Jothe Jotheyali: ಅನು ಸಿರಿಮನೆಗೆ ಹೊಸಮನಿ ಅಜ್ಜಯ್ಯ ಹೇಳಿದ ಸತ್ಯವೇನು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಝೇಂಡೇ ಮಾತು ಕೇಳಿ ಎಡವಟ್ಟು ಮಾಡಿಕೊಂಡಿದ್ದಾಳೆ. ಇಡೀ ವರ್ಧನ್ ಕಂಪನಿಯನ್ನೇ ಸಂಕಷ್ಟಕ್ಕೆ ದೂಡಿದ್ದಾಳೆ. ಕಂಪನಿಯ ವಹಿವಾಟು ಎಲ್ಲವೂ ತಳೆಕೆಳಗಾಗಿದೆ.

ಅನುಗೆ ಈಗ ಆರ್ಯ ಬದುಕಿದ್ದಾನೆ ಎಂಬುದರ ಬಗ್ಗೆ ಗಮನ ಕೊಡಬೇಕಾ..? ಸಂಜು ನಡವಳಿಕೆಗೆ ಪರಿಹಾರ ಹುಡುಕಬೇಕಾ ಇಲ್ಲವೇ ಕಂಪನಿಯಲ್ಲಿ ಆಗಿರುವ ತೊಂದರೆಗಳನ್ನು ಸರಿ ಪಡಿಸಬೇಕಾ ಎಂಬ ಗೊಂದಲವಿದೆ.

ಆರಾಧನಾಳಿಗೆ ಈಗ ಈ ಮನೆಯೂ ಬೇಡ ಇವರ ಸಹವಾಸವೂ ಬೇಡ ಎಂಬಂತಾಗಿದೆ. ಮೊದಲು ತನ್ನ ಪತಿ ವಿಶ್ವಾಸ್ ದೇಸಾಯಿ ಅನ್ನು ಕರೆದುಕೊಂಡು ಊರಿಗೆ ಹೋಗಲು ನಿರ್ಧಾರ ಮಾಡಿದ್ದಾಳೆ.

ಮತ್ತೆ ರಾಜನಂದಿನಿ ರೂಮಿಗೆ ಹೋದ ಸಂಜು

ಮತ್ತೆ ರಾಜನಂದಿನಿ ರೂಮಿಗೆ ಹೋದ ಸಂಜು

ಆರಾಧನಾ ಊರಿಗೆ ಹೊರಟ ವಿಚಾರವನ್ನು ಮನೆಯಲ್ಲಿ ಎಲ್ಲರಿಗೂ ತಿಳಿಸುತ್ತಾಳೆ. ಸಂಜು ಒಬ್ಬನೇ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಎಲ್ಲರಿಗೂ ಹೇಗೆ ಅರ್ಥ ಮಾಡಿಸುವುದು ಎಂದು ಯೋಚಿಸುತ್ತಿರುತ್ತಾನೆ. ಈ ವೇಳೆಗೆ ಹೊಸಮನಿ ಬಂದು ಮಾತನಾಡಿಸುತ್ತಾರೆ. ಆಗ ಸಂಜು ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾನೆ. ನಾನು ಆರ್ಯ ಎಂಬುದನ್ನು ಯಾರೂ ನಂಬುತ್ತಿಲ್ಲ ಎನ್ನುತ್ತಾನೆ. ಆಗ ಹೊಸಮನಿ ಅಜ್ಜಯ್ಯ ನಾನು ನಂಬುತ್ತೀನಿ. ನೀವು ಅವತ್ತು ರಾಜನಂದಿನಿ ಅವರ ರೂಮಿಗೆ ಹೋಗಿದ್ದನ್ನು ನೋಡಿದ್ದೀನಿ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಖುಷಿಯಾದ ಸಂಜು ಕೂಡಲೇ ರಾಜನಂದಿನಿ ರೂಮಿಗೆ ಹೋಗುತ್ತಾನೆ.

