For Quick Alerts
  ALLOW NOTIFICATIONS  
  For Daily Alerts

  ಝೇಂಡೇ ಆಟ ಇಲ್ಲಿಗೆ ಮುಗಿಯುತ್ತಾ..? ಆರಾಧನಾ ಬರುತ್ತಾಳಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು, ಆರಾಧನಾ ವಿಚಾರದಲ್ಲಿ ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಿದ್ದಾನೆ. ಸಂಜುಗೆ ಅನು ಹತ್ತಿರವಾದಷ್ಟು, ಆರಾಧನಾ ನೆನಪಾಗುತ್ತಿಲ್ಲ. ಯಾರು ಈ ಆರಾಧನಾ, ನನ್ನ ಹೆಂಡತಿ ಎನ್ನುತ್ತಾರೆ, ಆದರೆ ನನಗ್ಯಾಕೆ ನೆನಪಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದಾನೆ.

  ರಮ್ಯಾ ಕೆಲಸಕ್ಕೆ ಹೋಗುವ ಕಡೆ, ವರ್ಧನ್ ಕುಟುಂಬಕ್ಕೆ ಸೇರಿದ ಸಂಪಿಗೆಪುರದ ಆಸ್ತಿಯನ್ನು ರತ್ನಾಕರ ಎಂಬಾತ ಖರೀದಿಸಿದ್ದಾರೆ. ಅದರ ನಕಲಿ ದಾಖಲೆ ಬೇರೆ ತಯಾರಾಗಿದೆ ಎಂದು ರಮ್ಯಾಗೆ ಗೊತ್ತಾಗಿದೆ. ಈ ಬಗ್ಗೆ ಅನುಗೆ ಕೂಡ ಹೇಳಿದ್ದಾಳೆ.

  ಮುದ್ದು ಮಣಿಗಳು: ದೃಷ್ಟಿ-ಭೂಮಿಕಾ ನಡುವೆ ಸಂವಾದಮುದ್ದು ಮಣಿಗಳು: ದೃಷ್ಟಿ-ಭೂಮಿಕಾ ನಡುವೆ ಸಂವಾದ

  ಈ ನಡುವೆಯೇ ಅದೇ ರತ್ನಾಕರ ಹಾಗೂ ಆತನ ಮಗ, ರಮ್ಯಾ ಮನೆಗೆ ಹುಡುಗಿ ನೋಡಲು ಬಂದಿದ್ದಾರೆ. ರಮ್ಯಾ ಏನೋ ಪ್ಲ್ಯಾನ್ ಮಾಡಿದ್ದು, ಮದುವೆಯೇ ಬೇಡ ಎನ್ನುತ್ತಿದ್ದವಳು. ಈಗ ಏನೋ ಪ್ಲಾನ್ ಮಾಡಿದ್ದಾಳೆ. ಅದರ ಬಗ್ಗೆ ಮುಂದಿನ ದಿನಗಳಲ್ಲಷ್ಟೇ ತಿಳಿಯಬೇಕಿದೆ.

