For Quick Alerts
  ALLOW NOTIFICATIONS  
  For Daily Alerts

  ಆಫೀಸಿಗೆ ಬಂದ ಝೇಂಡೇಗೆ ಹರ್ಷ ಹೀಗನ್ನಬಾರದಿತ್ತು!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಪ್ರಿಯದರ್ಶಿನಿ ಇನ್ನು ಆರಾಧನಾಗೆ ವಿಶ್ವಾಸ್ ದೇಸಾಯಿ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ವಿಚಾರವನ್ನ ಹೇಳೇ ಇಲ್ಲ. ಇದರಿಂದ ಆರಾಧನಾ ಮುಂದಿನ ದಿನಗಳಲ್ಲಿ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಇತ್ತ ಸಂಜುಗೆ ಯಾವಾಗ ನೆನಪಿನ ಶಕ್ತಿ ಬರಬಹುದು ಎಂಬ ಕುತೂಹಲ ಹಾಗೆ ಉಳಿದಿದೆ.

  ಈಗ ಸಂಜು ಮತ್ತು ಹರ್ಷ ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದಾರೆ. ಇದನ್ನು ಗಮನಿಸಿದ ಮಾನ್ಸಿ ಹರ್ಷನ ಮನಸ್ಥಿತಿಯ ಮೇಲೆ ಮುಂದಾಗುವ ಪರಿಣಾಮದ ಬಗ್ಗೆ ಶಾರದಾ ದೇವಿ ಬಳಿ ಮಾತನಾಡಿದ್ದಾಳೆ.

  BBK9:ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದಂದೇ ಕಣ್ಣೀರಿಟ್ಟ ದಿವ್ಯಾ!BBK9:ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದಂದೇ ಕಣ್ಣೀರಿಟ್ಟ ದಿವ್ಯಾ!

  ಸಂಜು, ಅನು ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾನೆ. ಇದು ಅನುಗೆ ಇರಿಟೇಟ್ ಮಾಡುತ್ತಿದ್ದರೆ, ಸುಬ್ಬು ಮತ್ತು ಪುಷ್ಪಾ ಮುಗ್ಧರಂತೆ ಭಾವಿಸಿದ್ದಾರೆ. ಆದರೆ ಶಾರದಾ ದೇವಿಗೆ ಸಂಜುಗೆ ಅನುಮಾನ ಮೇಲಿರುವ ಹೆಚ್ಚಿದೆ. ಆದರೆ ಅವರ ತಂದೆ-ತಾಯಿ ಬಗ್ಗೆ ಸಂಜುಗೆ ನೆನಪೇ ಆಗೋದಿಲ್ವಾ ಎಂದು ಯೋಚಿಸಿದ್ದಾರೆ.

  ಸಂಜು ಮೇಲೆ ಸುಬ್ಬು ವಿಶ್ವಾಸ

  ಸಂಜು ಮೇಲೆ ಸುಬ್ಬು ವಿಶ್ವಾಸ

  ಇನ್ನು ಅನು ಆಫೀಸಿಗೆ ಹೊರಡುತ್ತಾಳೆ. ಆಗ ಪುಷ್ಪಾ, ಅನುಳನ್ನು ತಡೆಯುತ್ತಾಳೆ. ಈಗ ನಿನ್ನ ಆರೋಗ್ಯ ಮುಖ್ಯ ಅನು ಆಫೀಸಿನಲ್ಲಿ ಜನರಿದ್ದಾರೆ. ನೀನು ರೆಸ್ಟ್ ಮಾಡು ಎಂದು ಹೇಳುತ್ತಾಳೆ. ಆದರೆ ಅನು ಇಲ್ಲ ನಾನು ಆಫೀಸಿಗೆ ಹೋಗಲೇಬೇಕು. ನಾನೀಗ ಆರಾಮಾಗಿದ್ದೀನಿ. ಮನೆಯಲ್ಲೇ ಕೂತರೆ ತಲೆ ಕೆಡುತ್ತೆ. ದೇಹದ ಆರೋಗ್ಯದ ಜೊತೆಗೆ ಮನಸಿನ ಆರೋಗ್ಯವನ್ನೂ ನೋಡಿಕೊಳ್ಳಬೇಕಲ್ಲ ಎಂದು ಹೇಳುತ್ತಾಳೆ. ಇನ್ನು ಸುಬ್ಬು ಏನೂ ಹೇಳುವುದಿಲ್ಲ. ಆಫೀಸಿನಲ್ಲೂ ಅನು ಬಗ್ಗೆ ಕಾಳಜಿ ವಹಿಸುವವರು ಇದ್ದಾರೆ ಬಿಡು ಪುಷ್ಪಾ ಎಂದು ಸಂಜು ಬಗ್ಗೆ ಹೇಳುತ್ತಾನೆ.

