For Quick Alerts
  ALLOW NOTIFICATIONS  
  For Daily Alerts

  ಎಲ್ಲಿದ್ದಾರೆ.. ಏನ್ ಮಾಡ್ತಿದ್ದಾರೆ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ..?

  By ಪ್ರಿಯಾ ದೊರೆ
  |

  ಕನ್ನಡ ಕಿರುತೆರೆ ಲೋಕದಲ್ಲಿ ಒಂದು ಕಾಲದಲ್ಲಿ ಖ್ಯಾತ ನಟಿಯಾಗಿದ್ದ ಆಶಿತಾ ಚಂದ್ರಪ್ಪ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಬಣ್ಣದ ಲೋಕದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.

  ಕೆಲವೇ ಕೆಲವು ಧಾರಾವಾಹಿಗಳಲ್ಲಿ ಆಶಿತಾ ಚಂದ್ರಪ್ಪ ನಟಿಸಿದ್ದರು. ಆದರೂ ಕೂಡ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳನ್ನು ಗಳಿಸಿದ್ದರು. ಕಾರಣಾಂತರಗಳಿಂದ ಕಿರುತೆರೆಯಿಂದ ದೂರಾದರು, ಆದರೆ ಸೆಲಬ್ರಿಟಿಗಳೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ.

  ಪ್ರೇಕ್ಷಕರ ಊಹೆ ಸತ್ಯವಾಯ್ತ: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್!ಪ್ರೇಕ್ಷಕರ ಊಹೆ ಸತ್ಯವಾಯ್ತ: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್!

  ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಶಿತಾ ಚಂದ್ರಪ್ಪ ಅವರು, ತುಂಬಾ ಭಾವುಕ ವ್ಯಕ್ತಿ. ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಕೆಲ ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ. ಪರಭಾಷೆಯ ಧಾರಾವಾಹಿಗಳನ್ನೂ ಆಶಿತಾ ನಟಿಸಿ ಮೊಡಿ ಮಾಡಿದ್ದರು.

  ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ

  ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ

  ಜೀ ಕನ್ನಡ ವಾಹಿನಿಯಲ್ಲಿ ಹಲವು ವರ್ಷಗಳ ಹಿಂದೆ ಪ್ರಸಾರವಾದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸಿದ್ದರು. ಮೊದಲ ಬಾರಿಗೆ ಆಶಿತಾ ಅವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶಾಲಿನಿ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದರು. ಇದಲ್ಲದೇ 'ನೀಲಿ', 'ಸುಂದರಿ' ಎಂಬ ಧಾರಾವಾಹಿಗಳಲ್ಲೂ ನಟಿಸಿದ್ದರು. ಆ ನಂತರದಲ್ಲಿ 'ರಾಧಾ ರಮಣ' ಧಾರಾವಾಹಿಯಲ್ಲಿ ಅವನಿ ಮತ್ತು ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು 'ಸ್ವಯಂವರ' ಎಂಬ ಚಿತ್ರದಲ್ಲಿ ಆಶಿತಾ ಅವರು ನಟಿಸಿದ್ದರು. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಆಶಿತಾ ಚಂದ್ರಪ್ಪ ಅವರು ಸೋಶಿಯಲ್ ಮೀಡಿಯಾಗೆ ಮಾತ್ರ ಸೀಮಿತವಾದರು.

  ಸ್ನೇಹಾಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಕಂಠಿ!ಸ್ನೇಹಾಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಕಂಠಿ!

  ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

  ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

  ಆಶಿತಾ ಚಂದ್ರಪ್ಪ ಅವರು ಬಣ್ಣದ ಲೋಕದಿಂದ ದೂರಾದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ ತಾಯಿಯನ್ನು ಕಳೆದುಕೊಂಡ ಮೇಲೆ ಕೆಲ ಬಾರಿ ಭಾವುಕರಾಗಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಈಗಲೂ ಆಗಾಗ ಅವರ ತಾಯಿಯನ್ನು ನೆನೆದು ಪೋಸ್ಟ್ ಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಕೆಲ ವಿಚಾರಗಳ ಬಗ್ಗೆಯೂ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ. ಇನ್ನು ಸಾಮಾಜಿಕ ವಿಚಾರಗಳ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಆಗಾಗ ಹೊರ ಹಾಕುತ್ತಿರುತ್ತಾರೆ. ಇದೇ ತಿಂಗಳು ಆಶಿತಾ ಚಂದ್ರಪ್ಪ ಅವರ ಹುಟ್ಟು ಹಬ್ಬವಿದ್ದು ಈ ಬಗ್ಗೆ ಪೋಸ್ಟ್ ಅನ್ನು ಹಾಕಿದ್ದಾರೆ.

  ಇಂಡಸ್ಟ್ರಿಯಿಂದ ದೂರ ಉಳಿದ ನಟಿ

  ಇಂಡಸ್ಟ್ರಿಯಿಂದ ದೂರ ಉಳಿದ ನಟಿ

  ಕಿರುತೆರೆಯಲ್ಲಿ ಮಾತ್ರವಲ್ಲ ಸಿನಿಮಾರಂಗದಲ್ಲಿ ಆಶಿತಾ ಗುರುತಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರೀತಿಯಿಂದ ಅಣ್ಣ ಎಂದೇ ಕರೆಯುವ ಆಶಿತಾ ಡಿ ಬಾಸ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಮಿಳಿನ 'ವಂಧಂ' ಎಂಬ ಧಾರಾವಾಹಿಯಲ್ಲೂ ಆಶಿತಾ ಚಂದ್ರಪ್ಪ ಅವರು ನಟಿಸಿದ್ದರು. 'ರಾಧಾ ರಮಣ' ಧಾರಾವಾಹಿಯಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಧಾರಾವಾಹಿಯಲ್ಲಿ ನಟಿಸುವಾಗಲೇ ಸ್ವಲ್ಪ ಕಿರಿಕಿರಿ ಮಾಡಿಕೊಂಡು ಆಶಿತಾ ಅವರು ಹೊರ ನಡೆದರು. ನಮ್ಮಂಥವರಿಗೆ ಈ ಇಂಡಸ್ಟ್ರಿ ಅಲ್ಲ ಎಂದು ಆಶಿತಾ ಬಣ್ಣದ ಲೋಕದಿಂದ ದೂರಾದರು. ಅಂದಿನಿಂದ ಇಂದಿನವರೆಗೂ ಮತ್ತೆ ನಟಿಸುವ ಬಗ್ಗೆ ಆಶಿತಾ ಚಂದ್ರಪ್ಪ ಅವರು ಆಸಕ್ತಿ ತೋರಿಸಿಲ್ಲ.

  ಮದುವೆಯಾದ ಆಶಿತಾ

  ಮದುವೆಯಾದ ಆಶಿತಾ

  ಕಳೆದ ವರ್ಷ ಮಾರ್ಚ್‌ನಲ್ಲಿ ಆಶಿತಾ ಚಂದ್ರಪ್ಪ ಅವರು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ರೋಹನ್ ರಾಘವೇಂದ್ರ ಎನ್ನುವವರ ಜೊತೆ ವೈವಾಹಿಕ ಬದುಕು ಆರಂಭಿಸಿದ್ದಾರೆ. ರೋಹನ್ ಅವರು ಮೂಲತಃ ಚಿಕ್ಕಮಗಳೂರಿನವರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಉದ್ಯಮಿಯಾಗಿದ್ದು, ಸದ್ಯ ದಂಪತಿ ಇಬ್ಬರೂ ಚಿಕ್ಕ ಮಗಳೂರಿನಲ್ಲೇ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

  English summary
  Where is Jothe Jotheyali serial Actress Ashitha chandrappa. Actress Ashitha chandrappa Life Story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X