For Quick Alerts
  ALLOW NOTIFICATIONS  
  For Daily Alerts

  ಬೇರೆಯವರ ಮೇಲಿನ ಕೋಪವನ್ನು ಸಂಜು ಮೇಲೆ ತೋರಿದ ಅನು!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಿರುತ್ತಾನೆ. ಆರಾಧನಾ ವಿಚಾರದಲ್ಲಿ ಅನು ಬಳಿ ಅವಳು ನೆನಪಾಗುತ್ತಾಳೆ. ಅವಳ ಜೊತೆಗೆ ಜಗಳವಾಡಿದ್ದೆ ಎಂದೆಲ್ಲಾ ಬಾಯಿಗೆ ಬಂದಂತೆ ಮಾತನಾಡಿರುತ್ತಾನೆ.

  ಈ ಬಗ್ಗೆ ಒಬ್ಬನೇ ಇರುವಾಗ ಯೋಚಿಸುವ ಸಂಜು ನಾನ್ಯಾಕೆ ಇಷ್ಟು ಸುಳ್ಳುಗಳನ್ನು ಹೇಳುತ್ತಿದ್ದೇನೆ. ಇದೆಲ್ಲಾ ಎಷ್ಟು ಸರಿ. ಅನುಗೆ ಹತ್ತಿರವಾಗುವ ಸಲುವಾಗಿ ಹೀಗೆಲ್ಲಾ ಸುಳ್ಳು ಹೇಳುತ್ತಿದ್ದೇನಾ..? ಇನ್ಮೇಲಿಂದ ನಾನು ಹೇಳಿದ ಸುಳ್ಳುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅಂದುಕೊಳ್ಳುತ್ತಾನೆ.

  ಶ್ರೀ ಹಾಗೂ ಬಂಗಾರಮ್ಮನನ್ನು ಒಟ್ಟಿಗೆ ನೋಡಿದ ಸ್ನೇಹಾಶ್ರೀ ಹಾಗೂ ಬಂಗಾರಮ್ಮನನ್ನು ಒಟ್ಟಿಗೆ ನೋಡಿದ ಸ್ನೇಹಾ

  ಇನ್ನು ಸಂಜು ಬೇಕಂತಲೇ ತನ್ನ ಫೋನ್ ಹಾಳಾಗಿದೆ ಎಂದು ಸುಳ್ಳು ಹೇಳಿ ಹೊಸ ಫೋನ್ ಅನ್ನು ತೆಗೆಸಿಕೊಂಡಿದ್ದಾನೆ. ಹಳೆಯ ಫೋನ್ ಚೆನ್ನಾಗಿದ್ದರೂ ಅದರಿಂದ ಸಿಮ್ ತೆಗೆದು ಬಿಸಾಡಿದ್ದಾನೆ. ಫೋನ್ ಅನ್ನು ಆಫ್ ಮಾಡಿದ್ದಾನೆ.

