For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಗೆ ಒಬ್ಬೊಂಟಿಯಾಗಿ ಹೊರಟ ಸಂಜು: ಮುಂದೇನಾಗುತ್ತದೋ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆಗೆ ಪ್ರಜ್ಞೆ ಬಂದಿದೆ. ಅನುಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಪಡೆಯುವಂತೆ ವೈದರು ಹೇಳಿದ್ದಾರೆ. ಡಿಸ್ಚಾರ್ಜ್ ಮಾಡಲು ವೈದ್ಯರು ಮುಂದಾಗಿದ್ದಾರೆ.

  ಅನು, ಸಂಜುನನ್ನು ನೋಡುತ್ತಿದ್ದಂತೆ ಇವರು ಯಾಕೆ ಇಲ್ಲಿದ್ದಾರೆ ಎಂದು ಕೇಳುತ್ತಾಳೆ. ಅದಕ್ಕೆ ಪುಷ್ಪಾ ನೀವಿನ್ನು ಹೊರಡಿ ಎಂದು ಹೇಳುತ್ತಾಳೆ. ಸಂಜು ಯೋಚಿಸುತ್ತಾ ಅಲ್ಲೇ ನಿಂತಿರುತ್ತಾನೆ.

  ಪೋಸ್ಟರ್ ಅಂಟಿಸಿದವ ಸಿಕ್ಕಿ ಬಿದ್ದ: ಇನ್ನಾದರೂ ಸ್ನೇಹಾಳ ಕೋಪ ಕರಗುತ್ತಾ?ಪೋಸ್ಟರ್ ಅಂಟಿಸಿದವ ಸಿಕ್ಕಿ ಬಿದ್ದ: ಇನ್ನಾದರೂ ಸ್ನೇಹಾಳ ಕೋಪ ಕರಗುತ್ತಾ?

  ಮೀರಾ, ಝೇಂಡೇಯನ್ನು ಆಸ್ಪತ್ರೆಯಲ್ಲಿ ನೋಡಿ ಶಾಕ್ ಆಗುತ್ತಾಳೆ. ಝೇಂಡೇ ಅನ್ನು ಹುಡುಕಿಕೊಂಡು ಮೀರಾ ಹೋಗುತ್ತಾಳೆ. ಇಲ್ಯಾಕೆ ಕದ್ದು ಬಂದಿದ್ದೀರಾ ಎಂಬಂತೆ ಕೇಳುತ್ತಾಳೆ. ಅದಕ್ಕೆ ಝೇಂಡೇ ರಾಜಾರೋಷವಾಗಿ ಬರುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಅದಕ್ಕೆ ಹೀಗೆ ಯಾರಿಗೂ ಕಾಣದಂತೆ ಬರುತ್ತೇನೆ ಎಂದು ಹೇಳುತ್ತಾನೆ.

