For Quick Alerts
  ALLOW NOTIFICATIONS  
  For Daily Alerts

  ಅನು ಮನಸ್ಸಿನ ಮಾತುಗಳನ್ನು ಸಂಜು ಅರ್ಥ ಮಾಡಿಕೊಂಡನಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನುಗೆ ಆರ್ಯನ ಸಾವಿನ ಬಗ್ಗೆ ಅನುಮಾನವಿದ್ದರೂ, ಆರ್ಯ ಬದುಕಿದ್ದಾನೆ ಎಂದು ಹೇಳಲು ಸಣ್ಣ ಸುಳಿವೂ ಸಿಕ್ಕುವುದಿಲ್ಲ. ಝೇಂಡೇ, ಸಂಜು ಬಾಯಲ್ಲಿ ಮಾತ್ರವೇ ಆರ್ಯನ ಬಗ್ಗೆ ಕೇಳುತ್ತಿರುತ್ತಾಳೆ.

  ಆರ್ಯನನ್ನು ದಾಖಲಿಸಿದ್ದ ಆಸ್ಪತ್ರೆಗೆ ಹೋಗಿದ್ದರೂ ಅನುಗೆ ಆರ್ಯ ಬದುಕಿರುವ ಬಗ್ಗೆ ವೈದ್ಯರು ಹೇಳುವುದಿಲ್ಲ. ಹೀಗಾಗಿ ಅನುಗೆ ಸತ್ಯದ ಬಗ್ಗೆ ಅರಿವಾಗುವುದಿಲ್ಲ. ಪದೇ ಪದೇ ಸಂಜು ಬಂದು ತಾನೇ ಆರ್ಯ ಎಂದರೂ ಅನು ನಂಬಿರುವುದಿಲ್ಲ.

  ಪುಟ್ಟಕ್ಕನ ಮಗಳ ಮದುವೆಗೆ ಬರ್ತಾನಾ ಗಂಡ ಗೋಪಾಲ?ಪುಟ್ಟಕ್ಕನ ಮಗಳ ಮದುವೆಗೆ ಬರ್ತಾನಾ ಗಂಡ ಗೋಪಾಲ?

  ಆದರೆ, ಆರ್ಯನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದ ಝೇಂಡೇ, ವರ್ಧನ್ ಕುಟುಂಬಕ್ಕೆ ಮೋಸ ಮಾಡಿದ್ದಾನೆ. ಶಾರದಾ ದೇವಿ ಹಾಗೂ ಮೀರಾ ಬಳಿ ಸಹಿ ಹಾಕಿಸಿಕೊಂಡು ಎಲ್ಲವನ್ನು ತನ್ನ ಸುಪರ್ದಿಗೆ ಪಡೆದಿದ್ದಾನೆ.

  ಮತ್ತೆ ಆರ್ಯ ನಾನು ಎಂದ ಸಂಜು

  ಮತ್ತೆ ಆರ್ಯ ನಾನು ಎಂದ ಸಂಜು

  ಇತ್ತ ಆರಾಧನಾ ಜೊತೆಗೆ ಇಷ್ಟವಿಲ್ಲದಿದ್ದರೂ ಸಂಜು ಊರಿಗೆ ಹೊರಟಿರುತ್ತಾನೆ. ಇವತ್ತಲ್ಲ ನಾಳೆ ಸತ್ಯ ಗೊತ್ತಾದ ಮೇಲಾದರೂ ಅನು ತನ್ನನ್ನು ಸಂಜು ಎಂದು ಒಪ್ಪಿಕೊಳ್ಳುತ್ತಾರೆ ಎಂದು ನಂಬಿರುತ್ತಾನೆ. ಶಾರದಾ ದೇವಿ ಇದ್ದವಳು ತಲುಪಿದ ಮೇಲೆ ಫೋನ್ ಮಾಡಿ ಎಂದು ಹೇಳಿದಾಗ ಮತ್ತೆ ಸಂಜು ನೀವೇ ನಾನೇ ಆರ್ಯ ಎಂದು ತಿಳಿದ ಮೇಲಾದರೂ ಕರೆಯುತ್ತೀರಾ ಎಂದು ಗೊತ್ತಿದೆ ಎನ್ನುತ್ತಾನೆ. ಈ ಮಾತಿನಿಂದ ಮಾನ್ಸಿ ಮುಜುಗರಕ್ಕೆ ಒಳಗಾಗುತ್ತಾಳೆ. ರಾಜನಂದಿನಿ ಆಯ್ತು ಈಗ ಬ್ರೋ ಇನ್ ಲಾ ಎಂದು ಗೊಣಗುತ್ತಾಳೆ.