  ಆಫೀಸಿಗೆ ಬಂದ ಝೇಂಡೇಗೆ ಅವಮಾನ

  ಆಫೀಸಿಗೆ ಬಂದ ಝೇಂಡೇಗೆ ಅವಮಾನ

  ಆಫೀಸಿಗೆ ಹರ್ಷ ಮತ್ತು ಸಂಜು ಒಟ್ಟಿಗೆ ಬರುತ್ತಾರೆ. ಅನುಳನ್ನು ನೋಡಿದ ಸಂಜು ಕನ್ನಡದಲ್ಲಿ ವಿಶ್ ಮಾಡುತ್ತಾನೆ. ಮೀರಾ ಕೂಡ ಇದೇ ಸಮಯಕ್ಕೆ ಆಫೀಸಿಗೆ ಬರುತ್ತಾಳೆ. ಇನ್ನು ಎಲ್ಲರೂ ತಮ್ಮ ಪಾಡಿಗೆ ತಾವು ಹೋದರೆ, ಸಂಜು ಅನು ಹಿಂದೆ ಹೋಗಿ ಮಾತನಾಡಿಸಲು ಮುಂದಾಗುತ್ತಾನೆ ಆದರೆ ಏನು ಮಾತನಾಡುವುದು ಎಂಬುದೇ ತಿಳಿಯೊಲ್ಲ. ಇನ್ನು ಝೇಂಡೇ ನನ್ನ ಸಾಮ್ರಾಜ್ಯವಿದು. ಈಗ ಇಲ್ಲಿಗೆ ಬರೋದಕ್ಕೆ ಹಿಂಜರಿಕೆ ಎಂದುಕೊಂಡು ಆಫಿಸಿಗೆ ಬರುತ್ತಾನೆ. ಮೀರಾ, ಝೇಂಡೇ ಜೊತೆಗೆ ಮಾತನಾಡುತ್ತಿರುತ್ತಾಳೆ. ಆಗ ಬರುವ ಹರ್ಷ, ಝೇಂಡೇಗೆ ಅಪಾಯಿಂಟ್ ಮೆಂಟ್ ಇಲ್ಲದೇ ಯಾಕೆ ಬಂದಿದ್ದು. ಅಮ್ಮ ಅವತ್ತೇ ಹೇಳಿದ್ದಾರಲ್ಲ. ನೀವು ಆಫೀಸ್ ಎಂಪ್ಲಾಯ್ ಅಲ್ಲ ಎಂಬುದನ್ನು ಹೇಳುವ ಮೂಲಕ ಝೇಂಡೇಗೆ ಅವಮಾನವನ್ನು ಮಾಡಿ ಕಳಿಸುತ್ತನೆ. ಝೇಂಡೇ ಹೋಗುವಾಗ ಸಂಜು ಮತ್ತು ಅನು ಕೂಡ ಎದುರಾಗುತ್ತಾರೆ.

