Don't Miss!
- News
ಏಪ್ರಿಲ್ ವೇಳೆಗೆ ಕಂಟೋನ್ಮೆಂಟ್ಗೆ 4 ಹೊಸ ರೈಲ್ವೆ ಪ್ಲಾಟ್ಫಾರ್ಮ್
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Sports
2015ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಜುನೇ ಆರ್ಯ ಎಂಬ ಸತ್ಯವನ್ನು ನಂಬುತ್ತಾಳಾ ಆರಾಧನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಶಾರದಾ, ಆರ್ಯನನ್ನು ಪರಿಚಯ ಮಾಡಿಸಿದ ಕೂಡಲೇ ಎಲ್ಲರೂ ಶಾಕ್ ಆಗುತ್ತಾರೆ. ಆರ್ಯ ಬದುಕಿದ್ದಾನೆ. ಇವನೇ ಆರ್ಯ ಈ ಕಂಪನಿಯ ಯಜಮಾನ ಎಂದು ಶಾರದಾ ಹೇಳುತ್ತಾಳೆ.
ಆಫೀಸಿನಲ್ಲಿ ಎಲ್ಲರೂ ಕನ್ಫ್ಯೂಸ್ ಆಗುತ್ತಾರೆ. ಸಂಜು ಎಂದು ಆಫೀಸಿಗೆ ಪರಿಚಯಿಸಿದವನೇ ಆರ್ಯವರ್ಧನ್ ಎಂದು ಹೇಳುತ್ತಿರುವುದಕ್ಕೆ ಎಲ್ಲರೂ ಗೊಂದಲಕ್ಕೊಳಗಾಗುತ್ತಾರೆ. ಈ ಬಗ್ಗೆ ಪ್ರಶ್ನೆಯನ್ನು ಕೂಡ ಮಾಡುತ್ತಾರೆ.
Srirastu
Subhamastu:ಮಗನಿಂದ
ಮಾಧವನನ್ನು
ಮತ್ತಷ್ಟು
ದೂರ
ಮಾಡಿದೆ
ಪೂರ್ಣಿಯ
ಸ್ಥಿತಿ..!
ಅದಕ್ಕೆ ಶಾರದಾ, ಆರ್ಯನನ್ನು ಕುರ್ಚಿ ಮೇಲೆ ಕೂರಲು ಹೇಳುತ್ತಾಳೆ. ನಿಮಗೆಲ್ಲಾ ಈ ಅನುಮಾನವನ್ನು ಬಗೆಹರಿಸುತ್ತೇನೆ. ಅದಕ್ಕೋಸ್ಕರನೇ ಈ ಕಾರ್ಯಕ್ರಮವನ್ನ ಏರ್ಪಡಿಸಿದ್ದು ಎಂದು ಶಾರದಾ ಹೇಳುತ್ತಾಳೆ.

ಆಸ್ತಿ ಪೂರ ಅನು ಹೆಸರಿಗೆ ಟ್ರಾನ್ಸ್‌ಫರ್
ಝೇಂಡೇ ಅವತ್ತು ಪೇಪರ್‌ಗಳನ್ನು ತೆಗೆದುಕೊಂಡು ಬಂದು ಸಹಿ ಹಾಕಲು ಹೇಳಿದಾಗ ನಾನು ಪೇಪರ್‌ಗಳನ್ನು ಚೆಕ್ ಮಾಡಲೇ ಇಲ್ಲ. ನನಗೆ ಆ ಅಭ್ಯಾಸವೇ ತಪ್ಪಿ ಹೋಗಿದೆ. ಮಾನ್ಸಿ ಮೇಲೆ ನಂಬಿಕೆಯೂ ಇದೆ. ಆದರೂ ಈ ಸಲ ಝೇಂಡೇ ಪೇಪರ್ಸ್ ಗಳನ್ನು ತಂದಾಗ ಅನುಮಾನ ಬಂತು. ಅದರಲ್ಲಿ ನಾನು ನನ್ನ ಸಹಿಯನ್ನು ಮಾಡಲಿಲ್ಲ. ಇನ್ನು ಇದಕ್ಕೂ ಮೊದಲೇ ಆಸ್ತಿಯನ್ನು ಅನು ಹೆಸರಿಗೆ ಮಾಡಬೇಕು ಎಂದಾಗ ಅನು ಬೇಡ ಎಂದು ಹೇಳಿದ್ದಳು. ಆದರೆ, ಝೇಂಡೇ ಕೊಟ್ಟ ಪೇಪರ್‌ಗಳಿಗೆ ಸಹಿ ಮಾಡುವ ಮುನ್ನವೇ ಅದೆಲ್ಲಾ ಅಧಿಕಾರವನ್ನು ಅನುಗೆ ವರ್ಗಾಯಿಸಲಾಗಿತ್ತು. ಈಗ ಈ ಸಂಸ್ಥೆಯ ಒಡತಿ ನಾನಲ್ಲ ಅನು. ಇಷ್ಟವಿಲ್ಲದಿದ್ದರೂ ಇದನ್ನು ಅನು ಒಪ್ಪಿಕೊಳ್ಳಲೇಬೇಕು ಎಂದು ಶಾರದಾ ಹೇಳುತ್ತಾಳೆ.