  ರಮ್ಯಾಳನ್ನು ರೆಡಿ ಮಾಡಿದ ಅನು

  ರಮ್ಯಾಳನ್ನು ರೆಡಿ ಮಾಡಿದ ಅನು

  ರಮ್ಯಾಳನ್ನು ನೋಡಲು ಗಂಡಿನವರು ಬರುತ್ತಿದ್ದಾರೆ. ಹೀಗಾಗಿ ರಮ್ಯಾ ಆಫೀಸಿಗೆ ರಜೆ ಹಾಕಿದ್ದಾಳೆ. ರಮ್ಯಾಳನ್ನು ರೆಡಿ ಮಾಡಲು ಅನು ಬಂದಿದ್ದಾಳೆ. ರಮ್ಯಾಳನ್ನು ರೆಡಿ ಮಾಡುವಾಗ ತನಗೆ ಈ ಮದುವೆ ಎಲ್ಲಾ ಇಷ್ಟವಿಲ್ಲ ಎಂಬಂತೆ ಮಾತನಾಡುತ್ತಿರುತ್ತಾಳೆ. ರೆಡಿಯಾಗಿ ನಿಲ್ಲಬೇಕು. ಅವರು ಇಷ್ಟಪಟ್ಟರೆ ನಾವು ಓಕೆ ಅನ್ನಬೇಕು. ವರದಕ್ಷಿಣೆ ಮಾತನಾಡಿ ಮಾರಾಟ ಮಾಡುತ್ತಾರೆ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಅನು ಬೇಸರ ಮಾಡಿಕೊಳ್ಳುತ್ತಾಳೆ. ಹಾಗೆಲ್ಲಾ ಮಾತನಾಡಬೇಡ ಎಂದು ಹೇಳುತ್ತಿರುತ್ತಾಳೆ.

  ಆರ್ಯನನ್ನು ಮಿಸ್ ಮಾಡಿಕೊಂಡ ಅನು

  ಆರ್ಯನನ್ನು ಮಿಸ್ ಮಾಡಿಕೊಂಡ ಅನು

  ಅಷ್ಟರಲ್ಲಿ ಅಲ್ಲಿಗೆ ರಮ್ಯಾ ತಾಯಿ ರಜಿನಿ ಬರುತ್ತಾಳೆ. ಅನುಳನ್ನು ಆಫೀಸಿಗೆ ಹೋಗೋದಿಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ರಮ್ಯಾ ಇಲ್ಲ ಇವತ್ತು ಅವಳು ನನ್ನ ಜೊತೆಗೆ ಇರುತ್ತಾಳೆ ಎನ್ನುತ್ತಾಳೆ. ಆಗ ರಜಿನಿ, ಈ ಶುಭ ಕಾರ್ಯಗಳಲ್ಲಿ ಭಾಗಿಯಾಗಬಾರದು ಎಂದು ಗೊತ್ತಿರಲ್ವಾ ಎಂದು ಹೇಳುತ್ತಾಳೆ. ಈ ಮಾತಿನಿಂದ ಅನುಗೆ ಬೇಸರವಾದರೂ ಕೂಡ ಇಲ್ಲ ನನಗೆ ಇವತ್ತು ಆಫೀಸಿನಲ್ಲಿ ತುಂಬಾ ಕೆಲಸವಿದೆ ಎಂದು ಹೇಳಿ ಅಲ್ಲಿಂದ ಹೊರಟು ಬರುತ್ತಾಳೆ. ಆಚೆ ಬಂದು ಆರ್ಯ ಸರ್ ಈ ಹೊತ್ತಿಗೆ ನೀವು ನನ್ನ ಜೊತೆಗೆ ಇರಬೇಕಿತ್ತು. ಐ ಮಿಸ್ ಯೂ ಸರ್ ಎಂದು ಅಳುತ್ತಾಳೆ.

