For Quick Alerts
  ALLOW NOTIFICATIONS  
  For Daily Alerts

  ಹಳೆಯ ಫೋನ್ ಅನ್ನು ಸಂಜು ಹಾಳು ಮಾಡಿದ್ದೇಕೆ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್, ಸಂಜು ಆಗಿ ಎಲ್ಲರ ಎದುರು ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಇದು ಗೊತ್ತಿದೆ. ಆದರೆ ಧಾರಾವಾಹಿಯಲ್ಲಿರುವ ಪಾತ್ರಗಳಿಗೆ ಆರ್ಯ ಸಾವನ್ನಪ್ಪಿದ್ದು, ಸಂಜು ಬೇರೆಯ ವ್ಯಕ್ತಿ ಎಂದು ತಿಳಿದಿದ್ದಾರೆ.

  ಸಂಜುಗೆ ನೆನಪಿನ ಶಕ್ತಿ ಇಲ್ಲದ ಕಾರಣ ಆತ ಯಾರು ಎಂಬುದು ಆತನಿಗೂ ಗೊತ್ತಿಲ್ಲ. ಬೇರೆಯವರು ಹೇಳಿದ್ದನ್ನಷ್ಟೇ ಕೇಳುತ್ತಿದ್ದಾನೆ. ಆದರೆ ಅನು ವಿಚಾರದಲ್ಲಿ ಮಾತ್ರ, ಆಕೆಗೂ ತನಗೂ ಯಾವುದೋ ಸಂಬಂಧವಿದೆ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ಇದರಿಂದ ಕೆಲ ಅನುಮಾನಗಳು ಕೂಡ ಸೃಷ್ಟಿಯಾಗಿವೆ.

  ತಾರಕಕ್ಕೆ ಏರಿದ ನಂಜವ್ವ-ಬಂಗಾರಮ್ಮನ ಜಗಳ!ತಾರಕಕ್ಕೆ ಏರಿದ ನಂಜವ್ವ-ಬಂಗಾರಮ್ಮನ ಜಗಳ!

  ಇನ್ನು ಝೇಂಡೇಗೆ ಸಂಜು ಮೇಲೆ ಹಾಗೂ ಆರ್ಯನ ಸಾವಿನ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಈಗಾಗಲೇ ತನ್ನದೇ ರೀತಿಯಲ್ಲಿ ತನಿಖೆಯನ್ನೂ ಆರಂಭಿಸಿದ್ದಾನೆ. ಆದರೆ, ಸತ್ಯ ಮೊದಲು ಯಾರಿಗೆ ತಿಳಿಯುತ್ತದೆ ಎಂಬುದೇ ಧಾರಾವಾಹಿಯಲ್ಲಿರುವ ಕುತೂಹಲಕಾರಿ ಅಂಶ.

  ಫೋನ್ ಉಡುಗೊರೆ ಕೊಟ್ಟ ಹರ್ಷ

  ಫೋನ್ ಉಡುಗೊರೆ ಕೊಟ್ಟ ಹರ್ಷ

  ಸಂಜು ಬಳಿ ಇರುವ ಫೋನ್ ವಿಶ್ವಾಸ್ ದೇಸಾಯಿ ಅವರದ್ದು. ಆ ಫೋನಿಗೆ ಆಗಾಗ ಆರಾಧನಾ ಕಾಲ್ ಬರುತ್ತಿರುತ್ತದೆ. ಆದರೆ ಸಂಜುಗೆ ಈ ಆರಾಧನಾ ಯಾರು..? ಅವರೊಂದಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಿಲ್ಲ. ಹಾಗಾಗಿ ಆ ಫೋನ್ ಅನ್ನೇ ಬಳಸುವುದಿಲ್ಲ. ತನ್ನ ಫೋನ್ ಹಾಳಾಗಿದೆ ಎಂಬ ಸುಳ್ಳನ್ನು ಹೇಳಿರುತ್ತಾನೆ. ಈ ಸುಳ್ಳನ್ನೇ ನಂಬಿದ ಹರ್ಷ, ಸಂಜುಗೆ ಹೊಸ ಫೋನ್ ಅನ್ನು ಗಿಫ್ಟ್ ಮಾಡುತ್ತಾನೆ. ಇದರಿಂದ ಸಂಜು ಖುಷಿ ಪಡುತ್ತಾನೆ. ಹರ್ಷ ಫೋನ್ ಅನ್ನು ಗಿಫ್ಟ್ ಮಾಡಿದ್ದಕ್ಕೆ ಶಾರದಾ ಕೂಡ ಸಂತಸ ಪಡುತ್ತಾಳೆ. ಇನ್ನು ನೀನು ಆರಾಧನಾ ಹಾಗೂ ನಿಮ್ಮ ತಾಯಿಗೆ ಫೋನ್ ಮಾಡಬಹುದು ಎಂದು ಹೇಳುತ್ತಾಳೆ.