ದೂರ ಹೋಗಲು ನಿರ್ಧರಿಸಿದ ಮೀರಾ

ಊರಿಗೆ ಹೋಗಲು ಒಪ್ಪಿದ ಸಂಜು

ಊರಿಗೆ ಹೋಗಲು ಒಪ್ಪಿದ ಸಂಜು

ಇನ್ನು ಅನು, ಸಂಜುನನ್ನು ಹುಡುಕಿ ಬರುತ್ತಾಳೆ. ಆಗ ಸಂಜು, ರಾಜನಂದಿನಿ ರೂಮಿನಿಂದ ಬಂದಿದ್ದಕ್ಕೆ ಬೈಯುತ್ತಾಳೆ. ಅಲ್ಲಿಗೆ ಯಾಕೆ ಹೋಗಿದ್ದು ಎಂದು ಕೇಳುತ್ತಾಳೆ. ಆಗ ಸಂಜು ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಎಂದು ನೋಡೋದಕ್ಕೆ ಹೋಗಿದ್ದೆ ಎನ್ನುತ್ತಾನೆ. ಅನು ಆಗ ಝೇಂಡೇ ಜೊತಗಿರುವ ಫೋಟೋ ತೋರಿಸಿದ್ದಕ್ಕೆ, ಅವರೊಬ್ಬರೇ ನನ್ನ ಆರ್ಯ ಎಂದು ನಂಬಿರುವುದು ಎಂದು ಹೇಳುತ್ತಾನೆ. ಆಗ ಅನು ಇದೆಲ್ಲಾ ಬೇಡ. ನೀವು ಇಲ್ಲಿಂದ ಹೊರಡಿ, ಸುಮ್ಮನೆ ನಿಮ್ಮ ತಲೆಗೆ ಯಾರ್ಯಾರೋ ಏನೇನೋ ತುಂಬುತ್ತಿದ್ದಾರೆ ಎಂದು ಹೇಳುತ್ತಾಳೆ. ಇದಕ್ಕೆ ಸಂಜು ಒಪ್ಪಿಕೊಳ್ಳುತ್ತಾನೆ.

ಹೊಸಮನಿ ಅಜ್ಜಯ್ಯ ಹೇಳಿದ್ದೇನು..?

ಹೊಸಮನಿ ಅಜ್ಜಯ್ಯ ಹೇಳಿದ್ದೇನು..?

ಸಂಜು ಅಲ್ಲಿಂದ ರೂಮಿಗೆ ಹೊರಟ ಮೇಲೆ ಹೊಸಮನಿ ಅಜ್ಜಯ್ಯ ಅನು ಜೊತೆ ಮಾತನಾಡುತ್ತಾರೆ. ಸಂಜು ಈ ಹಿಂದೆಯೂ ರಾಜನಂದಿನಿ ರೂಮಿಗೆ ಹೋದ ರೀತಿ ಬಗ್ಗೆ ಹೇಳುತ್ತಾರೆ. ಈ ಮಾತನ್ನು ಕೇಳಿದ ಅನು ಸಂಜು ಹೇಳುತ್ತಿರುವುದರ ಬಗ್ಗೆ ಮನದೊಳಗೆ ಯೋಚನೆ ಮಾಡುತ್ತಾಳೆ. ಸಂಜು ಮಾತುಗಳಲ್ಲಿ ಸತ್ಯ ಇದೆಯಾ ಎಂಬುದರ ಬಗ್ಗೆ ಯೋಚಿಸುತ್ತಾಳೆ. ಹಾಗಾದರೆ, ಅನುಗೆ ಸಂಜುನೇ ಆರ್ಯ ಎಂಬುದು ಗೊತ್ತಾಗುತ್ತಾ..?

More from Filmibeat

English summary
Jothe Jotheyali Serial 29th December Episode Written Update. Meera feels guilt for her Mistakes. And she is worried about vardhan group.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X