For Quick Alerts
  ALLOW NOTIFICATIONS  
  For Daily Alerts

  ಟಿವಿ 9 ವಾಹಿನಿಯಿಂದ ಜನಶ್ರೀಗೆ ಶಿವಪ್ರಸಾದ

  By Mahesh
  |

  ಜನಶ್ರೀ ಸುದ್ದಿ ವಾಹಿನಿಗೆ ರವಿ ಬೆಳೆಗೆರೆ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಟಿವಿ 9 ಕನ್ನಡ ವಾಹಿನಿಯಿಂದ ಬೆಳಕಿಗೆ ಬಂದ ಪ್ರತಿಭೆ ಶಿವಪ್ರಸಾದ್ ಟಿ.ಆರ್ ಅವರು ಜನಶ್ರೀ ಸೇರಿದ್ದಾರೆ. ಜನಶ್ರೀ ವಾಹಿನಿಯ ನಿರ್ದೇಶಕರಾಗಿ ಶಿವಪ್ರಸಾದ್ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಶಿವಪ್ರಸಾದ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿದ್ದು ಕೆಳಗೆ ನೀಡಿದೆ ಓದಿ....

  ಇಂದು ಅತ್ಯಂತ ಸಂತೋಷದ ದಿನವೂ ಹೌದು... ದುಖ:ದ ದಿನವೂ ಹೌದು. ದುಖ: ಎಂದರೆ ಕಳೆದ 6 ವರ್ಷಗಳಿಂದ ನನ್ನ ಉಸಿರನಂತಿದ್ದ ಟಿವಿ9 ಗೆ ಇಂದು ರಾಜೀನಾಮೆ ನೀಡಿದ್ದೇನೆ. ಶ್ರೀ ಮಹೇಂದ್ರ ಮಿಶ್ರಾ, ರವಿ ಕುಮಾರ್, ಮಾರುತಿ, ಶ್ರೀಕಾಂತ್, ಪ್ರಕಾಶ್, ಮಧು, ದ್ವಾರಕೀಶ್, ಸಿದ್ದೇಶ್ ಹಾಗೂ ಸಮಸ್ತ ಟಿವಿ9 ತಂಡ ಕಳೆದ 6 ವರ್ಷ ನನಗೆ ನೀಡಿದ ಸಹಕಾರಗಳಿಗೆ ನಾನು ಋಣಿ. ಅದರಲ್ಲೂ ನಾನು ಈ ಹಂತ ತಲುಪುವಲ್ಲಿ ಮಹೇಂದ್ರಮಿಶ್ರಾ ನೀಡಿದ ಸಹಕಾರ ಹೇಗೆ ಮರೆಯಲಿ? ನಾನು ಎಲ್ಲೇ ಇದ್ದರೂ ಅವರ ಸಲಹೆ ಸಹಕಾರ ನಿರಂತರವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

  ಐ ಮಿಸ್ ಯೂ ಟಿವಿ9...ಲವ್ ಆಲ್ ಇನ್ ಟಿವಿ9

  ಹಾಗೆಯೇ ಇಂದು ಜನಶ್ರೀ ವಾಹಿನಿಯ ನಿರ್ದೇಶಕನಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮೊದಲು ಹಿರಿಯ ಮಿತ್ರರಾದ ಮಂಜುನಾಥ್ ಆಹ್ವಾನಿಸಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಜನಶ್ರೀ ಸೇರುವ ಬಗ್ಗೆ ಆಹ್ವಾನವಿದ್ದರೂ ಬೇರೆ ಒಂದು ಯೋಜನೆಗೆ ಒಪ್ಪಿಕೊಂಡದ್ದರಿಂದ ನಿರಾಕರಿಸಿದ್ದೆ. ಅಲ್ಲದೆ ಜಾಗತಿಕ ಮಟ್ಟದ ಮತ್ತೊಂದು ಯೋಜನೆಗೆ ಅಂತಿಮ ಸ್ವರೂಪ ನೀಡುತ್ತಿದ್ದರಿಂದ ಬೇರೆ ಕೆಲಸದ ಬಗ್ಗೆ ಯೋಚಿಸಿರಲಿಲ್ಲ. ಆ ಕೆಲಸ ಭರದಿಂದ ನಡೆಯುತ್ತಿದೆ.....