  ಸಂಜುಗೆ ಬೈದ ಅನು

  ಸಂಜುಗೆ ಬೈದ ಅನು

  ಇನ್ನು ಅನು ಫ್ಯಾಕ್ಟರಿಗೆ ಹೋಗಬೇಕಿರುತ್ತದೆ. ಅದಕ್ಕೆ ಹರ್ಷ ನೀವೊಬ್ಬರೆ ಹೋಗಬೇಡಿ ಎಂದು ಸಂಜುನನ್ನು ಜೊತೆ ಮಾಡಿ ಕಳಿಸುತ್ತಾನೆ. ಆಗ ಸಂಜು ಕಾರಿನಲ್ಲಿರಬೇಕಾದಾಗ ಅನು ಜೊತೆ ಮಾತನಾಡುತ್ತಿರುತ್ತಾನೆ. ತನಗೆ ಅನು ಮೇಲಿರುವ ಕಾಳಜಿ ಹಾಗೂ ಪ್ರೀತಿ ಬಗ್ಗೆ ಹೇಳುತ್ತಾನೆ. ಅಲ್ಲದೇ, ನಮ್ಮಿಬ್ಬರಿಗೂ ಯಾವುದೋ ಸಂಬಂಧವಿದೆ ಎನಿಸುತ್ತದೆ. ನಿಮಗೂ ಹಾಗೆ ಅನಿಸುತ್ತಾ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಕೋಪಗೊಂಡ ಅನು ಕಾರಿನಿಂದ ಇಳಿದು ಬಂದು ಸಂಜುಗೆ ಬೈಯುತ್ತಾಳೆ. ನನ್ನ ಬಗ್ಗೆ ಹೀಗೆ ಮಾತನಾಡುವ ಬದಲು ನಿಮ್ಮ ಹೆಂಡತಿ ಬಗ್ಗೆ ಮಾತನಾಡಿ ಕೇಳಿಸಿಕೊಳ್ಳುತ್ತೇನೆ. ಹಳೆಯ ನೆನಪುಗಳನ್ನು ತಂದುಕೊಳ್ಳಿ ಎಂದು ಬೈದು ಬುದ್ಧಿವಾದ ಹೇಳುತ್ತಾಳೆ.

  ಸಂಜು ವಿಚಾರದಲ್ಲಿ ಶಾರದಾ ದೇವಿಗೆ ಅನುಮಾನ

  ಸಂಜು ವಿಚಾರದಲ್ಲಿ ಶಾರದಾ ದೇವಿಗೆ ಅನುಮಾನ

  ಇನ್ನು ಶಾರದಾ ದೇವಿ, ಪ್ರಿಯದರ್ಶಿನಿ ಅವರಿಗೆ ಕರೆ ಮಾಡಿ ಮಾತನಾಡುತ್ತಾರೆ. ಆಗ ನೀವ್ಯಾಕೆ ಇನ್ನು ಸಂಜುಗೆ ಫೋನ್ ಮಾಡಿಲ್ಲ. ಅವರ ಹೆಂಡತಿ ಆರಾಧನ ಯಾವಾಗ ಬರುತ್ತಾರೆ ಎಂದೆಲ್ಲಾ ಪ್ರಶ್ನೆ ಮಾಡುತ್ತಾರೆ. ಪ್ರಿಯದರ್ಶಿನಿ ಅವರಿಗೆ ಈ ಮಾತುಗಳಿಗೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆರಾಧನಾ ಹಾಗೂ ವಿಶ್ವಾಸ್ ನಡುವೆ ವೈಮನಸ್ಸಿದೆ. ಅದನ್ನು ಅವರೇ ಸರಿ ಮಾಡಿಕೊಳ್ಳುತ್ತಾರೆ ಎಂಬಂತೆ ಮಾತನಾಡುತ್ತಾರೆ. ಬಳಿಕ ಶಾರದಾ ಪುಷ್ಪಾಗೆ ಫೋನ್ ಮಾಡಿ ಮಾತಾಡುತ್ತಾರೆ. ಆಗ ಇದೇ ವಿಚಾರಕ್ಕೆ ಇಬ್ಬರೂ ತಮ್ಮ ಅನುಮಾನವಮನ್ನು ವ್ಯಕ್ತಪಡಿಸುತ್ತಾರೆ. ಹಾಗಾದರೆ, ಈಗ ಪ್ರಿಯದರ್ಶಿನಿ ಸಂಜು ಮತ್ತು ಆರಾಧನಾ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತಾರಾ.

  English summary
  jothe jotheyali Serial 25th october Episode Written Update. Jhende comes to office. But harsha scolds him and sends back. Anu scolds sanju to think about his wife.
  Tuesday, October 25, 2022, 20:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X