   ಬೇಸರ ಮಾಡಿಕೊಂಡ ಅನು

  ಬೇಸರ ಮಾಡಿಕೊಂಡ ಅನು

  ಅನುಗೆ ರಜಿನಿ ಮಾತನಾಡಿದ ಮಾತುಗಳು ಬೇಸರವನ್ನುಂಟು ಮಾಡಿರುತ್ತದೆ. ಹೀಗಾಗಿ ಅದೇ ಬೇಸರದಲ್ಲಿ ಭಾರದ ಮನಸ್ಸಿನಿಂದ ಆಫೀಸಿಗೆ ಬಂದಿರುತ್ತಾಳೆ. ಅನು ದಾರಿಯನ್ನೇ ಎದುರು ನೋಡುತ್ತಿದ್ದ ಸಂಜು, ಅನು ಬಂದ ಕೂಡಲೇ ಫೈಲ್ ಒಂದನ್ನು ಕೊಟ್ಟು ನೋಡಲು ಹೇಳುತ್ತಾನೆ. ಆದರೆ ಅನು ಅಲ್ಲಿಟ್ಟು ಹೋಗಿ ಎಂದು ಹೇಳುತ್ತಾಳೆ. ಆಗ ಸಂಜು ಬಲವಂತವಾಗಿ ಏನಾಯ್ತು ಹೇಳಿ ಎಂದೆಲ್ಲಾ ಕೇಳಿದಾಗ ಅನು ಸಿಟ್ಟಿನಲ್ಲಿ ಬೈದು ಬಿಡುತ್ತಾಳೆ. ಅವಳಿಗೆ ಅಳು ಬಂದಾಗ ಕರ್ಚೀಫ್ ಕೊಡುತ್ತಾನೆ. ಅನು ತಿರಸ್ಕರಿಸುತ್ತಾರೆ. ಸ್ವಲ್ಪ ಸಮಯದ ನಂತರ ಅನುಗೆ ತಾನು ಮಾಡಿದ್ದು ತಪ್ಪು ಎಂಬ ಅರಿವಾಗುತ್ತೆ. ಇಬ್ಬರೂ ಊಟಕ್ಕೆ ಕುಳಿತಾಗ, ಒಬ್ಬರಿಗೊಬ್ಬರು ಕ್ಷಮೆ ಕೇಳಿಕೊಳ್ಳುತ್ತಾರೆ. ಬಳಿಕ ಅನು, ಆರಾಧನಾ ಅವರಿಗೆ ಫೋನ್ ಮಾಡಿದ್ರಾ ಎಂದು ಕೇಳುತ್ತಾಳೆ. ಆಗ ಸಂಜು ಇಲ್ಲ ಎನ್ನಲಾಗದೇ, ಮತ್ತೆ ಸುಳ್ಳು ಹೇಳುತ್ತಾನೆ. ಮಾಡಿದ್ದೆ ಮಾತನಾಡಿದೆ ಎನ್ನುತ್ತಾನೆ.

   ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಮ್ಯಾ

  ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಮ್ಯಾ

  ರಜಿನಿ, ರಮ್ಯಾಗೆ ಬಲವಂತ ಮಾಡಿ ಮದುವೆ ಮಾಡಲು ಹೊರಟಿದ್ದಾಳೆ. ರಮ್ಯಾ ಮನೆಗೆ ಬಂದಿರುವ ರತ್ನಾಕರ ಹಾಗೂ ಅವರ ಮಗ ಕರುಣಾಕರ, ರಮ್ಯಾಳನ್ನು ಒಪ್ಪಿಕೊಂಡಿದ್ದಾರೆ. ರಮ್ಯಾ ಹುಡುಗನ ಜೊತೆಗೆ ಮಾತನಾಡಬೇಕು ಎಂದು ಹೇಳಿ ಆಚೆ ಕರೆದುಕೊಂಡು ಹೋಗಿದ್ದಾಳೆ. ಇಬ್ಬರು ಸ್ವಲ್ಪ ತಮಾಷೆಯಾಗಿ ಮಾತನಾಡಿದ್ದಾರೆ. ಕರುಣಾಕರನಿಗೆ ರಮ್ಯಾ ಇಷ್ಟ ಆಗಿದ್ದಾಳೆ. ಇತ್ತ ರಮ್ಯಾ ಕೂಡ ಕರುಣಾಕರನಿಗೆ ಓಕೆ ಎಂದು ಹೇಳಿದ್ದಾಳೆ. ಇದೇ ವಿಚಾರವನ್ನು ಮನೆಯಲ್ಲಿ ಹೇಳಿದ್ದು, ರತ್ನಾಕರ ಮುಂದೆ ಈ ಬಗ್ಗೆ ಫೋನ್ ಮಾಡಿ ಮಾತನಾಡುವುದಾಗಿ ಹೇಳಿ ಹೋಗಿದ್ದಾನೆ. ಮಗಳು ಮದುವೆಗೆ ಒಪ್ಪಿದ್ದಕ್ಕೆ ರಜಿನಿ ಖುಷಿ ಪಟ್ಟಿದ್ದಾಳೆ.

   ಆರಾಧನಾಳನ್ನು ಕರೆಸುತ್ತಾನಾ ಹರ್ಷ..?

  ಆರಾಧನಾಳನ್ನು ಕರೆಸುತ್ತಾನಾ ಹರ್ಷ..?