  ಪ್ರಿಯದರ್ಶಿನಿಗೆ ಕರೆ ಮಾಡಿದ ಸಂಜು

  ಪ್ರಿಯದರ್ಶಿನಿಗೆ ಕರೆ ಮಾಡಿದ ಸಂಜು

  ಇತ್ತ ಸಂಜು ಮತ್ತು ಹರ್ಷ ಇಬ್ಬರೂ ಕೂಡ ವರ್ಕೌಟ್ ಮಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬರುವ ಶಾರದಾ ದೇವಿ ಅವರು ಸಂಜುನನ್ನು ಆರಾಧನಾಗೆ ಮತ್ತು ಪ್ರಿಯದರ್ಶೀನಿಗೆ ಫೋನ್ ಮಾಡಿದ್ದಾ ಎಂದು ಕೇಳುತ್ತಾಳೆ. ಅದಕ್ಕೆ ಸಂಜುಗೆ ಏನು ಹೇಳಬೇಕೋ ತಿಳಿಯುವುದಿಲ್ಲ. ಆರಾಧನಾ ಫೊನ್ ರಿಸೀವ್ ಮಾಡಿಲ್ಲ ಎಂದು ಹೇಳುತ್ತಾನೆ. ಇನ್ನು ಪ್ರಿಯದರ್ಶಿನಿ ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ ಎನ್ನುತ್ತಾನೆ. ಅದಕ್ಕೆ ಶಾರದಾ ತಾನೇ ಸಂಜು ಫೋನ್‌ನಿಂದ ಡೈಯಲ್ ಮಾಡಿ ಕೊಡುತ್ತಾಳೆ. ಸಂಜು ಬಲವಂತವಾಗಿಯೇ ಮಾತನಾಡುತ್ತಾನೆ. ಶಾರದಾ ಫೋರ್ಸ್ ಮಾಡಿ ಆರಾಧನಾ ಬಗ್ಗೆ ಕೇಳಲು ಹೇಳುತ್ತಾಳೆ. ಸಂಜು ಕೇಳಿದ್ದಕ್ಕೆ ಪ್ರಿಯದರ್ಶಿನಿ ಅವಳು ಫೋನ್ ರಿಸೀವ್ ಮಾಡಿಲ್ಲ ಎಂದು ಹೇಳುತ್ತಾಳೆ. ಇದೇ ಮಾತನ್ನು ಸಂಜು ಫೋನ್ ಕಟ್ ಮಾಡಿ ಹೇಳುತ್ತಾನೆ.

  ಸಂಜು ಮೇಲೆ ಕೋಪಗೊಂಡ ಅನು

  ಸಂಜು ಮೇಲೆ ಕೋಪಗೊಂಡ ಅನು

  ಇನ್ನು ಸಂಜು ಆಫೀಸಿಗೆ ಹೋಗುತ್ತಾನೆ. ಅಲ್ಲಿ ನೋಡಿದರೆ ಅನು ಬಂದಿರುವುದಿಲ್ಲ. ಯಾವಾಗ ಬರುತ್ತಾಳೆ ಎಂಬುದೂ ಗೊತ್ತಿರುವುದಿಲ್ಲ. ಹೀಗಾಗಿ ಅನುಗೆ ಫೋನ್ ಮಾಡಬೇಕು ಎಂದುಕೊಳ್ಳುತ್ತಾನೆ. ಆದರೆ ಫೋನ್ ಮಾಡಿದರೆ ತಪ್ಪಾಗುತ್ತದೆ ಎಂದು ಸುಮ್ಮನಿರುತ್ತಾನೆ. ಅಷ್ಟರಲ್ಲಿ ಅನು ಆಫೀಸಿಗೆ ಬರುತ್ತಾಳೆ. ಅವಳಿಗೆ ಫೈಲ್ ಕೊಡುವ ಸಂಜು ಚೆಕ್ ಮಾಡಲು ಹೇಳುತ್ತಾನೆ. ಆದರೆ ಅನು ಚೆಕ್ ಮಾಡದೇ, ನೀವು ಹೋಗಿರಿ ಎನ್ನುತ್ತಾಳೆ. ಆಗ ಸುಮ್ಮನಿರದ ಸಂಜು, ಏನಾದ್ರೂ ಪಾಬ್ಲಮ್ ಆಯ್ತಾ..? ಹೇಳಿಕೊಳ್ಳಿ ಎಂದು ಬಲವಂತ ಮಾಡುತ್ತಾನೆ. ಆಗ ಅನು ತನ್ನ ಸಿಟ್ಟನ್ನೆಲ್ಲಾ ಸಂಜು ಮೇಲೆ ತೋರಿಸುತ್ತಾಳೆ.

  English summary
  jothe jotheyali Serial 28th october Episode Written Update. Anu shows her anger on sanju. She scolds sanju in office.
  Sunday, October 30, 2022, 17:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X