   ಸಂಜುಗೆ ಖಡಕ್ ಉತ್ತರ ಕೊಟ್ಟ ಅನು

  ಸಂಜುಗೆ ಖಡಕ್ ಉತ್ತರ ಕೊಟ್ಟ ಅನು

  ಅನುಳನ್ನು ಸಂಜು ಪ್ರಶ್ನೆಯೊಂದನ್ನು ಮಾಡುತ್ತಾನೆ. ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದಾ..? ಅಥವಾ ಯಾರಾದರು ಬೀಳಿಸಿದ್ದಾ ಎಂದು ಕೇಳುತ್ತಾನೆ. ಅದಕ್ಕೆ ಅನು, ಸಂಜುಗೆ ಖಡಕ್ ಆಗಿ ಉತ್ತರ ಕೊಡುತ್ತಾಳೆ. ನಾನ್ಯಾಕೆ ಆತ್ಮಹತ್ಯೆಗೆ ಪ್ರಯತ್ನ ಪಡಬೇಕಿತ್ತಾ..? ನಾನೇ ಬೇಕಂತ ನೀರಿಗೆ ಹೋಗಿ ಬಿದ್ದಿಲ್ಲ. ನನ್ನ ಗಂಡನನ್ನ ಕಳೆದುಕೊಂಡ ನೋವಿನಲ್ಲಿದ್ದೀನಿ ಆದರೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ಅಲ್ಲ ಎಂದು ಹೇಳುತ್ತಾಳೆ. ಸಂಜು ಕ್ಷಮಿಸಿ ನಾನು ಆ ಅರ್ಥದಲ್ಲಿ ಹೇಳಲಿಲ್ಲ ಎಂದು ಹೇಳಿ, ಮತ್ತೇನನ್ನೂ ಹೇಳಲಾರದೆ ಅಲ್ಲಿಂದ ಹೊರಟು ಹೋಗುತ್ತಾನೆ.

   ಸಂಜು ಮಾತನ್ನು ನಂಬದ ಮಾನ್ಸಿ

  ಸಂಜು ಮಾತನ್ನು ನಂಬದ ಮಾನ್ಸಿ

  ಹರ್ಷನ ಬಳಿ ಬಂದು ಮಾತನಾಡುವಾಗ ಮಾನ್ಸಿ ಅವನ ಮಾತನ್ನು ನಂಬಬೇಡಿ ಎಂದು ಹೇಳುತ್ತಾಳೆ. ಹರ್ಷ ಇದು ಅನು ಅವರು ಬಿದ್ದಿದ್ದು ಎನ್ನುವುದಕ್ಕಿಂತ ಯಾರೋ ಕೊಲೆ ಮಾಡೋದಕ್ಕೆ ಪ್ರಯತ್ನ ಪಟ್ಟಿದ್ದಾರೆ ಎಂದು ಅನುಮಾನದಲ್ಲೇ ಹೇಳುತ್ತಾನೆ. ಸಂಜು ಮಾತನ್ನು ಯಾರೂ ನಂಬುವುದಿಲ್ಲ. ವೀಲ್ ಚೇರ್ ನಲ್ಲಿ ಅನು ಹೋಗುವಾಗ ಅವಳ ಸೀರೆಯ ಸೆರಗು ವೀಲ್ ಚೇರ್‌ಗೆ ಸಿಕ್ಕಿ ಹಾಕಿಕೊಂಡಿರುತ್ತದೆ. ಇದನ್ನು ಗಮನಿಸಿದ ಸಂಜು ಬಂದು ಅದನ್ನು ಬಿಡಿಸುತ್ತಾನೆ. ಆಗ ಸೆರಗಿನ ತುದಿ ಅರಿದು ಹೋಗುತ್ತದೆ. ಇದರಿಂದ ಯಾರೂ ಏನನ್ನೂ ಮಾತನಾಡುವುದಿಲ್ಲ.

   ಸಂಜು ಮೇಲೆ ಮಾನ್ಸಿ ಅನುಮಾನ ಸತ್ಯವಾಯ್ತಾ..?

  ಸಂಜು ಮೇಲೆ ಮಾನ್ಸಿ ಅನುಮಾನ ಸತ್ಯವಾಯ್ತಾ..?

  ತನಗೆ ಸಂಜು ಆರ್ಯನ ನಂಬರ್ ಕೊಟ್ಟ ವಿಚಾರದ ಬಗ್ಗೆ ಆಫೀಸಿನಲ್ಲಿ ಮೀರಾ ಜೊತೆ ಝೇಂಡೆ ಮಾತನಾಡುತ್ತಾನೆ. ಆಗ ಮಾನ್ಸಿ ಇದು ಕೂಡ ಅವರ ಪ್ಲ್ಯಾನ್. ಸಂಜು ಬಿಸಿನೆಸ್ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದಾನೆ. 700 ಕೋಟಿ ಸಾಲ ಮಾಡಿ ಬಂದಿದ್ದಾನೆ. ನಾಳೆ ಬಂದು ನಮ್ಮ ಆಫೀಸ್ ಅನ್ನು ಕೂಡ ಆಕ್ರಮಿಸಿಕೊಂಡು ಬಿಡುತ್ತಾನೆ. ಈಗ ನನ್ನ ಬಾಯಿ ಮುಚ್ಚಿಸಿ, ಆಮೇಲೆ ನೀನು ಹೇಳಿದ್ದೇ ಸರಿ ಎಂದು ಹೇಳುತ್ತೀರಾ ಎಂದು ಮಾನ್ಸಿ ಕೂಗಾಡುತ್ತಾಳೆ.