  ಈ ನಡುವೆ ಹಿರಿಯರಾದ ರವಿ ಬೆಳಗೆರೆಯವರು ಕರೆದು, ನಾನು ಜನಶ್ರೀ ಸಿಇಓ ಆಗಿದ್ದೇನೆ. ನೀವು ನನ್ನ ಜೊತೆ ಇರಬೇಕು ಎಂದಾಗಲೂ ನಾನು ಸಾರ್, ಬೇರೆ ಕಡೆ ಕಮಿಟ್ ಆಗಿದ್ದೇನೆ ಎಂದಿದ್ದೆ. ಮಿತ್ರರಾದ ಸಂಜಯ್ ಮತ್ತು ಮೂರ್ತಿ ಹೇಳಿದಾಗಲೂ ನಿರಾಕರಿಸಿದ್ದೆ. ಶ್ರೀ ರಾಮುಲು ಅವರು ಸ್ವತ: ಆಹ್ವಾನಿಸಿದಾಗಲೂ ಒಪ್ಪಿಕೊಂಡಿರಲಿಲ್ಲ.

  ಆದರೆ ಕೊನೆಗೆ ರವಿ ಬೆಳಗೆರೆ ಸರ್, ಶ್ರೀ ರಾಮುಲು ಅವರು, ಸಂಜಯ್, ಮೂರ್ತಿ ಈ ಎಲ್ಲರ ಪ್ರೀತಿ ಪೂರ್ವಕ, ಆಗ್ರಹ ಪೂರ್ವಕ ಆಹ್ವಾನಕ್ಕೆ ಮಣಿದಿದ್ದೇನೆ.

  ರವಿ ಬೆಳಗೆರೆಯವರ ಮಾರ್ಗದರ್ಶನದಲ್ಲಿ ಇಡೀ ಚಾನೆಲ್ ಗೆ ಹೊಸ ರೂಪು ನೀಡುವ ಕಾರ್ಯ ಇಂದು ಆರಂಭವಾಗಿದೆ. ನವೆಂಬರ್ ನಲ್ಲಿ ಇಡೀ ಚಾನೆಲ್ ಹೊಸ ರೂಪದಲ್ಲಿ, ಹೊಸ ಕಾರ್ಯಕ್ರಮಗಳ ಸಮೇತ ರೀಲಾಂಚ್ ಆಗಲಿದೆ.

  ನನ್ನ ಹುಟ್ಟುಹಬ್ಬದ ದಿನವೇ ಇದೆಲ್ಲ ಖುಷಿ ಕೊಟ್ಟ ನನ್ನ ಈ ಎಲ್ಲಾ ಪತ್ರಕರ್ತಮಿತ್ರರಿಗೂ, ಹಿರಿಯರಿಗೂ, ಸ್ವೇಹಿತರಿಗೂ ನಾನು ಋಣಿ....

  ಎಲ್ಲಕ್ಕಿಂತ ಹೆಚ್ಚಾಗಿ ಈ ಎಲ್ಲಾ ಸಂದರ್ಭದಲ್ಲಿ ದೂರದಲ್ಲಿದ್ದರೂ, ನನಗೆ ಮಾರ್ಗದರ್ಶನ ನೀಡಿದ, ಬೆನ್ನೆಲುಬಾಗಿ ನಿಂತ ನನ್ನ ಆ ದೇವರಿಗೆ ನನ್ನ ನಮಸ್ಕಾರ.... ಈ ಎಲ್ಲಾ ಋಣಗಳನ್ನು ಎಂದಿಗೂ ತೀರಿಸಲಾರೆ....

  ನಿಮ್ಮ ಸಹಕಾರ, ಪ್ರೀತಿಗಳಿರಲಿ.

  ಶಿವಪ್ರಸಾದ್ ಟಿ.ಆರ್

  English summary
  Journalist TR Shivaprasad joined Janasri News Channel as director. Jansri Channel recently got Editor of Hai Bangalore Tabloid, Writer Ravi Belagare as new chief operating officer

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X