  ಇನ್ನು ಹರ್ಷ ಮತ್ತು ಮಾನ್ಸಿ ಇಬ್ಬರೇ ಊಟಕ್ಕೆಂದು ಹೊರಗೆ ಹೊರಟಿರುತ್ತಾರೆ. ಆಗ ಮತ್ತೆ ಮಾನ್ಸಿ, ಹರ್ಷನನ್ನು ರೇಗಿಸುತ್ತಾಳೆ. ನೀನು ನನಗೆ ಸಿಗುವುದೇ ಇಲ್ಲ. ನಿನ್ನ ಬ್ರೋ ಸಂಜು ಅವರ ಜೊತೆಗೆ ಬ್ಯುಸಿ ಆಗಿಬಿಡುತ್ತೀಯಾ ಎಂದು ಹೇಳುತ್ತಾಳೆ. ಆಗ ಹರ್ಷ ಅವರಿಗೆ ಚೆಕಪ್ ಮಾಡಿಸುವುದರ ಬಗ್ಗೆ ಮರೆತೇ ಹೋಗಿದ್ದೇನೆ ಎಂದು ಹೇಳುತ್ತಾನೆ. ಅವರ ಬಗ್ಗೆ ಕಾಳಜಿ ವಹಿಸಬೇಕು ಎಂದಾಗ ಮಾನ್ಸಿ ಅವರ ಹೆಂಡತಿ ಆರಾಧನಾಳನ್ನು ಕರೆಸಬೇಕು. ಆಗ ಸಂಜು ಅವರ ಬಗ್ಗೆ ಕೇರ್ ಮಾಡುವವರು ಇದ್ದ ಹಾಗೆ ಆಗುತ್ತದೆ ಎಂದು ಮಾನ್ಸಿ ಹೇಳುತ್ತಾಳೆ. ಅದಕ್ಕೆ ಹರ್ಷ ಹೌದು, ಹಾಗೆ ಮಾಡೋಣ ಎಂದು ಹೇಳುತ್ತಾನೆ.

   ಝೇಂಡೇ ಆಟ ಬಯಲಾಗುತ್ತಾ..?

  ಝೇಂಡೇ ಆಟ ಬಯಲಾಗುತ್ತಾ..?

  ಇನ್ನು ಆರ್ಯವರ್ಧನ್‌ಗೆ ಆಕ್ಸಿಡೆಂಟ್ ಆಗುವಂತೆ ಚೇಸ್ ಮಾಡಿಕೊಂಡು ಹೋದ ಡ್ರೈವರ್‌ನನ್ನು ಝೇಂಡೇ ಬಚ್ಚಿಟ್ಟಿರುತ್ತಾನೆ. ಯಾಕೆಂದರೆ ಆತ ಪೊಲೀಸರ ಎದುರು, ಅನು ನನಗೆ ಸುಪಾರಿ ಕೊಟ್ಟು ಆರ್ಯ ಅವರನ್ನು ಕೊಲ್ಲಲು ಹೇಳಿದ್ದರು ಎಂದು ಸುಳ್ಳು ಹೇಳಿಕೆ ಕೊಟ್ಟಿರುತ್ತಾನೆ. ತದ ನಂತರ ಕಣ್ಮರೆಯಾಗಿರುತ್ತಾನೆ. ಆತ ಇದ್ದಕ್ಕಿದ್ದ ಹಾಗೆ ರಸ್ತೆಯಲ್ಲಿ ನಡೆದು ಹೋಗುವಾಗ ಝೇಂಡೇ ನೋಡಿ ಬೈಯುತ್ತಾನೆ. ಹೀಗೆಲ್ಲಾ ಆಚೆ ಬರಬೇಡ ಪೊಲೀಸರು ಹಿಡಿದರೆ, ಜೈಲಿಗೆ ಹಾಕುತ್ತಾರೆ ಎಂದು ಹೇಳುತ್ತಾನೆ. ಆದರೆ, ಈತನನ್ನು ಕಾನ್ಸ್‌ಟೇಬಲ್ ನೋಡಿದ್ದು, ಪೊಲೀಸರಿಗೆ ಫೋಟೋ ತೆಗೆದು ತೋರಿಸಿದ್ದಾನೆ. ಪೊಲೀಸರು ಆತನನ್ನು ಹುಡುಕುವಂತೆ ಸೂಚಿಸಿದ್ದಾರೆ. ಈ ಮೂಲಕ ಝೇಂಡೇ ಆಟವನ್ನು ಪೊಲೀಸರು ಬಯಲು ಮಾಡುತ್ತಾರಾ ಕಾದು ನೋಡಬೇಕಿದೆ.

  ಬಿಗ್‌ಬಾಸ್: ಐದನೇ ವಾರ ಮನೆಯಿಂದ ಹೊರಬಿದ್ದವರು ಯಾರು?ಬಿಗ್‌ಬಾಸ್: ಐದನೇ ವಾರ ಮನೆಯಿಂದ ಹೊರಬಿದ್ದವರು ಯಾರು?

  English summary
  jothe jotheyali Serial 31th october Episode Written Update. Jhende hidden person who chased arya has been seen by police. Will jhende game ends..?
  Monday, October 31, 2022, 18:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X