Just In
Don't Miss!
- News
ಬ್ರೆಜಿಲ್: ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 3462 ಮಂದಿ ಸಾವು!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಟ್ಯಧಿಪತಿ: ಜೂ.ಎನ್‌ಟಿಆರ್‌ಗೆ ಚಿರಂಜೀವಿ, ನಾಗಾರ್ಜುನಗಿಂತಲೂ ಹೆಚ್ಚು ಸಂಭಾವನೆ
ತೆಲುಗಿನ ಖ್ಯಾತ ನಟ ಜೂ.ಎನ್‌ಟಿಆರ್ ಸಿನಿಮಾಗಳಿಗೆ ಮಾತ್ರವೇ ತಮ್ಮನ್ನು ಸೀಮಿತ ಪಡಿಸಿಕೊಳ್ಳದೆ ಕಿರುತೆರೆಯಲ್ಲೂ ಆಗಾಗ್ಗೆ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿರುತ್ತಾರೆ.
ಈಗಾಗಲೇ ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ನಿರೂಪಿಸಿರುವ ಜೂ.ಎನ್‌ಟಿಆರ್. ಈಗ ತೆಲುಗಿನಲ್ಲಿ ಕೋಟ್ಯಧಿಪತಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.
'ಎವರು ಮೀಲೋ ಕೋಟೀಶ್ವರುಲು' ರಿಯಾಲಿಟಿ ಶೋನ ಐದನೇ ಸೀಸನ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಜೂ.ಎನ್‌ಟಿಆರ್ ಈ ಬಾರಿ ನಿರೂಪಕರಾಗಲಿದ್ದಾರೆ. ಹಾಟ್ ಸೀಟ್‌ನಲ್ಲಿ ಸ್ಪರ್ಧಿಗಳನ್ನು ಕೂರಿಸಿ ಪ್ರಶ್ನೆಗಳ ಬಾಣ ಎಸೆಯಲಿದ್ದಾರೆ.
ಜೆಮಿನಿ ಟಿವಿಯಲ್ಲಿ ಈ ಬಾರಿ 'ಎವರು ಮೀಲೋ ಕೋಟೀಶ್ವುರುಲು' ಶೋ ಪ್ರಸಾರವಾಗಲಿದೆ. ಶೋ ಗೆ ಸಂಬಂಧಿಸಿದಂತೆ ಮತ್ತೊಂದು ಆಸಕ್ತಿಕರ ವಿಷಯ ಹೊರಬಿದ್ದಿದ್ದು. 'ಎವರು ಮೀಲೋ ಕೋಟೀಶ್ವರುಲು' ಶೋ ನಿರೂಪಿಸಲು ಜೂ.ಎನ್‌ಟಿಆರ್ ಗೆ ಭಾರಿ ಮೊತ್ತದ ಸಂಭಾವನೆಯನ್ನು ಜೆಮಿನಿ ಟಿವಿ ನೀಡಲಿದೆಯಂತೆ.

60 ಎಪಿಸೋಡ್‌ಗೆ ಸಂಭಾವನೆ ಎಷ್ಟು?
ಒಟ್ಟು 60 ಎಪಿಸೋಡ್‌ಗಳ ಶೋ ಇದಾಗಿರಲಿದ್ದು, ಈ 60 ಎಪಿಸೋಡ್‌ಗೆ 10 ಕೋಟಿ ಸಂಭಾವನೆಯನ್ನು ಜೂ.ಎನ್‌ಟಿಆರ್ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದೇ ಶೋ ಅನ್ನು ನಿರೂಪಣೆ ಮಾಡಲು ನಾಗಾರ್ಜುನ 4.5 ಕೋಟಿ. ಚಿರಂಜೀವಿ 9 ಕೋಟಿ ಸಂಭಾವನೆ ಪಡೆದಿದ್ದರಂತೆ.

ನಾಗಾರ್ಜುನ, ಚಿರಂಜೀವಿ ನಿರೂಪಣೆ ಮಾಡಿದ್ದರು
ಈ ಹಿಂದೆ ನಟ ನಾಗಾರ್ಜುನ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರುಗಳು ತೆಲುಗಿನ ಕೋಟ್ಯಧಿಪತಿ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. ಮೊದಲ ಮೂರು ಸೀಸನ್ ಅನ್ನು ನಟ ನಾಗಾರ್ಜುನ ನಿರೂಪಣೆ ಮಾಡಿದ್ದರೆ, ನಾಲ್ಕನೇ ಸೀಸನ್ ಅನ್ನು ಮೆಗಾಸ್ಟಾರ್ ಚಿರಂಜೀವಿ ನಿರೂಪಣೆ ಮಾಡಿದ್ದರು. ಈವರೆಗೆ ನಾಲ್ಕೂ ಸೀಸನ್‌ಗಳು ಸ್ಟಾರ್ ಮಾ ಚಾನೆಲ್‌ನಲ್ಲಿ ಪ್ರಸಾರವಾಗಿದ್ದವು.

ರಾಮ್ ಚರಣ್-ರಾಜಮೌಳಿ ಅತಿಥಿಗಳು?
ಜೂ.ಎನ್‌ಟಿಆರ್ ನಡೆಸಿಕೊಡಲಿರುವ 'ಎವರು ಮೀಲೋ ಕೋಟೀಶ್ವರುಲು' ಶೋ ಗೆ ಹಲವು ಸೆಲೆಬ್ರಿಟಿಗಳು ಸಹ ಅತಿಥಿ ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ. ಉದ್ಘಾಟನಾ ಸಂಚಿಕೆಯಲ್ಲಿ ರಾಮ್ ಚರಣ್ ಹಾಗೂ ರಾಜಮೌಳಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಜೂ.ಎನ್‌ಟಿಆರ್
ಇನ್ನುಳಿದಂತೆ ಜೂ.ಎನ್‌ಟಿಆರ್ ನಟಿಸಿ ರಾಜಮೌಳಿ ನಿರ್ದೇಶಿಸಿರುವ ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ. ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಸಿನಿಮಾದಲ್ಲಿಯೂ ಜೂ.ಎನ್‌ಟಿಆರ್ ನಟಿಸಲಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.