   ವಠಾರಕ್ಕೆ ಹೋಗುತ್ತಾನಾ ಸಂಜು..?

  ವಠಾರಕ್ಕೆ ಹೋಗುತ್ತಾನಾ ಸಂಜು..?

  ಇನ್ನು ಮನೆಯಲ್ಲಿ ಪ್ರಭು ದೇಸಾಯಿ ಸತ್ಯವನ್ನು ಹೇಳಬೇಕು ಎಂದಾಗ ಪ್ರಿಯದರ್ಶಿನಿ ನಾವು ಹೇಳಿದರೆ ಹೇಗೆ ನಂಬುತ್ತಾರೆ ಎನ್ನುತ್ತಾಳೆ. ಬಳಿಕ ಸಂಜುಗೆ ಟ್ರೀಟ್‌ಮೆಂಟ್ ಕೊಡುತ್ತಿರುವ ವೈದ್ಯರ ಸಹಾಯದಿಂದ ಈ ಸತ್ಯವನ್ನು ಹೇಳೋಣ ಎಂದು ಹೇಳುತ್ತಾಳೆ. ಹಾಗಾಗಿ ಆಸ್ಪತ್ರೆಗೆ ಸಂಜುನ ಕರೆದುಕೊಂಡು ಹೊರಟಿರುತ್ತಾರೆ. ಆದರೆ ಸಂಜು ನಾನು ಒಬ್ಬನೇ ಹೋಗಿ ಬರುತ್ತೇನೆ. ನನ್ನಿಂದ ನೀವೆಲ್ಲಾ ಯಾಕೆ ಶ್ರಮ ಪಡುತ್ತೀರಾ ಎನ್ನುತ್ತಾನೆ. ಕಾರಿನಲ್ಲೂ ಹೋಗದ ಸಂಜು ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಳಸಲು ಮುಂದಾಗುತ್ತಾನೆ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕಮಲಮ್ಮನ ವಠಾರವನ್ನು ನೋಡುವ ಸಂಜು ಏನನ್ನೋ ನೆನಪಿಸಿಕೊಳ್ಳುತ್ತಾನೆ. ವಠಾರಕ್ಕೆ ಹೋಗಿ ಅನು ಮನೆಯಲ್ಲಿ ರದ್ಧಾಂತ ಮಾಡುತ್ತಾನಾ ಎಂದು ಕಾದು ನೋಡಬೇಕಿದೆ.

   ಅರಸನ ಕೋಟೆಯಲ್ಲಿ ದಸರಾ ಹಬ್ಬದ ಸಂಬ್ರಮ: ಅಖಿಲಾಂಡೇಶ್ವರಿ ಯೋಚನೆಯೇ ಬೇರೆ ಅರಸನ ಕೋಟೆಯಲ್ಲಿ ದಸರಾ ಹಬ್ಬದ ಸಂಬ್ರಮ: ಅಖಿಲಾಂಡೇಶ್ವರಿ ಯೋಚನೆಯೇ ಬೇರೆ

  English summary
  jothe jotheyali Serial 4th october Episode Written Update. mansi blames sanju in office. Sanju goes to hospital by public transport.
  Wednesday, October 5, 2022, 17:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X