  ಮತ್ತೆ ಆರ್ಯನನ್ನು ನೆನಪಿಸಿದ ಸಂಜು

  ಮತ್ತೆ ಆರ್ಯನನ್ನು ನೆನಪಿಸಿದ ಸಂಜು

  ಸಂಜು ಮತ್ತು ಆರಾಧನಾ ಹೊರಟ ಮೇಲೆ ಅನು ಬೇಸರದಲ್ಲಿ ನಿಂತಿರುತ್ತಾಳೆ. ಇದನ್ನು ಗಮನಿಸಿದ ಸಂಜು ಕಾರನ್ನು ನಿಲ್ಲಿಸಿ ವಾಪಸ್ ಬರುತ್ತಾನೆ. ಬಂದು ಅನು ಎಂದು ಕರೆದಾಗ ಅನುಗೆ ಶಾಕ್ ಆಗುತ್ತದೆ. ನೀವ್ಯಾಕೆ ವಾಪಸ್ ಬಂದಿರಿ ಎಂದು ಅನು ಕೇಳಿದ್ದಕ್ಕೆ, ಸಂಜು ನಾನು ಬರ್ತೀನಿ ಅನ್ನೋದು ಗೊತ್ತಿದ್ದೇ ನಿಂತಿದ್ದೀರಾ ಅಲ್ವಾ ಎಂದು ಹೇಳುತ್ತಾನೆ. ಈ ಮಾತಿಗೆ ಅನು ಉತ್ತರಿಸದೇ ಮಾತು ಮರೆಸಲು ಯತ್ನಿಸುತ್ತಾಳೆ. ಆಗ ಸಂಜು ಅಷ್ಟೇ ಅಲ್ವಾ, ನಾನು ಇಲ್ಲಿಂದ ಹೊರಟ ಮೇಲೆ ಎಲ್ಲಾ ಮುಗೀತು ಅಲ್ವಾ. ಅದೇನೆ ಇರಲಿ ನನಗೆ ನಂಬಿಕೆ ಇದೆ. ನಾನು ಅಂದುಕೊಂಡಿದ್ದು ನಡೆಯುತ್ತೆ ಎಂದು ತಿಳಿದಿದ್ದೀನಿ. ನಂಬಿಕೆ ಎಂಬ ಮೂರಕ್ಷರದ ಪದ. ನಮ್ಮ ಬದುಕನ್ನೇ ಬದಲಾಯಿಸುತ್ತೆ ಎನ್ನುತ್ತಾನೆ ಈ ಮಾತನ್ನು ಕೇಳಿ ಅನುಗೆ ಆರ್ಯ ನೆನಪಾಗುತ್ತೆ.

  ನಿಮ್ಮ ಮನಸ್ಸು ಹೇಳುತ್ತಿರುವುದು ನಿಜ

  ನಿಮ್ಮ ಮನಸ್ಸು ಹೇಳುತ್ತಿರುವುದು ನಿಜ

  ಸಂಜು, ಅನುಳನ್ನು ಆರ್ಯನ ಅಂತ್ಯ ಸಂಸ್ಕಾರವಾದ ಸ್ಥಳಕ್ಕೆ ಮತ್ತೆ ಯಾಕೆ ಹೋಗಲಿಲ್ಲ ಎಂದು ಕೇಳುತ್ತಾನೆ. ಮಾತು ಮುಂದುವರಿಸಿ, ನನಗೆ ಗೊತ್ತಿದೆ ನಿಮಗೆ ಆರ್ಯ ಬದುಕಿದ್ದಾನೆ ಎಂಬುದನ್ನು ನಂಬುತ್ತೀರಾ ಎಂದು. ನಿಮ್ಮ ಮನಸ್ಸಿನ ಮಾತನ್ನು ಕೇಳಿ. ಅದು ನಿಜ ಹೇಳುತ್ತಿದೆ. ನಿಮ್ಮ ಆರ್ಯ ಸತ್ತಿಲ್ಲ ನಿಮ್ಮ ಎದುರಿಗೇ ಇದ್ದಾನೆ. ಅದನ್ನು ನಂಬಿ. ಇವತ್ತಲ್ಲ ಈ ಸತ್ಯದ ಅರಿವು ನಿಮಗಾಗುತ್ತದೆ. ಆ ದಿನಕ್ಕಾಗಿ ಕಾಯುತ್ತೀನ. ಈ ಪ್ರಶ್ನೆಗಳನ್ನ ನೀವೇ ಕೇಳಿಕೊಂಡು ಉತ್ತರ ಕೊಟ್ಟುಕೊಳ್ಳಿ ಎಂದು ಹೇಳಿ ಅಲ್ಲಿಂದ ಸಂಜು ಹೊರಟು ಬಿಡುತ್ತಾನೆ.

  ಶಾರದಾ ಕಾಲು ಹಿಡಿದ ಮೀರಾ

  ಶಾರದಾ ಕಾಲು ಹಿಡಿದ ಮೀರಾ

  ಇತ್ತ ಮನೆಗೆ ಬರುವ ಮೀರಾ ಸೀದಾ ಬಂದು ಶಾರದಾ ದೇವಿ ಅವರ ಕಾಲನ್ನು ಹಿಡಿದುಕೊಳ್ಳುತ್ತಾಳೆ. ತಾನು ಮಾಡಿದ ತಪ್ಪಿನ ಬಗ್ಗೆ ಮಾತನಾಡುತ್ತಾಳೆ. ಝೇಂಡೇ ತನಗೆ ಮೋಸ ಮಾಡಿ ಬಿಟ್ಟರು ಎಂದು ಅಳುತ್ತಾಳೆ. ಇದೇ ವೇಳೆಗೆ ಮನೆಗೆ ಒಂದು ಪತ್ರ ಬರುತ್ತದೆ. ಅದು ಶಾನುಭೋಗರು ಬರೆದ ಪತ್ರ. ಅದರಲ್ಲೇನಿದೆ..? ಶಾರದಾ ದೇವಿ ಮುಂದೇನು ಮಾಡುತ್ತಾರೆ ಎಂಬ ಕೌತುಕ ಈಗ ವೀಕ್ಷಕರಲ್ಲಿ ಮೂಡಿದೆ.

  English summary
  Jothe Jotheyali Serial 30th December Episode Written Update. meera comes to sharada devi house. And asks sorry. She tells about her mistake and jhende plan.
  Saturday, December 31, 2022, 18:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X