For Quick Alerts
  ALLOW NOTIFICATIONS  
  For Daily Alerts

  ಅನು ಸಿರಿಮನೆಗೆ ರಮ್ಯಾ ಕಳಿಸಿದ ಮೆಸೇಜ್‌ನಲ್ಲಿ ಏನಿತ್ತು..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಎಷ್ಟೇ ಹೇಳಿದರೂ ಸಂಜು ರಾಜನಂದಿನಿ ವಿಲಾಸಕ್ಕೆ ಹೋಗುವುದಿಲ್ಲ. ಇದರಿಂದ ಅನು ಕೋಪಗೊಂಡು ಬೈಯುತ್ತಾಳೆ. ಅಲ್ಲಿ ನಿಮ್ಮ ಹೆಂಡತಿ ನಿಮಗಾಗಿ ಕಾಯುತ್ತಾ ಕುಳಿತಿದ್ದಾಳೆ. ಯಾಕೆ ಹೀಗೆ ಮಾಡುತ್ತೀರಾ ಮೊದಲು ಹೋಗಿ ಎನ್ನುತ್ತಾಳೆ.

  ಸಂಜು ಮನೆಗೆ ಹೋಗಲು ಗೇಟ್ ಬಳಿ ಹೋಗುತ್ತಾನೆ. ಈ ವೇಳೆಗೆ ಝೇಂಡೇ ಅಲ್ಲಿಗೆ ಬರುತ್ತಾನೆ. ಸಂಜು, ಝೇಂಡೇಯನ್ನು ಬೈದು ಹೊರಗೆ ಹೋಗಲು ಹೇಳುತ್ತಾನೆ. ಇದೇ ವೇಳೆಗೆ ರತ್ನಾಕರ ರೆಡ್ಡಿ ಜಗಳವಾಡುತ್ತಾನೆ.

  ಲೀಲಾ ಮೇಲೆ ಮುನಿಸಿಕೊಂಡ ಕೌಸಲ್ಯ ರೇವತಿ ಮದುವೆ ನಿಲ್ಲಿಸುತ್ತಾಳ ಲೀಲಾ?ಲೀಲಾ ಮೇಲೆ ಮುನಿಸಿಕೊಂಡ ಕೌಸಲ್ಯ ರೇವತಿ ಮದುವೆ ನಿಲ್ಲಿಸುತ್ತಾಳ ಲೀಲಾ?

  ಇತ್ತ ಆರಾಧಾನಾ ಈ ಸಂಜು ನನ್ನ ವಿಶ್ವಾಸ್ ದೇಸಾಯಿ ಅಲ್ಲವೇ ಅಲ್ಲ. ನನ್ನ ವಿಶ್ ನನಗೆ ಏನನ್ನೂ ಹೇಳದೆ ಇರುತ್ತಿರಲಿಲ್ಲ. ಹೀಗೆಲ್ಲಾ ನಡೆದುಕೊಳ್ಳುತ್ತಿರಲಿಲ್ಲ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ.

   ರತ್ನಾಕರ ಫ್ರಾಡ್ ಎಂದ ರಮ್ಯಾ

  ರತ್ನಾಕರ ಫ್ರಾಡ್ ಎಂದ ರಮ್ಯಾ

  ಝೇಂಡೇಗೆ ಅನು ಮತ್ತು ಸಂಜು ಗೆಟ್ ಔಟ್ ಎಂದು ಹೇಳಿದ್ದಕ್ಕೆ ರತ್ನಾಕರ ರೆಡ್ಡಿ ಕೂಗಾಡುತ್ತಾನೆ. ಸಂಸ್ಕೃತಿ ಇಲ್ಲದವರು ಎಂದೆಲ್ಲಾ ಬೈದಾಗ, ರಮ್ಯಾ ಕೈಯಲ್ಲಿ ಸುಮ್ಮನಿರಲಾಗದೇ, ವಾಪಸ್ ಬೈಯುತ್ತಾಳೆ. ನಿಮಗೆ ಸಂಸ್ಕೃತಿ ಇಲ್ಲ ಎನ್ನುತ್ತಾಳೆ. ನೀವೊಬ್ಬರು ಫ್ರಾಡ್. ಬೇರೆಯವರ ಹಣ ಮತ್ತು ಆಸ್ತಿ ಮೇಲೆ ಕಣ್ಣು ಹಾಕಿರುವವರು. ನೀವು ನಮಗೆ ಸಂಸ್ಕೃತಿ ಬಗ್ಗೆ ಹೇಳಿ ಕೊಡಬೇಡಿ ಎಂದು ಬೈಯುತ್ತಾಳೆ. ರಮ್ಯಾ ಇಷ್ಟೆಲ್ಲಾ ಬೈದಿದ್ದಕ್ಕೆ ರತ್ನಾಕರ ರೆಡ್ಡಿಗೆ ಕೋಪ ಬರುತ್ತದೆ. ಹಾಗಾಗಿ ಅವನು ಈ ಎಂಗೇಜ್ ಮೆಂಟ್ ಕ್ಯಾನ್ಸಲ್ ಎಂದು ಹೇಳುತ್ತಾನೆ.

