ಅವತ್ತು ಜಗಳವಾಡಿ ನಮ್ಮ ಎಂಗೇಜ್‌ಮೆಂಟ್ ಅನ್ನು ಹಾಳು ಮಾಡಿದ್ರು. ಆದರೆ ಇವತ್ತು ಇಬ್ಬರೂ ಒಟ್ಟಿಗೆ ಕೂತು ಸ್ನೇಹಿತರಂತೆ ಟೀ ಕುಡಿಯುತ್ತಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಫೋಟೋವನ್ನು ರಮ್ಯಾಗೆ ಕಳಿಸಿ, ಅವರೇ ಒಂದಾಗಿದ್ದಾರೆ, ನಾವಿಬ್ಬರು ಮದುವೆಯಾಗೋಣವೇ ಎಂದು ಮೆಸೇಜ್ ಮಾಡಿರುತ್ತಾನೆ. ಇನ್ನು ಅನು ಡೆತ್ ಸರ್ಟಿಫಿಕೇಟ್ ಅನ್ನು ನೋಡಿ ಇದು ನಿಜವಾದ್ದ.? ಇಲ್ಲ ಫೇಕ್ ಆಗಿರಬಹುದಾ ಎಂದು ಅನುಮಾನ ಪಡುತ್ತಾಳೆ.

ಮಾನ್ಸಿಗೆ ಮತ್ತೆ ಬೈದ ಹರ್ಷ
ಸಂಜು ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಹೊರಡುತ್ತಿರುತ್ತಾನೆ. ಆಗ ಆರಾಧನಾ ಬಂದು ಎಲ್ಲಿಗೆ ಎಂದು ಕೇಳುತ್ತಾಳೆ. ಅದಕ್ಕೆ ಸಂಜು ನನಗೆ ನನ್ನದೇ ಆದ ಸ್ಪೇಸ್ ಬೇಕು. ಅದಕ್ಕೆ ಹೊರಗೆ ಹೋಗುತ್ತಿದ್ದೇನೆ. ನನ್ನನ್ನು ನನ್ನ ಪಾಡಿಗೆ ಬಿಡಿ ಎಂದು ಹೇಳುತ್ತಾನೆ. ಇದೇ ವೇಳೆಗೆ ಮಾನ್ಸಿ, ಸಂಜುಗೆ ಸಂಬಂಧಪಟ್ಟ ಕೆಲ ವಸ್ತುಗಳನ್ನು ಕಲೆಕ್ಟ್ ಮಾಡಿರುತ್ತಾಳೆ. ಇದನ್ನು ನೋಡಿದ ಹರ್ಷ ಮತ್ತೆ ಮಾನ್ಸಿಗೆ ಬೈಯುತ್ತಾನೆ. ಆದರೆ ಮಾನ್ಸಿ ಹೇಗಾದರೂ ಮಾಡಿ ಸಂಜು ಡಿಎನ್‌ಎ ಟೆಸ್ಟ್ ಮಾಡಿಸಲೇ ಬೇಕು ಎಂದು ದಾರಿಗಳನ್ನು ಹುಡುಕುತ್ತಿರುತ್ತಾಳೆ.

ಮುಳುಗೋಯ್ತಾ ವರ್ಧನ್ ಕುಟುಂಬ..?
ಆಫೀಸಿನಲ್ಲಿ ವರ್ಧನ್ ಕಂಪನಿಯಿಂದ ಕೊಟ್ಟ ಚೆಕ್‌ಗಳೆಲ್ಲಾ ಬೌನ್ಸ್ ಆಗಿರುತ್ತವೆ. ಇದರಿಂದ ಮೀರಾ ಶಾಕ್ ಆಗುತ್ತಾಳೆ. ಝೇಂಡೇ ಅಕೌಂಟ್ ಅನ್ನು ಕ್ಲೋಸ್ ಮಾಡಿಸಿರುತ್ತಾನೆ. ಬ್ಯಾಂಕಿಗೆ ಫೋನ್ ಮಾಡಿದಾಗ ಅಕೌಂಟ್ ಫ್ರೀಜ್ ಆಗಿರುವ ವಿಚಾರ ಗೊತ್ತಾಗುತ್ತದೆ. ಆದರೆ, ಯಾರಿಂದ ಹೀಗಾಗಿದೆ ಎಂಬುದು ಗೊತ್ತಾಗುವುದಿಲ್ಲ. ಈ ಬಗ್ಗೆ ಮೀರಾ, ಹರ್ಷನಿಗೆ ಹೇಳುತ್ತಾಳೆ. ಹರ್ಷ ಹೆದರಿಕೊಂಡು ಬ್ಯಾಂಕ್‌ಗೆ ಹೊರಡುತ್ತಾನೆ. ಝೇಂಡೇ ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಾಗುತ್ತಾ..?