ಆರ್ಯನ ಬಗ್ಗೆ ಸತ್ಯ ಹೇಳಿದ್ದ ಪ್ರಿಯದರ್ಶಿನಿ
ಆದರೆ ಎಲ್ಲರೂ ಇದೇನೋ ಸರಿ. ಆದರೆ ಆರ್ಯ ಎಂದು ಹೇಳುತ್ತಿದ್ದೀರಲ್ಲ ಇವರು ಯಾರು ಎಂದು ಕೇಳುತ್ತಾರೆ. ಆಗ ಶಾರದಾ ದೇವಿ ತನಗೆ ಪ್ರಿಯದರ್ಶಿನಿ ಕರೆ ಮಾಡಿದ ವಿಚಾರವನ್ನು ಹೇಳುತ್ತಾಳೆ. ಪ್ರಿಯದರ್ಶಿನಿ ಫೋನ್ ಮಾಡಿ ಅಪಘಾತದಲ್ಲಿ ಆರ್ಯನ ಮುಖ ಬದಲಾಯಿಸಿದ್ದು, ತನ್ನ ಮಗ ವಿಶ್ವಾಸ್ ದೇಸಾಯಿ ಸಾವನ್ನಪ್ಪಿದ್ದನ್ನು ಹೇಳುತ್ತಾಳೆ. ತಾನು ಸತ್ಯವನ್ನು ಮುಚ್ಚಿಟ್ಟಿದ್ದನ್ನು ಕೂಡ ಹೇಳುತ್ತಾಳೆ. ಸತ್ಯವನ್ನು ಮುಚ್ಚಿಟ್ಟಿದ್ದಕ್ಕೆ ಕ್ಷಮೆಯನ್ನು ಕೇಳುತ್ತಾಳೆ.

ಸತ್ಯ ನಂಬದೇ ಕೂಗಾಡಿದ ಆರಾಧನಾ
ಶಾರದಾ ದೇವಿ ಹೇಳಿದ ಮಾತುಗಳನ್ನು ಕೇಳಿದ ಮೇಳೆ ಅನು ಒಪ್ಪುವುದಿಲ್ಲ. ಅದು ಹೇಗೆ ಹೇಳುತ್ತೀರಾ. ಇದನ್ನೆಲ್ಲಾ ನನಗೆ ಮುಂಚೆನೇ ಹೇಳಬೇಕಿತ್ತು ಎಂದು ಕೇಳುತ್ತಾಳೆ. ಇದಕ್ಕೆ ಶಾರದಾ, ನಾನು ಹೇಳಿದ್ದರೆ ನೀನು ಸತ್ಯವನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳುತ್ತಾಳೆ. ಇನ್ನು ಹರ್ಷ ಹೀಗೆ ಎಲ್ಲರ ಮುಂದೆ ಹೇಳುತ್ತಿದ್ದೀಯಾ, ಎಲ್ಲರೂ ಸಾಕ್ಷಿ ಕೇಳಿದರೆ, ಏನಮ್ಮ ಇದೆ ಎಂದು ಶಾರದಾಳನ್ನು ಹರ್ಷ ಕೇಳುತ್ತಾನೆ. ಇತ್ತ ಆರಾಧನಾ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ನೀವೆಲ್ಲಾ ಸೇರಿಕೊಂಡು ಬೇಕಂತಲೇ ನನ್ನ ವಿಶು ತಲೆಗೆ ಇದನ್ನೆಲ್ಲಾ ತುಂಬುತ್ತಿದ್ದೀರಾ ಎಂದು ಕೂಗಾಡುತ್ತಾಳೆ. ಆರ್ಯನನ್ನು ಆರಾಧನಾ ಕೈ ಹಿಡಿದು ಹೋಗೋಣ ಬಾ ಎಂದಾಗ ಆರ್ಯ, ನನ್ನ ಕೈ ಬಿಡಿ ಎಂದು ಹೇಳುತ್ತಾನೆ. ಆಗ ಆರಾಧನಾ ತಲೆ ತಿರುಗಿ ಬೀಳುತ್ತಾಳೆ.

ಝೇಂಡೇ ಮೇಲೆ ಕೇಸ್
ಇತ್ತ ಝೇಂಡೇ ಮೆಲ್ಲಗೆ ಎಸ್ಕೇಪ್ ಆಗಲು ಮುಂದಾಗುತ್ತಾನೆ. ಆದರೆ, ಕೆಳಗೆ ಪೊಲೀಸರು ನಿಂತಿರುತ್ತಾರೆ. ಪೊಲೀಸರು ಝೇಂಡೇ ಅನ್ನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಬಾರದು ಎಂದು ಹೇಳುತ್ತಾರೆ. ಅದಕ್ಕೆ ಝೇಂಡೇ, ನಾನೇನು ತಪ್ಪು ಮಾಡಿದ್ದೀನಿ ಎಂದು ಕೇಳುತ್ತಾನೆ. ಆಗ ಪೊಲೀಸರು, ಚೀಟಿಂಗ್, ಬ್ಲ್ಯಾಕ್ ಮೇಲ್, ಫೋರ್ಜರಿ ಕೇಸ್‌ಗಳು ನಿಮ್ಮ ವಿರುದ್ಧ ದಾಖಲಾಗಿವೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಝೇಂಡೇ ಶಾಕ್ ಆಗುತ್ತಾನೆ. ಆರ್ಯನ ಕೊಲೆಗೆ ಝೇಂಡೇ ಕಾರಣ ಎಂಬ ಸತ್ಯವೂ ಗೊತ್ತಾಗುತ್ತಾ ಎಂದು ಕಾದು ನೋಡಬೇಕಿದೆ.