  ಮೊದಲ ಕರೆ ಅನುಗೆ ಮಾಡಿದ ಸಂಜು

  ಮೊದಲ ಕರೆ ಅನುಗೆ ಮಾಡಿದ ಸಂಜು

  ಇನ್ನು ಸಂಜು ಫೋನ್ ಅನ್ನು ತೆಗೆದುಕೊಂಡು ತನ್ನ ರೂಮಿಗೆ ಹೋಗುತ್ತಾನೆ. ನನ್ನ ಹಳೆಯ ಫೋನ್ ಇನ್ನು ಬೇಡ. ಅದರಲ್ಲಿರುವ ಕಾಂಟ್ಯಾಕ್ಟ್ ಗಳು ಕೂಡ ನನಗೆ ಬೇಡ. ನನಗೆ ಈ ಆರಾಧನಾ ಯಾರು ಎಂಬುದೇ ಗೊತ್ತಾಗುವುದಿಲ್ಲ. ಅವರ ಬಳಿ ಏನು ಮಾತನಾಡುವುದೋ. ಈ ಹೊಸ ಫೋನ್‌ನಲ್ಲಿ ನನಗೆ ನೆನಪಿರುವಂತಹ, ಬೇಕಾಗಿರುವಂತಹ ಕಾಂಟ್ಯಾಕ್ಟ್ ಗಳನ್ನು ಮಾತ್ರ ಸೇವ್ ಮಾಡಿಕೊಳ್ಳುತ್ತೀನಿ ಎಂದು ಹೇಳಿಕೊಂಡು ಮೊದಲು ಅನುಗೆ ಕರೆ ಮಾಡುತ್ತಾನೆ. ನನಗೆ ಹರ್ಷ ಹೊಸ ಫೋನ್ ಕೊಡಿಸಿದ್ರು, ಅದಕ್ಕೆ ನಿಮಗೆ ಫಸ್ಟ್ ಕಾಲ್ ಮಾಡ್ದೆ ಎಂದು ಹೇಳುತ್ತಾನೆ. ಅದಕ್ಕೆ ಅನು ನನಗ್ಯಾಕೆ ಮಾಡಿದ್ದು, ನಿಮ್ಮ ಹೆಂಡತಿಗೆ ಮಾಡಬೇಕಿತ್ತು. ಆಗ ಅವರು ಖುಷಿ ಪಡುತ್ತಿದ್ದರು ಎಂದು ಹೇಳುತ್ತಾಳೆ. ಸಂಜು ಹಾಗೆ ಇಲ್ಲ ನನ್ನ ಪ್ರೀತಿಯನ್ನ ನೆನಪು ಮಾಡಿದವರು ನೀವು ಎಂದು ಮ್ಯಾನೇಜ್ ಮಾಡುತ್ತಾನೆ.

  ಜಗಳವಾಡಿದ ಮಾನ್ಸಿ

  ಜಗಳವಾಡಿದ ಮಾನ್ಸಿ

  ಇತ್ತ ಮಾನ್ಸಿ ಹರ್ಷನ ಜೊತೆಗೆ ಜಗಳ ಮಾಡುತ್ತಾಳೆ. ಸಂಜು ಫೋನ್ ಚೆನ್ನಾಗಿಯೇ ಇತ್ತು. ನೀವ್ಯಾಕೆ ಅಷ್ಟು ಕಾಸ್ಟ್ಲಿ ಫೋನ್ ಕೊಡಿಸಿದ್ದು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಹರ್ಷ ಫೋನ್ ಕೆಟ್ಟೋಗಿದೆ ಎಂದಿದ್ದಕ್ಕೆ ಕೊಡಿಸಿದ್ದು ಎಂದು ಹೇಳಿದಾಗ ಮಾನ್ಸಿ ಚೆಕ್ ಮಾಡೋಣ ಬನ್ನಿ ಎಂದು ಸಂಜು ರೂಮಿಗೆ ಹೋಗುತ್ತಾರೆ. ನಿಮ್ಮ ಫೋನ್ ಡಾಟಾಗಳನ್ನು ಟ್ರಾನ್ಸ್ ಫರ್ ಮಾಡಿಕೊಡೋಣ ಅಂತ ಬಂದ್ವಿ ಹಳೆ ಫೋನ್ ಕೊಡಿ ಎನ್ನುತ್ತಾಳೆ. ಸಂಜು ಫೋನ್ ಕೊಟ್ಟಾಗ ಆ ಫೋನ್ ಆನ್ ಆಗುವುದಿಲ್ಲ. ಕೊನೆಗೆ ತನ್ನ ಊಹೆ ತಪ್ಪು ಎಂದು ತಿಳಿದು ಹೋಗುತ್ತಾಳೆ.

  ಸುಳ್ಳು ಹೇಳುತ್ತಿರುವ ಸಂಜು

  ಸುಳ್ಳು ಹೇಳುತ್ತಿರುವ ಸಂಜು

  ಆದರೆ ಸಂಜು ಆ ಫೋನ್ ಅನ್ನು ಬೇಕಂತಲೇ ಹಾಳು ಮಾಡಿರುತ್ತಾನೆ. ಅದು ಯಾಕೆ ಎಂಬುದು ಮಾತ್ರ ತಿಳಿಸುವುದಿಲ್ಲ. ಇನ್ನು ಸಂಜು, ಅನು ಬಳಿ ಹೇಳುತ್ತಿರುವ ಸುಳ್ಳಿನ ಬಗ್ಗೆ ಅವನೇ ಯೋಚಿಸುತ್ತಾನೆ. ನಾನ್ಯಾಕೆ ಇಷ್ಟೊಂದು ಸುಳ್ಳು ಹೇಳುತ್ತೇನೆ.? ನಾಳೆ ಅನು ಅವರು ನಿಮ್ಮ ಹೆಂಡತಿಗೆ ಫೋನ್ ಮಾಡಿದ್ದಿರಾ ಎಂದು ಕೇಳಿದರೆ ಏನು ಹೇಳುವುದು ಎಂದು ಯೋಚಿಸುತ್ತಾನೆ. ಇನ್ನು ಸಂಜು ಹೇಳುತ್ತಿರುವ ಸುಳ್ಳುಗಳಿಗೆ ಇಷ್ಟರಲ್ಲೇ ಕೊನೆ ಕಾದಿರೋದಂತೂ ಪಕ್ಕಾ.

  English summary
  jothe jotheyali Serial 27th october Episode Written Update. Harsha gifts new phone for sanju. Sanju first calls anu from new phone and he speaks happily.
  Thursday, October 27, 2022, 19:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X