   ತಾಳ್ಮೆ ಕಳೆದುಕೊಂಡ ರಜಿನಿ

  ತಾಳ್ಮೆ ಕಳೆದುಕೊಂಡ ರಜಿನಿ

  ರಮ್ಯಾ ಅವರ ತಾಯಿ ಸುಮ್ಮನಿರು ರಮ್ಯಾ ಎಂದು ಹೇಳಿದರೂ ರಮ್ಯಾ ಕೇಳುವುದಿಲ್ಲ. ಕರುಣಾಕರ ರೆಡ್ಡಿ, ಅನು, ವಠಾರದವರೆಲ್ಲರೂ ರಮ್ಯಾಳನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ರಮ್ಯಾ ಸುಮ್ಮನಿರದೇ ಜಗಳವಾಡುತ್ತಾಳೆ. ರತ್ನಾಕರ ರೆಡ್ಡಿ ನಿಶ್ಚಿತಾರ್ಥ ಬೇಡ ಎಂದು ಹೇಳಿ ಹೊರಟು ಹೋಗುತ್ತಾನೆ. ಆಗ ತಾಳ್ಮೆ ಕಳೆದುಕೊಂಡ ರಜಿನಿ ಕೂಗಾಡುತ್ತಾಳೆ. ಸಿರಿ ಮನೆಯವರಿಗೆ ಈಗ ಖುಷಿಯಾಗಿರಬೇಕು ಎಂದು ಹೇಳುತ್ತಾಳೆ. ಬೇಕಂತಲೇ ತನ್ನ ಮಗಳ ಮದುವೆಯನ್ನು ತಡೆಯೋದಕ್ಕೆ ಅನು ಹೀಗೆ ಮಾಡಿದ್ದಾಳೆ ಎಂದು ಅಳುತ್ತಾ ಮನೆಯೊಳಗೆ ಓಡಿ ಹೋಗುತ್ತಾಳೆ.

   ರಮ್ಯಾ ಕಳಿಸಿದ ಮೆಸೇಜ್ ಓದಿದ ಅನು

  ರಮ್ಯಾ ಕಳಿಸಿದ ಮೆಸೇಜ್ ಓದಿದ ಅನು

  ಅನು ನನ್ನಿಂದ ಹೀಗಾಯ್ತು. ನಾನು ಬರಲೇ ಬಾರದಿತ್ತು ಎಂದು ಬೇಸರ ಮಾಡಿಕೊಳ್ಳುತ್ತಾಳೆ. ನಾನು ರಜಿನಿ ಅವರ ತಾಯಿಗೆ ಸಮಾಧಾನ ಮಾಡುತ್ತೀನಿ ಎಂದು ಅವರ ಮನೆಗೆ ಹೋಗುತ್ತಾಳೆ. ಆಗ ರಜಿನಿ ಸಂಜುನನ್ನು ಅನು ಲವರ್ ಎಂದು ಹೇಳಿ ಮನೆಯಿಂದ ಹೊರಗೆ ಹೋಗು ಎನ್ನುತ್ತಾಳೆ. ಅನು ನೊಂದುಕೊಂಡು ಮನೆಯಿಂದ ಹೊರಗೆ ಬರುತ್ತಾಳೆ. ಆಗ ಅನು, ರಮ್ಯಾ ಕಳಿಸಿದ ಮೆಸೇಜ್ ಓದುತ್ತಾಳೆ. ಅದರಲ್ಲಿ ರಮ್ಯಾ ಈ ಮದುವೆ ತನಗೆ ಇಷ್ಟವಿಲ್ಲ ಆದರೆ, ರತ್ನಾಕರ ರೆಡ್ಡಿ ಮತ್ತು ಝೇಂಡೇ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ಈ ಮದುವೆಗೆ ಒಪ್ಪಿಕೊಂಡಿರುವುದಾಗಿ ಮೆಸೇಜ್ ಮಾಡಿರುತ್ತಾಳೆ.

   ಝೇಂಡೇ ಬಗ್ಗೆ ಹೇಳಿದ ಸಂಜು

  ಝೇಂಡೇ ಬಗ್ಗೆ ಹೇಳಿದ ಸಂಜು

  ಇನ್ನು ಇತ್ತ ಸಂಜು ಸುಬ್ಬು ಬಳಿ ಝೇಂಡೇ ರಾತ್ರಿ ವಠಾರಕ್ಕೆ ಬಂದ ವಿಚಾರವನ್ನು ಫೋಟೋ ತೋರಿಸಿ ಹೇಳುತ್ತಾನೆ. ಝೇಂಡೇ ಇಂದ ಅನುಗೆ ಅಪಾಯವಿದೆ. ಅನುಳನ್ನು ಕಾಪಾಡಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಸುಬ್ಬು ಶಾಕ್ ಆಗುತ್ತಾನೆ. ಇನ್ನು ಅನುಗೆ ಈಗ ಝೇಂಡೇ ಬಂಡವಾಳ ಗೊತ್ತಾಗಿದ್ದು, ಮುಂದೆ ಏನು ಮಾಡಬಹುದು ಎಂಬ ಕುತೂಹ ಮೂಡಿದೆ.

  English summary
  jothe jotheyali Serial 25th november Episode Written Update. because of jhende engagement gets cancelled. Anu reads message sent by ramya about jhende.
  Friday, November 25, 2022, 19:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X